ಭಾರತದೊಳಗೆ ಉಗ್ರರ ಕಳುಹಿಸುವವರು ಹಿರಿಯಣ್ಣನಾಗಲು ಹೇಗೆ ಸಾಧ್ಯ?: ಇಮ್ರಾನ್‌ ನನ್ನ ಹಿರಿಯಣ್ಣ ಎಂಬ ಸಿಧು ಹೇಳಿಕೆಗೆ ಮನೀಶ್‌ ತಿವಾರಿ ಆಕ್ಷೇಪ

ನವದೆಹಲಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ತನ್ನ ಹಿರಿಯಣ್ಣ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ ನಂತರ ಅದೇ ಪಕ್ಷದ ರಾಷ್ಟ್ರೀಯ ವಕ್ತಾರ ಮನೀಶ್ ತಿವಾರಿ ಪಿಪಿಸಿಸಿ ಮುಖ್ಯಸ್ಥ ಸಿಧು ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಾಕ್ ಪ್ರಧಾನಿ ಎಂದಿಗೂ ಭಾರತದ ಅಣ್ಣನಾಗಲು … Continued

ಮತಾಂತರ ವಿರೋಧಿ ಮಸೂದೆಗೆ ಆತಂಕ: ಸಂವಿಧಾನ ಮತಾಂತರ ನಿರ್ಬಂಧಿಸುವುದಿಲ್ಲ ಎಂದ ಬೆಂಗಳೂರು ಆರ್ಚ್‌ಬಿಷಪ್

ಬೆಂಗಳೂರು: ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ಮಂಡಿಸಲಿರುವ ಮತಾಂತರ ವಿರೋಧಿ ಮಸೂದೆಯ ಬಗ್ಗೆ ಕ್ರೈಸ್ತ ಸಮುದಾಯವು ಆತಂಕಕ್ಕೊಳಗಾಗಿದೆ ಎಂದು ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೋ ಶನಿವಾರ ಹೇಳಿದ್ದಾರೆ. ಅಂತಹ ಮಸೂದೆಯು ರಾಜ್ಯದಲ್ಲಿ ಕೋಮು ಅಶಾಂತಿಯನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಪೀಟರ್ ಮಚಾಡೊ, “ನಾವು ಕ್ರೈಸ್ತರು ಮತಾಂತರ ವಿರೋಧಿ ಮಸೂದೆಯ ಬಗ್ಗೆ … Continued

ಮಗುವಿಗೆ ಜನ್ಮ ನೀಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ !

ಮಂಗಳೂರು: ಎಸ್ಎಸ್ಎಲ್ಸಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಅಪ್ರಾಪ್ತೆ ಬಾಲಕಿ ಗರ್ಭ ಧರಿಸಲು ಕಾರಣನಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 10ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿಯ ಉದರದಲ್ಲಿ ಗೆಡ್ಡೆ ಬೆಳೆದಿದೆ ಎಂದು ತಿಳಿದು ಹೆತ್ತವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಪರೀಕ್ಷೆ ನಡೆಸಿದಾಗ ವಿದ್ಯಾರ್ಥಿನಿ ಗರ್ಭಿಣಿ ಎಂದು ತಿಳಿದು ಬಂದಿದೆ. … Continued

ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣ ಎಂದು ಹೇಳಿ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ ಸಿಧು

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು (Navjot Singh Sidhu) ಈಗ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಸಿಧು ಹೇಳಿಕೆಯಿಂದ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಇಂದು ಪಾಕಿಸ್ತಾನದ ಕರ್ತಾರ್‌ಪುರ ಸಾಹಿಬ್​ಗೆ ಭೇಟಿ ನೀಡಿರುವ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣ ಎಂದು ಹೇಳುವ ಮೂಲಕ ಭಾರತೀಯರ ಕೆಂಗಣ್ಣಿಗೆ … Continued

