ಸೈನ್ಯದ ಗುಂಡಿನ ದಾಳಿ ನಂತರ ಮ್ಯಾನ್ಮಾರ್‌ನಲ್ಲಿ ಜನರ ಹೋರಾಟ ತೀವ್ರ

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ನಡೆಸಿದ ದಾಳಿಯಲ್ಲಿ ೧೮ ಜನರು ಮೃತಪಟ್ಟ ನಂತರ ಮ್ಯಾನ್ಮಾರ್‌ ಜನರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಆಂಗ್‌ ಸಾನ್‌ ಸೂಕಿ ಅವರ ಸರಕಾರವನ್ನು ಮತ್ತೆ ಸ್ಥಾಪಿಸಬೇಕೆಂದು ಒತ್ತಾಯಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ. ಯಾಂಗೋನ್‌ನಲ್ಲಿ ಜನಸಂದಣಿಯ ಮೇಲೆ ಗುಂಡು ಹಾರಿಸಿದ್ದರಿಂದ ಹಲವರು ಜೀವ ಕಳೆದುಕೊಂಡಿದ್ದಾರೆ.
ಸೈನ್ಯವು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮತ್ತು ಚುನಾಯಿತ ಸರ್ಕಾರಿ ನಾಯಕ ಸೂಕಿ ಮತ್ತು ಅವರ ಪಕ್ಷದ ಹೆಚ್ಚಿನ ನಾಯಕರನ್ನು ಫೆಬ್ರವರಿ 1 ರಂದು ಬಂಧಿಸಿದಾಗಿನಿಂದ ಮ್ಯಾನ್ಮಾರ್‌ನಲ್ಲಿ ಶಾಂತಿ ಕದಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂಕಿ ಅವರ ಪಕ್ಷವು ಭರ್ಜರಿ ಜಯಗಳಿಸಿತ್ತು.
ಸುಮಾರು 50 ವರ್ಷಗಳ ಮಿಲಿಟರಿ ಆಡಳಿತದ ನಂತರ ಜನಿಸಿದ್ದ ಪ್ರಜಾಪ್ರಭುತ್ವವನ್ನು ಎಳೆಯಲ್ಲಿಯೇ ಚಿವುಟಿದ್ದರಿಂದ ಜನರು ದಂಗೆ ಎದ್ದಿದ್ದಾರೆ. ವಿಶ್ವದ ಮಾನಹ ಹಕ್ಕುಗಳ ಹೋರಾಟಗಾರರು ಮ್ಯಾನ್ಮಾರ್‌ನಲ್ಲಿ ಜನರ ಮೇಲೆ ಮಿಲಿಟರಿ ನಡೆದಸಿರುವ ಹಲ್ಲೆಯನ್ನು ಖಂಡಿಸಿದ್ದಾರೆ.
ಕೆಲವು ಪ್ರತಿಭಟನಾಕಾರರು, ಅಧಿಕಾರಿಗಳು ಬಳಸುವ ಕಣ್ಗಾವಲು ಕ್ಯಾಮೆರಾಗಳನ್ನು ನಾಶಮಾಡಲು ಕರೆ ನೀಡಿದರೆ, ಇತರರು ಪೆಪ್ಪರ್ ಸ್ಪ್ರೇ ಬಳಕೆ ಮಾಡಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ನಾನು ಮ್ಯಾನ್ಮಾರ್ ಮಿಲಿಟರಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುತ್ತೇನೆ ಎಂದು ಪ್ರಮುಖ ಯುವ ಕಾರ್ಯಕರ್ತ ಥಿಂಜಾರ್ ಶುನ್ಲೀ ಯಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದು ಪೋಸ್ಟ್‌ ಮಾಡಿದ್ದಾರೆ.
ರಾಜಕೀಯ ಕೈದಿಗಳ ಸಹಾಯ ಸಂಘವು ಭಾನುವಾರ ಕನಿಷ್ಠ 270 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದೆ, ಒಟ್ಟು 1,132 ಜನರಿಂದ ದಂಗೆಯ ನಂತರ ಬಂಧನ, ಆರೋಪ ಅಥವಾ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದೆ.
ದಂಗೆಯನ್ನು ಧಿಕ್ಕರಿಸುವುದು ಕೇವಲ ಬೀದಿಗಳಲ್ಲಿ ಮಾತ್ರವಲ್ಲದೆ ನಾಗರಿಕ ಸೇವೆ, ಪುರಸಭೆ ಆಡಳಿತ, ನ್ಯಾಯಾಂಗ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಮತ್ತು ಮಾಧ್ಯಮಗಳಲ್ಲಿ ಹೆಚ್ಚು ಗೋಚರಿಸುತ್ತಿದೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement