ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯಕ್ಕೆ ಜಾಗತಿಕ ಮನ್ನಣೆ, ಈಕ್ವೆಟರ್ ೨೦೨೧’ ಪ್ರಶಸ್ತಿಗೆ ಆಯ್ಕೆ

ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯಕ್ಕೆ ವಿಶ್ವಸಂಸ್ಥೆ ಈ ವರ್ಷದ ‘ಈಕ್ವೆಟರ್ ೨೦೨೧’ ಪ್ರಶಸ್ತಿ ನೀಡಿ ಗೌರವಿಸಿದೆ. ನರಸಿಂಹ ಹೆಗಡೆ ನೇತೃತ್ವದ ತಂಡ ಹಲವು ವರ್ಷಗಳ ಕಾಲ ಸ್ನೇಹಕುಂಜ ಸಂಸ್ಥೆಯ ಮುಖೇನ ರಾಂಪತ್ರೆ ಜಡ್ಡಿ ಪಾರಿಸಾರಿಕ ಪುನಶ್ಚೇತನದ ಕೆಲಸವನ್ನು ಜನಸಹಭಾಗಿತ್ವದಲ್ಲಿ ಕೈಗೊಂಡು ಯಶಸ್ವಿಯಾಗಿಸಿತ್ತು. ೧೩೦ ದೇಶಗಳ ೬೦೦ ಕ್ಕೂ ಹೆಚ್ಚು ನಾಮ … Continued

ಅಕ್ರಮವಾಗಿ ನೆಲೆಸಿದ ವಿದೇಶ ಪ್ರಜೆಗಳ ಪತ್ತೆ- ಗಡಿಪಾರಿಗೆ ನಿರ್ಧಾರ: ಉನ್ನತ ಮಟ್ಟದ ಸಮಿತಿ ರಚನೆ

ಬೆಂಗಳೂರು: ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಅವರನ್ನು ಅವರ ದೇಶಕ್ಕೆ ಗಡಿಪಾರು ಮಾಡುವ ಉದ್ದೇಶದೊಂದಿಗೆ ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ರಾಜ್ಯದಲ್ಲಿ ನಾಪತ್ತೆಯಾಗಿರುವ ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಈ ಸಮಿತಿ ಕಾರ್ಯೋನ್ಮುಖವಾಗಲಿದೆ. ಪತ್ತೆಯಾಗುವ ಅಕ್ರಮ ವಿದೇಶಿಗರು ಯಾವ ದೇಶದವರು ಎಂಬು ಪತ್ತೆ ಮಾಡಿ … Continued

ಕರ್ನಾಟಕದಲ್ಲಿ ಶನಿವಾರ 1.18ಕ್ಕೆ ಇಳಿದ ಕೋವಿಡ್‌ ಸಕಾರಾತ್ಮಕ ದರ

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 1806 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಇದೇ ಸಮಯದಲ್ಲಿ 42 ಮಂದಿ ಮೃತಪಟ್ಟಿದ್ದು, 2,748 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ರೇಟ್ 1.18ಕ್ಕೆ ಇಳಿಕೆ ಕಂಡಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 28,80,370 ಮಂದಿಗೆ ಕೊರೊನಾ ಬಂದಿದೆ. 28,12,869 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಒಟ್ಟು … Continued

ಮುಂಬೈ: ಟಿ-ಸೀರೀಸ್ ಎಂಡಿ ಭೂಷಣ್ ಕುಮಾರ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು: ಸುಳ್ಳು, ಆಧಾರ ರಹಿತ ಎಂದ ಕಂಪನಿ

ದಿವಂಗತ ಗುಲ್ಶನ್ ಕುಮಾರ್ ಅವರ ಪುತ್ರ ಹಾಗೂ ಬಾಲಿವುಡ್ ನಿರ್ಮಾಪಕ ಮತ್ತು ಟಿ-ಸೀರೀಸ್ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಭೂಷಣ್ ಕುಮಾರ್ ಅವರು ಮಹಿಳೆಯೊಬ್ಬರಿಗೆ ಉದ್ಯೋಗ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ … Continued

ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಪ್ರಧಾನಿ ಮೋದಿ ಭೇಟಿಯಾದ ಬಿಎಸ್‌ವೈ:ಕರ್ನಾಟಕದ ಯೋಜನೆಗಳಿಗೆ ನೆರವು ಕೋರಿಕೆ

ನವದೆಹಲಿ: ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಕೆಲ ಯೋಜನೆಗಳ ವಿಷಯದಲ್ಲಿ ಕೇಂದ್ರ ಸರ್ಕಾರದ ನೆರವು ನೀಡುವಂತೆ ಮನವಿ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕು, ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ 6 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಬೇಕು … Continued

ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಸಿಎಂ ಬಿಎಸ್‌ವೈ

ನವದೆಹಲಿ: ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಭೇಟಿ ಮಾಡಿದರು. ಕರ್ನಾಟಕ ಭವನದಿಂದ ತೆರಳಿದ ಯಡಿಯೂರಪ್ಪ ದೆಹಲಿ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು (ಜು.16) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಕೆಲ … Continued

ಕರ್ನಾಟಕದಲ್ಲಿ ಎಲ್ಲ ವೈದ್ಯಕೀಯ, ದಂತ ಕಾಲೇಜುಗಳ ತೆರೆಯಲು ಅವಕಾಶ..!

