ದೇವೇಗೌಡರ ಕುಟುಂಬದಿಂದ ರಾಜಕೀಯಕ್ಕೆ ಮತ್ತೊಬ್ಬರ ಎಂಟ್ರಿ : ರೇವಣ್ಣನ ಮತ್ತೊಬ್ಬ ಪುತ್ರನಿಗೆ ಪರಿಷತ್‌ ಟಿಕೆಟ್‌ ಘೋಷಣೆ

posted in: ರಾಜ್ಯ | 0

ಹಾಸನ: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡರ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ. ದೇವೇಗೌಡರ ಮೊಮ್ಮಗ, ಎಚ್​.ಡಿ.ರೇವಣ್ಣ ಅವರ ಮತ್ತೊಬ್ಬ ಪುತ್ರ ಸೂರಜ್​​ ರೇವಣ್ಣಗೆ ಜೆಡಿಎಸ್​​ (JDS) ಟಿಕೆಟ್​​ ಘೋಷಿಸಲಾಗಿದೆ. ಡಿ.10ರಂದು ನಡೆಯಲಿರುವ ವಿಧಾನ ಪರಿಷತ್​​ ಚುನಾವಣೆಗೆ ಹಾಸನದಿಂದ ಸೂರಜ್​​ ರೇವಣ್ಣ ಸ್ಪರ್ಧಿಸಲಿದ್ದಾರೆ. ಜೆಡಿಎಸ್​ ನಿಂದ ಸೂರಜ್​ ರೇವಣ್ಣಗೆ ಟಿಕೆಟ್​ ನೀಡಿರುವುದಾಗಿ ಜೆಡಿಎಸ್ … Continued

ವಿದ್ಯಾರ್ಥಿಗಳೇ ಗಮನಿಸಿ..ಪ್ರಥಮ-ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಮುಂದೂಡಿಕೆ: ಹೊಸ ದಿನಾಂಕ ಪ್ರಕಟ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. 2021-22 ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಸಂಬಂಧ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ದಿನಾಂಕವನ್ನು ಘೋಷಿಸಿದೆ. ಈ ಮೊದಲು ಪರೀಕ್ಷೆಯನ್ನು ನವೆಂಬರ್ 29 ರಿಂದ ನಡೆಸಲು ನಿರ್ಧರಿಸಲಾಗಿತ್ತು. ಈಗ ಡಿಸೆಂಬರ್ 9ರಿಂದ … Continued

ಭಾರೀ ಮಳೆ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

posted in: ರಾಜ್ಯ | 0

ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಆರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಇತರ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಂಜಾಗ್ರತೆ ಕ್ರಮಗಳೊಂದಿಗೆ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ನಾಳೆ  ಹಾಗೂ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜ ನಗರ ಜಿಲ್ಲೆಗಳಲ್ಲಿ … Continued

ಇಬ್ಬರು ಪೊಲೀಸ್‌ ಅಧಿಕಾರಿಗಳಿಂದ ನ್ಯಾಯಾಧೀಶರ ಮೇಲೆ ಹಲ್ಲೆ, ಬಂದೂಕು ತೋರಿಸಿ ಬೆದರಿಕೆ..! : ಬಂಧನ

ಮಧುಬನಿ(ಬಿಹಾರ): ಬಿಹಾರದಲ್ಲಿ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಇಂದು (ಗುರುವಾರ) ಬಂಧಿಸಲಾಗಿದೆ. ವಿಚಾರಣೆಯ ಮಧ್ಯದಲ್ಲಿ ನ್ಯಾಯಾಲಯದ ಕೊಠಡಿಗೆ ಪ್ರವೇಶಿಸಿದ ಅಧಿಕಾರಿಗಳು ಮಧುಬನಿ ಜಿಲ್ಲೆಯ ಝಂಜರ್‌ಪುರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ (ಎಡಿಜೆ) ಅವಿನಾಶ್ ಕುಮಾರ್ ಅವರನ್ನು ಥಳಿಸಿದ್ದಾರೆ. ಅವರತ್ತ ಬಂದೂಕು ತೋರಿಸಿದ್ದಾರೆ ಎಂದು ವರದಿಯಾಗಿದೆ. ನ್ಯಾಯಾಧೀಶರು ಸುರಕ್ಷಿತವಾಗಿದ್ದಾರೆ. ಆದರೆ … Continued

ಪ್ರಕಾಶ್ ಪಡುಕೋಣೆಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಜೀವಮಾನ ಸಾಧನೆ ಪ್ರಶಸ್ತಿ

ನವದೆಹಲಿ:: ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಈ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿ ಆಯೋಗದ ಶಿಫಾರಸಿನ ಮೇರೆಗೆ ಬಿಡಬ್ಲ್ಯುಎಫ್ ಅವರನ್ನು ಆಯ್ಕೆ ಮಾಡಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ ಅವರ ಹೆಸರನ್ನು ಪ್ರಶಸ್ತಿಗೆ ಕಳುಹಿಸಿತ್ತು. ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಮತ್ತು … Continued

ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ಮೂರು ಕಪ್ಪು ಸರ್ಪಗಳ ಫೋಟೋಗಳು..!

ನವದೆಹಲಿ: ಡಿಜಿಟಲ್ ಕ್ರಾಂತಿಯ ನಂತರ ಪ್ರಾಣಿ ಪ್ರಪಂಚದ ವಿಡಿಯೋಗಳು, ಫೋಟೋಗಳು ಕೂಡ ಈಗ ಜನಮಾನಸದಲ್ಲಿ ಭಾರೀ ಸಂವೇದನೆಯ ವಿಷಯವಾಗಿದೆ, ಇಂಥದ್ದೇ ಸಂವೇದನೆ ಉಂಟು ಮಾಡುವ ಕಪ್ಪು ಬಣ್ಣದ ಮೂರು ಹಾವುಗಳ ಈ ಫೋಟೋ ಅಂತರ್ಜಾಲದಲ್ಲಿ ಭಾರೀ ವೈರಲ್‌ ಆಗಿದೆ. ದು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದ್ದು. ಮೂರು ಕಪ್ಪುಬಣ್ಣದ ಸರ್ಪಗಳ ಚಿತ್ರವೊಂದು ನೆಟ್ಟಲ್ಲಿ ಭಾರೀ ಸದ್ದು … Continued

ನಾಲ್ಕು ದಿನಗಳ ಬಿಜೆಪಿ ಜನಸ್ವರಾಜ್ ಯಾತ್ರೆ ಆರಂಭ

posted in: ರಾಜ್ಯ | 0

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಗುರುವಾರ(ನ.18)ದಿಂದ ರಾಜ್ಯಾದ್ಯಂತ ಜನಸ್ವರಾಜ್ ಯಾತ್ರೆ ಆರಂಭಿಸಿದೆ. 4 ತಂಡಗಳಲ್ಲಿ ಬಿಜೆಪಿ ನಾಯಕರು ರಾಜ್ಯಾದ್ಯಂತ ಜನ ಸ್ವರಾಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಮುಖಂಡರ ತಂಡ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಜನಸ್ವರಾಜ್ ಯಾತ್ರೆ ಆರಂಭಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲು ನೇತೃತ್ವದ … Continued

ಚರ್ಮದಿಂದ ಚರ್ಮ ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಎನ್ನುವ ಬಾಂಬೆ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಬಟ್ಟೆ ತೆಗೆಯದೆ ಮಕ್ಕಳ ಖಾಸಗಿ ಅಂಗ ಸ್ಪರ್ಶಿಸಿದರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ʼಲೈಂಗಿಕ ದೌರ್ಜನ್ಯʼ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಕೆಲ ತಿಂಗಳುಗಳ ಹಿಂದೆ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್‌ ಗುರುವಾರ ರದ್ದುಗೊಳಿಸಿದೆ. ಪೊಕ್ಸೊ ಕಾಯ್ದೆಯಡಿ ‘ಲೈಂಗಿಕ ಆಕ್ರಮಣ’ದ ಅಪರಾಧ ನಿರ್ಧರಿಸುವ ಪ್ರಮುಖ … Continued

ನೀವು ಎಲ್ಲಿದ್ದೀರೆಂದು ಉತ್ತರಿಸುವ ವರೆಗೂ ಪ್ರಕರಣದ ವಿಚಾರಣೆ ಮಾಡುವುದಿಲ್ಲ: ಪರಮ್‌ಬೀರ್‌ ಸಿಂಗ್‌ಗೆ ತಿಳಿಸಿದ ಸುಪ್ರೀಂಕೋರ್ಟ್

posted in: ರಾಜ್ಯ | 0

ನವದೆಹಲಿ: ತಲೆ ಮರೆಸಿಕೊಂಡಿರುವ ಕಾರಣಕ್ಕೆ ‘ಘೋಷಿತ ಅಪರಾಧಿ’ ಎಂದು ಪರಿಗಣಿಸಲ್ಪಟ್ಟಿರುವ ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್‌ಬೀರ್‌ ಸಿಂಗ್ ಅವರು ತಾನು ಎಲ್ಲಿದ್ದೇನೆಂದು ತಿಳಿಸುವವರೆಗೂ ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವ ತನಿಖೆ ಪ್ರಶ್ನಿಸಿರುವ ಅವರ ಅರ್ಜಿಯ ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ನ್ಯಾಯಾಲಯಕ್ಕೆ ಮನವಿಯನ್ನು ವಕೀಲರ ಮೂಲಕ ಸಲ್ಲಿಸಲಾಗುತ್ತಿದೆಯೇ ವಿನಃ ಅವರೆಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು … Continued

ಈ ರಾಜ್ಯದಲ್ಲಿ ಕೋವಿಡ್‌ ಲಸಿಕೆ ಹಾಕದವರಿಗೆ ಮುಂದಿನ ವರ್ಷದಿಂದ ರೇಶನ್‌ ಬಂದ್‌..!.!

ಭೋಪಾಲ್‌ : ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆ ಅಭಿಯಾನವನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಆದರೆ ಬಹುತೇಕ ರಾಜ್ಯಗಳಲ್ಲಿನ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅದರ ವೇಗ ಹೆಚ್ಚಿಸಲು ಸರ್ಕಾರಗಳು ಕಸರತ್ತು ನಡೆಸುತ್ತಿದ್ದು ಈಗ ಮಧ್ಯಪ್ರದೇಶ ರಾಜ್ಯ ಕೋವಿಡ್‌ ಲಸಿಕೆ ಪಡೆಯದವರಿಗೆ ಪಡಿತರ ಸಾಮಗ್ರಿ ನೀಡದಿರಲು ನಿರ್ಧರಿಸಿದೆ. ಮಧ್ಯಪ್ರದೇಶದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು … Continued