ರಾಜ್ಯದಲ್ಲಿ ಶೀಘ್ರವೇ ಮತಾಂತರ ವಿರೋಧ ಕಾನೂನು :ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಮತಾಂತರದ ಆರೋಪ ಕೇಳಿಬರುತ್ತಿದೆ. ಬಿಜೆಪಿ ಶಾಸಕರೇ ಮತಾಂತರ ನಡೆಯುತ್ತಿರುವ ಆರೋಪ ಮಾಡುತ್ತಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿಯೂ ಮತಾಂತರ ವಿಚಾರ ಪ್ರಸ್ತಾಪವಾಗಿತ್ತು. ಕರ್ನಾಟಕದಲ್ಲಿ ಶೀಘ್ರದಲ್ಲಿಯೇ ಮತಾಂತರ ವಿರೋಧಿ ಕಾನೂನು (Anti Conversion Law) ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಾಂತರ ವಿರೋಧಿ ಕಾಯಿದೆ ಜಾರಿಗೆ ತರುವ … Continued

2020-21ನೇ ಸಾಲಿನ ಶೇ.15 ಬೋಧನಾ ಶುಲ್ಕ ವಾಪಸ್‌ ಮಾಡಲು ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: 2020-21 ನೇ ಸಾಲಿನಲ್ಲಿ ಖಾಸಗಿ ಶಾಲೆಗಳು (private school) ಪೂರ್ಣ ಶುಲ್ಕ ಪಡೆದಿದ್ದರೆ, ಹೆಚ್ಚುವರಿ ಶುಲ್ಕವನ್ನು ವಾಪಸ್ ಮಾಡುವಂತೆ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಆದೇಶ ಮಾಡಿದೆ. ಈ ಹಿಂದೆ ಶುಲ್ಕ ಕಡಿಮೆ ಮಾಡುವಂತೆ ಪೋಷಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. 2020-21 ನೇ ಸಾಲಿನ ಶೇಕಡಾ 30 ರಷ್ಟು ಶುಲ್ಕ(Fees) ಕಡಿತ ಮಾಡುವಂತೆ ಸರ್ಕಾರ … Continued

ಭಾರತದಲ್ಲಿ 11,850 ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 5.3% ಕಡಿಮೆ

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 11,850 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಶುಕ್ರವಾರಕ್ಕಿಂತ 5.3 ರಷ್ಟು ಕಡಿಮೆಯಾಗಿದೆ, ಇದು ಒಟ್ಟು ಸಂಖ್ಯೆಯನ್ನು 3,44,26,036 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 555 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,63,245ಕ್ಕೆ ಏರಿದೆ. ಇದೇ ಸಮಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 12,403 … Continued

ಯಾದಗಿರಿ: ಆಟೋ-ಲಾರಿ ಡಿಕ್ಕಿ :ಮೂವರು ಸಾವು

ಯಾದಗಿರಿ: ಆಟೋ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ನಗರದ ಮುದ್ನಾಳ್ ಕ್ರಾಸ್ ಬಳಿ ಸಂಭವಿಸಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಟೋದಲ್ಲಿದ್ದ ಇತರ 6 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಟೋ ಚಾಲಕ, ಆಟೋದಲ್ಲಿದ್ದ ಮಗು ಹಾಗೂ ಮಗುವಿನ … Continued

ಎಬಿಪಿ-ಸಿವೋಟರ್- ಐಎಎನ್‌ಎಸ್‌ ಸಮೀಕ್ಷೆ: ಉತ್ತರ ಪ್ರದೇಶ ಚುನಾವಣೆಯಲ್ಲಿ 108 ಸ್ಥಾನ ಕಳೆದುಕೊಳ್ಳಲಿರುವ ಬಿಜೆಪಿ..ಆದ್ರೂ ಅಧಿಕಾರಕ್ಕೆ

ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಪಕ್ಷವಾಗಿ ಸಮೀಕ್ಷೆಯಲ್ಲಿ ಕಂಡುಬರುತ್ತಿದೆ. ಆದರೆ ಸಮಾಜವಾದಿ ಪಕ್ಷವು ವೇಗವಾಗಿ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿದ್ದು, ಬಿಜೆಪಿ ಈಗ 108 ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ ಎಂದು ಎಬಿಪಿ-ಸಿವೋಟರ್- ಐಎಎನ್‌ಎಸ್‌ ಸಮೀಕ್ಷೆ ಹೇಳಿದೆ. ಆದರೆ ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಪ್ರಬಲವಾದ ಪುನರಾಗಮನವನ್ನು ಮಾಡುತ್ತಿದೆ ಎಂದು ಅದು … Continued

ನ.​​16ರಿಂದ ಭಕ್ತರ ದರ್ಶನಕ್ಕೆ ಶಬರಿಮಲೆ ಮುಕ್ತ.. ಪ್ರತಿದಿನ 25 ಸಾವಿರ ಭಕ್ತರಿಗೆ ಮಾತ್ರ ಅವಕಾಶ

ತಿರುವನಂತಪುರಂ(ಕೇರಳ) : ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನವೆಂಬರ್​ 16ದಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಪ್ರತಿದಿನ 25 ಸಾವಿರ ಭಕ್ತಾಧಿಗಳಿಗೆ ದರ್ಶನ ಪಡೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ದೇವಾಲಯದ ಅಧ್ಯಕ್ಷರು ತಿಳಿಸಿದ್ದಾರೆ. ಎರಡು ತಿಂಗಳ ವಾರ್ಷಿಕ ಧಾರ್ಮಿಕ ಯಾತ್ರೆಯ ಅವಧಿ ಆರಂಭಗೊಂಡಿರುವ ಕಾರಣ, ಪ್ರತಿದಿನ 25 ಸಾವಿರ ಭಕ್ತರಿಗೆ … Continued

ಕೇರಳದ ವಯನಾಡ್ ಜಿಲ್ಲೆಯಲ್ಲಿ ನೊರೊ ವೈರಸ್ ಸೋಂಕು ಪತ್ತೆ..!

ವಯನಾಡು : ಕೊರೊನಾ ವೈರಸ್‌ ಸೋಂಕಿನ ಆರ್ಭಟದ ಮಧ್ಯೆಯೇ, ಝಿಕಾ ವೈರಸ್‌ ನಂತರ ಕೇರಳದಲ್ಲಿ ಈಗ ನೊರೊ ವೈರಸ್‌ ಪತ್ತೆಯಾಗಿದೆ. ನೊರೊ ವೈರಸ್‌ (Norovirus) ಪ್ರಕರಣದ ಕೇರಳದಲ್ಲಿ ದೃಢಪಟ್ಟಿದೆ. ವಯನಾಡಿನ ವೈತಿರಿ ಜಿಲ್ಲೆಯ ಪೊಕೋಡ್‌ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಮಾರಣಾಂತಿಕ ವೈರಸ್‌ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ … Continued