ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಎಫ್‌ಐಆರ್ ದಾಖಲು

‘ಬಾರಾಬಂಕಿ: ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದ್-ಉಲ್-ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ‘ಬಾರಾಬಂಕಿ ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣದ ಮೂಲಕ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆಡಳಿತವು ಈ ವರ್ಷದ ಆರಂಭದಲ್ಲಿ ಶತಮಾನದಷ್ಟು ಹಳೆಯ ಮಸೀದಿಯನ್ನು “ಹುತಾತ್ಮ”(“martyred”) ಮಾಡಿತು ಎಂದು ಓವೈಸಿ ತಮ್ಮ ಭಾಷಣದಲ್ಲಿ ಆರೋಪಿಸಿದ್ದರು. ಅವರು ಪ್ರಧಾನಿ ನರೇಂದ್ರ … Continued

ಕಾರವಾರ ಕಡಲತೀರದಲ್ಲಿ ಅಪರೂಪದ ಹಸಿರು ಸಮುದ್ರ (Green Sea) ಆಮೆ ಕಳೇಬರ ಪತ್ತೆ

ಕಾರವಾರ: ಅರಬ್ಬೀ ಸಮುದ್ರದ ಕರಾವಳಿಯಲ್ಲಿ ಅಪರೂಪವಾಗಿ ಕಾಣುವಹಸಿರು ಸಮುದ್ರ (Green Sea) ಆಮೆಯ ಕಳೇಬರ ಗುರುವಾರ ಸಂಜೆ ಕಾರವಾರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಪತ್ತೆಯಾಗಿದೆ. ಅವನತಿಯಲ್ಲಿ ಅಂಚಿನಲ್ಲಿರುವುದರಿಂದ ವನ್ಯ ಜೀವಿ ಸೌಂರಕ್ಷಣ ಕಾಯ್ದೆ 1972ರ ಅನುಬಂಧ 1ರ ಅಡಿ ಇದು ಸಂರಕ್ಷಿಸಲ್ಪಟ್ಟ ಜೀವಿಯಾಗಿದೆ.. ಕೆಲವೇ ದಿನಗಳ ಹಿಂದೆ ಇದೇ ಜಾತಿಯ ಆಮೆಯ ಕಳೇಬರವೊಂದು ಕಾರವಾರದ ಕಡಲತೀರದಲ್ಲಿ … Continued

ಶಿಕ್ಷಕಿಯರಿಗೆ ಜೀನ್ಸ್, ಬಿಗಿಯುಡುಗೆ, ಶಿಕ್ಷಕರಿಗೆ ಟೀ ಶರ್ಟ್ ನಿಷೇಧಿಸಿದ ಪಾಕ್

ಇಸ್ಲಾಮಾಬಾದ್: ಮಹಿಳಾ ಶಿಕ್ಷಕರು ಜೀನ್ಸ್ ಮತ್ತು ಬಿಗಿಯುಡುಗೆ ಧರಿಸಬಾರದು ಎಂದು ಪಾಕಿಸ್ತಾನದ ಫೆಡರಲ್ ಡೈರೆಕ್ಟರೇಟ್ ಆಫ್ ಎಜುಕೇಷನ್(ಎಫ್‌ಡಿಇ) ಸೂಚಿಸಿದೆ. ಬೋಧನಾ ವರ್ಗದವರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿರುವ ಎಫ್‌ಡಿಇ, ಪುರುಷ ಶಿಕ್ಷಕರೂ ಜೀನ್ಸ್ ಮತ್ತು ಟಿ-ಶರ್ಟ್ಸ್ ಧರಿಸಬಾರದು ಎಂದು ಎಫ್‌ಡಿಇ ಸೂಚಿಸಿದೆ. ಶಿಕ್ಷಕಿಯರು ಸರಳ ಮತ್ತು ಸಭ್ಯ ರೀತಿಯ ಸಲ್ವಾರ್ ಕಮೀಝ್, ಷರಾಯಿ(ಟ್ರೌಸರ್), ದುಪಟ್ಟಾ/ಶಾಲು ಸಹಿತ ಶರ್ಟ್ಸ್ ಧರಿಸಬೇಕು. … Continued

5ನೇ ಶತಮಾನದ ಕುಮಾರ ಗುಪ್ತನ ಕಾಲದ ಶಂಖಲಿಪಿ ಶಾಸನ ಉತ್ತರ ಪ್ರದೇಶದಲ್ಲಿ ಪತ್ತೆ

ಆಗ್ರಾ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಇಟಾಹ್ ಜಿಲ್ಲೆಯಲ್ಲಿ ಗುಪ್ತರ ಕಾಲದ ದೇವಾಲಯದ ಮೆಟ್ಟಿಲುಗಳ ಮೇಲೆ ‘ಶಂಖಲಿಪಿ’ ಶಾಸನವನ್ನು ಪತತೆ ಮಾಡಿದ್ದು, ಇದು ಚಕ್ರವರ್ತಿ ಕುಮಾರಗುಪ್ತನ ಕಾಲದ್ದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಎಎಸ್‌ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ (ಆಗ್ರಾ ವೃತ್ತ) ವಸಂತ ಕುಮಾರ್, ಈ ಶಾಸನದಲ್ಲಿ ‘ಶ್ರೀ ಮಹೇಂದ್ರಾದಿತ್ಯ’ ಎಂದು ಬರೆಯಲಾಗಿದೆ, ಇದು ಗುಪ್ತ ವಂಶದ … Continued

ತಮಿಳುನಾಡು ಸೇರಿ 4 ರಾಜ್ಯಕ್ಕೆ ರಾಜ್ಯಪಾಲರ ನೇಮಕ, ಲೆ.ಜ. ಗುರ್ಮಿತ್ ಸಿಂಗ್ ಉತ್ತರಾಖಂಡ ರಾಜ್ಯಪಾಲ

ನವದೆಹಲಿ: ಉತ್ತರಾಖಂಡ, ತಮಿಳುನಾಡು, ನಾಗಾಲ್ಯಾಂಡ್, ಪಂಜಾಬ್ ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದೆ. ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾದ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ಗುರುವಾರ ನೇಮಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಸಿಂಗ್ ಅವರು ಸುಮಾರು ನಾಲ್ಕು ದಶಕಗಳ ಸೇವೆಯ ನಂತರ 2016 ರ ಫೆಬ್ರವರಿಯಲ್ಲಿ ಸೇನೆಯಿಂದ ನಿವೃತ್ತರಾಗಿದ್ದರು.ಉತ್ತರಾಖಂಡ್ ರಾಜ್ಯಪಾಲರಾಗಿದ್ದ ಬೇಬಿ … Continued