ಅದ್ಭುತ ಕ್ಯಾಚ್‌.. ಒಂದು ಕಾಲಿಲ್ಲದ ವಿಕಲಚೇತನ ಆಟಗಾರನ ಡೈವಿಂಗ್ ಕ್ಯಾಚಿಗೆ ಕ್ರಿಕೆಟಿಗರೇ ಮನಸೋತರು..ವೀಕ್ಷಿಸಿ

ವಿಶೇಷ ಸಾಮರ್ಥ್ಯ ಹೊಂದಿರುವ ಬೌಲರ್ ಒಂದು ಕೈ ಕ್ಯಾಚ್ ತೆಗೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕ್ಲಿಪ್‌ನಲ್ಲಿ, ಒಂದು ಕಾಲು ಇಲ್ಲದ ಬೌಲರ್, ಊರುಗೋಲು ಸಹಾಯದಿಂದ ಬೌಲ್‌ ಮಾಡಿದ್ದಾನೆ. ಹಾಗೂ ತನ್ನದೇ ಬೌಲಿಂಗ್‌ನಲ್ಲಿ ಊರುಗೋಲು ಬಿಟ್ಟು ಡೈವ್‌ ಹೊಡೆದು ಕ್ಯಾಚ್‌ ಹಿಡಿದ್ದಾರೆ. ಲಾಂಗ್ ಆಫ್ ಪ್ರದೇಶದಲ್ಲಿ ರನ್ ಗಳಿಸಲು ಬ್ಯಾಟ್ಸ್‌ಮನ್ ಉಪ್ಪಿ ಡ್ರೈವ್ ಮಾಡಿದರು. … Continued

ಒಂದೇ ದಿನದಲ್ಲಿ ಅತಿ ಹೆಚ್ಚು ಲಸಿಕೆ ನೀಡಿಕೆ: ದೇಶದಲ್ಲೇ ಕರ್ನಾಟಕದ ಹೊಸ ದಾಖಲೆ

ಬೆಂಗಳೂರು: ಕರ್ನಾಟಕದಲ್ಲಿ ಒಂದೇ ದಿನದಲ್ಲಿ ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿನ್ನೆ (ಬುಧವಾರ) ಒಂದೇ ದಿನ ರಾಜ್ಯದಲ್ಲಿ 12,04,402 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದು ದಾಖಲೆಯ ಪ್ರಮಾಣದ ಲಸಿಕೆಯಾಗಿದ್ದು, ಕರ್ನಾಟಕವೇ ಅತಿ … Continued

ಮೂತ್ರ ನೆಕ್ಕಿಸಿದ ಪ್ರಕರಣ; ಪಿಎಸ್‌ಐಗೆ 14 ದಿನ ನ್ಯಾಯಾಂಗ ಬಂಧನ

ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದಲ್ಲಿ ಬಂಧಿಸಲಾಗಿರುವ ಪಿಎಸ್‌ಐ ಅರ್ಜುನ ಹೊರಕೇರಿ ಅವರನ್ನು ಸಿಐಡಿ ಪೊಲೀಸರು ಗುರುವಾರ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಪರಿಶಿಷ್ಟ ಸಮುದಾಯದ ಯುವಕ ಪುನೀತ್ ಮೇಲೆ ದೌರ್ಜನ್ಯ ನಡೆಸಿದ, ಮೂತ್ರ ನೆಕ್ಕಿಸಿದ ಆರೋಪ ಗೋಣಿಬೀಡು … Continued

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ತಲೆ ಸ್ನಾನ ಮಾಡುತ್ತಾರೆ? ಪಿಜ್ಜಾ ಹೇಗೆ ತಿನ್ನುತ್ತಾರೆ? ಗಗನಾಯಾತ್ರಿ ಹಂಚಿಕೊಂಡ ವಿಡಿಯೋ ನೋಡಿ

ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾತ್ರಿಗಳ ಜೀವನ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಬಾಹ್ಯಾಕಾಶ ಕೇಂದ್ರದಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಆಗುವುದರಿಂದ ಅಲ್ಲಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಕೆಲವೇ ದಿನಗಳ ಹಿಂದೆ ಗಗನಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಪಿಜ್ಜಾ ತಯಾರಿಸಿ ತಿಂದ ವಿಡಿಯೋ, ಬಾಹ್ಯಾಕಾಶದಲ್ಲಿ ಜನ್ಮದಿನ ಆಚರಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದ ನಾಸಾ … Continued

ಸಾಮಾಜಿಕ ಮಾಧ್ಯಮ ವೇದಿಕೆಗಳು ನಕಲಿ ಸುದ್ದಿಯಿಂದ ತುಂಬಿವೆ; ಅವರು ನ್ಯಾಯಾಧೀಶರಿಗೂ ಪ್ರತಿಕ್ರಿಯಿಸುವುದಿಲ್ಲ: ಸುಪ್ರೀಂಕೋರ್ಟ್

ನವದೆಹಲಿ :ಸುಪ್ರೀಂ ಕೋರ್ಟ್ ಗುರುವಾರ ವೆಬ್ ಪೋರ್ಟಲ್‌ಗಳು ಮತ್ತು ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಹರಡುವ ನಕಲಿ ಸುದ್ದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಆದರೆ ಅಂತಹ ಸಾಮಾಜಿಕ ಮಾಧ್ಯಮ ದೈತ್ಯರು ನ್ಯಾಯಾಧೀಶರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಕೇವಲ ಪ್ರಬಲರ … Continued

ರಾಜಸ್ಥಾನದಲ್ಲಿ 2 ತಲೆ, ಎರಡು ಬಾಯಿ ಹೊಂದಿರುವ ಅಪರೂಪದ ಎಮ್ಮೆ ಕರುವಿನ ಜನನ, ನೋಡಲು ಮುಗಿಬಿದ್ದ ಗ್ರಾಮಸ್ಥರು..!

ಧೋಲ್ಪುರ್: ಎಮ್ಮೆಯೊಂದು ಅಪರೂಪದ ಎರಡು ತಲೆಯ ಕರುವಿಗೆ ಜನ್ಮ ನೀಡಿದ ನಂತರ ರಾಜಸ್ಥಾನದ ಹಳ್ಳಿಯೊಂದು ಈಗ ಚರ್ಚೆಯ ವಿಷಯವಾಗಿದೆ. ಎರಡು ತಲೆಯ ಕರುವಿನ ಜಾನುವಾರು ಸಾಕುವವರ ಮನೆಯಲ್ಲಿ ಧೋಲ್ಪುರ್ ಜಿಲ್ಲೆಯ ಪುರ ಸಿಕ್ರೌಡ ಗ್ರಾಮದಲ್ಲಿ ಜನಿಸಿದೆ. ಜೀ ನ್ಯೂಸ್ ವರದಿ ಮಾಡಿದಂತೆ ಎಮ್ಮೆಗೆ ಎರಡು ಬಾಯಿ, ಎರಡು ಕುತ್ತಿಗೆ, ನಾಲ್ಕು ಕಣ್ಣು ಮತ್ತು ನಾಲ್ಕು ಕಿವಿಗಳಿವೆ. … Continued

ಜಾಗತಿಕವಾಗಿ ಇನ್‌ಸ್ಟಾಗ್ರಾಮ್ ಡೌನ್, ಫೋಟೋ ಫೀಡ್-ಡಿಎಂಗಳು ಕೆಲಸ ಮಾಡುತ್ತಿಲ್ಲವೆಂದು ದೂರುಗಳು

ಇನ್‌ಸ್ಟಾಗ್ರಾಮ್ ಅಸ್ಪಷ್ಟ ಸಮಸ್ಯೆಗಳಿಂದಾಗಿ ವಿಶ್ವದ ಹಲವು ಭಾಗಗಳಲ್ಲಿ ಸ್ಥಗಿತಗೊಂಡಿದೆ. ಡೌನ್‌ ಡೆಟೆಕ್ಟರ್ ಪ್ರಕಾರ, ಇಂಟರ್ನೆಟ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ಪ್ಲಾಟ್‌ಫಾರ್ಮ್, ಇನ್‌ಸ್ಟಾಗ್ರಾಮ್ ಸೇವೆಗಳು ಒಂದು ಗಂಟೆಯ ಹಿಂದೆ ಸ್ಥಗಿತಗೊಂಡವು, ಆದರೆ ಸ್ಥಗಿತದ ಬಗ್ಗೆ ವರದಿಗಳು ಮಧ್ಯಾಹ್ನ 12.15 ರ ಸುಮಾರಿಗೆ ಉತ್ತುಂಗಕ್ಕೇರಿತು. ದೆಹಲಿ, ಮುಂಬೈ, ಬೆಂಗಳೂರು, ಮತ್ತು ಚೆನ್ನೈಯಂತಹ ನಗರಗಳಲ್ಲಿ ಇನ್‌ಸ್ಟಾಗ್ರಾಮ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ … Continued

ಕುಡಿದ ಅಮಲಿನಲ್ಲಿ ತಾವು ಮಾಡಿದ ಕೊಲೆ ಬಗ್ಗೆ ಮಾತಾಡಿ ಸಿಕ್ಕಿಬಿದ್ರು..!

ಮೈಸೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ತಮ್ಮ ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ನಗರದ ಬೋಗಾದಿ ರಸ್ತೆಯಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ನಗರದ ಟಿ.ಕೆ.ಬಡಾವಣೆಯ ನಿವಾಸಿ ಉಮೇಶ್(24) ಎಂಬುವವರೇ ಹತ್ಯೆಗೀಡಾದವರು. ಟಿ.ಕೆ. ಬಡಾವಣೆಯ ನಿವಾಸಿಗಳಾದ ಪೃಥ್ವಿರಾಜ್(23), ವಸಂತ(24), ಮಂಜೇಶ್(23) ಹಾಗೂ ಮಾನಸಗಂಗೋತ್ರಿ ನಿವಾಸಿ ಸುಜಿತ್(24) ಎಂಬುವವರೇ ಮಾರಕಾಸ್ತ್ರಗಳಿಂದ ಕೊಚ್ಚಿ ಉಮೆಶ … Continued

ಪರಿಶಿಷ್ಟ ಜಾತಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ಐ ಅರ್ಜುನ್ ಹೊರಕೇರಿ ಬಂಧನ

ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಅರ್ಜುನ್ ಹೊರಕೇರಿ ಅವರನ್ನು ಸಿಐಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆಎಂದು ವರದಿಯಾಗಿದೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಅಮಾನತುಗೊಂಡ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಅವರನ್ನು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಪೊಲೀಸ್ … Continued

ಹೈಕೋರ್ಟ್‌ಗಳು ನೀಡುವ ಆದೇಶ ಲಿಖಿತವಾಗಿರಬೇಕು, ಮೌಖಿಕವಾಗಿರಬಾರದು: ಸುಪ್ರೀಂಕೋರ್ಟ್

ನವದೆಹಲಿ: ನ್ಯಾಯಾಧೀಶರು ತಮ್ಮ ತೀರ್ಪು ಮತ್ತು ಆದೇಶಗಳ ಮೂಲಕ ಮಾತನಾಡುತ್ತಾರೆ. ಲಿಖಿತ ಪಠ್ಯಕ್ಕೆ ವಿಮರ್ಶೆಗೊಳಪಡುವ ಸಾಮರ್ಥ್ಯವಿದೆ. ಮೌಖಿಕ ಹೇಳಿಕೆ ಚಾಲ್ತಿಯಲ್ಲಿರುವೆಡೆ ನ್ಯಾಯಾಂಗ ಹೊಣೆಗಾರಿಕೆಯ ಅಂಶ ಕಳೆದುಹೋಗುತ್ತದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ವಂಚನೆ ಮತ್ತು ಫೋರ್ಜರಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಬಂಧನಕ್ಕೆ ತಡೆ ನೀಡುವ ಸಂಬಂಧ ಗುಜರಾತ್‌ ಹೈಕೋರ್ಟ್‌ ಮೌಖಿಕ ಆದೇಶ ಹೊರಡಿಸಲು ಅನುಸರಿಸಿದ ಪ್ರಕ್ರಿಯೆಯನ್ನು ನ್ಯಾಯಮೂರ್ತಿಗಳಾದ … Continued