ಅಫ್ಘಾನಿಸ್ತಾನದಲ್ಲಿ ‘ತಾಲಿಬಾನ್ ಶೈಲಿಯ’ ಕಾಲೇಜು ಹೇಗಿದೆ ನೋಡಿ: ಹುಡುಗ-ಹುಡುಗಿಯರ ಪ್ರತ್ಯೇಕಿಸಲು ಪರದೆ..!

ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. 1990ರ ದಶಕದ ಅಫ್ಘಾನಿಸ್ತಾನ ತಾಲಿಬಾನ್ ಆಳ್ವಿಕೆಗಿಂತ ಈ ಬಾರಿಯ ಆಡಳಿತ ಭಿನ್ನವಾಗಿದೆ. ಈ ಬಾರಿ, ಹುಡುಗಿಯರು ಹಾಗೂ ಮಹಿಳೆಯರಿಗೆ ಶಿಕ್ಷಣದ ಮತ್ತು ಕಲಿಯುವ ಹಕ್ಕು ನೀಡಲಾಗಿದೆ. ಆದರೆ, ಹೇಗೆ ಎಂಬುದಕ್ಕೆ ಈಗ ಗೊತ್ತಗಲು ಆರಂಭವಾಗಿದೆ. ಅವರು ತಾಲಿಬಾನ್‌ಗಳು ಹೇಳುವಷ್ಟು ಕಲಿಕೆ ಸಲೀಸಾಗಿ ಸಾಗುತ್ತಿಲ್ಲ. … Continued

ಅತ್ಯುತ್ತಮ ವಿದ್ಯಾರ್ಥಿಗಳೇ ಶಿಕ್ಷಕರ ಜೀವಾಳ: ಡಾ. ನ.ವಜ್ರಕುಮಾರ

ಧಾರವಾಡ: ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಆಸ್ತಿ. ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯ ವರ್ಣಿಸಲು ಅಸಾಧ್ಯ. ನಮ್ಮನ್ನು ಗುರುತಿಸಿ ಮಾತನಾಡಿಸಿದಾಗ ಆಗುವ ಆತ್ಮತೃಪ್ತಿ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು. ಶಿಕ್ಷಕ ದಿನಾಚರಣೆ ನಿಮಿತ್ತ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾವು ಹಣ-ಆಸ್ತಿ ಗಳಿಸಬಹುದು … Continued

ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಅತಂತ್ರ : ಕಾಂಗ್ರೆಸ್‌-ಬಿಜೆಪಿ ಯಾರಿಗಾದ್ರೂ ಜೆಡಿಎಸ್‌ ಬೆಂಬಲ ಅನಿವಾರ್ಯ..!

ಕಲಬುರ್ಗಿ: ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಆದರೆ ಬಹುಮತ ಪಡೆಯುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಬಿಜೆಪಿ ಗಣನೀಯವಾಗಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಕಲಬುರ್ಗಿ ಮಹಾನಗರ ಪಾಲಿಕೆ ಒಟ್ಟು 55 ವಾರ್ಡುಗಳಿಗೆ ನಡೆದ ಚುನಾವಣೆ ಫಲಿತಾಂಶದಲ್ಲಿ 27 ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ 23 ವಾರ್ಡುಗಳಲ್ಲಿ ಬಿಜೆಪಿ … Continued

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ:ಬಿಜೆಪಿ ಭರ್ಜರಿ ಗೆಲುವು, ಗೆದ್ದ ಅಭ್ಯರ್ಥಿಗಳ ವಾರ್ಡ್‌ ವಾರು ಪಟ್ಟಿ

