ಗೂಗಲ್‌ ನಲ್ಲಿ ಕೋವಿಡ್‌-19 ಲಸಿಕೆ ಲಭ್ಯತೆ, ಸ್ಲಾಟ್‌ ಬಗ್ಗೆ ಮಾಹಿತಿಗೆ ನನ್ನ ಹತ್ತಿರ ಕೋವಿಡ್ ಲಸಿಕೆ (covid vaccine near me) ಹುಡುಕಿ

ನವದೆಹಲಿ: ಭಾರತದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ವೈರಸ್ ಲಸಿಕೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇರಿಸಿದೆ. ದೇಶದ 13,000 ಕೇಂದ್ರಗಳಲ್ಲಿ ಲಸಿಕೆಯ ಕುರಿತು ಮಾಹಿತಿ ಹಾಗೂ ಲಭ್ಯತೆಯ ಬಗ್ಗೆ ಗೂಗಲ್ ಮೂಲಕ ತಿಳಿದುಕೊಳ್ಳಬಹುದಾಗಿದ್ದು, ಈ ಯೋಜನೆಯು ಇದೇ ವಾರದಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ಕೊವಿನ್ ಅಪ್ಲಿಕೇಷನ್ ಒದಗಿಸುವ ವಾಸ್ತವಿಕ ದತ್ತಾಂಶವನ್ನು ಆಧರಿಸಿ … Continued

ನಾರದ ಕುಟುಕು ಪ್ರಕರಣ: ಇಡಿಯಿಂದ ಟಿಎಂಸಿ ಸಚಿವರಾದ ಫಿರ್ಹಾದ್ ಹಕೀಂ, ಸುಬ್ರತಾ ಮುಖರ್ಜಿ ಹೆಸರು ಚಾರ್ಜ್‌ಶೀಟ್‌ನಲ್ಲಿ ದಾಖಲು

ನವದೆಹಲಿ: ನಾರದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಇಬ್ಬರು ಹಾಲಿ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಮತ್ತು ಮಾಜಿ ಸಚಿವ ಮದನ್ ಮಿತ್ರಾ, ಮಾಜಿ ಕೋಲ್ಕತಾ ಮೇಯರ್ ಸೋವನ್ ಚಟರ್ಜಿ ಮತ್ತು ಐಪಿಎಸ್ ಅಧಿಕಾರಿ ಎಸ್‌ಎಮ್‌ಹೆಚ್ ಮಿರ್ಜಾ ಅವರ ಹೆಸರನ್ನು ದಾಖಲಿಸಿದೆ. 2017 ರ ಹೈಕೋರ್ಟ್ ಆದೇಶದ ಮೇರೆಗೆ … Continued

ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು ಅವಕಾಶ

ಹುಬ್ಬಳ್ಳಿ: 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟ, ಉತ್ತರ ಕನ್ನಡ (ಶಿರಸಿ), ಹಾವೇರಿ, ಚಿಕ್ಕೋಡಿ ಮತ್ತು ಬೆಳಗಾವಿ, ವಿಭಾಗಗಳ ಘಟಕಗಳ ವ್ಯಾಪ್ತಿಯ ಬಸ್ ನಿಲ್ದಾಣಗಳ ಪಾಸ್ ಕೌಂಟರ್‌ಗಳಲ್ಲಿ ಸೆಪ್ಟಂಬರ್‌ 1ರಿಂದ ಬಸ್ ಪಾಸ್ … Continued

ಬಿಜೆಪಿಯಿಂದ 7 ಪದಾಧಿಕಾರಿಗಳ 6 ವರ್ಷ ಉಚ್ಚಾಟನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡುವ ಮೂಲಕ ಪಕ್ಷದ ಆದೇಶ ಉಲ್ಲಂಘಿಸಿರುವ ಏಳು ಪದಾಧಿಕಾರಿಗಳನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಈ ಏಳು ಜನರನ್ನು 6 ವರ್ಷ ಕಾಲ ಪಕ್ಷದಿಂದ ಉಚ್ಚಾಟಿಸಿ ಎಂದು  ಉಚ್ಚಾಟಿಸಿ  ಆದೇಶ ಹೊರಡಿಸಲಾಗಿದೆ. ಪಕ್ಷದ ಆದೇಶ ಉಲ್ಲಂಘಿಸಿ, ಪಕ್ಷ ವಿರೋಧಿ ಚಟುವಟಿಕೆಗಣನ್ನು ನಡೆಸುತ್ತಿದ್ದು, ಕೆಲವರು ಪಕ್ಷದ ಅಭ್ಯರ್ಥಿಗಳ … Continued

ರಕ್ತದೊತ್ತಡ ಸಂಬಂಧಿತ ಸಮಸ್ಯೆಗಳಿಂದ ಸೈರಾ ಬಾನು ಐಸಿಯುಗೆ ದಾಖಲು

ಮುಂಬೈ: ಮೂರು ದಿನಗಳ ಹಿಂದೆ ರಕ್ತದೊತ್ತಡ ಸಂಬಂಧಿತ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೈರಾ ಬಾನು ಅವರನ್ನು ಮುಂಬೈನ ಹಿಂದುಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿದೆ. ಸಾಯಿರಾ ಬಾನು ಪ್ರಸ್ತುತ ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ವರ್ಗಾಯಿಸಲಾಗಿದೆ. ಕುಟುಂಬದ ಸ್ನೇಹಿತರ ಪ್ರಕಾರ, ಬಾನು ತನ್ನ … Continued

