ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ಮುಂದೂಡಿಕೆ :ವರದಿ

ಬೆಂಗಳೂರು: ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ, ಆದರೆ ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ಮಂಡಳಿಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈ ಮೊದಲು ಪರೀಕ್ಷೆಯನ್ನು ನವೆಂಬರ್ 29 ರಿಂದ ನಡೆಸಲು ನಿರ್ಧರಿಸಲಾಗಿತ್ತು.ಇತ್ತೀಚೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆ ಮಾದರಿಯಲ್ಲಿ ಪ್ರಮುಖ ಬದಲಾವಣೆಯಾದ ಕಾರಣ, ಪರೀಕ್ಷೆ ಮುಂದೂಡಲಾಗಿದೆ ಎನ್ನಲಾಗಿದೆ.ಪಾಲಕರು, … Continued

ಕೊಲ್ಲೂರು ದೇವಾಲಯದ ಅಧ್ಯಕ್ಷರ ಆಯ್ಕೆ ಅಸಿಂಧು ಎಂದ ಹೈಕೋರ್ಟ್

ಬೆಂಗಳೂರು: ಕೊಲ್ಲೂರಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಾಲಯದ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಅವರ ಆಯ್ಕೆಯನ್ನು ರಾಜ್ಯ ಹೈಕೋರ್ಟ್ ಅಸಿಂಧು ಎಂದು ಹೇಳಿದೆ. ನ್ಯಾ. ಕೃಷ್ಣ ಎಸ್. ದೀಕ್ಷಿತ್ ಏ.26, 2021ರ ಆಯ್ಕೆ ಪ್ರಕ್ರಿಯೆಗಳನ್ನು ರದ್ದುಗೊಳಿಸಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಉಡುಪಿ ಜಿಲ್ಲೆಯ ಗೋಪಾಲಕೃಷ್ಣ ಹಾಗೂ ಮೂವರು … Continued

ಕ್ರಿಪ್ಟೋ ಕರೆನ್ಸಿ ತಪ್ಪು ಕೈಗಳಿಗೆ ಹೋಗದಂತೆ ಖಚಿತ ಪಡಿಸಿಕೊಳ್ಳಬೇಕು: ಜಾಗತಿಕ ನಾಯಕರಿಗೆ ಕರೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯ ಬಗ್ಗೆ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಕರೆನ್ಸಿಯಲ್ಲಿ ಲಕ್ಷಾಂತರ ಭಾರತೀಯರು ವಿದೇಶಗಳಲ್ಲಿ ಮಾಡಿದ ಹೂಡಿಕೆ ನಿರ್ವಹಿಸಲು ಮತ್ತು ಮೇಲ್ವಿಚಾರಣೆಗೆ ಅಗತ್ಯವಿರುವ ನಿಯಂತ್ರಣದ ಚೌಕಟ್ಟು ರೂಪಿಸುವ ಸಂಬಂಧ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಯಾಕೆಂದರೆ ಕ್ರಿಪ್ಟೋ ಕರೆನ್ಸಿ ತಪ್ಪು ಕೈಗಳಿಗೆ ಹೋಗದಂತೆ ಖಚಿತಪಡಿಸಿಕೊಳ್ಳ ಬೇಕಿದೆ … Continued

ನಡುರಾತ್ರಿ ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಬೆಂಗಳೂರು: ಚಲಿಸುವ ರೈಲಿನ ಬಾಗಿಲಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿದ್ದು, ಶ್ರೀರಂಗಪಟ್ಟಣದಲ್ಲಿ ಶವ ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಣ್ಣೆಚಕ್ಕನಹಳ್ಳಿಯ ಅಭಿಷೇಕ್ (೧೯) ಮೃತ ಯುವಕ ಎಂದು ಗುರುತಿಸಲಾಗಿದೆ. ಗಾಂಧಿನಗರದ ಬಾರ್ ಒಂದರಲ್ಲಿ ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ನ.೬ರಂದು ರಾತ್ರಿ ಸ್ನೇಹಿತರ ಜೊತೆ … Continued

ಭಾರತದ ಇಬ್ಬರು ಆಟಗಾರರ ಹೆಸರಿನೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್‌ ತಂಡದ ಪರ ಆಡುತ್ತಿರುವ ಬೆಂಗಳೂರು ಮೂಲದ ಕನ್ನಡಿಗ..!

