ಎಸ್‌ಸಿಒ ಶೃಂಗಸಭೆಯಲ್ಲಿ ಮಧ್ಯ ಏಷ್ಯಾ ಸಂಪರ್ಕಿಸುವ ಚಬಹಾರ್ ಬಂದರು, ಅಫ್ಘಾನಿಸ್ತಾನ ವಿದ್ಯಮಾನ ಪ್ರಸ್ತಾಪ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಷಣ ಮಾಡಿದಾಗ ಭಾರತ ಅಭಿವೃದ್ಧಿ ಪಡಿಸಿದ ಇರಾನಿನ ಬಂದರು ಚಬಹಾರ್‌ ಬಂದರಿನ ವಿಷಯ ಪ್ರಸ್ತಾಪಿಸಿದ್ದಾರೆ. ಚಬಹಾರ್ ಬಂದರಿನ ಅಭಿವೃದ್ಧಿಯು ಪಾಕಿಸ್ತಾನವು ಭೂ ಮಾರ್ಗದ ಮೂಲಕ ಸರಬರಾಜು ಸಾಗಣೆಗೆ ಅಡ್ಡಿಪಡಿಸಲು ಆರಂಭಿಸಿದ ನಂತರ ಅಫ್ಘಾನಿಸ್ತಾನಕ್ಕೆ ಪರ್ಯಾಯ ಪ್ರವೇಶ ಮಾರ್ಗವನ್ನು ರಚಿಸುವ ಭಾರತದ ಉಪಕ್ರಮದ … Continued

ಪ್ರಧಾನಿ ಮೋದಿ 71ನೇ ಜನ್ಮದಿನ: ಕಾರವಾರದ ಕಡಲತೀರದ ಮರಳಿನಲ್ಲಿ ಮೂಡಿದ ಕಲಾಕೃತಿ

ಕಾರವಾರ : ನರೇಂದ್ರ ಮೋದಿಯವರ 71 ನೇ ಜನ್ಮದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ, ಮರಳಿನಲ್ಲಿ ಮೋದಿ ಕಲಾಕೃತಿ ಮೂಡಿಬಂದಿದೆ. ಮೋದಿಯವರ ಅಭಿಮಾನಿ ವಿಷ್ಟು ಎಂಬವರು ಮೋದಿಯವರ ಮರಳಿನ ಕಲಾಕೃತಿ ರಚಿಸಿ ವಿಶಿಷ್ಟವಾಗಿ ಮೋದಿ ಜನ್ಮದಿನವನ್ನು ಆವರಿಸಿದರು. ಅಂಕೋಲದ ವಿಷ್ಟು ಅವರ ಜೊತೆಗೆ ಮೂರು ಜನ ಕಲಾವಿದರು ಆರು ತಾಸುಗಳ … Continued

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ಇದು ಸೂಕ್ತ ಸಮಯವಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವೆ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಗೆ ಸೇರಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ಇದು ಸರಿಯಾದ ಸಮಯವಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ … Continued

ಪರಿಷತ್‌ ಸದಸ್ಯರಿಗೆ ಅವಧಿ ಮೀರಿದ ಮಾಸ್ಕ್ ವಿತರಣೆ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಭಾಪತಿ ಹೊರಟ್ಟಿ ಸೂಚನೆ

ಬೆಂಗಳೂರು: ಅವಧಿ ಮೀರಿದ ಮಾಸ್ಕ್ ವಿತರಿಸಿದ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜಹೊರಟ್ಟಿ ಸರ್ಕಾರಕ್ಕೆ ವಿಧಾನಪರಿಷತ್‌ನಲ್ಲಿ ಇಮದು (ಶುಕ್ರವಾರ) ಸೂಚಿಸಿದ್ದಾರೆ. ಒಂದು ವರ್ಷದ ಅವಧಿ ಮೀರಿದ ಮಾಸ್ಕ್‌ಗೆ ಎರಡು ವರ್ಷದ ಸ್ಟಿಕರ್ ಅಂಟಿಸಿ ನೀಡಿರುವ ಸಂಬಂಧ ಆರೋಗ್ಯ ಇಲಾಖೆಯ ಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಬೇಕು. ಹಾಗೂ … Continued

ಒಂದೇ ಕುಟುಂಬದ ಐವರು ಆತ್ಮಹತ್ಯೆ : ಮೃತದೇಹಗಳ ಮುಂದೆಯೇ 5 ದಿನಗಳಿಂದ ಹಸಿದು ಕುಳಿತಿದ್ದ 3 ವರ್ಷದ ಮಗು

ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯನ್ನು ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದಿಂದ ಮನೆಯಲ್ಲಿರುವ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ. ಐವರು ನೇಣು ಬಿಗಿದ ಸ್ಥಿತಿಯಲ್ಲಿದ್ದು, ಇದು ಐದು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್​ ಮೂರು ವರ್ಷದ … Continued

ಕುಮಟಾ : ಹೊಲನಗದ್ದೆ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆ..!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ಸುಮಾರು 3 ಮೀಟರುಗಳಷ್ಟು ಉದ್ದವಿರುವ ಡಾಲ್ಫಿನ್ ಯಾವಕಾರಣದಿಂದ ಮೃತಪಟ್ಟಿದೆ ಎನ್ನುವುದು ತಿಳಿದು ಬಂದಿಲ್ಲ. ಇದು ಗಂಡು ಡಾಲ್ಪಿನ್ ಆಗಿದ್ದು ಕಳೇಬರದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಾಯದ ಗುರುತು ಕಂಡು ಬರುತ್ತಿಲ್ಲ. ಮೀನುಗಾರರು ಇದನ್ನು ಹಂದಿ … Continued

ಪ್ರಧಾನಿ ಮೋದಿ ಜನ್ಮದಿನದಂದು 2.5 ಕೋಟಿ ಕೋವಿಡ್ -19 ಲಸಿಕೆ ಡೋಸ್‌ ನೀಡಿ ಹೊಸ ದಾಖಲೆ ಬರೆದ ಭಾರತ…!

ನವದೆಹಲಿ; ಭಾರತವು ಶುಕ್ರವಾರ  2.5 ಕೋಟಿ ಕೋವಿಡ್ -19 ಲಸಿಕೆ ಪ್ರಮಾಣ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಹೊಸ ದಾಖಲೆಯನ್ನು ನಿರ್ಮಿಸಿದೆ. ಒಂದೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ಡೋಸುಗಳನ್ನು ನೀಡುತ್ತಿರುವುದು ಇ ಬೃಹತ್‌ ಲಸಿಕೆ ಅಭಿಯಾನದಲ್ಲಿ 2.5 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಪ್ರಮಾಣಗಳು, 20 ದಿನಗಳ ಮೆಗಾ ಔಟ್ರೀಚ್ … Continued

ಕುಮಟಾ: ಬೈಕ್ ಅಪಘಾತದಲ್ಲಿ ಪಿಡಿಒ ಸಾವು

ಕುಮಟಾ : ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಗ್ರಾಮ ಪಂಚಾಯತ ಪಿ‌ಡಿಒ ಒಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ  ದುಂಡಕುಳಿ ಸಮೀಪ ನಡೆದಿದೆ ಎಂದು ವರದಿಯಾಗಿದೆ. ಹೊನ್ನಾವರ ತಾಲೂಕಿನ ಇಡಗುಂಜಿ ಗ್ರಾಮ ಪಂಚಾಯತ್ ಪಿಡಿಒ ಪ್ರಶಾಂತ ಕೃಷ್ಣ ಶೆಟ್ಟಿ ಎಂಬವರೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ನಡೆಯಲಿದ್ದ ಕಂಪ್ಯೂಟರ್ … Continued

ಯಲ್ಲಾಪುರ: ತುಡುಗುಣಿಯಲ್ಲಿ ಚಾಕುವಿನಿಂದ ಇರಿದು ಮಹಿಳೆ ಕೊಲೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ತುಡುಗುಣಿಯಲ್ಲಿ ಮಹಿಳೆಯೊಬ್ಬಳನ್ನು ಗುರುವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕೊಲೆಯಾದವರನ್ನು ಸರೋಜಾ ಅಶೋಕ ನಾಯರ್ (೪೫) ಎಂದು ಗುರುತಿಸಲಾಗಿದೆ. ಶಿರಸಿ ಕೆರೆಕೊಪ್ಪದ ಹಾಲಿ ಗೋವಾ ಮಾಪ್ಸಾದ ನಿವಾಸಿ ಕೃಷ್ಣ  ನಾಯ್ಕ (೪೬) ಕೊಲೆಗೈದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸರೋಜಾ ನಾಯರ್ ಅಂಗನವಾಡಿ … Continued

ಓಲಾ ಇಲೆಕ್ಟ್ರಿಕ್‌ ಸ್ಕೂಟರ್‌ : ಮಾರಾಟ ಆರಂಭವಾದ 2 ದಿನದಲ್ಲಿ 1100 ಕೋಟಿ ವ್ಯವಹಾರ..!

ನವದೆಹಲಿ : ಓಲಾ ಎಲೆಕ್ಟ್ರಿಕ್ ಸ್ಕೂಟರ್ (OLA Electric Scooter Booking) ಎಸ್ 1 ಮತ್ತು ಓಲಾ ಎಸ್ 1 ಪ್ರೊ ಮಾರಾಟದ ಬುಕ್ಕಿಂಗ್‌ ಸೆಪ್ಟೆಂಬರ್ 15 ರಂದು ಆರಂಭವಾಗಿದ್ದು, ಎರಡು ದಿನಗಳಲ್ಲಿ ಮಾರಾಟದಲ್ಲಿ 1100 ಕೋಟಿ ರೂಪಾಯಿಗಳ ವ್ಯವಹಾರ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಮೊದಲ ದಿನ, ಓಲಾ 600 ರೂ.ಗಳಷ್ಟು ಮಾರಾಟ ವಹಿವಾಟು … Continued