ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿಯ ಅರ್ಪಿತಾ ಘೋಷ್

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಅರ್ಪಿತಾ ಘೋಷ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ. ಬುಧವಾರದ ಅಧಿಸೂಚನೆಯಲ್ಲಿ, ರಾಜ್ಯಸಭಾ ಕಾರ್ಯಾಲಯವು ಉಪರಾಷ್ಟ್ರಪತಿ ನಾಯ್ಡು ಅವರು ಟಿಎಂಸಿ ಸಂಸದೆ ಅರ್ಪಿತಾ ಘೋಷ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ದೃಢಪಡಿಸಿದ್ದಾರೆ. ಅರ್ಪಿತಾ ಘೋಷ್ (55) ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ … Continued

ಗೋಮಾಳ ವಿವಾದ: ರಾಮಚಂದ್ರಾಪುರ ಮಠದ ವಾದ ಎತ್ತಿ ಹಿಡಿದ ಹೈಕೋರ್ಟ್‌,ಎಸಿಎಫ್‌ ಆದೇಶ ವಜಾ

posted in: ರಾಜ್ಯ | 0

ಬೆಂಗಳೂರು: ಅರಣ್ಯ ಇಲಾಖೆ ಮತ್ತು ರಾಮಚಂದ್ರಾಪುರ ಮಠದ ನಡುವೆ ಭೂ ವಿವಾದಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ನೀಡಿದೆ. ಅರವತ್ತು ಎಕರೆ ಭೂಪ್ರದೇಶವನ್ನು ಮೀಸಲು ಅರಣ್ಯ ಎಂದು ಆದೇಶಿಸಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಅವರ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬದಿಗೆ ಸರಿಸಿದೆ ಎಂದು ಬಾರ್‌ ಎಂಡ್‌ ಬೆಂಚ್‌ … Continued

ಕುಮಟಾ: ಬೀಚಿನಲ್ಲಿ ಪದ್ಮಾಸನದಲ್ಲಿ ಕುಳಿತ ಶಿರಸಿ ವ್ಯಕ್ತಿ ಸಮುದ್ರ ಪಾಲು

posted in: ರಾಜ್ಯ | 0

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳಿಯ ಅರಬ್ಬಿ ಸಮುದ್ರ ತೀರದಲ್ಲಿ ಶಿರಸಿಯ ವ್ಯಕ್ತಿಯೊಬ್ಬರು ಸಮುದ್ರ ಪಾಲಾಗಿದ್ದಾರೆ. ಶಿರಸಿಯ ವಕೀಲ ವೃತ್ತಿಯ  ಸುಬ್ರಹ್ಮಣ್ಯ ಗೌಡ (39) ಎಂಬವರು ವನ್ನಳ್ಳಿಯ ಸಮುದ್ರ ತೀರದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಬಲವಾದ ತೆರೆಯೊಂದು ಬಡಿದು ಸಮುದ್ರ ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಪ್ರವಾಸಕ್ಕಾಗಿ ಕುಮಟಾದ ಬೀಚಿಗೆ ಬಂದಿದ್ದರು. ಇವರು ತಪಸ್ಸಿಗೆ … Continued

ಟೈಮ್ ನಿಯತಕಾಲಿಕ 100 ಪ್ರಭಾವಿ ವ್ಯಕ್ತಿಗಳ’ ವಾರ್ಷಿಕ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ,ಆದರ್‌ ಪೂನಾವಾಲ್ಲಾ

ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಆದರ್ ಪೂನವಲ್ಲಾ ಅವರು ಟೈಮ್ ನಿಯತಕಾಲಿಕೆಯ 2021 ರ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೈಮ್ ನಿಯತಕಾಲಿಕವು ತನ್ನ ವಾರ್ಷಿಕ ಜಾಗತಿಕ ಪಟ್ಟಿಯಾದ 100 ಪ್ರಭಾವಶಾಲಿ ಜನರು'(The 100 Most Influential People’) ಎಂಬ … Continued

ಹುಬ್ಬಳ್ಳಿಯಿಂದ ಜೋಗ ಫಾಲ್ಸ್ ಗೆ ಪ್ಯಾಕೇಜ ಟೂರ್ ಬಸ್ ಮತ್ತೆ ಆರಂಭ

posted in: ರಾಜ್ಯ | 0

ಹುಬ್ಬಳ್ಳಿ: ಪ್ರವಾಸಿಗರಿಗೆ ಕಡ್ಡಾಯ ಕೋವಿಡ್ ನೆಗೆಟಿವ್ ವರದಿಯ ನಿರ್ಬಂಧ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತದ ವೀಕ್ಷಣೆಗೆ ವಾರಾಂತ್ಯದ ದಿನಗಳಂದು ವಿಶೇಷ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಪ್ರವಾಸಿಗರ ಅನುಕೂಲಕ್ಕಾಗಿ ವಾಯವ್ಯ … Continued

ಕರ್ನಾಟಕದಲ್ಲಿ ಕೊರೊನಾ ಹೊಸ ಸೋಂಕು ನಿನ್ನೆಗಿಂತ ದುಪ್ಪಟ್ಟು..!

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಇಳಿಕೆಯಾಗಿದ್ದ ಕೋರೊನಾ ಸೋಂಕು ಸಂಖ್ಯೆ ಇಂದು (ಬುಧವಾರ) ನಿನ್ನೆಗಿಂತ ದುಪ್ಪಟ್ಟಾಗಿದೆ. ಆದರೆ ಕೊರೊನಾ ಸೋಂಕಿನ ಸಾವಿನ ಸಂಖ್ಯೆ ಇಳಿಮುಖವಾಗಿದೆಎಂದು ಆರೋಗ್ಯ ಮತ್ತು ‌ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 1116 ಮಂದಿಗೆ ಸೋಂಕು ದೃಢಪಟ್ಟಿದ್ದು, 8 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 970 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ರಾಜ್ಯದಲ್ಲಿ … Continued

ಕೋವಿಡ್ ಸಕ್ರಿಯ ಪ್ರಕರಣ: ಮೊದಲ ಬಾರಿಗೆ 4ನೇ ಸ್ಥಾನಕ್ಕೆ ಕುಸಿದ ಕರ್ನಾಟಕ

posted in: ರಾಜ್ಯ | 0

ನವದೆಹಲಿ: ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದ ಕರ್ನಾಟಕದಲ್ಲಿ ಈಗ ಸುಧಾರಣೆ ಕಂಡು ಬಂದಿದೆ. ಸಕ್ರಿಯ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ 4ನೇ ಸ್ಥಾನಕ್ಕೆ ಕುಸಿದಿದೆ. 4ನೇ ಸ್ಥಾನದಲ್ಲಿದ್ದ ತಮಿಳುನಾಡು ಇದೀಗ ಮೂರನೇ ಸ್ಥಾನಕ್ಕೆ ಏರಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಹೊಸ ಸೋಂಕು ಪ್ರಕರಣಗಳು ಕಡಿಮೆಯಾಗಿರುತ್ತಿರುವುದರಿಂದ 3ರಿಂದ … Continued

ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‍: ಫೀಲ್ಡಿಂಗ್ ಮಾಡಿದ ನಾಯಿಗೆ ಐಸಿಸಿ ಪುರಸ್ಕಾರ..! ವಿಡಿಯೋ ವೀಕ್ಷಿಸಿ

ದುಬೈ: ಕ್ರಿಕೆಟ್ ಅಂಗಳದಲ್ಲಿ ಆಟಗಾರರ ವಿಶೇಷ ಸಾಧನೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪುರಸ್ಕಾರ ನೀಡುವುದು ಗೊತ್ತಿದೆ. ಆದರೆ ಐಸಿಸಿ ಈಗ ಕ್ರಿಕೆಟ್ ಆಟದ ವೇಳೆ ಫೀಲ್ಡಿಂಗ್ ಮಾಡಿದ ಶ್ವಾನವೊಂದಕ್ಕೆ ವಿಶೇಷವಾಗಿ ಡಾಗ್ ಆಫ್ ದಿ ಮಂತ್ ಎಂಬ ಬಿರುದು ನೀಡಿದೆ..! ಕ್ರಿಕೆಟ್ ನಡೆಯುತ್ತಿರುವಾಗ ಅಭಿಮಾನಿಗಳು ಕ್ರಿಕೆಟ್ ಅಂಗಳಕ್ಕೆ ಲಗ್ಗೆ ಇಡುವುದನ್ನು ನೋಡಿದ್ದೇವೆ. ಆದರೆ ಉತ್ತರ ಐರ್ಲೆಂಡಿನ … Continued

ಏರ್ ಇಂಡಿಯಾ ಮಾರಾಟ: ಟಾಟಾಸ್, ಸ್ಪೈಸ್ ಜೆಟ್ ಸಂಸ್ಥಾಪಕ ಅಜಯ್ ಸಿಂಗ್ ಹಣಕಾಸು ಬಿಡ್ ಸಲ್ಲಿಕೆ: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ

ನವದೆಹಲಿ: ಟಾಟಾ ಗ್ರೂಪ್ (Tata Group), ಸ್ಪೈಸ್ ಜೆಟ್ (SpiceJet) ಪ್ರಮೋಟರ್ ಅಜಯ್ ಸಿಂಗ್ ಸೇರಿದಂತೆ ಅನೇಕ ಇತರ ಬಿಡ್ಡರುಗಳು ಸಾಲದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಖರೀದಿಗೆ ತಮ್ಮ ಹಣಕಾಸಿನ ಬಿಡ್ ಅನ್ನು ಬುಧವಾರ ಸಲ್ಲಿಸಿದ್ದಾರೆ ಎಂದು ಕಂಪನಿಯ ವಕ್ತಾರರು ದೃಢಪಡಿಸಿದ್ದಾರೆ. ಟ್ವೀಟ್ ನಲ್ಲಿ, ಹೂಡಿಕೆ ಮತ್ತು … Continued

ಆಟೋ, ಡ್ರೋನ್ ವಲಯಗಳಿಗೆ 5 ವರ್ಷಗಳ ವರೆಗೆ 26,058 ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು (ಬುಧವಾರ) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ 26,058 ಕೋಟಿ ರೂ.ಗಳ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಅನುಮೋದಿಸಲಾಗಿದೆ. ಡ್ರೋನ್ ಉದ್ಯಮಕ್ಕಾಗಿ 120 ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಅಶ್ವಿನಿ … Continued