ನೈಜೀರಿಯಾದ ಮೂಲದ ಡ್ರಗ್ ಪೆಡ್ಲರ್ ಬಂಧನ : 1 ಕೋಟಿ ಮೌಲ್ಯದ ಮಾದಕ ವಸ್ತುಗಳ ವಶ

ಬೆಂಗಳೂರು: ಕೋಲ್ಗೇಟ್ ಟೂತ್‍ಪೇಸ್ಟ್ ಬಾಕ್ಸ್‌ಗಳಲ್ಲಿ ಡ್ರಗ್ಸ್‌ ತುಂಬಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಮತ್ತು ಎಕ್ಸ್‍ಟೆಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ, ಸೆಂಟ್ ಥಾಮಸ್ ಟೌನ್‍ನ 3ನೇ ಕ್ರಾಸಿನ ಕಾನ್ವೆಂಟ್ ಅಡ್ಡ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದ ಡ್ರಗ್ಸ್ ಪೆಡ್ಲರ್ … Continued

ತಾಲಿಬಾನ್ ಒಳಗೆ ಭಾರೀ ಸಂಘರ್ಷ-ಗುಂಪು ಘರ್ಷಣೆಯಲ್ಲಿ ಹಕ್ಕಾನಿ ಬಣದಿಂದ ಗುಂಡಿನ ದಾಳಿ: ವರದಿಗಳು

ಕಾಬೂಲ್ : ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ, ಆದರೆ ಸಂಘಟನೆಯೊಳಗಿನ ವಿಭಜನೆಯನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಹಕ್ಕಾನಿ ನೆಟ್ ವರ್ಕ್ ನಾಯಕರಾದ ಅನಸ್ ಹಕ್ಕಾನಿ ಮತ್ತು ಖಲೀಲ್ ಹಕ್ಕಾನಿ ತಾಲಿಬಾನ್ ನಾಯಕರಾದ ಮುಲ್ಲಾ ಬರದಾರ್ ಮತ್ತು ಮುಲ್ಲಾ ಯಾಕೂಬ್ ಜೊತೆ ಘರ್ಷಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಹೋರಾಟದ ಸಮಯದಲ್ಲಿ ಹಕ್ಕಾನಿ ಬಣದಿಂದ ಗುಂಡು ಹಾರಿಸಿ ಬರದಾರ್ … Continued

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ ಮೂವರು ಭದ್ರತಾ ಪಡೆಯ ಸಾವು, 20 ಮಂದಿ ಗಾಯ

ಇಸ್ಲಾಮಾಬಾದ್‌: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾನುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ ಮೂವರು ಭದ್ರತಾ ಪಡೆಗಳು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಪಾಕಿಸ್ತಾನದ ಅರೆಸೇನಾ ಪಡೆಗಳಲ್ಲಿ ಒಂದಾದ ಫ್ರಂಟಿಯರ್ ಕಾರ್ಪ್ಸ್ ನ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಲಾಗಿದೆ. ಗಾಯಗೊಂಡವರಲ್ಲಿ 18 ಮಂದಿ ಭದ್ರತಾ ಅಧಿಕಾರಿಗಳು ಎಂದು ಉಪ ಇನ್ಸ್‌ಪೆಕ್ಟರ್ ಜನರಲ್ … Continued

ಭಾರತ ಕ್ರಿಕೆಟ್‌ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್-ಮೂವರು ಸಹಾಯಕ ಸಿಬ್ಬಂದಿಗೆ ಕ್ವಾರಂಟೈನ್‍

ಓವೆಲ್: ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಬೆನ್ನಲ್ಲೇ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಕೊರೊನಾ ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ ನಂತರ ಭಾರತದ ಕೋಚ್ ರವಿಶಾಸ್ತ್ರಿ ತಂಡದ ಹೋಟೆಲ್‌ನಲ್ಲಿ ಉಳಿಯುವಂತೆ ಒತ್ತಾಯಿಸಲಾಗಿದೆ … Continued

ಕರ್ನಾಟಕದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌.. ಆದರೆ ಷರತ್ತುಗಳು ಅನ್ವಯ..

ಬೆಂಗಳೂರು: ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು ಆದರೆ ಷರತ್ತುಗಳು ಅನ್ವಯಿಸುತ್ತದೆ. ಸಂಘ, ಸಂಸ್ಥೆಗಳಿಂದ ಭಾರೀ ಒತ್ತಡ ಇದ್ದ ಹಿನ್ನೆಲೆಯಲ್ಲಿ ಅಂತಿಮವಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ. ಅನುಮತಿ ನೀಡಬೇಕೋ ಅಥವಾ ಬೇಡವೋ? ನೀಡುವುದಾದರೆ ಯಾವೆಲ್ಲ ಮಾರ್ಗಸೂಚಿಗಳನ್ನು ನಿಗದಿಪಡಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ … Continued

