೩ ಖಾಸಗಿ ವಿವಿ ಸ್ಥಾಪನೆಗೆ ಪರಿಷತ್ತಿನಲ್ಲೂ ಅಂಗೀಕಾರ

ಬೆಂಗಳೂರು: ಮೂರು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿದೆ.

ಭೋಜನ  ವಿರಾಮದ ಬಳಿಕ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ , ನ್ಯೂ ಹೊರೈಜನ್, ವಿದ್ಯಾಶಿಲ್ಷ್ ವಿಶ್ವವಿದ್ಯಾಲಯ, ಏಟ್ರಿಯಾ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕ  ಮಂಡನೆ ಮಾಡಿದರು.

ತಪ್ಪು ನಡೆದರೆ ಮಾನ್ಯತೆಯನ್ನೇ ರದ್ದು ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಖಾಸಗಿ ಸಂಸ್ಥೆಗಳು ವಿಶ್ವವಿದ್ಯಾಲಯಗಳ ಹೆಸರಿನಲ್ಲೇ ಎಲ್ಲಾ ದಾಖಲಾತಿಗಳನ್ನು ಹೊಂದಿರಬೇಕು, ಕನಿಷ್ಠ 20 ಎಕರೆ ಭೂಮಿ ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದರು.

ವಿಧೇಯಕಕ್ಕೆ ವಿರೋಧ ವ್ಯಕ್ತ ಪಡಿಸಿದ ಸದಸ್ಯ ಶ್ರೀಕಂಠೇಗೌಡ, ಸರ್ಕಾರಿ ವಿಶ್ವವಿದ್ಯಾಲಯಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಖಾಸಗಿ ವಿಶ್ವವಿದ್ಯಾಲಯಗಳಿಗೆ ಆದ್ಯತೆ ನೀಡುತ್ತಿರುವುದು ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆಯುಂಟಾಗಲಿದೆ. ಖಾಸಗಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ ಎಂದು ಆಕ್ಷೇಪಿಸಿದರು.
ಸಿ.ಎಂ.ಇಬ್ರಾಹಿಂ ಮಾತನಾಡಿ, ಆತುರವಾಗಿ ಮಸೂದೆ ತರುವುದು ಬೇಡ. ಇನ್ನಷ್ಟು ಅಧ್ಯಯನಕ್ಕಾಗಿ ಸದನ ಸಮಿತಿ  ರಚಿಸಿ ಎಂದು ಸಲಹೆ ನೀಡಿದರು. ಮರಿತಿಬ್ಬೆಗೌಡ, ಖಾಸಗಿ ವಿವಿಗೆ  ರಾಜ್ಯ ವ್ಯಾಪ್ತಿ  ಕೊಡಬೇಡಿ. ಖಾಸಗಿ ವಿವಿಗಳು ಗತಾವೇ ಪರೀಕ್ಷೆ ನಡೆಸಿ ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ನೀಡುತ್ತಿವೆ. ಇತ್ತೀಚೆಗೆ ನಡೆದ ಸರ್ಕಾರಿ ನೇಮಕಾತಿಯಲ್ಲಿ ಖಾಸಗಿ ವಿವಿಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೇ ಆಯ್ಕೆಯಾಗಿದ್ದಾರೆ. ಸರ್ಕಾರಿ ವಿವಿಗಳಲ್ಲಿ ಓದಿದವರಿಗೆ ಕೆಲಸ ಸಿಕ್ಕಿಲ್ಲ ಎಂದು ಆಕ್ಷೇಪಿಸಿದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬಿ.ಕೆ.ಹರಿಪ್ರಸಾದ್ ಖಾಸಗಿ ವಿವಿ  ಮಸೂದೆಯನ್ನು ವಿರೋಧಿಸಿದರು. ಆಡಳಿತ ಪಕ್ಷದ ಮಹಾಂತೇಶ ಕವಟಿಗಿಮಠ,   ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಕಾಪಾಡಲು ಸ್ಫರ್ಧೆಗೆ  ಖಾಸಗಿ ವಿವಿಗಳು ಬೇಕು ಎಂದು ಪ್ರತಿಪಾದನೆ ಮಾಡಿದರು. ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ವಿಧೇಯಕಗಳಿಗೆ ವಿಧಾನ ಪರಿಷತ್‍ನಲ್ಲೂ ಧ್ವನಿಮತದ ಮೂಲಕ ವಿಧೇಕಯ ಅಂಗೀಕಾರ ದೊರೆಯಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement