ನಟಿ ಶ್ರುತಿಗೆ ಶಾಕ್​ ನೀಡಿದ ಸಿಎಂ; ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಸ್ಥಾನಕ್ಕೆ ಆಪ್ತನಿಗೆ ಬಿಎಸ್‌ ವೈ ಮಣೆ ಣೆ

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾಪು ಸಿದ್ಧಲಿಂಗಸ್ವಾಮಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರುತಿ ಅವರ ನೇಮಕಾತಿಯನ್ನು ಹಿಂಪಡೆದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನವರಾದ ಸಿದ್ಧಲಿಂಗಸ್ವಾಮಿ ಅವರನ್ನು ನೇಮಿಸಲಾಗಿದೆ. ಕಾಪು ಸಿದ್ದಲಿಂಗಸ್ವಾಮಿ ಬಹಳ ವರ್ಷ … Continued

ನವಜೋತ್ ಸಿಂಗ್ ಸಿಧು -ಅಮರಿಂದರ್ ಜಗಳದ ಮಧ್ಯೆಯೇ ಪಂಜಾಬ್ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾಗಿ ಸಿಧುಗೆ ಮಣೆ ಹಾಕಿದ ಸೋನಿಯಾ

ನವದೆಹಲಿ; ಊಹಾಪೋಹ ಮತ್ತು ನಿರೀಕ್ಷೆಯ ಮಧ್ಯೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಿಧು ಮತ್ತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಡುವೆ ಉದ್ವಿಗ್ನತೆ ಇದೆ ಎಂಬ ವರದಿಗಳ ನಡುವೆ ಈ ಸುದ್ದಿ ಬಂದಿದೆ. ಈ ನೇಮಕಾತಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಕ್ಷಣದಿಂದ ಜಾರಿಗೆ … Continued

ಜೀರೋ ಟ್ರಾಫಿಕ್ ನಲ್ಲಿ ಎಸ್ ಡಿಎಂನಿಂದ ತತ್ವದರ್ಶ ಆಸ್ಪತ್ರೆಗೆ ಕಿಡ್ನಿ ಸ್ಥಳಾಂತರ

ಹುಬ್ಬಳ್ಳಿ: ಧಾರವಾಡದ ಎಸ್.ಡಿಎಂ ಆಸ್ಪತ್ರೆಯವರ ಮನವಿ ಮೇರೆಗೆ ಹಾಗೂ ಅಂಗಾಂಗ ಕಸಿ ಪ್ರಾಧಿಕಾರದ ನಿಯಮದಂತೆ ಇಂದು (ಭಾನುವಾರ) ಎಸ್.ಡಿ.ಎಂ ಆಸ್ಪತ್ರೆಯಿಂದ ”ಮೂತ್ರಪಿಂಡ” (Kidney)ವನ್ನು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ 12 ಕಿ.ಮೀ ಅಂತರವನ್ನು 07 ನಿಮಿಷಗಳಲ್ಲಿ ಜೀರೋ ಟ್ರಾಫಿಕ್‌ ಮೂಲಕ ಸಾಗಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆ ನೀಡಲಾಯಿತು. ಸುರಿಯುತ್ತಿದ್ದ … Continued

ಕರಾವಳಿ ಜಿಲ್ಲೆಗಳು, ದಾವಣೆಗೆರೆ ಸೇರಿ ಹಲವೆಡೆ ಭಾರಿ ಮಳೆ, ಕೆಲವೆಡೆ ಪ್ರವಾಹದ ಸ್ಥಿತಿ

ಬೆಂಗಳೂರು:ರಾಜ್ಯದಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರಿದಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಮಳೆ ಆರ್ಭಟ ಇನ್ನೂ ಮೂರ್ನಾಲ್ಕು ದಿನಗಳ ಕಾಲ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡದ ಭಟ್ಕಳ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಸಂಶುದ್ದೀನ್ ವೃತ್ತ, ರಂಗಿನಕಟ್ಟೆ, ಚೌಥನಿ ಗ್ರಾಮದಲ್ಲಿ ಮಳೆಯಿಂದಾಗಿ ನೀರು … Continued

ಕುವೈತ್‌ನಲ್ಲಿ ಸಿಲುಕಿದ್ದ ತಾಯಿ-ಮಗುವಿನ ಮಂಗಳೂರು ಪ್ರಯಾಣಕ್ಕೆ 10 ನಿಮಿಷದೊಳಗೆ ವ್ಯವಸ್ಥೆ ಮಾಡಿಸಿದ ಸಚಿವೆ ಶೋಭಾ

ಮಂಗಳೂರು: ಸಮಯಕ್ಕೆ ಸರಿಯಾಗಿ ವಿದೇಶಾಂಗ ಸಚಿವಾಲಯ(ಎಂಇಎ) ನೆರವಾಗಿದ್ದರಿಂದ ಮಹಿಳೆ ಮತ್ತು ಆಕೆಯ ಆರು ತಿಂಗಳ ಮಗು ಕುವೈತ್‌ನಿಂದ ಮಂಗಳೂರಿಗೆ ಬರಲು ವಿಮಾನ ಏರುವಂತಾಗಿದೆ. ಶನಿವಾರ ಸಂಜೆ ಕೋವಿಡ್ ಮಾರ್ಗಸೂಚಿಯಲ್ಲಿನ ಕೆಲ ಗೊಂದಲಗಳಿಂದಾಗಿ ತಾಯಿ ಮತ್ತು ಮಗು ಸ್ವದೇಶಕ್ಕೆ ವಾಪಸ್ಸಾಗಲು ಅಡ್ಡಿಯಾಗಿತ್ತು. ಕುವೈತ್ ನಲ್ಲಿ ಪತಿ ಜತೆಗಿದ್ದ ಕುಂಟಿಕಾನ ನಿವಾಸಿ ಅದಿತಿ ಸುದೇಶ್ ನಾಯಕ್ ತಮ್ಮ ಬೆನ್ನಮೂಳೆಯ … Continued