  ಬೆಳಗಾವಿ :ಬೆಳಗಾವಿ ನಹಾನಗರ ಪಾಲಿಕೆ ಚುನಾವಣೆಯ 58 ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ನಿರೀಕ್ಷಿತ ಫಲಿತಾಂಶ ಪಡೆದಿಲ್ಲ ಹಾಗೂ ಪಾಲಿಯಲ್ಲಿ ಕಳೆದ ಕೆಲವು ದಶಕಗಳಿಂದ ಪ್ರಾಬಲ್ಯ ಸಾಧಿಸಿದ್ದ ಎಂಇಎಸ್‌ ಹೀನಾಯವಾಗಿ ಸೋತಿದೆ. ಇದೇ ಪ್ರಥಮ ಬಾರಿಗೆ ವಿವಿಧ ರಾಜಕೀಯ ಪಕ್ಷಗಳು ಕಣಕ್ಕಿಳಿದು ರಾಜ್ಯದ ಗಮನಸೆಳೆದಿದ್ದ ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ … Continued

ಅಫ್ಘಾನಿಸ್ತಾನ ಸರ್ಕಾರ ರಚನೆ ಅಂತಿಮಗೊಳಿಸಿದ ತಾಲಿಬಾನ್, ಸಮಾರಂಭಕ್ಕೆ ಚೀನಾ, ರಷ್ಯಾ, ಪಾಕಿಸ್ತಾನಕ್ಕೆ ಆಹ್ವಾನ

ನವದೆಹಲಿ: ಪಂಜಶೀರ್ ಕಣಿವೆಯನ್ನು “ಸಂಪೂರ್ಣ ವಶಪಡಿಸಿಕೊಳ್ಳಲಾಗಿದೆ” ಎಂದು ಘೋಷಿಸಿದ ನಂತರ ತಾಲಿಬಾನ್‌ಗಳು ಅಫ್ಘಾನಿಸ್ತಾನದಲ್ಲಿ ಮುಂದಿನ ಸರ್ಕಾರವನ್ನು ರಚಿಸುವ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಅಂತಿಮ ಹಂತದಲ್ಲಿದೆ ಮತ್ತು ತಾಲಿಬಾನ್ ಪಾಕಿಸ್ತಾನ, ಟರ್ಕಿ, ಕತಾರ್, ರಷ್ಯಾ, ಚೀನಾ ಮತ್ತು ಇರಾನ್ ಅನ್ನು ಸಮಾರಂಭಕ್ಕೆ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ತಾಲಿಬಾನ್ ವಕ್ತಾರ … Continued

ಒಂದೇ ಕುಟುಂಬದ ಮೂವರು ನೇಣುಬಿಗಿದುಕೊಂಡು ಆತ್ಮಹತ್ಯೆ

ಚಿಕ್ಕಮಗಳೂರು: ಒಂದೇ ಕುಟುಂಬದ ಮೂವರು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಾರದಮ್ಮ(70), ವೀಣಾ(49) ಹಾಗೂ ಶ್ರಾವ್ಯ(16) ಎಂದು ಗುರುತಿಸಲಾಗಿದೆ. ಮೃತ ವೀಣಾ ಶೃಂಗೇರಿಯ ಹೊನ್ನವಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಅಂಗನವಾಡಿಗೆ ತೆರಳದ ಹಿನ್ನೆಲೆಯಲ್ಲಿ ಅಂಗನವಾಡಿ ಸಹಾಯಕಿ ಪೂರ್ಣಿಮಾ, ವೀಣಾಗೆ ಕರೆ ಮಾಡಿದ್ದಾರೆ. ಅವರು … Continued

ಹುಬ್ಬಳ್ಳಿ-ಧಾರವಾಡ ಪಾಲಿಕೆ‌ ಚುನಾವಣೆ:ಬಿಜೆಪಿಗೆ 39, ಕಾಂಗ್ರೆಸ್‌ಗೆ 33 ಸ್ಥಾನಗಳಲ್ಲಿ ಗೆಲುವು-82 ವಾರ್ಡುಗಳ ಗೆದ್ದ ಅಭ್ಯರ್ಥಿಗಳು

