ರಿಲಯನ್ಸ್ ಇಂಡಸ್ಟ್ರೀಸ್ ಎರಡನೇ ತ್ರೈಮಾಸಿಕ ಲಾಭ ಶೇ. 43ರಷ್ಟು ಏರಿಕೆ: 13,680 ಕೋಟಿ ರೂ.ಗಳ ನಿವ್ವಳ ಲಾಭ

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಹಣಕಾಸು ವರದಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಪ್ರಕಟಿಸಿದ್ದು, ಕಂಪನಿಯು ತ್ರೈಮಾಸಿಕದಲ್ಲಿ 13,680 ಕೋಟಿ ರೂ.ಗಳ ನಿವ್ವಳ ಲಾಭ ವರದಿ ಮಾಡಿದೆ. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಸುಮಾರು ಶೇಕಡಾ 46.0ರಷ್ಟು ಹೆಚ್ಚಳವಾಗಿದೆ. ಇದೇ ಸಮಯದಲ್ಲಿ, ರಿಲಯನ್ಸ್‌ನ ಕ್ರೂಡೀಕೃತ ಆದಾಯವು 30 ಸೆಪ್ಟೆಂಬರ್ 2021 ಕ್ಕೆ ಕೊನೆಗೊಂಡ … Continued

ಸಿಬಿಐ ತನಿಖೆಗೆ ನೀಡಿರುವ ಸಮ್ಮತಿ ಹಿಂಪಡೆಯಲು ಎಲ್ಲ ಪ್ರಕರಣಗಳಲ್ಲಿಯೂ ರಾಜ್ಯಗಳಿಗೆ ಅಧಿಕಾರವಿಲ್ಲ: ಕೇಂದ್ರ

ನವದೆಹಲಿ: ಸಿಬಿಐ ತನಿಖೆಗೆ ತಾನು ನೀಡಿರುವ ಸಮ್ಮತಿಯನ್ನು ಯಾವುದೇ ಒಂದು ಪ್ರಕರಣದಲ್ಲಾಗಲಿ ಅಥವಾ ಎಲ್ಲ ಪ್ರಕರಣಗಳಲ್ಲೇ ಅಗಲಿ ರಾಜ್ಯ ಸರ್ಕಾರಗಳು ಆದೇಶವೊಂದನ್ನು ಹೊರಡಿಸುವ ಮೂಲಕ ಹಿಂಪಡೆಯುವುದು ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆಯ ಸೆಕ್ಷನ್‌ 6ಕ್ಕೆ ವಿರುದ್ಧವಾಗುತ್ತದೆ ಮತ್ತು ಅಧಿಕಾರವ್ಯಾಪ್ತಿಯ ಹೊರತಾದದ್ದಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ರಾಜ್ಯ ಸರ್ಕಾರಕ್ಕೆ ಸಿಬಿಐ ತನಿಖೆಗೆ … Continued

ಒಂದೇ ಧಾರಾವಾಹಿಯಲ್ಲಿ 300 ಪಾತ್ರಗಳ ನಟನೆಗೆ ಆಸಿಫ್ ಶೇಖಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ ಗೌರವ

ಮುಂಬೈ: ಭಾಬಿಜಿ ಘರ್ ಪರ್ ಹೈ ಧಾರಾವಾಹಿಯ ವಿಭೂತಿ ನಾರಾಯಣ ಮಿಶ್ರಾ ಅವರನ್ನು ಯಾರು ಇಷ್ಟಪಡುವುದಿಲ್ಲ? ವಿಭೂತಿ ನಾರಾಯಣ ಮಿಶ್ರಾ ಅವರ ಪಾತ್ರವನ್ನು ನಿರ್ವಹಿಸುವ ಆಸಿಫ್ ಶೇಖ್ ಅವರು ಕಾರ್ಯಕ್ರಮದಲ್ಲಿ 300 ವಿಭಿನ್ನ ಪಾತ್ರಗಳನ್ನು ಚಿತ್ರಿಸಿದ್ದಾರೆ. ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ನಟನನ್ನು ಲಂಡನ್‌ನ ವರ್ಲ್ಡ್ ಬುಕ್‌ ಆಫ್ ರೆಕಾರ್ಡ್ಸ್‌ ಗುರುತಿಸಿದೆ. ನಟನಿಗೆ ಈಗ … Continued

ಸಮವಸ್ತ್ರದಲ್ಲಿ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದ ಪೊಲೀಸರ ವಿರುದ್ಧ ಕ್ರಮ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಬೆಂಗಳೂರು: ಬೀದರ್‌ನ ಶಾಹೀನ್‌ ಶಾಲೆಯಲ್ಲಿ ಸಮವಸ್ತ್ರ ಧರಿಸಿ ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಬೀದರಿನ ಶಾಹೀನ್‌ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಗೆ (ಸಿಎಎ) ಸಂಬಂಧಿಸಿದಂತೆ ಕಳೆದ ವರ್ಷ … Continued

ಇಸ್ಲಾಂಗೆ ಮತಾಂತರಗೊಳ್ಳಿ ಇಲ್ಲವೇ ಅಫ್ಘಾನಿಸ್ತಾನ ಬಿಟ್ಹೋಗಿ: ಅಫ್ಘಾನ್ ಸಿಖ್ಖರಿಗೆ ಬೆದರಿಕೆ-ವರದಿ

ಕಾಬೂಲ್‌:ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನದಲ್ಲಿ ಈಗ ಸಿಖ್‌ ಧರ್ಮದವರಿಗಿದ್ದ ಬೆದರಿಕೆ ಹೆಚ್ಚಾಗಲಾರಂಭಿಸಿದೆ. ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಸಿಖ್ಖರು ಸುನ್ನಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು ಅಥವಾ ದೇಶವನ್ನು ತೊರೆಯಬೇಕು ಎಂದು ತಾಲಿಬಾನ್‌ ಅವರಿಗೆ ಆಯ್ಕೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಅಫ್ಘಾಣಿಸ್ತಾನವನ್ನು ವಶಪಡಿಸಿಕೊಂಡ ನಂತರ ಸಿಖ್ಖರು ದೇಶದಿಂದ ಪಲಾಯನ ಮಾಡುವುದನ್ನು ಆಯ್ಕೆ ಮಾಡಿಕೊಳ್ಳಬೇಕಾಗಬಹುದು ಎಂದು ವರದಿಗಳು ತಿಳಿಸಿವೆ.  ಅಫ್ಘಾನಿಸ್ತಾನದಲ್ಲಿ ರಚನಾತ್ಮಕ … Continued

ಕರ್ನಾಟಕದಲ್ಲಿ ಶುಕ್ರವಾರ ಹೊಸದಾಗಿ 378 ಜನರಿಗೆ ಕೊರೊನಾ ಸೋಂಕು; 11 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು (ಶುಕ್ರವಾರ) ಹೊಸದಾಗಿ 378 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದೇ ಸಮಯದಲ್ಲಿ ಸೋಂಕಿನಿಂದ 11 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,85,227 ಕ್ಕೆ ಏರಿಕೆಯಾಗಿದೆ. ಒಟ್ಟು 29,38,312 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 37,995 ಜನ ಮೃತಪಟ್ಟಿದ್ದಾರೆ. 8,891 ಸಕ್ರಿಯ ಪ್ರಕರಣಗಳಿವೆ.ಸೋಂಕಿನ ಪ್ರಮಾಣ ಶೇ. 0.36 ರಷ್ಟಿದ್ದು, … Continued

ಮುಂಬೈ ಕ್ರೂಸ್‌ ಡ್ರಗ್ಸ್ ಪ್ರಕರಣ: ಎನ್‌ಸಿಬಿಯಿಂದ 4 ಗಂಟೆಗಳ ಕಾಲ ನಟಿ ಅನನ್ಯಾ ಪಾಂಡೆ ವಿಚಾರಣೆ, ಅಕ್ಟೋಬರ್ 25 ರಂದು ಮತ್ತೆ ಹಾಜರಾಗಲು ಸೂಚನೆ

ಮುಂಬೈ : ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಿವುಡ್‌ ನಟಿ ಅನನ್ಯ ಪಾಂಡೆಯನ್ನು ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ಮುಂಬೈನಲ್ಲಿರುವ ತಮ್ಮ ಕಚೇರಿಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (ಎನ್‌ಸಿಬಿ)ಅಧಿಕಾರಿಗಳು ವಿಚಾರಣೆ ನಡೆಸಿದರು.. ಅಕ್ಟೋಬರ್ 25ರಂದು ಸೋಮವಾರ ಮೂರನೇ ಸುತ್ತಿನ ವಿಚಾರಣೆಗಾಗಿ ಮತ್ತೆ ಹಾಜರಾಗಲು ಎನ್‌ಸಿಬಿ ಸೂಚಿಸಿದೆ. ಎನ್‌ಸಿಬಿ ಅಧಿಕಾರಿಗಳಿಗೆ ಶುಕ್ರವಾರ ಅನನ್ಯ ಪಾಂಡೆಯವರನ್ನು … Continued

ವಿಮಾನ ನಿಲ್ದಾಣದಲ್ಲಿ ಪ್ರತಿ ಬಾರಿಯೂ ಕೃತಕ ಕಾಲು ತೆಗೆಸುವ ಸಿಬ್ಬಂದಿ: ಸುಧಾ ಚಂದ್ರನ್ ಕ್ಷಮೆಯಾಚಿಸಿದ ಸಿಐಎಸ್‌ಎಫ್

ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಶುಕ್ರವಾರ ನಟಿ ಹಾಗೂ ಭರತನಾಟ್ಯ ಸುಧಾ ಚಂದ್ರನ್ ಅವರ ಕ್ಷಮೆಯಾಚಿಸಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಅವರ ಕೃತಕ ಕಾಲನ್ನು ಬಿಚ್ಚಿ ತೋರಿಸುವಂತೆ ಸೂಚಿಸುವ ಮೂಲಕ ಅವಮಾನ ಮಾಡಲಾಗಿತ್ತು ಎಂದು ಸುಧಾ ಚಂದ್ರನ್‌ ಹೇಳಿದ್ದರು ಹಾಗೂ ಈ ಕುರಿತು ಪ್ರಧಾನಿ ಹಾಗೂ ಸರ್ಕಾರಕ್ಕೂ ಮನವಿ ಮಾಡಿದ್ದರು. … Continued

ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್, ಶೇ.38 ಜನರಿಗೆ 2ನೇ ಡೋಸ್ ನೀಡಿಕೆ; ಸಚಿವ ಸುಧಾಕರ್

ಹುಬ್ಬಳ್ಳಿ : ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ ನ 4 ಪಟ್ಟು, ಜಪಾನ್ ನ 8 ಪಟ್ಟು, ಇಂಗ್ಲೆಂಡ್ ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ರಾಜ್ಯದ ಆರೋಗ್ಯ … Continued

ಯಕ್ಷರಂಗದ ಗೋಡೆ, ನಾರಾಯಣ ಹೆಗಡೆಗೆ ಅನಂತ ಶ್ರೀ ಪ್ರಶಸ್ತಿ ಪ್ರಕಟ

ಶಿರಸಿ: ಬಡಗುತಿಟ್ಟು ಯಕ್ಷಗಾನದ ಮೇರು‌ ಕಲಾವಿದ ಯಕ್ಷರಂಗದ ಗೋಡೆ ಎಂದೇ ಖ್ಯಾತರಾದ ಗೋಡೆ ನಾರಾಯಣ ಹೆಗಡೆ ಅವರಿಗೆ‌ ಪ್ರತಿಷ್ಠಿತ ಅನಂತ ಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಯಕ್ಷಗಾನದ ಖ್ಯಾತ ಭಾಗ್ವತ ಕೇಶವ ಹೆಗಡೆ ಕೊಳಗಿ, ಖ್ಯಾತ ತಾಳಮದ್ದಳೆ ಅರ್ಥಧಾರಿ ಉಮಾಕಾಂತ ಭಟ್ಟ ಕೆರೇಕೈ … Continued