ಆಂಧ್ರಪ್ರದೇಶ 8-ವರ್ಷದ ಹುಡುಗ ಕುಟುಂಬದ ಪೋಷಣೆಗಾಗಿ ಇ- ಆಟೊರಿಕ್ಷಾ ಓಡಿಸುತ್ತಾನೆ..!

ವಿಜಯವಾಡ: ಎಂಟು ವರ್ಷದ ರಾಜ ಗೋಪಾಲ್ ರೆಡ್ಡಿ ತನ್ನ ಚಿಕ್ಕ ಹೆಗಲ ಮೇಲೆ ಸಂಸಾರದ ಭಾರ ಹೊತ್ತಿದ್ದಾನೆ..! ಆತ ತನ್ನ ಅಂಧ ಹೆತ್ತವರಿಗೆ ಮತ್ತು ಇಬ್ಬರು ಕಿರಿಯ ಸಹೋದರರಿಗೆ ಆಹಾರ ಒದಗಿಸಲು ಈತ ಎಲೆಕ್ಟ್ರಿಕ್ ಆಟೋ ಓಡಿಸುತ್ತಾನೆ…! ರಾಜಗೋಪಾಲ ಇ-ಆಟೋರಿಕ್ಷಾ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಚಿಕ್ಕ ಹುಡುಗನ ಕಥೆ … Continued

ಭ್ರಷ್ಟಾಚಾರ ಪ್ರಕರಣ: ವಿ.ಕೆ.ಶಶಿಕಲಾಗೆ ಸೇರಿದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಐಟಿ..!

ಚೆನ್ನೈ: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ಅವರಿಗೆ ಸಂಬಂಧಪಟ್ಟ ಸುಮಾರು 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾರ ಆಪ್ತೆಯಾಗಿದ್ದ ಶಶಿಕಲಾ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು. ಚೆನ್ನೈನ ಹೊರವಲಯದಲ್ಲಿರುವ ಪಯನೂರ್​ ಗ್ರಾಮದಲ್ಲಿ, ಸುಮಾರು 24 ಎಕರೆ ಪ್ರದೇಶಗಳಷ್ಟು ವಿಸ್ತೀರ್ಣದಲ್ಲಿದ್ದ 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ, ಬೇನಾಮಿ ನಿಷೇಧ ಕಾಯ್ದೆಯಡಿ … Continued

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಾಳೆ ಬ್ರಿಕ್ಸ್ ಶೃಂಗಸಭೆ: ಚೀನಾ ಅಧ್ಯಕ್ಷ ಜಿನ್‍ಪಿಂಗ್ ಕೂಡ ಭಾಗಿ

ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ನಾಳೆ (ಸೆಪ್ಟೆಂಬರ್‌ 9ರಂದು) ನಡೆಯಲಿರುವ 13ನೆ ಬ್ರಿಕ್ಸ್ ಶೃಂಗಸಭೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಭಾಗವಹಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ತಿಳಿಸಿದ್ದಾರೆ. ಗುರುವಾರ 13ನೆ ಬ್ರಿಕ್ಸ್ ಶೃಂಗಸಭೆಯು ವರ್ಚುವಲ್‌ ಮೂಲಕ ನಡೆಯಲಿದ್ದು, ಭಾರತ, ರಷ್ಯಾ, ಬ್ರೇಜಿಲ್‌, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್) ನಾಯಕರ ವರ್ಚುವಲ್ ಸಭೆಗೆ … Continued

ಕಲಬುರಗಿ: ಯಾರು ನಮ್ಗೆ ಮೇಯರ್‌ ಸ್ಥಾನ ಕೊಡ್ತಾರೋ ಅವ್ರಿಗೆ ನಮ್ಮ ಬೆಂಬಲ: ಕಾಂಗ್ರೆಸ್‌-ಬಿಜೆಪಿಗೆ ಜೆಡಿಎಸ್‌ ಪಾಲಿಕೆ ಸದಸ್ಯರ ಸಖತ್‌ ಆಫರ್‌…!

ಬೆಂಗಳೂರು: ಯಾರು ನಮಗೆ ಮೇಯರ್ ಸ್ಥಾನ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲಎಂದು ಕಲಬುರಗಿ ಮಹಾನಗರ ಪಾಲಿಕೆಯ ಜೆಡಿಎಸ್‌ ಸದಸ್ಯರುಷರತ್ತು ಮುಂದಿಟ್ಟಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಯಾವುದೇ ಅಗಲಿ ಜೆಡಿಎಸ್​ಗೆ ಕಲ್ಬುಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಕೊಟ್ಟರೆ ಅವರಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರು ಹೇಳಿದ್ದಾರೆ. ಪಾಲಿಕೆ ಬೆಂಬಲ … Continued

ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರ ಸೇರ್ಪಡೆಗೆ ಕೇಂದ್ರ ಸರ್ಕಾರ ಒಪ್ಪಿಗೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಯುವತಿಯರನ್ನು ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ತಾನು ರಕ್ಷಣಾ ಪಡೆಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ವಿಚಾರವನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ನ್ಯಾಯಾಲಯಕ್ಕೆ ತಿಳಿಸಿದರು. “ಈ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಯುವತಿಯರು ಎನ್‌ಡಿಎಗೆ ಸೇರಲು ಅನುಮತಿಸಲಾಗುವುದು. … Continued

ಉತ್ತರಾಖಂಡ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ರಾಜೀನಾಮೆ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಎರಡು ವರ್ಷಗಳ ಮೊದಲೇ ಬುಧವಾರ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಿದರು ಎಂದು ರಾಜ್ ಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಮೌರ್ಯ ಉತ್ತರಾಖಂಡದ ರಾಜ್ಯಪಾಲರಾಗಿ … Continued

ಸೆ.13ರಿಂದ 24ರ ವರೆಗೆ ವಿಧಾನಸಭಾ ಅಧಿವೇಶನ, ಕೊನೆಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಈ ಅಧಿವೇಶನದ ವಿಶೇಷ: ಸ್ಪೀಕರ್ ಕಾಗೇರಿ

ಬೆಂಗಳೂರು : ಈ ಸಲದ ವಿಧಾನಸಭಾ ಅಧಿವೇಶನ ಸೆ. 13ರಿಂದ 24ರ ವರೆಗೆ ನಡೆಯಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದು, ಈ ಬಾರಿ ಸದನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುತ್ತಿರುವುದು ವಿಶೇಷ ಎಂದು ಹೇಳಿದ್ದಾರೆ. ಈ ಕುರಿತು ಇಂದು (ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸೆ.13ರಿಂದ 24ರ ವರೆಗೆ ಅಂದರೆ … Continued

ಕಲಬುರಗಿ ಪಾಲಿಕೆ ಅಧಿಕಾರಕ್ಕೆ ಬಿಜೆಪಿ-ಕಾಂಗ್ರೆಸ್‌ ಕಸರತ್ತು: ಎಚ್‌ಡಿಕೆ ಜೊತೆ ಬೊಮ್ಮಾಯಿ, ದೇವೇಗೌಡರ ಜೊತೆ ಖರ್ಗೆ ಮಾತುಕತೆ- ಆದ್ರೆ ಗುಟ್ಟುಬಿಟ್ಟುಕೊಡದ ಜೆಡಿಎಸ್‌

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆ ಒಟ್ಟು 55 ಸದಸ್ಯರ ಬಲ ಹೊಂದಿದ್ದು, ಆದರೆ ಪಾಲಿಕೆ ಚುನಾವಣಾ ಫಲಿತಾಂಶದಲ್ಲಿ ಹಾಂಗ್ರೆಸ್‌ ಹಾಗೂ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹೀಗಾಗಿ ಕೇಔಲ ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೂ ಜೆಡಿಎಸ್‌ಗೆ ಈಗ ಎಲ್ಲಿಲ್ಲದ ಮಹತ್ವ ಬಂದಿದೆ. ಕಾಂಗ್ರೆಸ್ 27 ವಾರ್ಡ್‌ಗಳಲ್ಲಿ, ಬಿಜೆಪಿ 23 ಮತ್ತು ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಗೆದ್ದರೆ ಒಂದು … Continued

ಗಣೇಶನ ಹಬ್ಬಕ್ಕೆ ಬೆಂಗಳೂರಿನಿಂದ ವಿವಿಧೆಡೆ ತೆರಳಲು ಹೆಚ್ಚುವರಿ 1 ಸಾವಿರ ಬಸ್ ಸಂಚಾರ

ಬೆಂಗಳೂರು: ಗೌರಿ-ಗಣೇಶ ಹಬ್ಬದ ದೃಷ್ಟಿಯಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಸೆಪ್ಟೆಂಬರ್ 8 ಮತ್ತು 9 ರ ನಡುವೆ ಪ್ರಯಾಣಿಸುವವರಿಗೆ ಸಾರಿಗೆ ಸೌಲಭ್ಯ ಒದಗಿಸಲು ಅಸ್ತಿತ್ವದಲ್ಲಿರುವ ಬಸ್ಸುಗಳ ವೇಳಾಪಟ್ಟಿಯ ಜೊತೆಗೆ 1000 ಹೆಚ್ಚುವರಿ ಬಸ್‌ಗಳನ್ನು ಓಡಿಸಲು ವಿಸ್ತೃತವಾದ ವ್ಯವಸ್ಥೆ ಮಾಡಿದೆ. ಕೆಎಸ್‌ಆರ್‌ಟಿಸಿಯ ಪ್ರಕಟಣೆಯ ಪ್ರಕಾರ, ಸಪ್ಟೆಂಬರ್ 12 ರಂದು ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ … Continued

ಪಶ್ಚಿಮ ಬಂಗಾಳ: ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಮನೆ ಗೇಟಿಗೆ ಕಚ್ಚಾ ಬಾಂಬ್‌ ಎಸೆತ

ಕೋಲ್ಕತ್ತಾ: ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಅವರ ಮನೆಯ ಸಮೀಪದಲ್ಲಿ ಇಂದು (ಬುಧವಾರ) ಬೆಳಗ್ಗೆ ಮೂರು ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದೆ. ಕೋಲ್ಕತ್ತಾದಿಂದ ಸುಮಾರು 100 ಕಿ.ಮೀ. ದೂರದ ಜಗತ್‌ದಲ್‌ನಲ್ಲಿರುವ ಅರ್ಜುನ್‌ ಸಿಂಗ್‌ ಅವರ ಮನೆಯ ಗೇಟಿಗೆ ಬಾಂಬ್‌ಗನನು ಎಸೆಯಲಾಗಿದ್ದು. ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗ್ಗೆ 6:30ರ ಸುಮಾರಿಗೆ ಈ ಕಚ್ಚಾ ಬಾಂಬ್‌ಗಳು ಸ್ಫೋಟಿಸಿರುವುದಾಗಿ … Continued