ಭಟ್ಕಳ: ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿದ ದೋಣಿಗಳು, 10ಕ್ಕೂ ಹೆಚ್ಚು ಮೀನುಗಾರರ ರಕ್ಷಣೆ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದಾಗ ಅಲೆಯ ರಭಸಕ್ಕೆ ಸಿಲುಕಿದ್ದ 10ಕ್ಕೂ ಹೆಚ್ಚು ಮೀನುಗಾರರನ್ನು ಭಟ್ಕಳ ಬಂದರು ಸಮೀಪದ ಅಳಿವೆ ಪ್ರದೇಶದಲ್ಲಿ ರಕ್ಷಿಸಲಾಗಿದೆ. ಅಬ್ಬರದ ಮಳೆಯಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಲು ನಿರ್ಬಂಧವಿದ್ದರೂ, ಮೀನುಗಾರರು ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು ಎನ್ನಲಾಗಿದೆ. ಅರಬ್ಬೀ ಸಮುದ್ರದಲ್ಲಿ ಬಾರೀ ಗಾಳಿ ಸಹಿತ ಅಬ್ಬರದ ಮಳೆಯಾಗಿದ್ದರಿಂದ ಮೀನುಗಾರರು ಅಲೆಯ ರಭಸಕ್ಕೆ … Continued

ಕರ್ನಾಟಕದಲ್ಲಿ ಕೊರೊನಾ ಹೊಸ ಸೋಂಕು, ಸಾವು ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ (ಭಾನುವಾರ) 1708 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 36 ಮಂದಿ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಹೋಲಿಸಿದರೆ ಕೊರೊನಾ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ರಾಜ್ಯದಲ್ಲಿ ಒಂದೇ ದಿನ 2463 ಮಂದಿ ಗುಣಮುಖರಾಗಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 28,18,476ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 18,83,947ಕ್ಕೆ ಏರಿಕೆಯಾಗಿದ್ದು, ಸಾವಿನ … Continued

ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ಮುಖ್ ಮನೆ ಮೇಲೆ ಇಡಿ ದಾಳಿ

ನಾಗ್ಪುರ: ಮನಿ ಲಾಂಡರಿಂಗ್ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಮಾಜಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಎರಡು ನಿವಾಸಗಳಲ್ಲಿ ಶೋಧ ನಡೆಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಾರಿ ನಿರ್ದೇಶನಾಲಯದ ಎರಡು ಪ್ರತ್ಯೇಕ ತಂಡಗಳು ನಾಗ್ಪುರ ಜಿಲ್ಲೆಯಿಂದ ೬೦ ಕಿ.ಮೀ ದೂರದಲ್ಲಿರುವ ಕಟೋಲ್ ಪಟ್ಟಣದಲ್ಲಿರುವ ದೇಶ್ಮುಖ್ ಮನೆ ಮತ್ತು ಕಟೋಲ್ ಬಳಿಯ … Continued

ನಾಳೆಯಿಂದ ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ‘ಬಯೋಮೆಟ್ರಿಕ್’ ಹಾಜರಾತಿ ಕಡ್ಡಾಯ

ಬೆಂಗಳೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ನೀಲಾಗಿದ್ದ ಬಯೋಮೆಟ್ರಿಕ್ ಹಾಜರಾತಿ ನಾಳೆಯಿಂದ ಕಡ್ಡಾಯವಾಗಲಿದೆ. ನಾಳೆಯಿಂದ (ಜುಲೈ 19) ರಾಜ್ಯ ಎಲ್ಲಾ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರ ಕಾರ್ಯದರ್ಶಿ ಈ ಕುರಿತು ಮುನೀಶ್ ಮೌದ್ಗಿಲ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು … Continued

‘ಈಗ ಅನುಮತಿ ನೀಡಲು ಸಾಧ್ಯವಿಲ್ಲ: ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸುವ ರೈತರ ಮನವಿ ತಿರಸ್ಕರಿಸಿದ ದೆಹಲಿ ಪೊಲೀಸರು

ನವದೆಹಲಿ: ಪ್ರತಿಭಟನಾ ನಿರತ ರೈತರಿಗೆ ನಾಳೆಯಿಂದ (1ಜುಲೈ 19) ಮಾನ್ಸೂನ್ ಅಧಿವೇಶನದ ಸಂದರ್ಭದಲ್ಲಿ ಮೂರು ಕೃಷಿ ಕಾನೂನು ವಿರೋಧಿಸಿ ಸಂಸತ್ತಿನ ಹೊರಗೆ ಪ್ರದರ್ಶನ ನಡೆಸಲು ರೈತರಿಗೆ ದೆಹಲಿ ಅನುಮತಿ ನಿರಾಕರಿಸಿದ್ದಾರೆ. ರೈತರ ನಿಯೋಗ ಇಂದು (ಭಾನುವಾರ) ದೆಹಲಿ ಪೊಲೀಸರನ್ನು ಭೇಟಿಯಾಗಿ ಪ್ರತಿಭಟನೆಗೆ ಸಂಬಂಧಿಸಿದಂತೆ ತಮ್ಮ ಯೋಜನೆಗಳನ್ನು ತಿಳಿಸಿದೆ. ರೈತ ಸಂಘಗಳು ನೀಡುವ ಪಾಸ್‌ಗಳೊಂದಿಗೆ ಸಂಸತ್ತಿಗೆ ಹತ್ತಿರದ … Continued