ಹು -ಧಾ ಮಹಾನಗರ ಪಾಲಿಕೆ ಚುನಾವಣೆ: ಸೆ.3ರ ಮತದಾನ ದಿನ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ಸಾರ್ವತ್ರಿಕ ರಜೆ; ಖಾಸಗಿ ವಲಯ ನೌಕರರಿಗೆ ವೇತನ ಸಹಿತ ರಜೆ

ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯು ಸೆಪ್ಟೆಂಬರ್ 3 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆ ವರೆಗೆ ಮತದಾನ ನಡೆಯಲಿದ್ದು, ಮತದಾನ ದಿನದಂದು ಎಲ್ಲ ವರ್ಗದ ನೌಕರ ಮತದಾರರಿಗೆ ವೇತನ ಸಹಿತ ರಜೆ ಮಂಜೂರು ಮಾಡಿ, ರಾಜ್ಯ ಚುನಾವಣಾ ಆಯೋಗವು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಹುಬ್ಬಳ್ಳಿ-ಧಾರವಾಡ … Continued

ಒಪ್ಪಂದದ ನಿಯಮಗಳ ಉಲ್ಲಂಘನೆ: 30 ಲಕ್ಷ ಭಾರತೀಯ ಬಳಕೆದಾರರ ಖಾತೆ ನಿಷೇಧಿಸಿದ ವಾಟ್ಸಾಪ್‌..!

ನವದೆಹಲಿ; ಜೂನ್ 16 ರಿಂದ ಜುಲೈ 31 ರವರೆಗೆ 46 ದಿನಗಳ ವರೆಗೆ ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಆಪ್ ವಾಟ್ಸಾಪ್ ನಿಂದ 3೦ ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ. ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ತನ್ನ ಎರಡನೇ ಅನುಸರಣಾ ವರದಿಯಲ್ಲಿ, ಖಾತೆ ಬೆಂಬಲಕ್ಕಾಗಿ 137 ವಿನಂತಿಗಳನ್ನು ಸ್ವೀಕರಿಸಲಾಗಿದೆ ಮತ್ತು ಅದರಲ್ಲಿ ಒಂದನ್ನು … Continued

ಮದುವೆಮಂಟಪದಲ್ಲಿ ಮದುಮಗಳ ಮುಖದ ಪರದೆ ಸರಿಸಿ ಬೆಚ್ಚಿಬಿದ್ದ ವರ, ನೇರ ಪೊಲೀಸ್‌ ಠಾಣೆಗೇ ಓಡಿ ಹೋದ..!

ಇಟಾವಾ: ಮದುವೆ ಮನೆಯಲ್ಲಿ ಮದುಮಗಳು ಮುಖಕ್ಕೆ ಧರಿಸಿದ್ದ ಮುಸುಕನ್ನು ತೆಗೆದ ನಂತರ ವರ ಬೆಚ್ಚಿ ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದ ಬಗ್ಗೆ ವರದಿಯಾಗಿದೆ.ಮದುಮಗಳನ್ನು ನೋಡುತ್ತಿದ್ದಂತೆಯೇ ಓಡಿ ಹೋಗಿ ಪೊಲೀಸ್‌ ಠಾಣೆಗೆ ದೂರು ನೀಡಲು ಬಯಸಿದ ವರನಿಗೆ ಈ ಮದುಮಗಳು ಹಾಗೂ ಆಕೆ ಕಡೆಯವರು ಆತ ತೊಟ್ಟಿದ್ದ ಧೋತಿಯನ್ನೇ ಬಿಚ್ಚಿದ್ದಾರೆ ಎಂದು ಡೇಲಿ ಇಂಡಿಯಾ.ನೆಟ್‌ ವರದಿ … Continued

ಮಹದಾಯಿ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ವೀರೇಶ ಸೊಬರದಮಠ ನೇತೃತ್ವದ ನಿಯೋಗ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದ ನಿಯೋಗವು ಮಹದಾಯಿ ಯೋಜನೆ ಕಾಮಗಾರಿಗೆ ಚಾಲನೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು. ಉತ್ತರ ಕರ್ನಾಟಕದ ಬಾಗದ ನಾಲ್ಕು ಜಿಲ್ಲೆಗಳ ಹನ್ನೊಂದು ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಯೋಜನೆಗೆ “ಕೇಂದ್ರ ಸರ್ಕಾರ” ಗೆಜೇಟ್” ನೊಟಿಫಿಕೇಷನ್ ಹೊರಡಿಸಿದರೂ ಕಾಮಗಾರಿಗೆ … Continued

ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕ ಪ್ರಜೆಗಳನ್ನು ಸ್ಥಳಾಂತರಿಸಲು ತಾಲಿಬಾನ್ ರಹಸ್ಯವಾಗಿ ಸಹಾಯ ಮಾಡಿದ್ದು ಹೇಗೆ..?

ಸಿಎನ್‌ಎನ್‌ ವರದಿಯ ಪ್ರಕಾರ, ಅಮೆರಿಕ ತನ್ನ ನಾಗರಿಕರು ಮತ್ತು ಸೈನಿಕರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಲು ತಾಲಿಬಾನ್‌ನೊಂದಿಗೆ ರಹಸ್ಯ ಒಪ್ಪಂದ ರೂಪಿಸಿದೆ ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲಿ “ರಹಸ್ಯ ಗೇಟ್” ಸ್ಥಾಪಿಸುವುದು ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಯ ಮೂಲಕ ಅಮೆರಿಕನ್ನರಿಗೆ ಮಾರ್ಗದರ್ಶನ ನೀಡಲು “ಕಾಲ್ ಸೆಂಟರ್” ಗಳನ್ನು ಸ್ಥಾಪಿಸುವುದು ಇದರಲ್ಲಿ ಒಳಗೊಂಡಿತ್ತು. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧದ ನಂತರ, ಅಮೆರಿಕ … Continued