ಛತ್ತೀಸ್‍ಗಢ: ನಕ್ಸಲರ ಗುಂಡಿಗೆ ಗದಗ ಯೋಧ ಹುತಾತ್ಮ

ಗದಗ: ನಕ್ಸಲ್ ರ ಗುಂಡಿನ ದಾಳಿಗೆ ಜಿಲ್ಲೆಯ ಯೋಧ ವೀರಮರಣವನ್ನಪ್ಪಿರುವ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಗ್ರಾಮದ ಯೋಧ ಲಕ್ಷ್ಮಣ್ ಗೌರಣ್ಣವರ(31) ಹತಾತ್ಮರಾಗಿದ್ದಾರೆ. ಛತ್ತೀಸ್‍ಗಢ ಗಡಿ ಭಾಗದಲ್ಲಿ ನಕ್ಸಲರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ನಕ್ಸಲರ ಗುಂಡು ಲಕ್ಷ್ಮಣ ಅವರ ಎದೆ ಹೊಕ್ಕಿದ್ದರಿಂದ ಅವರು ಹತಾತ್ಮರಾಗಿದ್ದಾರೆ. ಲಕ್ಷ್ಮಣ್ … Continued

‘ರಾಜಕೀಯಕ್ಕಿಂತ ಮೇಲೇರಿ, ತಂಡವಾಗಿ ಕೆಲಸ ಮಾಡಿ’: ಕೋವಿಡ್‌-19ರ ಸಂಬಂಧ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ಎಲ್ಲ ಪಕ್ಷಗಳ ಸಭಾ ನಾಯಕರು ರಾಜಕೀಯಕ್ಕಿಂತ ಮೇಲೇರಲು ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ತಂಡವಾಗಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕೇಳಿದ್ದಾರೆ. ಕೋವಿಡ್‌ -19 ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸುವ ಕುರಿತು ಉಭಯ ಸದನದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೇಂದ್ರ … Continued

ಅವಹೇಳನಕಾರಿ ಹೇಳಿಕೆಗಳಿಗೆ ಬಹಿರಂಗ ಕ್ಷಮೆಯಾಚನೆ ವರೆಗೂ ಸಿಧು ಭೇಟಿ ಮಾಡಲ್ಲ ಅಮರಿಂದರ್‌: ಪಂಜಾಬ್‌ ಸಿಎಂ ತಂಡ

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಹೊಸದಾಗಿ ನೇಮಕಗೊಂಡ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಭೇಟಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ತಂಡ ಮಂಗಳವಾರ ತಡರಾತ್ರಿ ತಿಳಿಸಿದೆ. ಅಮರಿಂದರ್‌ ಸಿಂಗ್ ಅವರನ್ನು ಭೇಟಿಯಾಗಲು ಸಮಯ ಕೋರಿ ಸಿಧು ಅವರ ವರದಿಗಳನ್ನು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ತಳ್ಳಿಹಾಕಿದರು, ಪಂಜಾಬ್ … Continued

ಕೂಡ್ಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿಗಳಿಗೆ ಗುರುವಂದನೆ

ಬೆಂಗಳೂರು: ಅದ್ವೈತ ಸಿದ್ಧಾಂತದ ಪ್ರತಿಪಾದಕ ಶಂಕರ ಭಗವತ್ಪಾದರ ಸಂದೇಶಗಳು ಸರ್ವಕಾಲಿಕ ಸತ್ಯವಾಗಿವೆ ಎಂದು ಬೆಂಗಳೂರಿನ ಚಾಮರಾಜಪೇಟೆಯ ಅವಿಚ್ಛಿನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿ ಶ್ರೀವಿದ್ಯಾವಿಶ್ವೇಶ್ವರ ಭಾರತೀ ಮಹಾಸ್ವಾಮಿಗಳ ಹೇಳಿದರು. ಇಂದು (ಮಂಗಳವಾರ) ಶ್ರೀಮಠದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಆದಿ ಜಗದ್ಗರು ಶಂಕರಾಚಾರ್ಯರ ಬರೆದ ಭಾಷ್ಯತ್ರಯಗಳು ಲೋಕಮಾನ್ಯವಾಗಿವೆ. ಅವರು ಜನಸಾಮಾನ್ಯರಿಗೋಸ್ಕರ … Continued

ಬಿಎಸ್‌ವೈ ಬದಲಾವಣೆ ಬೇಡ, ಬೆಂಗಳೂರಲ್ಲಿ 500 ಮಠಾಧೀಶರ ಸೇರಿಸಿ ಸಭೆ ಮಾಡ್ತೇವೆ: ದಿಂಗಾಲೇಶ್ವರ ಶ್ರೀ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ, ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿಯುತ್ತಾರೆಂಬ ಊಹಾಪೋಹಗಳ ಮಧ್ಯೆ ಲಿಂಗಾಯತ ಮಠಾಧಿಪತಿಗಳು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಬಿಜೆಪಿ ಹೈಕಮಾಂಡಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ 20ಕ್ಕೂ ಹೆಚ್ಚು ಮಠಾಧಿಪತಿಗಳು ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ವೀರಶೈವ-ಲಿಂಗಾಯತ ರಾಜಕೀಯ ಮುಖಂಡರು ಕೂಡ ಯಡಿಯೂರಪ್ಪ ಬದಲಾವಣೆಗೆ ಪ್ರತಿರೋಧ … Continued

