ದಿಶಾ ಪ್ರಕರಣ’ದಲ್ಲಿ ಅತ್ಯಾಚಾರ ಸಂತ್ರಸ್ತೆ ಗುರುತು ಬಹಿರಂಗ: 38 ಬಾಲಿವುಡ್ -ಟಾಲಿವುಡ್ ನಟರ ವಿರುದ್ಧ ದೂರು ದಾಖಲು

ನವದೆಹಲಿ; ಹೈದರಾಬಾದ್‌ ಹೊರವಲಯದಲ್ಲಿ ಪಶುವೈದ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಜೀವಂತ ಸುಟ್ಟು ಹಾಕಿದ ಎರಡು ವರ್ಷಗಳಾಗಿವೆ. ಭಯಾನಕ “ದಿಶಾ ಅತ್ಯಾಚಾರ ಪ್ರಕರಣ” ನಮ್ಮ ನೆನಪಿನಲ್ಲಿ ಇನ್ನೂ ತಾಜಾವಾಗಿದ್ದರೂ, ದೆಹಲಿ ಮೂಲದ ವಕೀಲರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ನೈಜ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ಟಾಲಿವುಡ್ ಮತ್ತು ಬಾಲಿವುಡ್‌ನ 38 ಚಲನಚಿತ್ರ ಸೆಲೆಬ್ರಿಟಿಗಳನ್ನು ಬಂಧಿಸುವಂತೆ … Continued

ದೇವಸ್ಥಾನದ ಆಸ್ತಿ ದೇವರಿಗೆ ಸೇರಿದ್ದು, ಭೂ ದಾಖಲೆಯಲ್ಲಿ ಅರ್ಚಕರ ಹೆಸರು ನಮೂದಿಸುವ ಅಗತ್ಯವಿಲ್ಲ:ಸುಪ್ರೀಂಕೋರ್ಟ್

ನವದೆಹಲಿ: ದೇವಸ್ಥಾನಕ್ಕೆ ಸೇರಿದ ಭೂಮಿಯ ಮಾಲೀಕತ್ವದ ವಿಚಾರಕ್ಕೆ ಬಂದಾಗ ಭೂ ದಾಖಲೆಗಳಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವರ ಹೆಸರು ಮಾತ್ರ ಉಲ್ಲೇಖಕ್ಕೆ ಅರ್ಹ, ಅರ್ಚಕರು ಪೂಜೆ ಮಾಡಲು ಮಾತ್ರ ಸೀಮಿತವಾಗಿರುತ್ತಾರೆ. ದೇವರ ಆಸ್ತಿಯನ್ನು ನಿರ್ವಹಣೆ ಮಾಡುವ ಖಾತರಿದಾರರಾಗಿ ಮಾತ್ರ ಪೂಜಾರಿ/ಅರ್ಚಕರು ಇರಲಿದ್ದಾರೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ನ್ಯಾಯಿಕ ವ್ಯಕ್ತಿಯಾಗಿ (ಜ್ಯೂರಿಸ್ಟಿಕ್‌ ಪರ್ಸನ್‌) ದೇವರೇ … Continued

ರಾಜ್ಯದ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ..

ಬೆಂಗಳೂರು; ರಾಜ್ಯ ಶಿಕ್ಷಣ ಇಲಾಖೆ 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದ ದಸರಾ ರಜೆ (Dussehra holiday) ಹಾಗೂ ಬೇಸಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಆಕ್ಟೋಬರ್ 10 ರಿಂದ 20ರ ವರೆಗೆ ಒಟ್ಟು 10 ದಿನಗಳ ಕಾಲ ರಾಜ್ಯದ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದೆ. ಈ ರಜೆ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ … Continued

ಮೈಸೂರು ವಿವಿ ಘಟಿಕೋತ್ಸವ: ಉತ್ತರ ಕನ್ನಡ ಜಿಲ್ಲೆ ಶೀಗೆಹಳ್ಳಿ ವಿದ್ಯಾರ್ಥಿನಿ ಚೈತ್ರಾ ಹೆಗಡೆಗೆ 20 ಚಿನ್ನದ ಪದಕ..!

ಮೈಸೂರು: ಕರ್ನಾಟಕದ ಹೆಮ್ಮೆಯಾಗಿರುವ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವವನ್ನು ಪೂರೈಸಿ 101ನೇ ಘಟಿಕೋತ್ಸವವನ್ನು ಇಂದು (ಮಂಗಳವಾರ) ನಡೆಯಿತು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಘಟಿಕೋತ್ಸವದಲ್ಲಿ ಪುರಸ್ಕರಿಸಲಾಯಿತು. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ನಾರಾಯಣ್ ಹೆಗಡೆ 20 ಚಿನ್ನದ ಪದಕ ಮತ್ತು ನಾಲ್ಕು ಬಹುಮಾನಗಳಿಗೆ ಭಾಜನರಾದರು. ಮೈಸೂರು ವಿಶ್ವವಿದ್ಯಾಲಯ ದಲ್ಲಿ ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ವ್ಯಾಸಂಗ ಮಾಡಿದ ಉತ್ತರ … Continued

ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಕಾಮೆಂಟ್ಸ್‌ ಆರೋಪ: ಛತ್ತೀಸ್‌ಗಡ ಸಿಎಂ ಭೂಪೇಶ್ ಬಘೇಲ್ ತಂದೆ ಬಂಧನ

