ಸೀರೆ ಧರಿಸಿದವರಿಗೆ ಪ್ರವೇಶವಿಲ್ಲ ಎಂದಿದ್ದ ದೆಹಲಿ ರೆಸ್ಟೋರೆಂಟಿಗೆ ಬಂದ್‌ ಮಾಡುವಂತೆ ಎಸ್‌ಡಿಎಂಸಿಯಿಂದ ನೊಟೀಸ್‌..!

ನವದೆಹಲಿ: ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದ ಕಾರಣಕ್ಕೆ ಮಹಿಳೆಯೊಬ್ಬರಿಗೆ ಪ್ರವೇಶವನ್ನು ನಿರಾಕರಿಸಿದ್ದ ಆರೋಪದಲ್ಲಿ ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ದೆಹಲಿಯ ಆಗಸ್ಟ್‌ ಕ್ರಾಂತಿ ಮಾರ್ಗದಲ್ಲಿದ್ದ ಅಕ್ವಿಲಾ ದೆಹಲಿ ರೆಸ್ಟೋರೆಂಟ್‌ ಪರವಾನಗಿ ಇಲ್ಲದ ಕಾರಣಕ್ಕೆ ಈಗ ಬಂದ್‌ ಆಗಿದೆ ಎಂದು ವರದಿಯಾಗಿದೆ. “ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದ ಕಾರಣಕ್ಕೆ ತನಗೆ ದೆಹಲಿಯ ಅಕ್ವಿಲಾ ರೆಸ್ಟೋರೆಂಟಿನಲ್ಲಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ,” ಎಂದು ಮಹಿಳೆಯೊಬ್ಬರು … Continued

ಸಿದ್ದಗಂಗಾ ಮಠ – ಮೀರಾಬಾಯಿ ಕೊಪ್ಪಿಕರಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ” 2020 ಮತ್ತು 2021 ನೇ ಸಾಲಿಗೆ ಎರಡು ವರ್ಷಗಳ ಪ್ರಶಸ್ತಿ ಪ್ರಕಟಿಸಿದೆ. ಕೋವಿಡ್- 19ರ ಹಿನ್ನಲೆಯಲ್ಲಿ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ, ಈ ವರ್ಷ ಕೋವಿಡ್ ಪ್ರಕರಣ ಕಡಿಮೆಯಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಸಕಾರವು ಈ … Continued

ಕೃಷಿ ಕಾನೂನುಗಳ ಬಗ್ಗೆ ಚರ್ಚೆ, ತುರ್ತಾಗಿ ಬಿಕ್ಕಟ್ಟು ಪರಿಹರಿಸುವಂತೆ ಒತ್ತಾಯ: ಅಮಿತ್ ಶಾ ಭೇಟಿ ನಂತರ ಅಮರಿಂದರ್ ಸಿಂಗ್ ಹೇಳಿಕೆ

ನವದೆಹಲಿ: ಬಿಜೆಪಿ ಸೇರುವ ಊಹಾಪೋಹಗಳ ನಡುವೆ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾದರು. ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ದೀರ್ಘಕಾಲದ ಆಂದೋಲನದ ಬಗ್ಗೆ ಚರ್ಚಿಸಿದರು ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ಹೇಳಿದ್ದಾರೆ. “ಕೃಷಿ … Continued

ಕರ್ನಾಟಕದಲ್ಲಿ ಬುಧವಾರ ಕೊರೊನಾ ಹೊಸ ಸೋಂಕು ಇಳಿಕೆ, ಸಾವಿನ ಸಂಖ್ಯೆ ಸ್ಥಿರ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಇಂದು (ಬುಧವಾರ) ಹೊಸದಾಗಿ 539 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 17 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 591 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸ 12,634ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,75,067 ಕ್ಕೆ ಏರಿಕೆಯಾಗಿದೆ ಹಾಗೂ 29,24,693 … Continued

ಬೆಳಗಾವಿ ಎಸ್‌ಟಿಪಿ ನಿರ್ಮಾಣಕ್ಕೆ 2 ಕೋಟಿ ರೂ.ಗಳ ವೆಚ್ಚ ಮಾಡಿ ಕಾಮಗಾರಿ ಸ್ಥಳಾಂತರ: ಲೋಕಾಯುಕ್ತ ತನಿಖೆಗೆ ಹೈಕೋರ್ಟ್‌ ಆದೇಶ

posted in: ರಾಜ್ಯ | 0

ಬೆಂಗಳೂರು: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಲರವಾಡದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ (ಎಸ್‌ಟಿಪಿ) ರಾಜ್ಯ ಸರ್ಕಾರದ ಬೊಕ್ಕಸದಿಂದ 2 ಕೋಟಿ ರೂಪಾಯಿ ವೆಚ್ಚ ಮಾಡಿದ ನಂತರ ಘಟಕವನ್ನು ಬೇರೊಂದು ಪ್ರದೇಶಕ್ಕೆ ಸ್ಥಳಾಂತರಿಸಿ ಕಾಮಗಾರಿ ಕೈಗೊಂಡ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಲೋಕಾಯುಕ್ತಕ್ಕೆ ವಹಿಸಿದೆವೆಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. … Continued

ಗಾಂಧಿಗಳನ್ನು ಟೀಕಿಸಿದ ನಂತರ ಕಪಿಲ್ ಸಿಬಲ್ ಮನೆ ಮುಂದೆ ಯುವ ಕಾಂಗ್ರೆಸ್‌ ಪ್ರತಿಭಟನೆ, ಕಾರಿಗೆ ಹಾನಿ

ನವದೆಹಲಿ: ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಗಾಂಧಿಯವರನ್ನು ಉದ್ದೇಶಿಸಿ ತಮ್ಮದು “ಜಿ -23, ಜಿ ಹುಜೂರ್ -23 ಅಲ್ಲ ಎಂದು ಟೀಕಿಸಿದ ತಕ್ಷಣ, ಕಾಂಗ್ರೆಸ್‌ ಕಾರ್ಯಕರ್ತರು ಅವರ ಮನೆಯ ಹೊರಗೆ “ಬೇಗ ಗುಣಮುಖರಾಗಿ” ಎಂಬ ಘೋಷಣಾ ಫಲಕಗಳೊಂದಿಗೆ ಪ್ರತಿಭಟಿಸಿದರು ಹಾಗೂ ಟೊಮೆಟೊಗಳನ್ನು ಎಸೆದು ಅವರ ಕಾರಿಗೆ ಹಾನಿ ಮಾಡಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು “ಪಕ್ಷವನ್ನು ತೊರೆಯಿರಿ!” … Continued

ಜಿ -23, ಜಿ ಹುಜೂರ್ -23 ಅಲ್ಲ, ಪಂಜಾಬ್‌ ರಾಜಕೀಯ ಬಿಕ್ಕಟ್ಟು ಐಎಸ್‌ಐ-ಪಾಕಿಸ್ತಾನಕ್ಕೆ ಅನುಕೂಲ: ಕಪಿಲ್ ಸಿಬಲ್

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ಗಮನಗಳು ಮತ್ತು ಬಿಕ್ಕಟ್ಟುಗಳೊಂದಿಗೆ ಹೋರಾಡುತ್ತಿರುವಾಗ, “ಜಿ -23″ ಅಥವಾ ಪಕ್ಷದ 23 ಭಿನ್ನಮತೀಯರ ಗುಂಪಿನ ನಾಯಕ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹೊಸ ಪತ್ರ ಬರೆದರೆ, ಇನ್ನೊಬ್ಬ ನಾಯಕ ಕಾಂಗ್ರೆಸ್‌ ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ. ಗುಲಾಂ ನಬಿ ಆಜಾದ್ ಅವರು ಪೂರ್ಣಾವಧಿ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು … Continued

ಜೆ.ಎಸ್.ಎಸ್ ನಲ್ಲಿ ಕಲಾಕ್ಷೇತ್ರದಲ್ಲಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮ

ಜನತಾ ಶಿಕ್ಷಣ ಸಮಿತಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾಗಿರಿಯ ಜೆ.ಎಸ್.ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಟ್ಟು ೪೭೦ ಜನ ಕೋವಿಡ್ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಡಾ. ರತ್ನಾ, ಮಹಾವೀರ ಉಪಾದ್ಯೆ, ಜಿನೇಂದ್ರ ಕುಂದಗೋಳ ಇತರರು ಉಪಸ್ಥಿತರಿದ್ದರು.

ಕ್ಯಾಪ್ಟನ್ ಬಿಜೆಪಿ ಸೇರುತ್ತಾರೆಯೇ? ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಕಾಂಗ್ರೆಸ್ಸಿನಿಂದ ಮುಜುಗರಕ್ಕೊಳಗಾದ ಅಮರಿಂದರ್ ಸಿಂಗ್

ನವದೆಹಲಿ:ಪಂಜಾಬಿನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ಹಿರಿ ನಾಯಕ ಅಮರಿಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ ಶಾ ಅವರನ್ನು ದೆಹಲಿಯಲ್ಲಿರುವ ಅವರ ಮನೆಯಲ್ಲಿ ಒಂದು ಗಂಟೆ ಕಾಲ ಭೇಟಿಯಾದರು ಮತ್ತು ಪಂಜಾಬಿನಲ್ಲಿ ಕಾಂಗ್ರೆಸ್ ಬಿಕ್ಕಟ್ಟು ಮತ್ತು ಬಿಜೆಪಿಯಿಂದ ಸೇರುವ ಬಗ್ಗೆ ಊಹಾಪೋಹಗಳ ನಡುವೆ ಅವರು ಭೇಟಿಯಾದರು. ಅವರು ಸಂಜೆ 6 ಗಂಟೆಗೆ ಅಮಿತ್‌ … Continued

ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೊ ಕಿಶಿದಾ ಜಪಾನಿನ ಹೊಸ ಪ್ರಧಾನಿ

ಟೊಕಿಯೊ: ಫ್ಯೂಮಿಯೊ ಕಿಶಿದಾ ಅವರು ನಿರ್ಗಮಿಸುತ್ತಿರುವ ಪಕ್ಷದ ನಾಯಕ ಹಾಗೂ ಪ್ರಧಾನ ಮಂತ್ರಿ ಯೋಶಿಹೈಡೆ ಸುಗಾ ಅವರ ಬದಲಿಗೆ ಜಪಾನ್‌ ಪ್ರಧಾನಿಯಾಗಲಿದ್ದಾರೆ. ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕೇವಲ ಒಂದು ವರ್ಷ ಸೇವೆ ಸಲ್ಲಿಸಿದ ನಂತರ ಅವರು ಕೆಳಗಿಳಿಯುತ್ತಿದ್ದಾರೆ. ಜಪಾನ್‌ನ ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೊ ಕಿಶಿದಾ ಬುಧವಾರ ಆಡಳಿತ ಪಕ್ಷದ ನಾಯಕತ್ವದ … Continued