ಯಡಿಯೂರಪ್ಪ ಬೆಂಬಲಿಸಿ ಮುರುಘಾ ಶರಣರ ನೇತೃತ್ವದಲ್ಲಿ ಅಖಾಡಾಕ್ಕಿಳಿದ ಹಲವು ಸ್ವಾಮೀಜಿಗಳು, ಬಿಎಸ್‌ವೈ ಬದಲಾದ್ರೆ ಬಿಜೆಪಿಗೇ ನಷ್ಟ ಎಂದು ಎಚ್ಚರಿಕೆ

ಚಿತ್ರದುರ್ಗ: ಬಿ.ಎಸ್‌.ಯಡಿಯೂರಪ್ಪ ಅವರನ್ನು ಅವಧಿ ಪೂರ್ಣಗೊಳ್ಳುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಒಂದು ವೇಳೆ ನಾಯಕತ್ವ ಬದಲಿಸಿದರೆ ಸಾಮೂಹಿಕ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಹಲವಾರು ಮಠಾಧೀಶರು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಮುರುಘಾಠದಲ್ಲಿ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಲವು ಮಠಾಧೀಶರು ಯಡಿಯೂರಪ್ಪ ಅವರಿಗೆ ತಮ್ಮ ಒಮ್ಮತದ ಬೆಂಬಲ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ … Continued

ಪೆಗಾಸಸ್ ವಿವಾದ-2019ರಲ್ಲಿ ಕುಮಾರಸ್ವಾಮಿ ಸರ್ಕಾರ ಉರುಳಿಸಲು ಬಿಜೆಪಿಗೆ ಸ್ನೂಪಿಂಗ್ ಸಹಾಯ ಮಾಡಿರಬಹುದು:ವರದಿ

ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಜೆಡಿ (ಎಸ್) -ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಮೊದಲು, ಎಚ್‌.ಡಿ. ಕುಮಾರಸ್ವಾಮಿ ಆಡಳಿತದೊಂದಿಗೆ ಸಂಪರ್ಕ ಹೊಂದಿದ ದೂರವಾಣಿ ಸಂಖ್ಯೆಗಳು ಕಣ್ಗಾವಲುಗೆ ಸಂಭವನೀಯ ಗುರಿಗಳಾಗಿವೆ ಎಂದು ದಿ ವೈರ್‌ನಲ್ಲಿ ಪ್ರಕಟವಾದ ಪೆಗಾಸಸ್ ಸ್ನೂಪಿಂಗ್ ವರದಿ ಹೇಳಿದೆ. ಈ ವರದಿಯು 2019 ರ ಜುಲೈನಲ್ಲಿ ಸರ್ಕಾರದ ಪತನ ಮತ್ತು ಬಿಜೆಪಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. … Continued

ನಾಯಕತ್ವ ಬದಲಾವಣೆ : ಹೈಕಮಾಂಡಿಗೆ ಯಡಿಯೂರಪ್ಪ ಮನಸ್ಥಿತಿಯೇ ಮುಖ್ಯ..ಇಲ್ಲದಿದ್ದರೆ ಮುಂದೆ ಕಷ್ಟಕಷ್ಟ..?

ರಘುಪತಿ ಯಾಜಿ ಹುಬ್ಬಳ್ಳಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಕೇಂದ್ರ ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದ್ದು ಆದರೆ ವರಿಷ್ಠರಿಗೆ ಈ ತೀರ್ಮಾನವನ್ನು ಅಷ್ಟು ಸುಲಭವಾಗಿ ಕಾರ್ಯಗತಗೊಳಿಸುವುದು ಕಷ್ಟಸಾಧ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಡೀ ಲಿಂಗಾಯತ ಸಮುದಾಯ ಪಕ್ಷಾತೀತವಾಗಿ ಬೆನ್ನಿಗೆ ನಿಲ್ಲುವಂತೆ ತೋರುತ್ತಿದ್ದು, ಇದು ಬಿಜೆಪಿಗೆ ಬೆಂಬಲಿಸುತ್ತ ಬಂದಿರುವ ಲಿಂಗಾಯತ ಮತಗಳು ಕೈತಪ್ಪಿ ಹೋಗಲಿದೆಯೇ ಎಂಬ ಲೆಕ್ಕಾಚಾರವೂ … Continued

ಡಾ. ಇಂದು ಪಂಡಿತ್ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕಾರ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಬನಶಂಕರಿ ಕಲಾ ಹಾಗೂ ವಾಣಿಜ್ಯ ಮತ್ತು ಎಸ್.ಕೆ ಗುಬ್ಬಿ ವಿಜ್ಞಾನ ಪದವಿ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಡಾ. ಇಂದು ಪಂಡಿತ್ ಅಧಿಕಾರ ಸ್ವೀಕರಿಸಿದರು. ಇವರು ಕಾಲೇಜಿನ ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸುಮಾರು ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಮೊದಲು ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ … Continued

ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು: 2020-21ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಎಸ್ ಎಸ್ ಎಲ್ ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳು ಫ‌ಲಿತಾಂಶ ಪಡೆದಿದ್ದಾರೆ. ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಪಿಯುಸಿ ಫಲಿತಾಂಶ ಪ್ರಕಟ ಮಾಡಿದರು. ಎಸ್‌ಎಸ್ ಎಲ್ ಸಿ, ಪ್ರಥಮ ಪಿಯುಸಿ ಮತ್ತು ಕೃಪಾಂಕ ಅಂಕ ಸೇರಿಸಿ … Continued