ಖ್ಯಾತ ಯಕ್ಷಗಾನ ಭಾಗವತ-ಕಲಾವಿದ ಗುಣವಂತೆ ಕೃಷ್ಣ ಭಂಡಾರಿ ನಿಧನ

ಹೊನ್ನಾವರ: ಯಕ್ಷಗಾನ ಭಾಗವತ, ಕಲಾವಿದ ಗುಣವಂತೆ ಕೃಷ್ಣ ಭಂಡಾರಿ (61 ವರ್ಷ) ಶನಿವಾರ ರಾತ್ರಿ ಸುಮಾರು 10.20 ಕ್ಕೆ ಗುಣವಂತೆಯಲ್ಲಿ ನಿಧನರಾಗಿದ್ದಾರೆ. ಕೃಷ್ನ ಭಂಡಾರಿ ಅವರು ಯಕ್ಷಗಾನದ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದಿದ್ದರು. ಅಜ್ಜ ವೆಂಕಪ್ಪ ಭಂಡಾರಿ ವೇಷಧಾರಿಯಾಗಿದ್ದರು. ಹಾಗೂ ತಂದು ಮಂಜು ಭಂಡಾರಿ ಮದ್ದಳೆ ವಾದಕರಾಗಿದ್ದರು.ಅವರು ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಯಕ್ಷಗಾನ ಹಿನ್ನೆಲೆಯ ಕುಟುಂಬದಿಂದ … Continued

ಕಾಶ್ಮೀರ ಪ್ರತ್ಕೇಕತಾವಾದಿ ನಾಯಕ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ ಹೊದೆಸಿದ ಕುಟುಂಬಸ್ಥರ ವಿರುದ್ಧ ಎಫ್‌ಐಆರ್‌

ಭಾರತ ವಿರುದ್ಧ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಮತ್ತು ಪ್ರತ್ಯೇಕತಾವಾದಿ ನಾಯಕನ ದೇಹದ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾಕಿದಕ್ಕಾಗಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಕುಟುಂಬಸ್ಥರು ಮತ್ತು ಇತರರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯುಎಪಿಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅವರ ಸಾವಿನ ನಂತರ, ಪೊಲೀಸ್ ಮೂಲಗಳು ಹೇಳಿವೆ. ಪ್ರತ್ಯೇಕತಾವಾದಿ ನಾಯಕನ ಸಾವಿನ … Continued

ಸಮವಸ್ತ್ರ ಧರಿಸಿಯೇ ಪೊಲೀಸರಿಂದ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳ ವಿಚಾರಣೆ: ವಿವರ ಐಜಿಪಿಗೆ ರವಾನಿಸಲಾಗಿದೆ ಎಂದು ಹೈಕೋರ್ಟ್‌ಗೆ ಮಾಹಿತಿ

ಬೆಂಗಳೂರು: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್‌ ನಗರದ ಶಾಹೀನ್‌ ಶಾಲೆಯ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳನ್ನು ಪೊಲೀಸರು ಸಮವಸ್ತ್ರ  ಧರಿಸಿಯೇ ವಿಚಾರಣೆಗೆ ಒಳಪಡಿಸಿದ ಘಟನೆಯ ವಿವರವನ್ನು ಡಿಜಿ-ಐಜಿಪಿ ಅವರಿಗೆ ರವಾನಿಸಲಾಗಿದ್ದು ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ … Continued

ನಾಳೆ ವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ (Rain fall) ಮುಂದುವರೆಯಲಿದೆ. ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಜೋರಾಗಲಿದೆ. ಸೆಪ್ಟೆಂಬರ್ 6ವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಇಂದು … Continued

ಕೋಜಿಕ್ಕೋಡ್‌: ನಿಪಾಹ್‌ ವೈರಸ್‌ ಸೋಂಕಿನಿಂದ ಮೃತಪಟ್ಟ ಕೋವಿಡ್‌ನಿಂದ ಚೇತರಿಸಿಕೊಂಡ 12 ವರ್ಷದ ಬಾಲಕ

ಕೋಜಿಕ್ಕೋಡ್ : ಕೋಜಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಬಾಲಕ ನಿಪಾ ವೈರಸ್‌ಗೆ ಮೃತಪಟ್ಟಿದ್ದಾನೆ. ಇಂದು ಮುಂಜಾನೆ 4.45 ರ ಸುಮಾರಿಗೆ ನಿಧನವಾಗಿದ್ದಾನೆ. ನಿಪಾಹ್ ವೈರಸ್‌ ಬಅಲಕನ ಸಾವಿಗೆ ಕಾರಣ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಖಚಿತಪಡಿಸಿದ್ದಾರೆ. ತ್ರಿಶೂರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಭಯಪಡುವ ಅಗತ್ಯವಿಲ್ಲ, ಮತ್ತು ಕ್ರಿಯಾ … Continued