ತಾಯಿಯನ್ನು ಗಲ್ಲು ಶಿಕ್ಷೆಯಿಂದ ಉಳಿಸುವಂತೆ ರಾಷ್ಟ್ರಪತಿಗೆ ಕೋರಿದ ತಾಜ್‌‌

ಲಖನೌ: ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದು ಮರಣದಂಡನೆ ಶಿಕ್ಷೆಗೊಳಗಾಗಿರುವ ತಾಯಿ ಶಬನಮ್‌ಗೆ ಕ್ಷಮಾದಾನ ನೀಡಬೇಕೆಂದು ಪುತ್ರ ತಾಜ್‌ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಕೋರಿದ್ದಾನೆ.
ತನ್ನ ತಾಯಿಯನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸಲು ಕೊನೆಯ ಪ್ರಯತ್ನ ಮಾಡುತ್ತಿರುವ 12ರ ಹರೆಯದ ತಾಜ್, ಕ್ಷಮಾದಾನ ಅರ್ಜಿಯನ್ನು ಪರಿಶೀಲಿಸುವಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದಾನೆ. ತನ್ನ ಪ್ರೇಮಿ ಸಲೀಮ್‌ನೊಂದಿಗೆ ಗಲ್ಲಿಗೇರಲಿರುವ ಶಬನಮ್ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಈಗಾಗಲೇ ತಿರಸ್ಕರಿಸಿದ್ದಾರೆ.
ತನ್ನ ಏಳು ಕುಟುಂಬ ಸದಸ್ಯರನ್ನು ಸಲೀಮ್‌ನೊಂದಿಗೆ ಸೇರಿ ಕೊಂದಾಗ ಶಬ್ನಮ್ ಎರಡು ತಿಂಗಳ ಗರ್ಭಿಣಿಯಾಗಿದ್ದಳು. ತಾಜ್ 2008 ರ ಡಿಸೆಂಬರ್ 13 ರಂದು ಮೊರಾದಾಬಾದ್ ಜೈಲಿನಲ್ಲಿ ಜನಿಸಿದ್ದು, ನಂತರ, ಶಬನಮ್ ಅವರ ಸ್ನೇಹಿತ ಉಸ್ಮಾನ್ ಸೈಫಿ ಗಂಡು ಮಗುವನ್ನು ದತ್ತು ಪಡೆದರು.
ಆರನೇ ತರಗತಿಯಲ್ಲಿ ಓದುತ್ತಿರುವ ತಾಜ್‌ಗೆ ತನ್ನ ತಾಯಿ ಮಾಡಿದ ಘೋರ ಅಪರಾಧದ ಬಗ್ಗೆ ತಿಳಿದಿದೆ. ಆದರೆ ತನ್ನ ತಾಯಿಯನ್ನು ಗಲ್ಲು ಶಿಕ್ಷೆಯಿಂದ ಉಳಿಸುವ ಉದ್ದೇಶದಿಂದ ಕರುಣೆ ಕೋರಿ ರಾಷ್ಟ್ರಪತಿಗೆ ಮನವಿ ಮಾಡಿದ್ದಾನೆ ಎಂದು ಉಸ್ಮಾನ್‌ ತಿಳಿಸಿದರು.
ಶಬನಮ್‌ಗೆ ಮರಣದಂಡನೆ ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಶಬನಮ್‌ನನ್ನು ಭೇಟಿಯಾಗಲು ತಾಜ್‌ನನ್ನು ಕಾರಾಗೃಹಕ್ಕೆ ಕರೆದೊಯ್ದಿದ್ದೆ. ಅಗ ಮಗನಿಗೆ ಟಾಫಿ ಹಾಗೂ ಹಣ ನೀಡಿದ ಶಬನಮ್‌, ತಬ್ಬಿಕೊಂಡು ಜೋರಾಗಿ ಅತ್ತಳು. ಒಳ್ಳೆಯ ಮನುಷ್ಯನಾಗಲು ಕಷ್ಟಪಟ್ಟು ಓದಬೇಕೆಂದು ಸಲಹೆ ನೀಡಿದರಳಲ್ಲದೇ ತಾಯಿಯನ್ನು ಮರೆತುಬಿಡುವಂತೆ ತಿಳಿಸಿದಳು ಎಂದು ಉಸ್ಮಾನ್‌ ಹೇಳಿದ್ದಾರೆ.
ಅವಳನ್ನು ಗಲ್ಲಿಗೇರಿಸುವ ಮೊದಲು ತಾಜ್‌ನನ್ನು ಕೊನೆಯ ಬಾರಿಗೆ ಕರೆತರುವುದಾಗಿ ಉಸ್ಮಾನ್ ಶಬ್ನಮ್‌ಗೆ ಭರವಸೆ ನೀಡಿದ್ದಾನೆ. ಸಾವಿಗೆ ಮುಂಚೆ ಮಗನ ಭೇಟಿಯಿಂದ ಅವಳು ವಂಚಿತವಾಗಬಾರದು ಎಂದು ಉಸ್ಮಾನ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement