ಸಿಂಗು ಗಡಿಯಲ್ಲಿ ಕೈ ಕತ್ತರಿಸಿದ ನೇಣು ಬಿಗಿದ ಸ್ಥಿತಿಯಲ್ಲಿರುವ ವ್ಯಕ್ತಿಯ ಅರೆಬೆತ್ತಲೆ ದೇಹ ಪತ್ತೆ..!

ನವದೆಹಲಿ: ಇಂದು (ಶುಕ್ರವಾರ) ಬೆಳಗ್ಗೆ ಸಿಂಗು ಗಡಿಯಲ್ಲಿರುವ ರೈತರ ಪ್ರತಿಭಟನಾ ಸ್ಥಳದಲ್ಲಿ ಎಡಗೈ ಮಣಿಕಟ್ಟು ತುಂಡಾಗಿ ಮತ್ತು ರಕ್ತದ ಮಡುವಿನೊಂದಿಗೆ ತಲೆಕೆಳಗಾದ ಸ್ಥಿತಿಯಲ್ಲಿದ್ದ ಯುವಕನ ಶವವನ್ನು ಪೊಲೀಸ್ ಬ್ಯಾರಿಕೇಡ್‌ಗೆ ಕಟ್ಟಿರುವುದು ಕಂಡುಬಂದಿದೆ.
ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ನಡೆದ ಈ ಕೊಲೆಗೆ ನಿಹಾಂಗ್ಸ್ – ‘ಯೋಧ’ ಸಿಖ್ ಗುಂಪು ಕಾರಣ ಎಂದು ಆರಂಭಿಕ ವರದಿಗಳು ಹೇಳಿವೆ ಎಂದು ವರದಿಯಾಗಿದೆ.
ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಅವರು ಯುವಕನನ್ನು ಹೊಡದು ಕೊಂದಿರಬಹುದು ಎಂದು ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಬೇಕಿದೆ.
ಲಭ್ಯವಿರುವ ವಿವರಗಳ ಪ್ರಕಾರ, ಇಂದು ಮುಂಜಾನೆ ಸಿಂಗು ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆ ಮುಂಭಾಗದಲ್ಲಿನ ಪೊಲೀಸ್ ಬ್ಯಾರಿಕೇಡ್‌ನಲ್ಲಿ ಮೃತನ ದೇಹ ಕೈ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಿಂಗು ಗಡಿಯಲ್ಲಿರುವ ವೇದಿಕೆಯ ಸಮೀಪ ತಾತ್ಕಾಲಿಕ ಗುರುದ್ವಾರದಲ್ಲಿ ಇರಿಸಲಾಗಿರುವ ಗುರು ಗ್ರಂಥ ಸಾಹಿಬ್‌ ಗೆ ಅಗೌರವಕ್ಕೆ ತೋರಿದ್ದಾನೆ ಎಂಬ ಕಾರಣಕ್ಕೆ ಈ ಕೃತ್ಯ ಎಸಲಾಗಿದೆ ಎಂದು ಹೇಳಾಗುತ್ತುದೆ. ಅವರ ಮೃತದೇಹವನ್ನು ಪ್ರತಿಭಟನಾ ಸ್ಥಳದ ಬಳಿ ಬ್ಯಾರಿಕೇಡಿಗೆ ನೇಣು ಬಿಗಿದ ಸ್ಥಿತಿಯಲ್ಲಿ ನೇತುಹಾಕಲಾಗಿದೆ.
ಬೆಳಿಗ್ಗೆ 5: 30 ರ ಸುಮಾರಿಗೆ ಹತ್ಯೆಯ ಬಗ್ಗೆ ತಿಳಿದ ಪೊಲೀಸರು ಇನ್ನೂ ವಿವರಗಳನ್ನು ದೃಢಪಡಿಸಿಲ್ಲ. ಸಂತ್ರಸ್ತೆಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಲು ರೈತರು ಒಂದು ವರ್ಷದಿಂದ ಸಿಂಗು (ದೆಹಲಿಯ ಗಡಿಯಲ್ಲಿ) ನಲ್ಲಿ ಜಮಾಯಿಸಿದ್ದಾರೆ; ಕಳೆದ ತಿಂಗಳುಗಳಲ್ಲಿ ಗಡಿಯಲ್ಲಿ ಹಲವಾರು ರೈತ ಶಿಬಿರಗಳನ್ನು ಸ್ಥಾಪಿಸಲಾಗಿದೆ.
ಕಳೆದ ವರ್ಷ ನಿಹಾಂಗ್ಸ್ ಒಳಗೊಂಡ ಇನ್ನೊಂದು ಘಟನೆ ನಡೆದಿತ್ತು – ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಪಂಜಾಬ್ ಪೋಲೀಸ್‌ ಕೈಯನ್ನು ಕತ್ತಿಯಿಂದ ಕತ್ತರಿಸಲಾಗಿತ್ತು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅವರಿಗೆ ‘ಓಡಾಡಲು ಅನುಮತಿಸಿದ ಪಾಸ್’ಗಳನ್ನು ತೋರಿಸಲು ಕೇಳಿದ್ದಕ್ಕೆ ನಿಹಾಂಗ್‌ಗಳು ಈ ಕೃತ್ಯವೆಸಗಿದ್ದರು.

ಪ್ರಮುಖ ಸುದ್ದಿ :-   ಕೋಲ್ಕತ್ತಾ ವಶಪಡಿಸಿಕೊಳ್ಳಲು ಆತ್ಮಹತ್ಯಾ ಬಾಂಬರ್‌ಗಳನ್ನು ಕಳುಹಿಸ್ತೇನೆ ': ಬಾಂಗ್ಲಾದೇಶ ಮೂಲಭೂತವಾದಿಯಿಂದ ಹಿಂದೂಗಳ ವಿರುದ್ಧ ಬೆದರಿಕೆ ವೀಡಿಯೊ ವೈರಲ್‌

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement