ಇಂದು ನೀಟ್‌ ಪರೀಕ್ಷೆ ಬರೆಯುವ 16 ಲಕ್ಷ ವಿದ್ಯಾರ್ಥಿಗಳು

ಬೆಂಗಳೂರು : ಕೊರೊನಾ ವೈರಸ್‌ ಸೋಂಕಿನ ನಡುವೆಯೇ 2020-21 ನೇ ಸಾಲಿನ ನೀಟ್ ಪರೀಕ್ಷೆ ಇಂದು (ಸೆಪ್ಟೆಂಬರ್‌ 12ರಂದು )ನಡೆಯಲಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿರುವ ಪರೀಕ್ಷೆಗೆ 16 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳಿಗೆ ನೀಟ್‌ ಪರೀಕ್ಷೆ ನಡೆಯಲಿದ್ದು, … Continued

9 ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರವೆಸಗಿದ ಶಾಲಾ ಹೆಡ್‌ ಮಾಸ್ಟರ್‌,..!

ಲಕ್ನೋ : ಉತ್ತರ ಪ್ರದೇಶದಲ್ಲಿ ಶಾಲೆಯೊಂದರಲ್ಲಿ 9 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ವಿಡಿಯೋ ಕ್ಲಿಪ್‌ ತೋರಿಸಿ ಅತ್ಯಾಚಾರವೆಸಗಿರುವ ಕುರಿತು ಶಾಲಾ ಮುಖ್ಯಾಧ್ಯಾಪಕರ ವಿರುದ್ಧವೇ ದೂರು ದಾಖಲಾದ ವರದಿಯಾಗಿದೆ. ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. 4ನೇ ತರಗತಿಯ ವಿದ್ಯಾರ್ಥಿನಿ ಸೀತಾಪುರದ ಗೊಂಡ್ಲಾಮೌ ಬ್ಲಾಕ್‌ನಲ್ಲಿರುವ ತನ್ನ ಶಾಲೆಗೆ ತರಳಿದ್ದ … Continued

ವೇಗವಾಗಿ 16 ಸಾವಿರ ಅಡಿ ಎತ್ತರದ ಮೌಂಟ್ ಕಿಲಿಮಾಂಜರೋ ಪರ್ವತ ಏರಿದ ಭಾರತೀಯ ಮಹಿಳೆ

ನವದೆಹಲಿ: ಆಫ್ರಿಕಾ ಖಂಡದ ಅತೀ ಎತ್ತರದ ಪರ್ವತವಾದ ಮೌಂಟ್ ಕಿಲಿಮಾಂಜರೋ ಪರ್ವತ ಶಿಖರ ಏರುವ ಮೂಲಕ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಗೀತಾ ಸಮೋಟಾ ಹೊಸ ದಾಖಲೆ ಮಾಡಿದ್ದಾರೆ. ಆಫ್ರಿಕಾ ಖಂಡದ ತಾಂಜಾನಿಯಾದಲ್ಲಿರುವ ಈ ಶಿಖರವನ್ನು ಅತೀ ವೇಗವಾಗಿ ಏರಿದ ಭಾರತೀಯ ಮಹಿಳೆ ಎಂಬ ದಾಖಲೆಯನ್ನು ಗೀತಾ ಸಮೋಟಾ ನಿರ್ಮಿಸಿದ್ದಾರೆ. ಹಾಗೆಯೇ ಈ … Continued

ಮೈಸೂರು ಗ್ಯಾಂಗ್ ರೇಪ್ ಪ್ರಕರಣ : ಶೀಘ್ರ ತನಿಖೆಗಾಗಿ ವಿಶೇಷ ಪ್ಯಾಸಿಕ್ಯೂಟರ್ ನೇಮಕ- ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಶೀಘ್ರ ತನಿಖೆ ನಡೆಸಲು ವಿಶೇಷ ಪ್ಯಾಸಿಕ್ಯೂಟರ್ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಂತ್ರಸ್ತೆಯ ಪೋಷಕರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಅಗತ್ಯಬಿದ್ದರೆ ಪ್ಯಾಸಿಕ್ಯೂಟರುಗಳ ನೇಮಕ ಮಾಡಲಾಗುತ್ತದೆ. ಈ ಕುರಿತು ತನಿಖೆ ನಡೆಸಲು ಮುಂದಿನ ದಿನಗಳಲ್ಲಿ ವಿಶೇಷ … Continued

ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 801 ಜನರಿಗೆ ಕೊರೊನಾ ಸೋಂಕು; 15 ಮಂದಿ ಸಾವು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಶನಿವಾರ) ಹೊಸದಾಗಿ 801 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ ಕೊರೊನಾ ಸೋಂಕಿನಿಂದ 15 ಜನರ ಸಾವು ಸಂಭವಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,60,932 ಕ್ಕೆ ಏರಿಕೆಯಾಗಿದೆ. ಒಟ್ಟು 29,06,746 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಈವರೆಗೆ ಕೊರೊನಾದಿಂದ 37,487 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 16,672 ಸಕ್ರಿಯ … Continued

ಗುಜರಾತ್‌ ಮುಂದಿನ ಸಿಎಂ: ನಿತಿನ್ ಪಟೇಲ್, ಮನ್ಸುಖ್ ಮಾಂಡವೀಯ, ಆರ್.ಸಿ.ಫಾಲ್ಡು ಇವರಲ್ಲಿ ಒಬ್ಬರೋ ಅಥವಾ ಅಚ್ಚರಿ ಆಯ್ಕೆಯೋ..?

