ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಸಾಮಾಜಿಕ ಭದ್ರತಾ ಯೋಜನೆ ಸದಸ್ಯರಿಗೆ 3 ತಿಂಗಳ ವೇತನ ನೀಡಲಿದೆ ಕೇಂದ್ರ

ನವದೆಹಲಿ: ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ನೌಕರರ ರಾಜ್ಯ ವಿಮಾ ನಿಗಮದ(Employees’ State Insurance Corporation) ಸದಸ್ಯರಿಗೆ ಕೇಂದ್ರ ಸರ್ಕಾರ ಮೂರು ತಿಂಗಳ ವೇತನವನ್ನು ನೀಡುತ್ತದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ ಯಾದವ್ ಶುಕ್ರವಾರ ಮಾಹಿತಿ ನೀಡಿದ್ದಾರೆ. ಕೊರೊನಾದಿಂದ ಜೀವ ಕಳೆದುಕೊಂಡ ECSI ಸದಸ್ಯರ ಸಂಬಂಧಿಕರಿಗೆ ತಮ್ಮ ಸಚಿವಾಲಯವು ಆಜೀವ ಆರ್ಥಿಕ … Continued

ಅ.11ರಿಂದ ಕನ್ನಡ-ಹಿಂದಿಯಲ್ಲೂ ಪ್ರಸಾರವಾಗಲಿದೆ ತಿರುಪತಿ ಚಾನೆಲ್

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ ನಿರ್ವಹಿಸುವ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಇನ್ನು ಮುಂದೆ ಕನ್ನಡದಲ್ಲಿಯೂ ಪ್ರಸಾರವಾಗಲಿದೆ. ಅಕ್ಟೋಬರ್ 11ರಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಪ್ರಸಾರವಾಗಲಿದೆ. ಬ್ರಹ್ಮೋತ್ಸವದ ಗರುಡ ಸೇವೆ ಆಚರಣೆ ವೇಳೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಾಹಿನಿಗಳಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ … Continued

ಭಾರತದಲ್ಲಿ 24,354 ಹೊಸ ಕೋವಿಡ್ -19 ಪ್ರಕರಣಗಳು ದಾಖಲು; ನಿನ್ನೆಗಿಂತ 8.9% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 24,354 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ ಶೇಕಡಾ 8.9 ರಷ್ಟು ಕಡಿಮೆಯಾಗಿದೆ. ಇದರೊಂದಿಗೆ, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,37,91,061 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 234 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 4,48,573 ಕ್ಕೆ ಹೆಚ್ಚಿಸಿದೆ ಎಂದು ಕೇಂದ್ರ … Continued

ಬೆಂಗಳೂರಿನಲ್ಲಿ ಮತ್ತೊಂದು ದುರಂತ: ತಾಯಿ-ಇಬ್ಬರು ಮಕ್ಕಳು ಆತ್ಮಹತ್ಯೆ

ಬೆಂಗಳೂರು: ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಅಂಥದ್ದೇ ಮತ್ತೊಂದು ದುರಂತದ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಪ್ರಕೃತಿ ಬಡಾವಣೆಯ ಮನೆಯೊಂದರಲ್ಲಿ ನಡೆದ ಬಗ್ಗೆ ವರದಿಯಾಗಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡವರು. … Continued

ಅಕ್ಟೋಬರ್ 3ರಂದು ಬಿಜೆಪಿ ಕೋರ್ ಕಮಿಟಿ ಸಭೆ: ಉಪಚುನಾವಣೆ ಅಭ್ಯರ್ಥಿಗಳು ಅಂತಿಮ..?

ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಅಕ್ಟೋಬರ್ 3ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸಭೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಿಗೆ ಪಕ್ಷದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ಇತರ ಹಿರಿಯ ನಾಯಕರು ಭಾಗವಹಿಸಲಿದ್ದಾರೆಂದು ವರದಿಗಳು … Continued

23 ರಾಜ್ಯಗಳಿಗೆ 7,274 ಕೋಟಿ ರೂ.ಗಳ ವಿಪತ್ತು ಪ್ರತಿಕ್ರಿಯೆ ನಿಧಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎಸ್ಡಿಆರ್‌ಎಫ್) ತನ್ನ ಪಾಲು 7,274.40 ಕೋಟಿ ರೂ.ಗಳನ್ನು ಮುಂಗಡವಾಗಿ 23 ರಾಜ್ಯಗಳಿಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ವಿಪತ್ತಿನಿಂದ ಸೃಷ್ಟಿಯಾಗುವ ಯಾವುದೇ ತುರ್ತ ಪರಿಸ್ಥಿತಿ ನಿಭಾಯಿಸಲು ತಮ್ಮ ಎಸ್ಡಿಆರ್‌ಎಫ್‌ ನಲ್ಲಿ ರಾಜ್ಯ ಸರ್ಕಾರಗಳು ಸಾಕಷ್ಟು ನಿಧಿ ಹೊಂದಲು ಕೇಂದ್ರ ಸರ್ಕಾರದ ಉಪಕ್ರಮದ ಭಾಗವಾಗಿ ಕೇಂದ್ರ ಗೃಹ … Continued

ಸಾವಿನ ನಂತರ ಭೂಮಿಯಲ್ಲೇ ಅತ್ಯಂತ ಗಿಡ್ಡ ಹಸು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾದ ಈ ಗೋವು: ಎತ್ತರ ತಿಳಿದರೆ ಹೌಹಾರುತ್ತೀರಿ..!

ಬಾಂಗ್ಲಾದೇಶದಲ್ಲಿ ಸಂಚಲನ ಮೂಡಿಸಿದ ಅಕ್ನಿ-ಹೈ ಸೆಲೆಬ್ರಿಟಿ ಹಸು ಮರಣದ ಕೆಲವೇ ವಾರಗಳ ನಂತರ ವಿಶ್ವದ ಅತಿ ಕಡಿಮೆ ಎತ್ತರದ (ಅತಿ ಗಿಡ್ಡ) ಹಸು ಎಂದು ಮರಣೋತ್ತರ ಮನ್ನಣೆ ಗಳಿಸಿದೆ. ಹಸು ರಾಣಿ, ಕೇವಲ 50.8 ಸೆಂಟಿಮೀಟರ್ (20 ಇಂಚು) ಎತ್ತರವಿತ್ತು. ಇದು ತತಕ್ಷಣದ ಇಂಟರ್ನೆಟ್ ಸೆಲೆಬ್ರಿಟಿಯಾಯಿತು. ಢಾಕಾದ ಹೊರ ವಲಯದಲ್ಲಿದ್ದ ಇದು ಇದ್ದ ಜಮೀನಿಗೆ ಈ … Continued

ಸೆಪ್ಟೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹವು 5 ತಿಂಗಳಲ್ಲೇ ಗರಿಷ್ಠ : 1.17 ಲಕ್ಷ ಕೋಟಿ ತಲುಪಿದ ಸಂಗ್ರಹ

ನವದೆಹಲಿ: ಕಳೆದ ಸೆಪ್ಟೆಂಬರಿನಲ್ಲಿ ಸಂಗ್ರಹಿಸಿದ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು ಐದು ತಿಂಗಳ ಗರಿಷ್ಠ 1.17 ಲಕ್ಷ ಕೋಟಿಗೆ ತಲುಪಿದೆ, ಇದು ಸತತ ಮೂರು ತಿಂಗಳಲ್ಲಿ ₹ 1 ಲಕ್ಷ ಕೋಟಿಗಿಂತ ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ 1, ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸೆಪ್ಟೆಂಬರ್ ತಿಂಗಳು … Continued