ಬುಧವಾರ ಜೈಪುರದಲ್ಲಿ ಬುಧವಾರ ನಡೆದ ಟೀಮ್ ಇಂಡಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕನ್ನಡಿಗ ಬೆಂಗಳೂರು ಮೂಲದ ರಚಿನ್‌ ರವಿ ಅವರು ನ್ಯೂಜಿಲೆಂಡ್ ಪರ ಆಡಿದ್ದಾರೆ..! 21 ವರ್ಷದ ಬೆಂಗಳೂರಿನ ರಚಿನ್ ರವೀಂದ್ರ ಇದೀಗ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಸದ್ಯ ನ್ಯೂಜಿಲೆಂಡ್​ನಲ್ಲಿ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಬೆಂಗಳೂರು ಮೂಲದ ರವಿ ಕೃಷ್ಣಮೂರ್ತಿ ಹಾಗೂ​ … Continued

ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ

ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ ತಾಯಿಯಾಗಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಅವರು ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರೀತಿ ಜಿಂಟಾ ಹಾಗೂ  ಪತಿ ಜಿನ್ ಗುಡ್​ಎನಾಫ್ ದಂಪತಿ ಅವಳಿ- ಜವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಮಕ್ಕಳಿಗೆ ಜೈ ಜಿಂಟಾ ಗುಡ್​​ಎನಾಫ್ಹಾಗೂ ಜಿಯಾ ಜಿಂಟಾ ಗುಡ್​​ಎನಾಫ್ ಎಂದು ನಾಮಕರಣ ಮಾಡಲಾಗಿದೆ ಎಂದು … Continued

ಉಪ್ಪಿಟ್ಟು ಸೇವಿಸಿ 52 ವಿದ್ಯಾರ್ಥಿಗಳು ಅಸ್ವಸ್ಥ..ಉಪ್ಪಿಟ್ಟಿನಲ್ಲಿ ಹಾವಿನಮರಿ ಪತ್ತೆ..!

ಯಾದಗಿರಿ : ಬೆಳಿಗ್ಗೆ ಉಪ್ಪಿಟ್ಟು ಸೇವಿಸಿ 52 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆ ಸೇರಿರುವ ಘಟನೆ ಯಾದಗಿರಿ ತಾಲೂಕಿನ ಅಬ್ಬೆತುಮಕೂರನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಇಂದು (ಗುರುವಾರ) ಬೆಳಿಗ್ಗೆ ಉಪಾಹಾರವಾಗಿ ವಿದ್ಯಾರ್ಥಿಗಳು ಉಪ್ಪಿಟ್ಟು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಇನ್ನು ಉಪಹಾರದಲ್ಲಿ ಸತ್ತ ಹಾವಿನ ಮರಿ ಇರುವುದು ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ … Continued

ಹಸುವಿನ ಸಗಣಿ ತಿನ್ನುವ ಹರ್ಯಾಣದ ತಜ್ಞ ವೈದ್ಯ..ಆರೋಗ್ಯಕ್ಕಾಗಿ ತಿಂತೇನೆ ಅಂತಾರೆ….ವೀಕ್ಷಿಸಿ

ಹಸುವಿನ ಸಗಣಿ ಮತ್ತು ಮೂತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಹೊಂದಿದೆ ಎಂದು ಭಾರತೀಯರು ನಂಬಿದ್ದಾರೆ. ಹಸುವಿನ ಸಗಣಿ ಮತ್ತು ಮೂತ್ರದ ಬಗೆಗಿನ ಅದ್ಭುತ ಪ್ರಯೋಜನಗಳ ಕುರಿತು ಸಾಕಷ್ಟು ವಿಡಿಯೊಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಈಗ ವೈದ್ಯರೊಬ್ಬರು ಹಸುವಿನ ಸಗಣಿ ತಿನ್ನುತ್ತ ಅದು ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೊದಲ್ಲಿ, … Continued

ಸಚಿವಾಲಯದ ಎಲ್ಲ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ: ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು: ಸಚಿವಾಲಯದ ಎಲ್ಲ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಎಲ್ಲ ಅಧಿಕಾರಿ/ಸಿಬ್ಬಂದಿ ಹಾಜರಾತಿ ದಾಖಲಿಸುವುದು ಕಡ್ಡಾ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ನೂತನ ಆದೇಶ ಹೊರಡಿಸಿರುವ ಅವರು, ಕೆಸಿಎಸ್‍ಆರ್‌ ಟಿ ಅನ್ವಯ ಕಚೇರಿಗಳಿಗೆ ನಿಗದಿತ ಸಮಯದೊಳಗೆ ಹಾಜರಾಗುವುದು ಹಾಗೂ ಪ್ರತಿ ದಿನ ಒಟ್ಟು 7.30 ಗಂಟೆ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. … Continued

ಭಾರತದಲ್ಲಿ 11,919 ಹೊಸ ಕೋವಿಡ್-19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,919 ಹೊಸ ಪ್ರಕರಣಗಳು ದಾಖಲಾಗಿದೆ. 11,242 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾಋೆ ಹಾಗೂ 470 ಸಾವುಗಳು ವರದಿಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಸಕ್ರಿಯ ಪ್ರಕರಣ 1,28,762ಕ್ಕೆ ಈಗ ಏರಿದೆ. ಕೇರಳದಲ್ಲಿ 6,849 ಹೊಸ ಪ್ರಕರಣಗಳು, 6,046 ಚೇತರಿಕೆ ಮತ್ತು 61 ಸಾವುಗಳು ವರದಿಯಾಗಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ … Continued