ರಾಯಪುರ: ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದಕುಮಾರ್ ಬಘೇಲ್ ಅವರನ್ನು ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಂಗಳವಾರ ಬಂಧಿಸಲಾಗಿದೆ. ರಾಯಪುರ ಪೊಲೀಸರು ನಂದಕುಮಾರ್ ಬಘೇಲ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ದರು, ಅಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಿಂದೆ, ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ … Continued

ನಾಸಿಕ್‌: ಬಾವಿಯಲ್ಲಿ ಚಿರತೆ-ಬೆಕ್ಕು ಮುಖಾಮುಖಿ.. ಹೆದರದ ಬೆಕ್ಕು.. ಮುಂದೇನಾಯ್ತು.. ಇಲ್ಲಿದೆ ವಿಡಿಯೋ

ಬೆಕ್ಕು ಮತ್ತು ಚಿರತೆ ನಾಸಿಕ್‌ನಲ್ಲಿ ಮುಖಾಮುಖಿಯಾಗಿದ್ದವು. ಉಸಿರುಬಿಗಿ ಹಿಡಿದು ನೋಡಬೇಕಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಿರತೆ ಮುಖಾಮುಖಿಯಾದಾಗ ಅದನ್ನು ಬೆಕ್ಕು ಧೈರ್ಯದಿಂದ ಎದುರಿಸಿದೆ. ಚಿರತೆಯು ಬೆಕ್ಕನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದ್ದಾಗ ಎರಡೂ ಬಾವಿಗೆ ಬಿದ್ದಿವೆ. 16 ಸೆಕೆಂಡುಗಳ ವಿಡಿಯೋದಲ್ಲಿ, ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತಿರುವಾಗ ಬಾವಿಗೆ ಬಿದ್ದ ಚಿರತೆ ನೀರಿನಿಂದ ಜಿಗಿದು ದಿಢೀರನೆ ಬೆಕಿನತ್ತ ಹಾರಿದೆ. … Continued

ಕಾವೇರಿ ಕಾಲಿಂಗ್‌ ಯೋಜನೆಗೆ ಇಶಾ ಫೌಂಡೇಶನ್‌ ದೇಣಿಗೆ ಸಂಗ್ರಹ ಪ್ರಶ್ನಿಸಿದ್ದ ಮನವಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದ ಇಶಾ ಫೌಂಡೇಶನ್‌ ಸಂಸ್ಥೆಯ ಮಹತ್ವಾಕಾಂಕ್ಷಿ ಕಾವೇರಿ ಕಾಲಿಂಗ್‌ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ. ಅರ್ಜಿದಾರ ಎ. ವಿ. ಅಮರನಾಥನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ತೀರ್ಪು ಕಾಯ್ದಿರಿಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ … Continued

ಕರ್ನಾಟಕದಲ್ಲಿ ಇನ್ನೆರೆಡು ದಿನ ಭಾರೀ ಮಳೆ :ಮುನ್ಸೂಚನೆ

ಕಲಬುರ್ಗಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ವ್ಯಾಪಕವಾಗಿ ಮಳೆ ( rainfall) ಆಗುತ್ತಿದ್ದು, 2 ರಿಂದ 3 ದಿನ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಉತ್ತರ ಒಳನಾಡಿನ ಇತರ ಜಿಲ್ಲೆಗಳಾದ ರಾಯಚೂರು, ಬಾಗಲಕೋಟೆ, ಹಾವೇರಿ, ಗದಗ, ಬಳ್ಳಾರಿ, ವಿಜಯನಗರ, ಗದಗ, ಧಾರವಾಡದಲ್ಲೂ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ … Continued

ಬರಪೀಡಿತ ಮಧ್ಯಪ್ರದೇಶದ ಹಳ್ಳಿಯಲ್ಲಿ ಮಳೆಗಾಗಿ 6 ಅಪ್ರಾಪ್ತ ಹುಡುಗಿಯರ ಬೆತ್ತಲೆ ಮೆರವಣಿಗೆ..!

ದಾಮೋಹ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಳೆ ದೇವರನ್ನು ಮೆಚ್ಚಿಸಲು ಕನಿಷ್ಠ ಆರು ಹುಡುಗಿಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದ್ದು, ಈ ರೀತಿ ಮಾಡಿದರೆ ಬರ-ರೀತಿಯ ಪರಿಸ್ಥಿತಿಯಿಂದ ಪರಿಹಾರ ಸಿಗುತ್ತದೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಬುಂದೇಲ್‌ಖಂಡ್ ಪ್ರದೇಶದ ದಾಮೋಹ್ ಜಿಲ್ಲಾ ಕೇಂದ್ರದಿಂದ 50 ಕಿಮೀ ದೂರದಲ್ಲಿರುವ ಬನಿಯಾ ಗ್ರಾಮದಲ್ಲಿ ಭಾನುವಾರ ನಡೆದ ಘಟನೆ ಕುರಿತು ರಾಷ್ಟ್ರೀಯ ಮಕ್ಕಳ … Continued

ಭಾರತದಲ್ಲಿ 31,222 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು 31,222 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 290 ಸಾವುಗಳನ್ನು ದಾಖಲಿಸಿದೆ.ಇದೇ ಸಮಯದಲ್ಲಿ 42,942 ರೋಗಿಗಳು ಚೇತರಿಸಿಕೊಂಡಿದ್ದಾರೆ,. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಕೇರಳವು 19,688 ಪ್ರಕರಣಗಳು, ಮಹಾರಾಷ್ಟ್ರದ 3,626 ಪ್ರಕರಣಗಳು, ತಮಿಳುನಾಡು 1,556 … Continued