ರೈತಪರ ಸಂಘಟನೆಗಳಿಂದ ಸೆಪ್ಟಂಬರ್ 27ಕ್ಕೆ ಕರ್ನಾಟಕ ಬಂದ್​

ಬೆಂಗಳೂರು,: ವಿವಿಧ ರೈತಪರ ಸಂಘಟನೆಗಳು ಮತ್ತು ಕಿಸಾನ್ ಮೋರ್ಚಾಗಳು ಜಂಟಿಯಾಗಿ ಸೆಪ್ಟಂಬರ್ 27ಕ್ಕೆ (ಸೋಮವಾರ) ಕರ್ನಾಟಕ ಬಂದ್​ಗೆ ಕರೆನೀಡಿವೆ. ಇದಕ್ಕೂ ಮೊದಲು ಸೆಪ್ಟಂಬರ್ 13ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ರೈತ ಸಂಘಗಳು ಹಮ್ಮಿಕೊಂಡಿವೆ. ಈ ಬಗ್ಗೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, “ಸೆಪ್ಟಂಬರ್ 27ಕ್ಕೆ ಕರ್ನಾಟಕ ಬಂದ್ ಮಾಡುವ ನಿರ್ಧಾರಕ್ಕೆ … Continued

ಮಲಯಾಳಂನ ಖ್ಯಾತ ಕಿರುತೆರೆ ನಟ ರಮೇಶ ವಲಿಯಾಸಾಳ ನಿಗೂಢ ಸಾವು

ತಿರುವನಂತಪುರಂ : ಮಳಯಾಳಂನ ಖ್ಯಾತ ಕಿರುತೆರೆ ನಟ ರಮೇಶ ವಲಿಯಾಸಾಳ ನಿಗೂಢವಾಗಿ ಸಾವಿಗೀಡಾಗಿದ್ದಾರೆ, ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಟನ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇರಳದ ಜನಪ್ರಿಯ ಕಿರುತೆರೆ ನಟನಾಗಿ ಗುರುತಿಸಿಕೊಂಡಿರುವ 54 ವರ್ಷದ ರಮೇಶ್‌ ವಲಿಯಾಸಾಳ ಧಾರಾವಾಹಿ ಮತ್ತು ಸಿನಿಮಾ ನಟರಾಗಿದ್ದ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದರು. ಆದರೆ ಇಂದು ಅವರ ಶವ ತಿರುವನಂತಪುರದ … Continued

​ಅಚ್ಚರಿಯ ರಾಜಕೀಯ ಬೆಳವಣಿಗೆ: ಗುಜರಾತ್‌ ಸಿಎಂ ಸ್ಥಾನಕ್ಕೆ ವಿಜಯ ರೂಪಾನಿ ದಿಢೀರ್‌ ರಾಜೀನಾಮೆ..!

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ಶನಿವಾರ ಮಧ್ಯಾಹ್ನ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದಕ್ಕೆ ಮುನ್ನ ಅನಿರೀಕ್ಷಿತ ಕ್ರಮದಲ್ಲಿ ವಿಜಯ್ ರೂಪಾನಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರೂಪಾನಿಯವರ ರಾಜೀನಾಮೆಗೆ ಏನು ಕಾರಣ … Continued

ನಾಸಾದ ರೋವರ್ ಸಂಗ್ರಹಿಸಿದ ಕಲ್ಲುಗಳಿಂದ ಮಂಗಳ ಗ್ರಹದಲ್ಲಿ ಹೆಚ್ಚಿದ ಪುರಾತನ ಜೀವಿತದ ಸಾಧ್ಯತೆ..!

