ಆಯುಧ ಪೂಜೆ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆಗೆ ಆಹ್ವಾನವಿಲ್ಲವೆಂದು ಮಾರಾಮಾರಿ; ಹಲವರಿಗೆ ಗಾಯ..!

ಯಾದಗಿರಿ: ನಗರಸಭೆ ಸದಸ್ಯೆಯೊಬ್ಬರನ್ನು ಆಯುಧ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ಮಾರಾಮಾರಿ ನಡೆದು ಒಂಭತ್ತು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಗುರುವಾರ ರಾತ್ರಿ ಯಾದಗಿರಿ ನಗರದ ಲಾಡಿಜ್ಗಲ್ಲಿ ಬಡಾವಣೆಯ ಭವಾನಿ ಮಂದಿರ ಬಳಿ ಈ ಘಟನೆ ನಡೆದಿದೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಹಿಂದೂ ಸೇವಾ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ … Continued

ಆಸ್ತಿ ಜಗಳ: ಪತ್ನಿ, ಅಣ್ಣನ ಮಗನಿಗೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಪತಿ

ಮಡಿಕೇರಿ: ಆಸ್ತಿ ಜಗಳದ ಹಿನ್ನೆಲೆಯಲ್ಲಿ ದಾಯಾದಿಗಳ ಮಧ್ಯೆ ನಡೆದ ಜಗಳದಲ್ಲಿ ಗುಂಡು ಹಾರಿಸಿ ಅಣ್ಣನ ಮಗ ಹಾಗೂ ಜಗಳ ಬಿಡಿಸಲು ಬಂದ ಪತ್ನಿಗೆ ಗುಂಡು ಹಾರಿಸಿದ ವ್ಯಕ್ತಿಯೊಬ್ಬ ಕೊನೆಗೆ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಿರಗೂರು ಗ್ರಾಮದಲ್ಲಿ ನಡೆದಿದೆ. ಸೋಮಯ್ಯ ಸಾಗರ ಎಂಬುವವರು ತನ್ನ ಅಣ್ಣನ ಮಗನಿಗೆ … Continued

ಉಮಾಶಂಕರ ಪ್ರತಿಷ್ಠಾನದ ಮುಖಪುಟ ಪ್ರಶಸ್ತಿಗಾಗಿ ಪುಸ್ತಕಗಳ ಆಯ್ಕೆ

ಹುಬ್ಬಳ್ಳಿ: ಉಮಾಶಂಕರ ಪ್ರತಿಷ್ಠಾನದಿಂದ ಕೊಡಮಾಡುವ ಅತ್ಯುತ್ತಮ ಮುಖಪುಟ ಪುಸ್ತಕ ಬಹುಮಾನಕ್ಕಾಗಿ ಸುಜಾತಾ ರವೀಶ್ ( ಮೈಸೂರು) ಅವರ ಅಂತರಂಗದ ಆಲಾಪ, ಅಕ್ಷತಾ ಕೃಷ್ಣಮೂರ್ತಿ ( ಬೇಲೇಕೇರಿ) ಅವರ ಹಾಲಕ್ಕಿ ಕೋಗಿಲೆ ಮತ್ತು ವಾಣಿ ಭಂಡಾರಿ ( ಶಿವಮೊಗ್ಗ) ಅವರ ಸಂತನೊಳಗಿನ ಧ್ಯಾನ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. 2018, 2019 ಮತ್ತು 2020 ನೇ ಸಾಲಿನ ಕೃತಿಗಳನ್ನು … Continued

ಕುಂದುಜ್ ನಂತರ ಈಗ ಕಂದಹಾರದ ಶಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಮಯದಲ್ಲಿ ಬಾಂಬ್‌ ಸ್ಫೋಟ:ಕನಿಷ್ಠ 32 ಮಂದಿಸಾವು

ನವದೆಹಲಿ:  ದಕ್ಷಿಣ ಅಫ್ಗಾನಿಸ್ತಾನದ ಕಂದಹಾರ್ ನಗರದಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 32ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೂರು ಕಡೆ ಸ್ಫೋಟ ಸಂಭವಿಸಿದೆ. ಮಸೀದಿಯ ಮುಖ್ಯದ್ವಾರ, ದಕ್ಷಿಣ‌ ಭಾಗ ಮತ್ತು ಪ್ರಾರ್ಥನೆಗೆ ಹಾಜರಾಗುವುದಕ್ಕೂ ಮುನ್ನ ಜನರು ಮುಖ ತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ … Continued

ಜೆಇಇ ಅಡ್ವಾನ್ಸಡ್ 2021 ಫಲಿತಾಂಶ ಪ್ರಕಟ :ಇತಿಹಾಸ ನಿರ್ಮಿಸಿದ ಮೃದುಲ್​ ಅಗರ್ವಾಲ್​

ನವದೆಹಲಿ: ಪ್ರತಿಷ್ಠಿತ ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್​(JEE Advanced) 2021ರ ಫಲಿತಾಂಶವು ಹೊರಬಿದ್ದಿದೆ. ರಾಜಸ್ಥಾನದ ಜೈಪುರ ಮೂಲದ 18 ವರ್ಷದ ಮೃದುಲ್​ ಅಗರ್​​ವಾಲ್​, ಈವರೆಗೆ ಅತಿಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ನಿರ್ಮಿಸಿದ್ದಾನೆ. ದೆಹಲಿಯ ಕಾವ್ಯಾ ಚೋಪ್ರಾ ಬಾಲಕಿಯರಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ್ದಾಳೆ. ಅರ್ಹತಾ ಪರೀಕ್ಷೆಯಾದ ಜೆಇಇ ಮೇಯ್ಸ್​ನ ಮಾರ್ಚ್​ ಸುತ್ತಿನಲ್ಲಿ 100 ಪರ್ಸೆಂಟೈಲ್​ ಗಳಿಸಿ, … Continued

