ಪಶ್ಚಿಮ ಬಂಗಾಳದ ಅಧ್ಯಕ್ಷರಾಗಿ ಸುಕಾಂತ ಮಜುಂದಾರ್, ರಾಷ್ಟ್ರೀಯ ಉಪಾಧ್ಯಕ್ಷರಾಗಿ ದಿಲೀಪ್‌ ಘೋಷ ನೇಮಕ ಮಾಡಿದ ಬಿಜೆಪಿ

ನವದೆಹಲಿ: ಭಾರತೀಯ ಜನತಾ ಪಕ್ಷ ಸೋಮವಾರ ಸುಕಾಂತ ಮಜುಂದಾರ್ ಅವರನ್ನು ಪಶ್ಚಿಮ ಬಂಗಾಳ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಿಸಿದ್ದು, ದಿಲೀಪ್ ಘೋಷ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ನೇಮಕವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಡಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ. ನೇಮಕಾತಿಯ ನಂತರ, ದಿಲೀಪ್ ಘೋಷ್ ಅವರು ಸುಕಾಂತ ಮಜುಮ್ದಾರ್ ಅವರನ್ನು … Continued

ಇದೇ 24ರಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ – ಪ್ರಧಾನಿ ಮೋದಿ ಭೇಟಿ

ವಾಷಿಂಗ್ಟನ್:ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ 24 ರಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿ ಮಾಡಲಿದ್ದಾರೆ. ಸಭೆಯಲ್ಲಿ, ಉಭಯ ದೇಶಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಲಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗಿನ ಸಭೆಗೆ ಮುನ್ನ ಪ್ರಧಾನಿ ಮೋದಿ ಶ್ವೇತ … Continued

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್‌..!: ನ್ಯೂಜಿಲ್ಯಾಂಡ್‌ ನಂತರ ಪಾಕಿಸ್ತಾನ ಪ್ರವಾಸ ರದ್ದು ಮಾಡಿದ ಇಂಗ್ಲೆಂಡ್‌ ಕ್ರಿಕೆಟ್‌ ತಂಡ: ..!

ನವದೆಹಲಿ: ಆಟಗಾರರು ಮತ್ತು ಸಿಬ್ಬಂದಿ ಯೋಗಕ್ಷೇಮ” ಉಲ್ಲೇಖಿಸಿ ಇಂಗ್ಲೆಂಡ್ ಅಕ್ಟೋಬರ್‌ನಲ್ಲಿ ಪಾಕಿಸ್ತಾನದಲ್ಲಿ ನಿಗದಿಪಡಿಸಿದ್ದ ಪುರುಷರು ಮತ್ತು ಮಹಿಳೆಯರ ಕ್ರಿಕೆಟ್‌ ಪ್ರವಾಸದಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಅವರ ಕ್ರಿಕೆಟ್ ಮಂಡಳಿ ಸೋಮವಾರ ದೃಢಪಡಿಸಿದೆ. ಭದ್ರತಾ ಕಾಳಜಿಯಿಂದಾಗಿ ಶುಕ್ರವಾರ ಕೊನೆಯ ನಿಮಿಷದಲ್ಲಿ ನ್ಯೂಜಿಲ್ಯಾಂಡ್ ತಮ್ಮ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದದ್ದು ಪಾಕಿಸ್ತಾನಕ್ಕೆ ಭಾರೀ ಮುಖಭಂಗಕ್ಕೆ ಕಾರಣವಾಗಿದೆ. … Continued

ಗೂಂಡಾ ಕಾಯಿದೆ: ಸರ್ಕಾರದ ಆದೇಶ ವಜಾ ಮಾಡಿದ ಹೈಕೋರ್ಟ್‌; ಅರ್ಜಿದಾರರಿಗೆ‌ ತಿಂಗಳೊಳಗೆ 25 ಸಾವಿರ ರೂ. ಪರಿಹಾರಕ್ಕೆ ನಿರ್ದೇಶನ

ಬೆಂಗಳೂರು: ಆರೋಪಿಯ ಮನವಿ ಪರಿಗಣಿಸದೇ ಕಾನೂನುಬಾಹಿರವಾಗಿ ಅರ್ಜಿದಾರರನ್ನು ಕರ್ನಾಟಕದಲ್ಲಿ ವಸ್ತುಗಳ ಕಾನೂನುಬಾಹಿರ ಮಾರಾಟ, ಮಾದಕ ವಸ್ತುಗಳ ಕಾನೂನುಬಾಹಿರ ಮಾರಾಟ, ಜೂಜುಕೋರರು, ಗೂಂಡಾಗಳು (ಅನೈತಿಕ ಟ್ರಾಫಿಕ್‌ ಅಫೆಂಡರ್ಸ್‌, ಕೊಳಚೆ ಪ್ರದೇಶಗಳ ಲೂಟಿಕೋರರು ಮತ್ತು ವಿಡಿಯೊ ಅಥವಾ ಆಡಿಯೊ ಖದೀಮರು) ನಿಯಂತ್ರಣ ಕಾಯಿದೆ 1985ರ ಅಡಿ ಮುಂಜಾಗ್ರತೆಯಿಂದ ವಶಕ್ಕೆ ಪಡೆದಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ … Continued

ಕರ್ನಾಟಕದಲ್ಲಿ ಸೋಮವಾರ 677 ಹೊಸ ಕೊರೊನಾ ಸೋಂಕು ಪತ್ತೆ, 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿ

ಬೆಂಗಳೂರು: ರಾಜ್ಯದಲ್ಲಿ ಕೋರೊನಾ ಸೋಂಕು ಸಂಖ್ಯೆ ಇಳಿಕೆಯಾಗಿದ್ದು ಆದರೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು (ಸೋಮವಾರ) ಹೊಸದಾಗಿ 677 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 24 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 1,678 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,68,543 ಕ್ಕೆ ಏರಿಕೆಯಾಗಿದೆ ಜೊತೆಗೆ … Continued

107 ವರ್ಷದ ಜಪಾನಿನ ಇಬ್ಬರು ಸಹೋದರಿಯರು ವಿಶ್ವದ ಅತ್ಯಂತ ಹಿರಿಯ ಅವಳಿ: ಗಿನ್ನೆಸ್ ದಾಖಲೆಗೆ ಸೇರ್ಪಡೆ

ಟೋಕಿಯೊ: ಜಪಾನಿನ ಇಬ್ಬರು ಸಹೋದರಿಯರನ್ನು 107 ವರ್ಷ ಮತ್ತು 330 ದಿನ ವಯಸ್ಸಿನ ವಿಶ್ವದ ಅತ್ಯಂತ ಹಿರಿಯ ಅವಳಿ ಎಂದು ಗಿನ್ನೆಸ್ ದಾಖಲೆ ಮಾಡಿದೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ. ಉಮೆನೊ ಸುಮಿಯಮಾ ಮತ್ತು ಕೌಮೆ ಕೊಡಮಾ (ಜಪಾನ್) ಈ ದಾಖಲೆ ಬರೆದ ಅವಳಿ ಸಹೋದರಿಯರು ಅವಳಿ ಎಂದು ದೃಢಪಡಿಸಲಾಗಿದೆ. ಸಹೋದರಿಯರಾದ ಉಮೆನೊ ಸುಮಿಯಮಾ ಮತ್ತು … Continued

ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಪ್ರಯಾಗರಾಜ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ನವದೆಹಲಿ: ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿರುವ ಬಘಂಬರಿ ಮಠದಲ್ಲಿ ಮಹಂತ್ ನರೇಂದ್ರ ಗಿರಿ ಅವರ ಶವ ಪತ್ತೆಯಾಗಿದೆ. ಆರಂಭಿಕ ವರದಿಗಳ ಪ್ರಕಾರ, ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ, ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿದೆ ಮತ್ತು ಅದನ್ನು ಮುರಿಯಬೇಕಾಯಿತು. … Continued

ಕಾಲ ಎಲ್ಲದ್ದಕ್ಕೂ ಉತ್ತರ ನೀಡಲಿದೆ”: ಐಟಿ ದಾಳಿಗೆ ಮೌನ ಮುರಿದ ಬಾಲಿವುಡ್‌ ನಟ ಸೋನು ಸೂದ್

ಮುಂಬೈ : ತಮ್ಮ ಮನೆ ಹಾಗೂ ಕಚೇರಿ ಮೇಲೆ ತೆರಿಗೆ ಇಲಾಖೆಯಿಂದ ನಡೆದ ದಾಳಿ ಬಗ್ಗೆ ನಟ ಸೋನು ಸೂದ್ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧದ ತೆರಿಗೆ ವಂಚನೆಯ ಆರೋಪಕ್ಕೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾಲ್ಕು ದಿನಗಳ ಕಾಲ ಸೋನು ಸೂದ್‌ ಅವರಿಗೆ ಸೇರಿದ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ … Continued

ಅಶ್ಲೀಲ ವಿಡಿಯೋ ಪ್ರಕರಣ: ಬಂಧನವಾದ ಎರಡು ತಿಂಗಳ ನಂತರ ಮುಂಬೈ ಕೋರ್ಟಿನಿಂದ ರಾಜ್ ಕುಂದ್ರಾಗೆ ಜಾಮೀನು

ಮುಂಬೈ: ಅಶ್ಲೀಲ ವಿಷಯ ಪ್ರಕರಣದಲ್ಲಿ ಮುಂಬೈ ಕೋರ್ಟ್ ಸೋಮವಾರ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಜಾಮೀನು ನೀಡಿದೆ. ಕುಂದ್ರಾ ಅವರಿಗೆ 50,000 ರೂ.ಗಳ ಶ್ಯೂರಿಟಿ ನೀಡುವಂತೆ ಸೂಚಿಸಲಾಗಿದೆ. ರಾಜ್ ಕುಂದ್ರಾ ಸಂಸ್ಥೆಯೊಂದರ ಐಟಿ ಮುಖ್ಯಸ್ಥ ರಯಾನ್ ಥಾರ್ಪೆಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ನೀಡಿದೆ. ರಾಜ್ ಕುಂದ್ರಾ ಪರವಾಗಿ ವಾದಿಸಿದ ವಕೀಲ ಪ್ರಶಾಂತ್ ಪಾಟೀಲ್, ವೇದಿಕೆಯಲ್ಲಿ … Continued

ಕಣ್ವಮಠದ ಶ್ರೀಗಳ ಚಾತುರ್ಮಾಸ್ಯ ಸಂಪನ್ನ:ವೀರಘಟ್ಟದಲ್ಲಿ ಭಕ್ತರೊಂದಿಗೆ ಕೃಷ್ಣಾ ನದಿಯಲ್ಲಿ ದಂಡೋದಕ

ಯಾದಗಿರಿ : ಜಿಲ್ಲೆಯ ಹುಣಸಿಹೊಳೆ ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜ ತೀರ್ಥರಿಂದ ಕೃಷ್ಣಾ ನದಿ ತಟ ವೀರಘಟ್ಟದಲ್ಲಿ ಭಕ್ತರೊಂದಿಗೆ ದಂಡೋದಕ ಸ್ನಾನ ಮಾಡುವ ಮೂಲಕ ಚಾತುರ್ಮಾಸ್ಯ ಸಂಪನ್ನವಾಯಿತು. ಇಂದು(ಸೋಮವಾರ) ಬೆಳಿಗ್ಗೆ ದ್ವಿತೀಯ ಚಾತುರ್ಮಾಸ್ಯ ಸ್ಥಳವಾದ ಶ್ರೀ ಕ್ಷೇತ್ರ ಬುದ್ಧಿನ್ನಿಯಿಂದ ಹೊರಟು ಶ್ರೀಮನ್ ಮಾಧವತೀರ್ಥರ ತಪೋಭೂಮಿಯಾದ ವೀರ ಘಟ್ಟದಲ್ಲಿ ಉತ್ಥಾನ ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ಭಕ್ತರೊಂದಿಗೆ ದಂಡೋದಕ ಸ್ನಾನ … Continued