ಬೆಂಗಳೂರು: ವೈದ್ಯಕೀಯ, ದಂತ ಕಾಲೇಜುಗಳು ಮತ್ತು ಸಂಬಂಧಿತ ಆರೋಗ್ಯ ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲು ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ. ಆದಾಗ್ಯೂ, ಕೋವಿಡ್‌ ಲಸಿಕೆಯ ಕನಿಷ್ಠ ಒಂದು ಡೋಸ್ ತೆಗೆದುಕೊಂಡವರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ  ಎಂದು ನ್ಯೂಸ್‌ ಮಿನಿಟ್‌.ಕಾಮ್‌ ವರದಿ ಮಾಡಿದೆ. ಸರ್ಕಾರವು ಹೊರಡಿಸಿದ ಕೋವಿಡ್‌-19- ಸೂಕ್ತ ನಡವಳಿಕೆ ಮತ್ತು … Continued

ಸಿಪೆಟ್ ಸಂಸ್ಥೆಯಿಂದ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನ

ಹುಬ್ಬಳ್ಳಿ: 2021 – 22 ನೇ ಸಾಲಿನ ಉದ್ಯೋಗಾದಾರಿತ ಮತ್ತು ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಕೋರ್ಸ್ ಗಳ ಶೈಕ್ಷಣಿಕ ಪ್ರವೇಶಕ್ಕೆ ಮೈಸೂರಿನ ಸಿಪೆಟ್ ಸಂಸ್ಥೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) 3 ವರ್ಷ ಹಾಗೂ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೋಸೆಸ್ಸಿಂಗ್ ಮತ್ತು ಟೆಸ್ಟಿಂಗ್ (PGD-PPT) 2 ವರ್ಷದ … Continued

ಬಸ್ ಸ್ಫೋಟದಲ್ಲಿ ಚೀನಾ ಕಾರ್ಮಿಕರ ಸಾವು: ಭಯೋತ್ಪಾದಕರ ನಿರ್ಮೂಲನೆ ನಿಮಗಾಗದಿದ್ರೆ ನಮ್ಮ ಕ್ಷಿಪಣಿಗಳು ಕಾರ್ಯರೂಪಕ್ಕೆ ಬರಲಿದೆ-ಪಾಕಿಸ್ತಾನಕ್ಕೆ ಚೀನಾ ಎಚ್ಚರಿಕೆ

ಬೀಜಿಂಗ್: ವಾಯವ್ಯ ಪಾಕಿಸ್ತಾನದ ಬಸ್‌ನಲ್ಲಿ ಬಾಂಬ್ ಸ್ಫೋಟದಲ್ಲಿ ಒಂಭತ್ತು ಚೀನಾದ ಕಾರ್ಮಿಕರು ಸಾವಿಗೆ ಕಾರಣವಾದ ‘ಭಯೋತ್ಪಾದಕ’ ಘಟನೆಯನ್ನು ಬಲವಾಗಿ ಕಂಡಿಸಿರುವ ಗ್ಲೋಬಲ್ ಟೈಮ್ಸ್ ಪ್ರಧಾನ ಸಂಪಾದಕ ಇಸ್ಲಾಮಾಬಾದ್‌ಗೆ ಎಚ್ಚರಿಕೆ ನೀಡಿದ್ದು, ಅವರನ್ನು ತೊಡೆದುಹಾಕಲು ನಿಮಗೆ ಸಾಧ್ಯವಾಗದಿದ್ದರೆ ಚೀನಾದ ಕ್ಷಿಪಣಿಗಳು ಮತ್ತು ಪಡೆಗಳನ್ನು ಕಾರ್ಯ ನಿರ್ವಹಿಸಲು ಕಾರ್ಯರೂಪಕ್ಕೆ ತರಬಹುದು ಎಂದು ಬಲವಾದ ಎಚ್ಚರಿಕೆ ನೀಡಿದೆ. “ಈ ದಾಳಿಯ … Continued

ಮಹದಾಯಿ ಹೋರಾಟಕ್ಕೆ ಏಳು ವರ್ಷ: ಕಪ್ಪುಪಟ್ಟಿ ಧರಿಸಿ ರೈತರ ಮೌನ ಪ್ರತಿಭಟನಾ ರ‍್ಯಾಲಿ

posted in: ರಾಜ್ಯ | 0

ಗದಗ: ಮಲಪ್ರಭಾ ನದಿಗೆ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ರೈತರು ನಡೆಸುತ್ತಿರುವ ಹೋರಾಟ ಜುಲೈ ೧೬ಕ್ಕೆ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ೭ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶುಕ್ರವಾರ ನರಗುಂದ ಪಟ್ಣಣದಲ್ಲಿ ರೈತರ ಮೌನ ಪ್ರತಿಭಟನಾ ರ‍್ಯಾಲಿ ನಡೆಸಿದರು. ಕೈಗೆ ಕಪ್ಪು ಪಟ್ಟಿ ಧರಿಸಿ ಹಾಗೂ ಕಪ್ಪುಬಾವುಟ ಪ್ರದರ್ಶಿಸಿದ ರೈತ ಮುಖಂಡರು ರೈತಸೇನಾ … Continued