ಭೂಮಿಯೊಳಗಿನ ರಾಸಾಯನಿಕ ಪ್ರಕ್ರಿಯೆಗಳಿಂದ ಲಘು ಭೂಕಂಪನ, ಭಯಪಡಬೇಕಾಗಿಲ್ಲ, ಐದು ದಿನಗಳಲ್ಲಿ ಸರ್ಕಾರಕ್ಕೆ ವರದಿ: ಅಧ್ಯಯನ ತಂಡ

ಕಲಬುರಗಿ: ಕಳೆದ ಅಕ್ಟೋಬರ್ 11 ರಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಮತ್ತು ಪಕ್ಕದ ಬೀದರ ಮತ್ತು ವಿಜಯಪುರದಲ್ಲಿ ಕೇಳಿ ಬರುತ್ತಿರುವ ಭೂಕಂಪನ ಸದ್ದಿನ ಕುರಿತ ವೈಜ್ಞಾನಿಕ ವರದಿಯನ್ನು ಅಧ್ಯಯನ ತಂಡಗಳು ಮುಂದಿನ 5 ದಿನದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿವೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ … Continued

ರಫೇಲ್ ಒಪ್ಪಂದದ ವಿವಾದ ಮರಜೀವಗೊಳಿಸಿದ ಫ್ರೆಂಚ್ ಮಾಧ್ಯಮ ವರದಿ, 2007 – 2012 ರ ನಡುವೆ ಕಿಕ್‌ಬ್ಯಾಕ್‌- ಮೀಡಿಯಾಪಾರ್ಟ್ ವರದಿ!

ಫ್ರೆಂಚ್ ಮಾಧ್ಯಮದ ವರದಿಯೊಂದು ಭಾರತೀಯ ವಾಯುಪಡೆಗೆ (ಐಎಎಫ್) ಫ್ರೆಂಚ್ ನಿರ್ಮಿತ ರಫೇಲ್ ವಿಮಾನಗಳನ್ನು ಖರೀದಿಸುವ ಕುರಿತು ರಾಜಕೀಯ ಚರ್ಚೆಗೆ ಮತ್ತೆ ಕಾರಣವಾಗಿದೆ. ಭಾರತ ಸರ್ಕಾರವು ಸೆಪ್ಟೆಂಬರ್ 23, 2016 ರಂದು 36 ರಫೆಲ್‌ ಜೆಟ್‌ಗಳನ್ನು ಖರೀದಿಸಲು ಫ್ರೆಂಚ್ ಸರ್ಕಾರ ಮತ್ತು ಡಸಾಲ್ಟ್ ಏವಿಯೇಷನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಯುಪಿಎ ಆಡಳಿತಾವಧಿಯಲ್ಲಿ 126 ಮಧ್ಯಮ ಬಹು-ಪಾತ್ರ ಯುದ್ಧ ವಿಮಾನಗಳನ್ನು … Continued

ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಒಂದು ವರ್ಷ: ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ಯೋಜನೆ

ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧದ ತಮ್ಮ ಆಂದೋಲನಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಒಂದು ವರ್ಷ ಪೂರೈಸಿದ ನಂತರ ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ರೈತ ಸಂಘಗಳು ನಿರ್ಧರಿಸಿವೆ. ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾದ ಒಂಬತ್ತು ಸದಸ್ಯರ ಸಮಿತಿಯು ಮಂಗಳವಾರ ಈ ನಿರ್ಧಾರ … Continued

ಗೋವಾದಲ್ಲಿ ಕನ್ನಡ ಭವನಕ್ಕೆ 10 ಕೋಟಿ ರೂ. : ಸಿಎಂ ಬೊಮ್ಮಾಯಿ

ಗೋವಾ: ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು 10 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ. ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ತಮ್ಮನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳಿಗೆ ಮುಖ್ಯಮಂತ್ರಿ ಈ ಭರವಸೆ ನೀಡಿದ್ದಾರೆ. ಉತ್ತರ … Continued

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

ಬೆಂಗಳೂರು,: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ ನಾಲ್ಕು ದಿನ ರಾಜ್ಯದ ದಕ್ಷಿಣ ಒಳನಾಡಿನ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಿದೆ. ಈ ಹಿನ್ನೆಲೆ ಎರಡು ದಿನ ರಾಜ್ಯದ ಕೆಲವೆಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡು ಕರಾವಳಿಯಲ್ಲಿ ಸುಳಿಗಾಳಿ ನಿರ್ಮಾಣವಾಗಿ ಭಾರೀ ಮಳೆ ಸುರಿಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ … Continued