ವಾಷಿಂಗ್ಟನ್: ನಾಸಾದ ಪರ್ಸರ್ವೆನ್ಸ್‌ ಮಂಗಳಯಾನ (Perseverance Mars rove) ವು ಈಗ ಎರಡು ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳಲ್ಲಿರುವ ದೀರ್ಘಾವಧಿಯವರೆಗೆ ನೀರಿನ ಸಂಪರ್ಕದಲ್ಲಿದ್ದ ಚಿಹ್ನೆಗಳು ಕೆಂಪು ಗ್ರಹದಲ್ಲಿ ಪುರಾತನ ಜೀವಿತಾವಧಿ ಸಾಧ್ಯತೆಯನ್ನು ಹೆಚ್ಚಿಸಿದೆ. ನಮ್ಮ ಮೊದಲ ಬಂಡೆಗಳು ವಾಸಯೋಗ್ಯವಾದ ಸುಸ್ಥಿರ ವಾತಾವರಣವನ್ನು ಬಹಿರಂಗಪಡಿಸುವಂತೆ ತೋರುತ್ತಿದೆ. ನೀರು ಬಹಳ ಸಮಯ ಇರುವುದು ದೊಡ್ಡ ವಿಷಯ.” ಎಂದು ಮಿಷನ್ … Continued

ತಾಲಿಬಾನಿಗೆ ಮೊದಲ ಶಾಕ್‌..:9/11 ದಿನದ ಅಧಿಕಾರ ಪದಗ್ರಹಣ ಸಮಾರಂಭಕ್ಕೆ ಬರಲು ಆಹ್ವಾನಿತರ ನಕಾರ; ಕಾರ್ಯಕ್ರಮ ದಿಢೀರ್‌ ಮುಂದಕ್ಕೆ..!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ತಾಲಿಬಾನ್ ಸೆ.11ರ ಶನಿವಾರ ನಡೆಯಬೇಕಿದ್ದ ಅಧಿಕಾರ ಸ್ವೀಕಾರ ಸಮಾರಂಭವನ್ನು ದಿಢೀರ್‌ ಮುಂದೂಡಿದೆ. ಇದೇ ವೇಳೆ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದ ಹೆಸರು ಬದಲಿಸಿದ ತಾಲಿಬಾನ್ ಆಡಳಿತ ಅದನ್ನು ಕಾಬೂಲ್ ಇಂಟರ್‌ನ್ಯಾಷನಲ್ ಏರ್ಪೋರ್ಟ್ ಎಂದು ಘೋಷಿಸಿದೆ. ಸೆ.೧೧ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ತಾಲಿಬಾನ್‌ … Continued

46 ವರ್ಷಗಳಲ್ಲೇ ದೆಹಲಿಯಲ್ಲಿ ಅತಿ ಹೆಚ್ಚು ಮಳೆ..ಈಜುಕೊಳವಾಗಿ ಮಾರ್ಪಟ್ಟ ದೆಹಲಿ ವಿಮಾನ ನಿಲ್ದಾಣ

ನವದೆಹಲಿ: ಶನಿವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾದ ನಂತರ, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮುಂಭಾಗ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಾಕ್ಷಿಯಾಯಿತು. ಅಧಿಕಾರಿಗಳ ಪ್ರಕಾರ, ಈಗ ನೀರನ್ನು ಹೊರಹಾಕಲಾಗಿದೆ ಮತ್ತು ಎಲ್ಲವೂ ಸ್ಪಷ್ಟವಾಗಿದೆ. ಒಂದು ಟ್ವೀಟ್ ನಲ್ಲಿ ದೆಹಲಿ ವಿಮಾನ ನಿಲ್ದಾಣವು, “ಹಠಾತ್ ಭಾರೀ ಮಳೆಯಿಂದಾಗಿ, ಸ್ವಲ್ಪ ಸಮಯದವರೆಗೆ, ವಿಮಾನ … Continued

ಕರ್ನಾಟಕದಲ್ಲಿ ಸೆಪ್ಟೆಂಬರ್ 15ರ ವರೆಗೂ ಮಳೆ ಜೋರು: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ 15ರ ವರೆಗೂ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಹೆಚ್ಚು ಮಳೆಯಾಗಲಿದ್ದು,ಈ ಏಳು … Continued