ಸಿಂಗು ಗಡಿಯಲ್ಲಿ ಕೈ ಕತ್ತರಿಸಿದ ನೇಣು ಬಿಗಿದ ಸ್ಥಿತಿಯಲ್ಲಿರುವ ವ್ಯಕ್ತಿಯ ಅರೆಬೆತ್ತಲೆ ದೇಹ ಪತ್ತೆ..!

ನವದೆಹಲಿ: ಇಂದು (ಶುಕ್ರವಾರ) ಬೆಳಗ್ಗೆ ಸಿಂಗು ಗಡಿಯಲ್ಲಿರುವ ರೈತರ ಪ್ರತಿಭಟನಾ ಸ್ಥಳದಲ್ಲಿ ಎಡಗೈ ಮಣಿಕಟ್ಟು ತುಂಡಾಗಿ ಮತ್ತು ರಕ್ತದ ಮಡುವಿನೊಂದಿಗೆ ತಲೆಕೆಳಗಾದ ಸ್ಥಿತಿಯಲ್ಲಿದ್ದ ಯುವಕನ ಶವವನ್ನು ಪೊಲೀಸ್ ಬ್ಯಾರಿಕೇಡ್‌ಗೆ ಕಟ್ಟಿರುವುದು ಕಂಡುಬಂದಿದೆ. ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ನಡೆದ ಈ ಕೊಲೆಗೆ ನಿಹಾಂಗ್ಸ್ – ‘ಯೋಧ’ ಸಿಖ್ ಗುಂಪು ಕಾರಣ ಎಂದು ಆರಂಭಿಕ ವರದಿಗಳು ಹೇಳಿವೆ … Continued

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ: ಗಾಯಗೊಂಡಿದ್ದ ಸೇನಾಧಿಕಾರಿ, ಯೋಧ ಹುತಾತ್ಮ

ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೇನಾಧಿಕಾರಿ (ಜೆಸಿಒ) ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಪೂಂಚ್-ರಾಜೌರಿ ಅರಣ್ಯದಲ್ಲಿ ಐವರು ಸೇನಾ ಯೋಧರು ಹುತಾತ್ಮರಾದ ನಾಲ್ಕು ದಿನಗಳ ನಂತರ ಅದೇ ಪ್ರದೇಶದಲ್ಲಿ ಸೇನೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯಿತು. ಈಗ ನಡೆಯುತ್ತಿರುವ … Continued

ಕರ್ನಾಟಕದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಇಂದಿನಿಂದ ಅ. 17ರವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲಿ ಮಳೆ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಕರ್ನಾಟಕದ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ. ಕರ್ನಾಟಕ ಮಾತ್ರವಲ್ಲದೆ ಪಕ್ಕದ ರಾಜ್ಯವಾದ … Continued

ಭಾರತದಲ್ಲಿ 16,862 ಹೊಸ ಕೋವಿಡ್ ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 16,862 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಗುರುವಾರ ವರದಿ ಮಾಡಿದ ಸಂಖ್ಯೆಗಿಂತ ಶೇಕಡಾ 11.2 ರಷ್ಟು ಕಡಿಮೆಯಾಗಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಕೇಸ್‌ಲೋಡ್ 3,40,37,592 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ. 379 ಜನರು ಸೋಂಕಿನಿಂದ ನಿಧನರಾಗಿದ್ದಾರೆ. ದೇಶದ … Continued

ಕನ್ನಡದ ಹಿರಿಯ ನಟ, ಬರಹಗಾರ, ಚಿಂತಕ ಪ್ರೊ. ಜಿ.ಕೆ. ಗೋವಿಂದ ರಾವ್ ನಿಧನ

ಹುಬ್ಬಳ್ಳಿ: ಕನ್ನಡದ ಹಿರಿಯ ನಟ ಬರಹಗಾರ ಪ್ರೊ.ಜಿ.ಕೆ ಗೋವಿಂದ ರಾವ್ ಇಂದು (ಶುಕ್ರವಾರ) ಮುಂಜಾನೆ ಹುಬ್ಬಳ್ಳಿಯಲ್ಲಿ ನಿಧನರಾಗಿದ್ದಾರೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಮುಂಜಾನೆ 4.45ರ ಸುಮಾರಿಗೆ ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಲೇಖಕರಾಗಿ, ಪ್ರಾಧ್ಯಾಪಕರಾಗಿ, ರಂಗಭೂಮಿ ಕಲಾವಿದರಾಗಿ, ಚಿತ್ರ ನಟರಾಗಿ ಅವರು ಗುರುತಿಸಿಕೊಂಡಿದ್ದರು. ಹುಬ್ಬಳ್ಳಿಯ ಮುಕ್ತಿಧಾಮದಲ್ಲಿ ಬೆಳಗ್ಗೆ 8.30 ಸುಮಾರಿಗೆ … Continued