ಸತತ ಐದನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಬೆಂಗಳೂರು: ದೇಶಾದ್ಯಂತ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು (Petrol, diesel prices rise), ಸತತ ಐದನೇ ದಿನವೂ ಲೀಟರ್ ಪೆಟ್ರೋಲ್ ಡೀಸೆಲ್ ಬೆಲೆ 35 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 35 ಪೈಸೆ ಹೆಚ್ಚಳವಾಗಿದ್ದು, ಲೀಟರ್‌ ಪೆಟ್ರೋಲ್ ದರ 109.34 ರೂ.ಗಳ ತಲುಪಿದೆ . ಲೀಟರ್ ಡೀಸೆಲ್ … Continued

ದೀಪಾವಳಿ ಹಬ್ಬಕ್ಕೆ ಚೀನಾ ಉತ್ಪನ್ನ ನಿಷೇಧ: ಚೀನಾ ರಫ್ತುದಾರರಿಗೆ 50,000 ಕೋಟಿ ರೂ. ನಷ್ಟ..!

ನವದೆಹಲಿ: ಈ ವರ್ಷ ದೀಪಾವಳಿ ಮತ್ತು ಇತರ ಹಬ್ಬಗಳಿಗೆ ಮುನ್ನ ದೇಶದಲ್ಲಿ ಚೀನಾದ ಉತ್ಪನ್ನ ಮಾರಾಟಗಾರರು, ವಿಶೇಷವಾಗಿ ಪಟಾಕಿ ಮಾರಾಟಗಾರರು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸಲಿದ್ದಾರೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ದೇಶೀಯ ಮಾರುಕಟ್ಟೆಗಳಲ್ಲಿ ಚೀನಾದಿಂದ ಉತ್ಪನ್ನಗಳ ನಿಷೇಧದಿಂದಾಗಿ ಈ ವರ್ಷ ಚೀನಾದ ರಫ್ತುದಾರರು ಸುಮಾರು 50,000 ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸುತ್ತಾರೆ. … Continued

ಜಿ 20 ಶೃಂಗಸಭೆಯಲ್ಲಿ ಭಾರತ…2022 ರ ಅಂತ್ಯದ ವೇಳೆಗೆ ಐದುನೂರು ಕೋಟಿ ಕೋವಿಡ್ -19 ಲಸಿಕೆ ಡೋಸ್‌ ಉತ್ಪಾದಿಸಲು ಭಾರತ ಸಿದ್ಧ: ಮೋದಿ

ನವದೆಹಲಿ: ಹವಾಮಾನ ಬದಲಾವಣೆ, ಕೋವಿಡ್ -19 ಮತ್ತು ಆರ್ಥಿಕ ಚೇತರಿಕೆಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುವ ಎರಡು ದಿನಗಳ ಶೃಂಗಸಭೆಗಾಗಿ ವಿಶ್ವದ ಇಪ್ಪತ್ತು ಪ್ರಮುಖ ಆರ್ಥಿಕತೆಗಳ ನಾಯಕರು ಶನಿವಾರ ಇಟಲಿಯ ರೋಮ್‌ನಲ್ಲಿ ಒಟ್ಟುಗೂಡಿದ್ದಾರೆ. ಜಿ 20 ಶೃಂಗಸಭೆಯ ನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಜೋ ಬಿಡನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ … Continued

ಅಮೆಜಾನ್ ಕಂಪನಿಗೆ ಸೇರಿದ ಕಂಟೇನರ್ ಅಪಹರಣ;1.50 ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ದರೋಡೆ