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ‌ ಚುನಾವಣೆಯಲ್ಲಿ 82 ವಾರ್ಡ್‌ಗಳಿಗೆ ಬಿಜೆಪಿ, 39 ಸ್ಥಾನಗಳನ್ನು ಗೆದ್ದುಕೊಂಡಿದೆ.ಕಾಂಗ್ರೆಸ್ 33, ಪಕ್ಷೇತರ 6, ಎಐಎಂಐಎಂ ಮೂರು ಹಾಗೂ ಜೆಡಿಎಸ್ ಒಂದು ಸ್ಥಾನಗಳನ್ನು ಪಡೆದುಕೊಂಡಿವೆ.ಹುಬ್ಬಳ್ಳಿ-ಧಾರವಾಡ ಪಾಲಿಕೆಯ 82 ವಾರ್ಡ್‌ಗಳಿಗೆ ಸೆ. 3ರಂದು ನಡೆದ ಚುನಾವಣೆಯಲ್ಲಿ ಒಟ್ಟು 420 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಸಲ ಭರವಸೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷದ … Continued

ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ: ಫಲಿತಾಂಶ ಅತಂತ್ರ.. ಆದ್ರೂ ಬಿಜೆಪಿಗೆ ಅಧಿಕಾರ..!?..?

ಹುಬ್ಬಳ್ಳಿ:ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಸೆ.3ರಂದು ಹು-ಧಾ ಪಾಲಿಕೆಯ ಒಟ್ಟು 82 ವಾರ್ಡ್​ಗಳಿಗೆ ಮತದಾನ ನಡೆದಿತ್ತು. ಇಂದು(ಸೆ.6) ಮತ ಎಣಿಕೆ ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ. ಆರಂಭದಿಂದಲೂ ಕಾಂಗ್ರೆಸ್​ ಮತ್ತು ಬಿಜೆಪಿ ಮುನ್ನಡೆ ಕಾಯ್ದುಕೊಂಡು ಬಂದವಾದರೂ ಅಂತಿಮವಾಗಿ ಎರಡಕ್ಕೂ ಬಹುಮತ ಸಿಗಲಿಲ್ಲ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ … Continued

ಉತ್ತರ ಪ್ರದೇಶದ ಮಾಜಿ ರಾಜ್ಯಪಾಲರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಲಕ್ನೋ: ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕಾಗಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್‌ ಖುರೇಷಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಬಿಜೆಪಿ ನಾಯಕ ಆಕಾಶಕುಮಾರ್‌ ಸಕ್ಸೇನಾ ನೀಡಿದ ದೂರಿನ ಮೇರೆಗೆ ರಾಮಪುರ ಜಿಲ್ಲೆಯ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ‘ಯೋಗಿ ಆದಿತ್ಯನಾಥ್‌ ಸರ್ಕಾರ ರಕ್ತ ಹೀರುವ … Continued

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್​​ ದೇಶಮುಖ್​ ಹೆಸರಲ್ಲಿ ಲುಕ್​ ಔಟ್​ ನೋಟೀಸ್ ಹೊರಡಿಸಿದ ಇಡಿ

ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್​ ದೇಶಮುಖ್​ ಆರ್ಥಿಕ ಅಪರಾಧಗಳ ಆರೋಪದ ಬಗ್ಗೆ ತನಿಖೆ ನಡೆಸುವ ಎಜಾರಿ ನಿರ್ದೇಶನಾಲಯ ​(ಇಡಿ) ಲುಕ್​ ಔಟ್​ ನೋಟೀಸ್​ ಹೊರಡಿಸಿದೆ. ಹಲವು ಸಮನ್ಸ್​ಗಳಿಗೆ ದೇಶಮುಖ್​ ಸೂಕ್ತವಾಗಿ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ, ಅವರು ದೇಶ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಈ ನೋಟೀಸ್​ ಜಾರಿಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್​ಸಿಪಿ)ದ … Continued