ಶಿವಸೇನೆ ಸಂಸದೆ ಮನೆ, ಕಚೇರಿ ಸೇರಿ 5 ಕಡೆ ಇಡಿ ದಾಳಿ

ಮುಂಬೈ: ಮಹಾರಾಷ್ಟ್ರದ ಯಾವತ್ಮಲ್​-ವಾಶಿಂ ಸಂಸದೆ ಭಾವನಾ ಗವಲಿ (Bhavana Gawali) ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಇಂದು (ಸೋಮವಾರ) ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಸಾಲ ಪಡೆದು ವಂಚನೆ ಮಾಡಿದ ಆರೋಪದಡಿ ಭಾವನಾ ಗವಾಲಿಯವರ ಟ್ರಸ್ಟ್​ ವಿರುದ್ಧ ತನಿಖೆ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಇ.ಡಿ.ಇಂದು ಹಲವು ದಾಖಲೆಗಳನ್ನು ಹಾಗೂ ಸುಮಾರು 17 ಕೋಟಿ ರೂಪಾಯಿಗಳನ್ನು … Continued

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಇಡಿ ವಿಚಾರಣೆ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣವಾಗಿ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಇಡಿ ವಿಚಾರಣೆಗೆ ಒಳಗಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಸತತ ಐದು ಗಂಟೆಗಳ ಕಾಲ ಈ ವಿಚಾರಣೆ ನಡೆದಿದೆ ಎನ್ನಲಾಗಿದೆ. ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ … Continued

ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆಗೆ ಇಳಿದ ಕೊರೊನಾ ಹೊಸ ಸೋಂಕು..!

ಬೆಂಗಳೂರು: ಕೊರೊನಾ ಸೋಂಕು ಇಳಿಕೆಯಾಗಿದ್ದು, ಇಂದು (ಸೋಮವೃ೦ ರಾಜ್ಯದಲ್ಲಿ ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ 973 ಜನಕ್ಕೆ ಸೋಂಕು ತಗುಲಿದ್ದು, 15 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 1,324 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 18,392 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕು ಹರಡುವಿಕೆ ಶೇಕಡಾವಾರು ಪ್ರಮಾಣ ಶೇ.0.64 ಮತ್ತು ಮರಣ ಪ್ರಮಾಣ ಶೇ.1.54ಕ್ಕೆ … Continued

ಪುರುಷರ ಟಾಯ್ಲೆಟ್​ನಲ್ಲಿ ಅಡಗಿ ಕುಳಿತಿದ್ದ ಡ್ರಗ್ಸ್​ ಆರೋಪಿ ಸೋನಿಯಾ; ಪ್ರಕರಣದಲ್ಲಿ ಇನ್ನಷ್ಟು ಸೆಲೆಬ್ರಿಟಿಗಳು..?

ಬೆಂಗಳೂರು; ಮಾದಕ ವಸ್ತು ಜಾಲದಲ್ಲಿ ತೊಡಗಿಕೊಂಡಿರುವವರನ್ನು ಮಟ್ಟಹಾಕಲು ಮುಂದಾಗಿರುವ ಬೆಂಗಳೂರು ಪೊಲೀಸರು ಈಗಾಗಲೇ ಸಿಕ್ಕಿಬಿದ್ದಿರುವ ಡ್ರಗ್​ ಪೆಡ್ಲರ್​ಗಳು ನೀಡಿದ ಮಾಹಿತಿ ಆಧರಿಸಿ ಸೋಮವಾರ (ಆ.30) ಬೆಳಗ್ಗೆಯೇ ಕೆಲವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮಾಡೆಲ್​ ಸೋನಿಯಾ ಅಗರ್ವಾಲ್, ಉದ್ಯಮಿ ಭರತ್​ ಹಾಗೂ ಡಿಜೆ ವಚನ್​ ಚಿನ್ನಪ್ಪ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಾದಕವಸ್ತುಗಳು ಪತ್ತೆ … Continued

ಮದುವೆ ಸಮಾರಂಭ: ಕಲ್ಯಾಣ ಮಂಟಪಗಳಲ್ಲಿ 400 ಜನರಿಗೆ ಅವಕಾಶ

ಬೆಂಗಳೂರು: ಮದುವೆ, ಮತ್ತಿತರೆ ಸಮಾರಂಭಗಳಲ್ಲಿ 400 ಜನಕ್ಕೆ ಅವಕಾಶ ನೀಡಲಾಗಿದೆ ಎಂದು ಆರ್. ಅಶೋಕ್ ಮಾಹಿತಿ ನೀಡಿದ್ಧಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹಕಚೇರಿ ಕೃಷ್ಣಾದಲ್ಲಿ ಇಂದು(ಸೋಮವಾರ) ತಜ್ಞರ ಜೊತೆ ಮಹತ್ವದ ಸಭೆ ನಡೆಸಿದ ನಂತರ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಮದುವೆ ಸಮಾರಂಭಕ್ಕೆ ಶೇ.50 ರಷ್ಟು ಅನುಮತಿ ನೀಡಲಾಗಿದೆ. ಕಲ್ಯಾಣ ಮಂಟಪಗಳಲ್ಲಿ ಗರಿಷ್ಠ 400 ಜನರಿಗೆ … Continued

ಮಹತ್ವದ ನಿರ್ಧಾರ.. ಕರ್ನಾಟಕದಲ್ಲಿ 6 ರಿಂದ 8ನೇ ತರಗತಿ ಸೆಪ್ಟೆಂಬರ್‌ 6ರಿಂದ ಆರಂಭ..!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಶೇ.2ಕ್ಕಿಂತ ಕಡಿಮೆ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣ ಕ್ರಮ ಅನುಸರಿ 6 ರಿಂದ 8ನೇ ತರಗತಿಗಳನ್ನು ಸೆಪ್ಟೆಂಬರ್ 6ರಿಂದ ಆರಂಭಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಈ ಕುರಿತುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಇಂದು ನಡೆದ ತಾಂತ್ರಿಕ ತಜ್ಞರ ಸಭೆಯ ಬಳಿಕ ಸಭೆಯ ನಿರ್ಧಾರಗಳ ಬಗ್ಗೆ ಮಾಧ್ಯಮದವರಿಗೆ … Continued

ಹೆಂಡ್ತಿ ಕಾಟಕ್ಕೆ ಬೇಸತ್ತು ಜೈಲೇ ವಾಸಿ ಎಂದು ಬಂಧನಕ್ಕೊಳಗಾಗಲು ಪೊಲೀಸ್ ಚೌಕಿಗೆ ಬೆಂಕಿಯಿಟ್ಟ ಮಹಾಶಯ..!

ರಾಜಕೋಟ್(ಗುಜರಾತ್: ವಿಚಿತರ ಘಟನೆಯೊಂದರಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತು ಜೈಲಿನಲ್ಲಿರುವುದೇ ಒಳಿತೆಂದು ಆಲೋಚಿಸಿದ ಯುವಕನೊಬ್ಬ, ಪೊಲೀಸರು ತನ್ನನ್ನು ಬಂಧಿಸಲಿ ಎಂದು ಪೊಲೀಸ್ ಚೌಕಿಗೆಬೆಂಕಿ ಹಚ್ಚಿರುವ ಘಟನೆ ಗುಜರಾತ್ ರಾಜ್‍ಕೋಟ್ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌ ಚೌಕಿಗೆ ಬೆಂಕಿ ಹಚ್ಚಿದ ಯುವಕನನ್ನುದೇವ್ಜಿ ಚವ್ಡಾ(23) ಎಂದು ಗುರುತಿಸಲಾಗಿದೆ. ನಿನ್ನೆ (ಭಾನುವಾರ) … Continued

ಮಧ್ಯಪ್ರದೇಶದ ರೈತ ಎರಡು ವರ್ಷಗಳಲ್ಲಿ ಆರನೇ ಬಾರಿ ಅದೃಷ್ಟಶಾಲಿ.. ಕಲ್ಲುಗಣಿಯಲ್ಲಿ ಸಿಕ್ಕ ವಜ್ರದ ಮೌಲ್ಯ 30 ಲಕ್ಷ ರೂ…!

ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತ ಸರ್ಕಾರದಿಂದ ಗುತ್ತಿಗೆಗೆ ಪಡೆದ ಭೂಮಿಯಲ್ಲಿ 6.47 ಕ್ಯಾರೆಟ್ ತೂಕದ ಉತ್ತಮ ಗುಣಮಟ್ಟದ ವಜ್ರವನ್ನು ಸರ್ಕಾರದಿಂದ ಗುತ್ತಿಗೆಗೆ ಪಡೆದ ಭೂಮಿಯಲ್ಲಿ ಗಣಿಗಾರಿಕೆ ಮಾಡಿದ್ದಾನೆ…! ರೈತ ಪ್ರಕಾಶ್ ಮಜುಂದಾರ್ ಅವರು ಶುಕ್ರವಾರ ಜಿಲ್ಲೆಯ ಜರುವಾಪುರ ಗ್ರಾಮದ ಗಣಿಯಿಂದ ಈ ವಜ್ರವನ್ನು ಪತ್ತೆ ಮಾಡಿದ್ದಾರೆ ಎಂದು ಉಸ್ತುವಾರಿ ವಜ್ರದ ಅಧಿಕಾರಿ ನೂತನ್ ಜೈನ್ ತಿಳಿಸಿದ್ದಾರೆ. … Continued

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ : ಜಾವೆಲಿನ್’ನಲ್ಲಿ ಚಿನ್ನ ಗೆದ್ದ ಸುಮಿತ್ ಆಂಟಿಲ್

ಟೋಕಿಯೊ: ಸುಮಿತ್ ಆಂಟಿಲ್ ಅವರು ಸೋಮವಾರ ಪ್ಯಾರಾಲಿಂಪಿಕ್ಸ್‌ನಲ್ಲಿ ಮೂರು ಸಲ ವಿಶ್ವದಾಖಲೆಯನ್ನು ಮುರಿದು ಚಿನ್ನದ ಪದಕ ಗೆದ್ದಿದ್ದಾರೆ. ಟೋಕಿಯೊದಲ್ಲಿ ಪುರುಷರ ಜಾವೆಲಿನ್ ಎಫ್ 64 ಫೈನಲ್‌ನಲ್ಲಿ ಸುಮಿತ್ ಆಂಟಿಲ್ ( Sumit Antil ) 68.55 ಮೀ. ಹೊಸ ವಿಶ್ವ ದಾಖಲೆಯ ಎಸೆತದೊಂದಿಗೆ ಚಿನ್ನ ಗೆದ್ದರು. ಟೋಕಿಯೊದಲ್ಲಿ ನಡೆದ ಫೈನಲ್ ನಲ್ಲಿ ಸುಮಿತ್ ಆಂಟಿಲ್ ಒಮ್ಮೆಯಲ್ಲ, … Continued

ಉಮ್ಮಚಗಿ ವಿದ್ವಾನ್ ಗಜಾನನ ಭಟ್ಟ ಕುಂದರಗಿಗೆ ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ ಕಾಳಿದಾಸ ಸಾಧನಾ ಪುರಸ್ಕಾರ ಪ್ರದಾನ

ನಾಗ್ಪುರ: ದೇಶದ ಸಂಸ್ಕೃತ ವಿದ್ವಾಂಸರಿಗೆ ಕೊಡಮಾಡುವ ಮಹಾಕವಿ ಕಾಳಿದಾಸ್ ಸಂಸ್ಕೃತ ಸಾಧನಾ ಪ್ರಶಸ್ತಿಯನ್ನು ಶನಿವಾರ ರಾಮ್‌ಟೆಕ್‌ನ ಕವಿಕುಲಗುರು ಕಾಳಿದಾಸ್ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಮಹಾರಾಷ್ಟ್ರ ಸರ್ಕಾರ ಪ್ರತಿಷ್ಠಿತ ಕಾಳಿದಾಸ ಸಾಧನ ಪುರಸ್ಕಾರಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ವಿದ್ವಾನ್ ಗಜಾನನ ಭಟ್ ಕುಂದರಗಿ ಅವರು ಭಾಜನರಾಗಿದ್ದಾರೆ. ಮಹಾರಾಷ್ಟ್ರ … Continued