ಕೋಲಾರ: ಅಮೆಜಾನ್ ಕಂಪನಿಗೆ ಸೇರಿದ ಕಂಟೇನರ್ ಲಾರಿ ಅಪಹರಿಸಿ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು, ಹೊಂ ಅಪ್ಲೇಯನ್ಸಸ್ ವಸ್ತುಗಳು ಸೇರಿ ಒಂದೂವರೆ ಕೋಟಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ ಘಟನೆ ಕೋಲಾರ ತಾಲ್ಲೂಕಿನ ನಾಗಲಾಪುರ ಗೇಟ್ ಬಳಿ ನಡೆದ ಬಗ್ಗೆ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಕಡೆಯಿಂದ ಹೊಸಕೋಟೆ ತಾಲೂಕಿನ ಅನಗೊಂಡನಹಳ್ಳಿ ಬಳಿಯ ಫ್ಯಾಕ್ಟರಿಗೆ ತೆರಳುತ್ತಿದ್ದ … Continued

ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಪುನೀತ್‌ ರಾಜಕುಮಾರ ಅಂತ್ಯಕ್ರಿಯೆ

ಬೆಂಗಳೂರು: ಪವರ್‌ ಸ್ಟಾರ್‌   ಪುನೀತ್ ರಾಜ್​ಕುಮಾರ್​ ಇಂದು (ಭಾನುವಾರ) ಪಂಚಭೂತಗಳಲ್ಲಿ ಲೀನರಾದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೊದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನೆರವೇರಿಸಲಾಯಿತು. ರಾಘವೇಂದ್ರ ರಾಜಕುಮಾರ್​ ಮಗ ವಿನಯ್​ ರಾಜ್​ಕುಮಾರ್​ ಪುನೀತ್‌ ಪಾರ್ಥಿವ ಶರೀರಕ್ಕೆ ಅಂತಿಮ ಸಂಸ್ಕಾರ ನೆರವೇರಿಸಿದರು. ಮೂರು ಬಾರಿ … Continued

ಉಪಚುನಾವಣೆ: ಹಾನಗಲ್‍ನಲ್ಲಿ 80%, ಸಿಂದಗಿಯಲ್ಲಿ70% ಮತದಾನ

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಶನಿವಾರ ಮುಗಿದಿದ್ದು, ಬಹುತೇಕ ಶಾಂತಿಯುತವಾಗಿ ನಡೆದಿದೆ. ಹಾನಗಲ್‍ನಲ್ಲಿ ಶೇಕಡಾ 80 ರಷ್ಟು ಮತ್ತು ಸಿಂದಗಿಯಲ್ಲಿ ಶೇಕಡಾ 70 ರಷ್ಟು ಮತದಾನವಾಗಿದೆ. ಹಾನಗಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾನಗಲ್‌ನಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನ, ಕಾಂಗ್ರೆಸ್‌ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್‌ನಿಂದ ರಿಯಾಜ್ ಶೇಖ್ ಸ್ಪರ್ಧಿಸಿದ್ದಾರೆ. ಸಿಂದಗಿಯಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರ, ಕಾಂಗ್ರೆಸ್ಸಿನಿಂದ ಅಶೊಕ್ … Continued

ಹವಲಾ ಪ್ರಕರಣ: ಇಡಿ ಸಮನ್ಸ್‌ ವಜಾ ಮಾಡುವಂತೆ ಕೋರಿದ್ದ ಅನಿಲ್‌ ದೇಶಮುಖ್‌ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಮುಂಬೈ: ಹವಾಲಾ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ಗಳನ್ನು ವಜಾ ಮಾಡುವಂತೆ ಕೋರಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿದೆ. ಸಿಆರ್‌ಪಿಸಿ ಸೆಕ್ಷನ್‌ 438ರ ಅಡಿ ಅರ್ಜಿದಾರರು ಶಾಸನಬದ್ಧವಾಗಿ ಸಕ್ಷಮ ನ್ಯಾಯಾಲಯದ ಕದತಟ್ಟಲು ಮತ್ತು ನ್ಯಾಯಾಲಯವು ಅರ್ಹತೆಯ ಆಧಾರದಲ್ಲಿ ಪರಿಗಣಿಸುವ ಸಂಬಂಧ ಅದನ್ನು … Continued

ಮದುವೆಯಲ್ಲಿ ಸಂಗೀತ ನುಡಿಸಿದ್ದಕ್ಕೆ ಮೂವರನ್ನು ಕೊಂದ ತಾಲಿಬಾನ್‌ ಎಂದು ಹೇಳಿಕೊಂಡ ಬಂದೂಕುಧಾರಿಗಳು: ಇಬ್ಬರ ಬಂಧನ

ಕಾಬೂಲ್: ತಾಲಿಬಾನ್ ಎಂದು ಹೇಳಿಕೊಂಡ ಬಂದೂಕುಧಾರಿಗಳು ಸಂಗೀತ ನುಡಿಸುವುದನ್ನು ನಿಲ್ಲಿಸಲು ಪೂರ್ವ ಅಫ್ಘಾನಿಸ್ತಾನದಲ್ಲಿ ಮದುವೆಯೊಂದರ ಮೇಲೆ ದಾಳಿ ಮಾಡಿದ್ದಾರೆ ಮತ್ತು ಕನಿಷ್ಠ ಮೂವರನ್ನು ಕೊಂದಿದ್ದಾರೆ ಎಂದು ಸರ್ಕಾರ ಶನಿವಾರ ತಿಳಿಸಿದೆ. ದಾಳಿಕೋರರಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ ಮತ್ತು ಅವರು ಇಸ್ಲಾಮಿಸ್ಟ್ ಚಳವಳಿಯ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಅವರು … Continued

ಭಾನುವಾರ ಬೆಳಿಗ್ಗೆ 6ರಿಂದ ಪುನೀತ್‌ ಅಂತಿಮಯಾತ್ರೆ ಆರಂಭ, ಕಂಠೀರವ ಸ್ಟುಡಿಯೊದಲ್ಲಿ ಅಂತ್ಯಕ್ರಿಯೆ, ಕುಟುಂಬಸ್ಥರಿಗಷ್ಟೇ ಅವಕಾಶ

ಬೆಂಗಳೂರು:ಹೃದಯಾಘಾತದಿಂದ ನಿಧನರಾದ ಕನ್ನಡದ ಸೂಪರ್‌ ಸ್ಟಾರ್‌ ಪುನೀತ ರಾಜಕುಮಾರ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ. ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಅಭಿಮಾನಿಗಳಿಗೆ ಪ್ರವೇಶವಿಲ್ಲ ಎಂದು ಸರ್ಕಾರ ತಿಳಿಸಿದೆ. ಪ್ರಸ್ತುತ ಕಂಠೀರವ ಕ್ರೀಡಾಂಗಣದಿಂದ ಭಾನುವಾರ ಬೆಳಗ್ಗೆ 6 ಗಂಟೆಯಿಂದ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೊಕ್ಕೆ ಮೆರವಣಿಗೆ … Continued

ಉಪನ್ಯಾಸಕರ ಪಾಠವು ಪ್ರೇರಣೆಯಾದಾಗ ಮಾತ್ರ ವಿದ್ಯಾಥಿಗಳಲ್ಲಿ ಜ್ಞಾನದ ಮಟ್ಟ ಹೆಚ್ಚಿಸಲು ಸಾಧ್ಯ; ಪ್ರೊ..ನಿಟ್ಟೂರ್

ಕುಮಟಾ; ವಿಷಯಗಳ ಆಳ ಜ್ಞಾನದೊಂದಿಗೆ ಕಲಾತ್ಮಕ ಬೋಧನೆಯಿಂದ ಉಪನ್ಯಾಸಕರು ಪಾಠಮಾಡಬೇಕು .ಕಲಿಸುವಿಕೆಯು ಆಕರ್ಷಕವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಇದ್ದಾಗ ಫಲಿತಾಂಶ ಗುಣಮಟ್ಟವು ಹೆಚ್ಚುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಪ್ರೊ..ಹನುಮಂತಪ್ಪ ನಿಟ್ಟೂರ್ ಹೇಳಿದರು. ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ಲೆಕ್ಕ ಶಾಸ್ತ್ರದ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, … Continued