ಅಮೆಜೊನಿಯಾ-೧ ಯಶಸ್ವಿ ಉಡಾವಣೆ: ಬ್ರೆಜಿಲ್‌ ಅಧ್ಯಕ್ಷರ ಅಭಿನಂದಿಸಿದ ಮೋದಿ

ಬ್ರೆಜಿಲ್‌ನ ಅಮೆಜೊನಿಯಾ-೧ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್‌ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ.
ಪಿಎಸ್ಎಲ್ವಿ-ಸಿ 51 ಬ್ರೆಜಿಲ್‌ನ ಅಮೆಜೋನಿಯಾ -1 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದ್ದಕ್ಕಾಗಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಅಭಿನಂದನೆಗಳು. ಇದು ನಮ್ಮ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ ಬ್ರೆಜಿಲ್‌ ವಿಜ್ಞಾನಿಗಳು ಸನ್ಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಪಿಎಂ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಉಡಾವಣೆಗೆ ಬಾಹ್ಯಾಕಾಶ ಇಲಾಖೆಯ ಅಧೀನದಲ್ಲಿರುವ ಭಾರತ ಸರ್ಕಾರದ ಕಂಪನಿಯಾದ ಇಸ್ರೋ ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್)ಗೆ ಕೂಡ ಪ್ರಧಾನಿ ಅಭಿನಂದಿಸಿದ್ದಾರೆ. ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಮಿಷನ್‌ನ 1 ನೇ ಸಮರ್ಪಿತ ವಾಣಿಜ್ಯ ಉಡಾವಣೆಯ ಯಶಸ್ಸಿಗೆ ಎನ್‌ಎಸ್‌ಐಎಲ್ ಮತ್ತು ಇಸ್ರೋಗೆ ಅಭಿನಂದನೆಗಳು. ಇದು ದೇಶದಲ್ಲಿ ಬಾಹ್ಯಾಕಾಶ ಸುಧಾರಣೆಯ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಉಪಗ್ರಹ ಅಮೆಜೋನಿಯಾ -1 ಪಿಎಸ್‌ಎಲ್‌ವಿ ಸಿ 51 ನಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ಅಲ್ಲದೇ ಎಲ್ಲಾ ಸಹ-ಪ್ರಯಾಣಿಕ ಉಪಗ್ರಹಗಳನ್ನು ಪಿಎಸ್‌ಎಲ್‌ವಿ-ಸಿ 51 ನಿಂದ ಬೇರ್ಪಡಿಸಲಾಗಿದೆ ಎಂದು ಇಸ್ರೋ ಹೇಳಿದೆ.
ಇಸ್ರೋ ತನ್ನ ಮೊದಲ ಉಡಾವಣೆಯಲ್ಲಿ ಅಮೆಜೋನಿಯಾ -1 ಮತ್ತು 18 ಇತರ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 51 ಅನ್ನು ಭಾನುವಾರ ಬೆಳಿಗ್ಗೆ ನಭಕ್ಕೆ ಉಡಾಯಿಸಿತು.
ಅಮೆಜೋನಿಯಾ -1 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್‌ನ (ಐಎನ್‌ಪಿಇ) ಆಪ್ಟಿಕಲ್ ಭೂ ವೀಕ್ಷಣಾ ಉಪಗ್ರಹವಾಗಿದೆ. ಈ ಉಪಗ್ರಹವು ಅಮೆಜಾನ್ ಪ್ರದೇಶದಲ್ಲಿನ ಅರಣ್ಯನಾಶವನ್ನು ಮೇಲ್ವಿಚಾರಣೆ ಮಾಡಲು ಮತ್ತು ಬ್ರೆಜಿಲ್ ಪ್ರದೇಶದಾದ್ಯಂತ ವೈವಿಧ್ಯಮಯ ಕೃಷಿಯ ವಿಶ್ಲೇಷಣೆಗಾಗಿ ಬಳಕೆದಾರರಿಗೆ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಒದಗಿಸುವ ಮೂಲಕ ಅಸ್ತಿತ್ವದಲ್ಲಿರುವ ರಚನೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಪಿಎಸ್‌ಎಲ್‌ವಿಯ 53 ನೇ ಮಿಷನ್ ಆಗಿರುವ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ-ಸಿ 51) ಪ್ರಾಥಮಿಕ ಉಪಗ್ರಹವಾಗಿ ಬ್ರೆಜಿಲ್‌ನ ಅಮೆಜೋನಿಯಾ -1 ಅನ್ನು ಉಡಾವಣೆ ಮಾಡಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement