28,000 ಕೋಟಿ ರೂ.ಗಳ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿದ ರಾಜ್ಯ ಸರ್ಕಾರ

ಬೆಂಗಳೂರು: ಇಲೆಕ್ಟ್ರಿಕ್‌ ವಾಹನ, ಡೇಟಾ ಸೇಂಟರ್‌, ಏರೋಸ್ಪೇಸ್‌ ಹಾಗೂ ರಕ್ಷಣಾ ಕಂಪನಿಗಳು ಸೇರಿದಂತೆ 23 ಕಂಪನಿಗಳಿಂದ ರಾಜ್ಯದಲ್ಲಿ ಸುಮಾರು 28,000 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದಕ್ಕೆ ರಾಜ್ಯ ಸರ್ಕಾರ ಗುರುವಾರ ಸಹಿ ಹಾಕಿದೆ. ಇನ್ವೆಸ್ಟ್‌ ಕರ್ನಾಟಕ ವೇದಿಕೆಯ ಸಹಯೋಗದೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಕಾಲಮಿತಿಯಲ್ಲಿ … Continued

ಕೆ. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿ ಪ್ರಕಟ: ವಿಠಲದಾಸ ಕಾಮತ್‌, ಜಯರಾಮ ಹೆಗಡೆಗೆ ಪ್ರಶಸ್ತಿ

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿ ವರ್ಷ ಕೊಡಮಾಡುವ ಕೆ. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 2020ನೇ ಸಾಲಿನ ಪ್ರಶಸ್ತಿಯನ್ನು ಜನಮಾಧ್ಯಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಜಯರಾಮ ಹೆಗಡೆ ಹಾಗೂ 2021ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ … Continued

ಶ್ರವಣಬೆಳಗೊಳದಲ್ಲಿ ಕೋನಾರ್ಕ್ ಮಾದರಿ ಪ್ರವಾಸಿ ಸರ್ಕಿಟ್ ನಿರ್ಮಾಣ: ಯೋಗೇಶ್ವರ

ಬೆಂಗಳೂರು: ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕಿಟ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾದಲ್ಲಿ ಕೋನಾರ್ಕ್ ಸೂರ್ಯ ದೇವಾಲಯದ ಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆ ಪ್ರವಾಸಿಗರಿಗೆ ಸಾಕಾರಗೊಳಿಸಿದ್ದಾರೆ. ಪ್ರವಾಸಿಗರು ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್ ನಲ್ಲಿ … Continued

ರಾಜ್ಯದಲ್ಲಿ ಮಳೆ ಅಬ್ಬರ, ಉಕ್ಕಿ ಹರಿಯುತ್ತಿರುವ ನದಿಗಳು; ಬೆಳೆನಾಶದ ಆತಂಕದಲ್ಲಿ ರೈತರು

posted in: ರಾಜ್ಯ | 0

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂ ಕುಸಿತ, ರಸ್ತೆ ವಾಹನ ಸಂಚಾರ ಸ್ಥಗಿತ ಸೀರಿದಂತೆ ಬಹುತೇಕ ಹಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆರ್ಭಟಕ್ಕೆ ಜನರು ತೊಂದರೆಯಲ್ಲಿದ್ದಾರೆ. ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, … Continued

ಹರಿಯಾಣದಲ್ಲಿ ಉಪಸ್ಪೀಕರ್ ಕಾರಿನ ಮೇಲೆ ದಾಳಿ: 100 ರೈತರ ಮೇಲೆ ದೇಶದ್ರೋಹದ ಪ್ರಕರಣ..

ನವದೆಹಲಿ: ಬ್ರಿಟಿಷ್ ಯುಗದ ದೇಶದ್ರೋಹ ಕಾನೂನಿನ ಸಿಂಧುತ್ವವನ್ನು ಮತ್ತು ಜನರನ್ನು ಬುಕ್ ಮಾಡಲು ಇನ್ನೂ ಏಕೆ ಬಳಕೆಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದ್ದರೂ ಸಹ, ಮೂರು ವಿವಾದಾತ್ಮಕ ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ಆಂದೋಲನದ ಭಾಗವಾಗಿದ್ದ ಕೆಲವು ಪ್ರತಿಭಟನಾಕಾರರ ರೈತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಹರಿಯಾಣ ಉಪ ಸ್ಪೀಕರ್ ರಣಬೀರ್ ಗಂಗ್ವಾ ಅವರ … Continued

ಜೆಇಇ-ಮೇನ್‌ ನಾಲ್ಕನೇ ಆವೃತ್ತಿ ದಿನಾಂಕ ಮುಂದೂಡಿಕೆ

ನವದೆಹಲಿ:ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ನಾಲ್ಕನೇ ಆವೃತ್ತಿ ಜೆಇಇ-ಮೇನ್ ಆಗಸ್ಟ್ 26ರಿಂದ ಸೆಪ್ಟೆಂಬರ್ 2ಕ್ಕೆ  ಮುಂದೂಡಲಾಗಿದೆ. ಆಕಾಂಕ್ಷಿಗಳಿಗೆ ನಿರ್ಣಾಯಕ ಪರೀಕ್ಷೆಯ ಎರಡು ಸೆಷನ್‌ಗಳ ನಡುವೆ ನಾಲ್ಕು ವಾರಗಳ ಅಂತರವನ್ನು ನೀಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ ತಿಳಿಸಿದ್ದಾರೆ. ಜೆಇಇ (ಮುಖ್ಯ) ನ ನಾಲ್ಕನೇ ಆವೃತ್ತಿಯನ್ನು ಈ ಹಿಂದೆ ಜುಲೈ 27 ರಿಂದ ಆಗಸ್ಟ್ … Continued

ಧಾರಾಕಾರ ಮಳೆ: ಅಘನಾಶಿನಿ ನದಿ ತಟದಲ್ಲಿ ಪ್ರವಾಹ ಭೀತಿ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಒಂದುವಾರದಿಂದ ಎಡೆ-ಬಿಡದೆ ಮಳೆ ಸುರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಅಘನಾಶನಿ ನದಿಯು ಉಕ್ಕಿ ಹರಿಯುತ್ತಿದೆ. ರಭಸದಿಂದ ಬಿಸುತ್ತಿರುವ ಬಿರುಗಾಳಿಯಿಂದ ಸಮುದ್ರದ ಭೋರ್ಗರೆತವು ಹೆಚ್ಚಿದ್ದು ಅಘನಾಣಿನಿಯ ನೀರು ಸಮುದ್ರ ಸೇರದೆ ತಗ್ಗು ಪ್ರದೇಶಕ್ಕೆ ನುಗ್ಗುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಅಘನಾಶಿನಿ ಹಿನ್ನೀರು ಪ್ರದೇಶವಾದ ಲುಕ್ಕೇರಿ, ಮಾಸೂರು, ಹಣ್ಣೇಮಠ ಇತ್ಯಾದಿ … Continued

ಜಿಪಂ-ತಾಪಂ ಚುನಾವಣೆ ಡಿಸೆಂಬರ್ ವರೆಗೆ ಮುಂದೂಡಲು ರಾಜ್ಯ ಸಂಪುಟ ಸಭೆ ನಿರ್ಧಾರ

posted in: ರಾಜ್ಯ | 0

ಬೆಂಗಳೂರು: ರಾಜ್ಯ ಸರಕಾರ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಡಿಸೆಂಬರ್ ವರೆಗೆ ಮುಂದೂಡುವ ನಿರ್ಣಯವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿತ್ತು.    ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳನ್ನು  ಡಿಸೆಂಬರ್ … Continued

ರಿಷಬ್‌ ಪಂತ್‌, ಥ್ರೋ ಡೌನ್ ತಜ್ಞ ಗರಾನಿ ಕೋವಿಡ್‌ ಪಾಸಿಟಿವ್ ಪರೀಕ್ಷೆಗಳ ನಂತರ ವೃದ್ಧಿಮಾನ್ ಸಹಾ, ಭರತ್ ಅರುಣಗೆ ಐಸೋಲೇಶನ್‌

ಇಂಗ್ಲೆಂಡ್‌ನಲ್ಲಿ ಕೊವಿಡ್‌-19ಗೆ ಭಅರತದ ತಂಡದ ವಿಕೆಟ್‌ ಕೀಪರ್‌ ರಿಷಭ್ ಪಂತ್ ಪರೀಕ್ಷೆ ಸಕಾರಾತ್ಮಕವಾಗಿದೆ ಎಂದು ದೃಢಪಟ್ಟ ಕೆಲವೇ ಗಂಟೆಗಳ ನಂತರ, ಭಾರತದ ಥ್ರೋಡೌನ್ ತಜ್ಞ ದಯಾನಂದ ಗರಣಿ ಸಹ ವೈರಸ್‌ಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಕ್ರಿಕ್‌ಬಝ್‌‌ ಪ್ರಕಾರ, ಭಾರತದ ಪ್ರವಾಸ ತಂಡದ ಇಬ್ಬರು ಸದಸ್ಯರು ವೈರಸ್‌ಗೆ ಧನಾತ್ಮಕತೆಯನ್ನು ಪರೀಕ್ಷಿಸಿದ್ದಾರೆ ಮತ್ತು ಪ್ರಸ್ತುತ ಪ್ರತ್ಯೇಕತೆಯಲ್ಲಿದ್ದಾರೆ. ಪಂತ್ ಪ್ರಸ್ತುತ … Continued

ಮುಂಗಾರು ತೀವ್ರ; ಮತ್ತೆ 4 ದಿನ ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 4 ದಿನ ಅಂದರೆ ಜುಲೈ 19ರ ವರೆಗೆ ಭಾರಿ ಮಳೆಯಾಗಲಿಲಿದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಜುಲೈ 16ರಂದು ರೆಡ್ ಅಲರ್ಟ್ … Continued