ರಾಜ್ಯಪಾಲರ ಕಚೇರಿ ಖಚಿತ ಪಡಿಸದ ಕಾರಣ ಗೊಂದಲ

ಮುಂಬೈ: ಸರಕಾರಿ ವಿಮಾನ ಬಳಕೆಯನ್ನು ರಾಜಭವನ ಸಚಿವಾಲಯ ಖಚಿತಪಡಿಸದ ಕಾರಣದಿಂದಾಗಿಯೇ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರ ಉತ್ತರಾಖಂಡ ಪ್ರಯಾಣಕ್ಕೆ ವಿಳಂಬವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ತಿಳಿಸಿದೆ..

ಉತ್ತರಾಖಂಡದ ಡೆಹ್ರಾಡೂನ್‌ಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಸಂವಹನ ಕೊರತೆಯಿಂದಾಗಿ ರಾಜ್ಯಪಾಲರು ಸರಕಾರಿ ವಿಮಾನದಲ್ಲಿ ತೆರಳಲು ಸಾಧ್ಯವಾಗಲಿಲ್ಲ. ರಾಜ್ಯಪಾಲರು ವಿಮಾನ ಹತ್ತುವ ಮುನ್ನ ಅನುಮತಿಗಾಗಿ ಕೋರಲಾಗಿತ್ತು. ಆದರೆ ಮುಖ್ಯಮಂತ್ರಿಯ ಕಚೇರಿ ವಿಮಾನ ಬಳಕೆಗೆ ಅನುಮೋದನೆ ನೀಡಲಿಲ್ಲ. ಆದರೂ ರಾಜ್ಯಪಾಲರನ್ನು ವಿಮಾನ ಹತ್ತಲು ಕರೆದೊಯ್ಯಲಾಗಿತ್ತು. ಆದರೆ ಸರಕಾರಿ ವಿಮಾನದಲ್ಲಿ ಪ್ರಯಾಣಿಸಲು ರಾಜ್ಯಪಾಲರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ರಾಜ್ಯಪಾಲ ಕೋಶ್ಯಾರಿ ಅವರು ಖಾಸಗಿ ವಿಮಾನದಲ್ಲಿ ತೆರಳಬೇಕಾಯಿತು.

ಫಡ್ನವೀಸ್‌ ಖಂಡನೆ: ರಾಜ್ಯಪಾಲರಿಗೆ ಸರಕಾರಿ ವಿಮಾನ ಬಳಸಲು ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವಕಾಶ ನೀಡದಿರುವುದನ್ನು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಖಂಡಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ರಾಜ್ಯಪಾಲರಿಗೆ ಸರಕಾರಿ ವಿಮಾನ ಬಳಕೆಗೆ ಅಡ್ಡಿಪಡಿಸಲಾಗಿದೆ. ಇದು ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಕರಾಳದಿನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement