ಮೈಸೂರು: ಚಾಮುಂಡಿಬೆಟ್ಟದಲ್ಲಿ ಹಾಡಹಗಲೇ ಬೈಕಿಗೆ ಅಡ್ಡ ಬಂದ ಚಿರತೆ..! ; ವಿಡಿಯೊದಲ್ಲಿ ಸೆರೆ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹಾಡಹಗಲೇ ಚಿರತೆಯೊಂದು ಕಾಣಿಸಿಕೊಂಡಿದೆ. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಇಂದು (ಶುಕ್ರವಾರ) ಬೆಳಗ್ಗೆ ಬೆಟ್ಟಕ್ಕೆ ತೆರಳುತ್ತಿದ್ದ ಬೈಕ್ ಸವಾರರೊಬ್ಬರ ಮುಂಭಾಗವೇ ಚಿರತೆ ಬಂದಿದೆ. ಇದರಿಂದ ಬೈಕ್ ಸವಾರ ತನ್ನ ಮೊಬೈಲ್ ನಲ್ಲಿ ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾನೆ. ಬೈಕ್‌ ಸವಾರ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯ ಎಡಭಾಗದ ಎತ್ತರ ಪ್ರದೇಶದಿಂದ ಜಿಗಿದು ಬೈಕಿನ … Continued

1947ರ ಸ್ವಾತಂತ್ರ್ಯ ಭಿಕ್ಷೆ ಹೇಳಿಕೆ: ಕಂಗನಾ ರಣಾವತ್‌ಗೆ ನೀಡಲಾದ ಪದ್ಮಶ್ರೀ ಹಿಂಪಡೆಯಲು ಹೆಚ್ಚುತ್ತಿರುವ ಒತ್ತಾಯದ ಕೂಗು

ನವದೆಹಲಿ: 1947ರಲ್ಲಿ ಭಾರತದ ಸ್ವಾತಂತ್ರ್ಯವನ್ನು ಭಿಕ್ಷೆ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿರುವ ನಂತರ ನಟಿ ಕಂಗನಾ ರಣಾವತ್ ಅವರಿಗೆ ನೀಡಲಾದ ಪದ್ಮಶ್ರೀ ಪುರಸ್ಕಾರವನ್ನು ಸರ್ಕಾರ ವಾಪಸ್‌ ತೆಗೆದುಕೊಳ್ಳಬೇಕು ಎಂದು ವಿವಿಧ ಪಕ್ಷಗಳ ನಾಯಕರು ಒತ್ತಾಯಿಸಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 2014 ರ ನಂತರವೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಕಂಗನಾ … Continued

ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ; ಮೂವರು ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ

ಜಲಾಲಾಬಾದ್: ಅಫ್ಘಾನಿಸ್ತಾನದ ನಂಗರ್​ಹಾರ್​ ಪ್ರಾಂತ್ಯದಲ್ಲಿರುವ ಸ್ಪಿನ್​ ಘರ್ ಪ್ರದೇಶದಲ್ಲಿನ ಮಸೀದಿಯಲ್ಲಿ ಇಂದು ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಭಾರೀ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಸ್ಥಳೀಯ ಮುಲ್ಲಾ ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಎಂದು ಆ ಪ್ರದೇಶದ ನಿವಾಸಿ ಅಟಲ್ ಶಿನ್ವಾರಿ … Continued

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ಥಾನಮಾನ ಈಗ ಮತ್ತಷ್ಟು ಮೇಲಕ್ಕೆ: ದೇಶದ ಕಮ್ಯುನಿಸ್ಟ್ ಪಕ್ಷದ ನಿರ್ಣಯ

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ಥಾನಮಾನವನ್ನು ಹೆಚ್ಚಿಸುವ ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯವು ಪಕ್ಷದ 19ನೇ ಕೇಂದ್ರ ಸಮಿತಿಯ ಆರನೇ ಸರ್ವಸದಸ್ಯರ ಅಧಿವೇಶನದ ಮುಕ್ತಐದ ಸಂದರ್ಭದಲ್ಲಿ ಬಂದಿದೆ. ಕೇಂದ್ರ ಸಮಿತಿಯ ಸುಮಾರು 300 ಉನ್ನತ ನಾಯಕರ ನಾಲ್ಕು ದಿನಗಳ ಸುದೀರ್ಘ ಸಭೆಗಳ ನಂತರ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಇದು ಚೀನಾದ ರಾಜಕೀಯ … Continued

ಕಾಶ್ಮೀರ ಕಣಿವೆಯಲ್ಲಿ ಮೂವರು ಭಯೋತ್ಪಕರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದು ಹಾಕಿವೆ. ಶ್ರೀನಗರದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಮುಜಾಹಿದ್ದೀನ್ ಗಜ್ವಾತುಲ್ ಹಿಂದ್‌ಗೆ ಸೇರಿದ ಪುಲ್ವಾಮಾದ ಅಮೀರ್ ರಿಯಾಜ್ ಎಂದು ಗುರುತಿಸಲಾದ ಒಬ್ಬ ಭಯೋತ್ಪಾದಕನನ್ನು ಸೇನೆ ಕೊಂದು ಹಾಕಿದೆ. ಈತ ಲೆಥ್‌ಪೋರಾ ಭಯೋತ್ಪಾದಕ ದಾಳಿಯ ಆರೋಪಿಗಳಲ್ಲಿ ಒಬ್ಬನ … Continued

ಪ್ರಯಾಣಿಕರೇ ಹುಷಾರ್‌… ಇನ್ಮುಂದೆ ಸಾರಿಗೆ ಬಸ್‌ಗಳಲ್ಲಿ ಮೊಬೈಲ್‌ನಲ್ಲಿ ಹಾಡುಗಳನ್ನು ಜೋರಾಗಿ ಹಾಕಿದ್ರೆ ಅರ್ಧದಲ್ಲೇ ಇಳಿಸ್ತಾರೆ..!

  ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಮೊಬೈಲ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಪ್ಲೇ ಮಾಡುವುದನ್ನು ನಿಷೇಧಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರಿಗೆ ಆಗುವ ಕಿರಿಕಿರಿ ತಪ್ಪಿಸಲು ಈ ಆದೇಶ ಜಾರಿಗೆ ತಂದಿದೆ. ಪ್ರಯಾಣಿಕರು ಕೇಳಬೇಕೆಂದಿದ್ದರೆ ಇಯರ್‌ ಫೋನ್‌ಗಳನ್ನು ಹಾಕಿ ಇತರರಿಗೆ ತೊಂದರೆಯಾಗದಂತೆ ಕೇಳಬಹುದು. ಸಾರ್ವಜನಿಕರು … Continued

ಕೋವಿಡ್‌ ಲಸಿಕೆ ತೆಗೆದುಕೊಂಡ್ರೆ ರೆಫ್ರಿಜರೇಟರ್‌, ವಾಷಿಂಗ್‌ ಮಶಿನ್‌, ಎಲ್‌ಇಡಿ ಟಿವಿ ಬಹುಮಾನದ ಭಾಗ್ಯ..!

ಚಂದ್ರಾಪುರ: ಕೋವಿಡ್ -19 ವಿರುದ್ಧ ಹೆಚ್ಚು ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹಿಸುವ ಪ್ರಯತ್ನದ ಅಂಗವಾಗಿ ಮಹಾರಾಷ್ಟ್ರದ ಚಂದ್ರಾಪುರ್ ಮುನ್ಸಿಪಲ್ ಕಾರ್ಪೊರೇಶನ್ ಲಸಿಕೆ ತೆಗೆದುಕೊಂಡವರಿಗೆ ಬಂಪರ್ ಲಕ್ಕಿ ಡ್ರಾ ಘೋಷಿಸಿದೆ. ಇದು ಎಲ್ಇಡಿ ಟಿವಿಗಳು, ರೆಫ್ರಿಜರೇಟರ್‌ಗಳಿಂದ ಹಿಡಿದು ವಾಷಿಂಗ್ ಮೆಷಿನ್‌ಗಳ ವರೆಗಿನ ಬಹುಮಾನಗಳನ್ನು ಒಳಗೊಂಡಿದೆ..! ನವೆಂಬರ್ 12 ರಿಂದ 24ರ ವರೆಗೆ ಲಸಿಕೆ ಹಾಕಿಸಿಕೊಳ್ಳಲು ಲಸಿಕೆ … Continued

ನನಗೆ… ಒಪ್ಪಿಗೆ ಇಲ್ಲ..! ಕುಡಿದು ಬಂದ ವರನನ್ನು ಮದುವೆಯಾಗಲು ನಿರಾಕರಿಸಿದ ವಧು

ರಾಜ್‌ಗಢ: ಭಾರತೀಯ ವಿವಾಹವು ಚಲನಚಿತ್ರದ ಕಥಾವಸ್ತುಕ್ಕಿಂತ ಕಡಿಮೆಯಿಲ್ಲ. ಯಾಕೆಂದರೆ ವಧುಗಳು ಬೇರೆಬೇರೆ ಕಾರಣಗಳಿಗಾಗಿ ಮದುವೆಯಾಗಲು ನಿರಾಕರಿಸಿದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಇಂಥದ್ದೇ ಒಂದು ಘಟನೆ ನಡೆದದ ಬಗ್ಗೆ ವರದಿಯಾಗಿದೆ. ಮದುವೆಯ ಸ್ಥಳದಲ್ಲಿ ವರ ಕುಡಿದು ಬಂದ ಕಾರಣಕ್ಕೆ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ದಿ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, … Continued

ರಾಜ್ಯದಲ್ಲಿ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಮರು ಜಾರಿಗೆ ಚಿಂತನೆ

ಬೆಂಗಳೂರು : ರಾಜ್ಯದ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕರ್ನಾಟಕದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ(Yashaswini Health Insurance Scheme) ಮರು ಜಾರಿ ಮಾಡುವ ಚಿಂತನೆ ನಡೆಸಿದೆ. ಈ ಕುರಿತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾಹಿತಿ ನೀಡಿದ್ದಾರೆ. ರಾಜ್ಯದ ಸಹಕಾರಿ ಕ್ಷೇತ್ರ ಮತ್ತು ಬಡ ರೈತರ ಪಾಲಿಕೆ ಈ ಯೋಜನೆ ಸಂಜೀವಿನಿಯಾಗಲಿದೆ. ಸರ್ಕಾರದ … Continued

ಭಾರತದಲ್ಲಿ 12,516 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ನಿನ್ನೆಗಿಂತ 4.4% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 12,516 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 4.4% ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಒಟ್ಟು ಕೋವಿಡ್‌ ಪ್ರಕರಣ ಈಗ 3,44,14,186 ಆಗಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ -19 ನಿಂದಾಗಿ 501 ಸಾವುಗಳು ವರದಿಯಾದ ನಂತರ ಒಟ್ಟು ಸಾವಿನ … Continued