ಮುಂಬೈನಲ್ಲೊಂದು ನಿರ್ಭಯಾ ಪ್ರಕರಣ: 33 ಗಂಟೆಗಳ ಹೋರಾಟದ ನಂತರ ಮೃತಪಟ್ಟ ಅತ್ಯಾಚಾರ ಸಂತ್ರಸ್ತೆ

ಮುಂಬೈ: ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ 32 ವರ್ಷದ ಮಹಿಳೆ ನಗರದ ಆಸ್ಪತ್ರೆಯಲ್ಲಿ 33 ಗಂಟೆಗಳ ಸುದೀರ್ಘ ಹೋರಾಟದ ನಂತರ ಮೃತಪಟ್ಟಿದ್ದಾರೆ. ಈಗ ಮೃತಪಟ್ಟ ಮಹಿಳೆ ಶುಕ್ರವಾರ ಮಧ್ಯರಾತ್ರಿ ಸಾಕಿನಾಕಾದಲ್ಲಿ ನಿಂತಿದ್ದ ಟೆಂಪೋವೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ ನಂತರ ಕ್ರೂರವಾಗಿ ಹಲ್ಲೆಗೊಳಗಾದಳು. ಬೆಳಗಿನ ಜಾವ 3: 30 ರ ಸುಮಾರಿಗೆ ಆಕೆ ಟೆಂಪೋದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಸಾಕಿನಾಕಾ … Continued

ರಸ್ತೆ ಅಪಘಾತ: ಚಿರಂಜೀವಿ ಸೋದರಳಿಯ, ಟಾಲಿವುಡ್ ನಟ ಸಾಯಿ ಧರಮ್ ತೇಜಗೆ ಗಂಭೀರ ಗಾಯ

ಹೈದರಾಬಾದ್: ಟಾಲಿವುಡ್ ನಟ, ಮೆಗಾಸ್ಟಾರ್ ಚಿರಂಜೀವಿ ಸೋದರಳಿಯ ಸಾಯಿ ಧರಮ್ ತೇಜ್ ರಸ್ತೆ ಅಪಘಾತದಲಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಯಿ ಧರಮ್ ತೇಜ್ ಎದೆ, ಹೊಟ್ಟೆ, ಬಲಗಣ್ಣು ಭಾಗಕ್ಕೆ ತೀವ್ರವಾದ ಪೆಟ್ಟಾಗಿದ್ದು, ಐಸಿಯುಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ನಡುವೆ ಆಸ್ಪತ್ರೆಗೆ ಭೇಟಿ ನೀಡಿರುವ ನಟ ಪವನ್ ಕಲ್ಯಾಣ್, … Continued

ಭಾರತದಲ್ಲಿ 33,376 ಹೊಸ ಕೋವಿಡ್ -19 ಪ್ರಕರಣ ದಾಖಲು

ನವದೆಹಲಿ: ಭಾರತವು ಶನಿವಾರ 24 ಗಂಟೆಗಳಲ್ಲಿ 33,376 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಇದು ಶುಕ್ರವಾರ ದಾಖಲಾದ ದೈನಂದಿನ ಪ್ರಕರಣಗಳ ಸಂಖ್ಯೆಗಿಂತ ಶೇ.4.6 ಕಡಿಮೆಯಾಗಿದೆ. ದೇಶದಲ್ಲಿ ಪ್ರಸ್ತುತ 3,91,516 ಸಕ್ರಿಯ ಪ್ರಕರಣಗಳಿವೆ, ಇದು ಹಿಂದಿನ ದಿನಕ್ಕಿಂತ 870 ಹೆಚ್ಚಾಗಿದೆ. ಹೆಚ್ಚುವರಿಯಾಗಿ, ಭಾರತವು ಶನಿವಾರದ 24 ಗಂಟೆಗಳಲ್ಲಿ 308 ಕೋವಿಡ್ -19 ಸಾವುಗಳನ್ನು ವರದಿ ಮಾಡಿದೆ, … Continued