ಅಹ್ಮದಾಬಾದ್: ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನೂತನ ಗುಜರಾತಿಗೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ರಾಜ್ಯ ಕೃಷಿ ಸಚಿವ ಆರ್. ಸಿ. ಫಾಲ್ಡು, ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ, ಮನ್ಸುಖ್ ಮಾಂಡವೀಯ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆಪ್ರಮುಖವಾಗಿ ಕೇಳಿಬರುತ್ತಿದೆ. … Continued

ಇಂದು ಸರಳ-ಸಜ್ಜನಿಕೆಯ ಜನಾನುರಾಗಿ ವ್ಯಕ್ತಿ ಬಸವರಾಜ ಬಿಕ್ಕಣ್ಣವರ ಪ್ರಥಮ ಪುಣ್ಯ ಸ್ಮರಣೆ

(ಬಸವರಾಜ ಎಸ್. ಬಿಕ್ಕಣ್ಣವರ ಪ್ರಥಮ ಪುಣ್ಯ ಸ್ಮರಣೆ ರವಿವಾರ, ದಿನಾಂಕ ೧೨.೦೯.೨೦೨೧ ಧಾರವಾಡದ ಸ್ವಗೃಹದಲ್ಲಿ ಜರುಗಲಿದ್ದು, ಆ ನಿಮಿತ್ಯವಾದ ಲೇಖನ) ಬಸವರಾಜ ಎಸ್. ಬಿಕ್ಕಣ್ಣವರ ಸರಳ, ಸಜ್ಜನಿಕೆಯ ವ್ಯಕ್ತಿ ಜನಾನುರಾಗಿಯಾಗಿದ್ದರು. ಬಿ.ಕಾಂ., ಪದವೀಧರರು, ವೃತ್ತಿಯಲ್ಲಿ ಕೃಷಿಕರಾಗಿದ್ದು, ಪ್ರವೃತ್ತಿಯಲ್ಲಿ, ಸಮಾಜ ಸೇವಕರು ಹಾಗೂ ರಾಜಕಾರಣಿಗಳಾಗಿದ್ದರು. ಬಸವರಾಜ ಸುಸಂಸ್ಕೃತ ಕುಟುಂಬ ಹಿನ್ನೆಲೆಯ ಇವರು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾಗಿದ್ದ … Continued

ಯುಪಿಎ- 2021 ಐಪಿಎಲ್‌ನಿಂದ ಹಿಂದೆ ಸರಿದ ಇಂಗ್ಲೆಂಡಿನ ಜಾನಿ ಬೈರ್‌ಸ್ಟೋ, ಡೇವಿಡ್ ಮಲಾನ್, ಕ್ರಿಸ್ ವೋಕ್ಸ್ : ವರದಿ

ನವದೆಹಲಿ; ಜಾನಿ ಬೈರ್‌ಸ್ಟೊ, ಕ್ರಿಸ್ ವೋಕ್ಸ್ ಮತ್ತು ಡೇವಿಡ್ ಮಲನ್ ಐಪಿಎಲ್ 2021 ರ 2 ನೇ ಹಂತದಿಂದ ಹಿಂದೆ ಸರಿದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಿದ 24 ಗಂಟೆಗಳ ನಂತರ ಈ ಸುದ್ದಿಯನ್ನು ವರದಿ ಮಾಡಲಾಗಿದೆ. ಮುಂಬರುವ ಎರಡನೇ ಹಂತದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ … Continued

ಕಲಬುರಗಿ ಪಾಲಿಕೆ ಅಧಿಕಾರ: ದೇವೇಗೌಡರ ಜೊತೆ ಖರ್ಗೆ ಮಾತುಕತೆ -ಡಿಕೆಶಿ

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಚಾರವಾಗಿ ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಜೆಡಿಎಸ್ ರಾಷ್ಟ್ರೀಯ ನಾಯಕರಾದ ದೇವೇಗೌಡರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಲಬುರಗಿ ವಿಚಾರವಾಗಿ ಜೆಡಿಎಸ್ ನಾಯಕರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಜತೆ ನೇರವಾಗಿ ಮಾತನಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, … Continued

ಕಲಬುರಗಿ ಪಾಲಿಕೆ ಅಧಿಕಾರ: ಜೆಡಿಎಸ್‌ ಜೊತೆ ಮೈತ್ರಿ ಹೊಣೆ ಸಿಎಂ ಬೊಮ್ಮಾಯಿ ಹೆಗಲಿಗೆ

ಬೆಂಗಳೂರು:ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಹೊಣೆಗಾರಿಕೆಯನ್ನು ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ನೀಡಿದೆ. ಜೆಡಿಎಸ್ ನಾಯಕರ ಜೊತೆ ಬೊಮ್ಮಾಯಿ ಉತ್ತಮ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ನೀವೇ ಮಾತುಕತೆ ನಡೆಸಿ ಎಂದು … Continued