ಭಟ್ಕಳ ಸಮೀಪ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಬೃಹತ್‌ ತಿಮಿಂಗಲ…! ವಿಡಿಯೊದಲ್ಲಿ ಸೆರೆ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ತಿಮಿಂಗಿಲವೊಂದು ಕಾಣಿಸಿಕೊಂಡು ಮೀನುಗಾರರು ಆತಂಕಕ್ಕೆ ಒಳಗಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಬ್ಬಿ ಸಮುದ್ರದ ಕಡಲ ತೀರದಲ್ಲಿ ನಡೆದಿದೆ. ಸಾಮಾನ್ಯವಾಗಿ ತಿಮಿಂಗಲುಗಳು ಆಳಸಮುದ್ರದಲ್ಲಿ ಇರುತ್ತವೆ. ಮತ್ತು ಕಾಣಿಸಿಕೊಳ್ಳುವುದು ಅಪರೂಪ. ಇಂದು (ಶನಿವಾರ) ಬೆಳಿಗ್ಗೆ ಸಮುದ್ರದಲ್ಲಿ ಅದು ಮೀನುಗಾರರಿಗೆ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಮೀನುಗಾರರು … Continued

ರೈತರ ಮೇಲಿನ ಸುಳ್ಳು ಎಫ್‌ಐಆರ್ ರದ್ದುಗೊಳಿಸಿ, ಎಂಎಸ್‌ಪಿ ಕಾನೂನು ಬದ್ಧಗೊಳಿಸಿ : ಪ್ರಧಾನಿಗೆ ಪತ್ರ ಬರೆದ ವರುಣ್‌ ಗಾಂಧಿ

ನವದೆಹಲಿ: ಬಿಜೆಪಿ ಸಂಸದ ವರುಣ್​ ಗಾಂಧಿ ರೈತರ ಹೋರಾಟಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಅನೇಕ ಸಂದರ್ಭಗಳಲ್ಲಿ ವಿರೋಧಿಸಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದ ಬೆನ್ನಲ್ಲೇ ವರುಣ್​ ಗಾಂಧಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಕೆಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಕೃಷಿ ಕಾಣೂನು ಹಿಂಪಡೆಯುವುದಾಗಿ ಭರವಸೆ ನೀಡಿರುವ ಪ್ರಧಾನಿ … Continued

ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಗಾಯಕಿ…!

ಆಘಾತಕಾರಿ ಘಟನೆಯೊಂದರಲ್ಲಿ ರಾಕ್ ಗ್ರೂಪ್ ಬ್ರಾಸ್ ಎಗೇನ್ಸ್ಟ್‌ನ ಪ್ರಮುಖ ಗಾಯಕಿ ಸೋಫಿಯಾ ಉರಿಸ್ಟಾ, ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ತೋರಿ ಸುದ್ದಿಯಲ್ಲಿದ್ದಾರೆ. ಅವರು ನಂತರ ಸಾಮಾಜಿಕ ಮಾಧ್ಯಮದ ಮೂಲಕ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಕಳೆದ ವಾರ ಫ್ಲೋರಿಡಾದ ಡೇಟೋನಾದಲ್ಲಿ ನಡೆದ ರಾಕ್‌ವಿಲ್ಲೆ ಮೆಟಲ್ ಫೆಸ್ಟಿವಲ್‌ನಲ್ಲಿ ವೇದಿಕೆಯ ಮೇಲೆ ಮಲಗಿದ್ದ ಅಭಿಮಾನಿಯ ಮೇಲೆ … Continued

ಪುಟ್ಟ ಕಂದಮ್ಮಗೆ ತೆವಳಿಕೊಂಡು ಮುಂದೆ ಸಾಗಲು ಕಲಿಸುವ ಈ ಬುದ್ಧಿವಂತ ನಾಯಿ: ಹೃದಯ ಮುಟ್ಟುವ ವಿಡಿಯೊ ವೀಕ್ಷಿಸಿ

ಬುದ್ಧಿವಂತ ಹಾಗೂ ಹೃದಯವಂತ ನಾಯಿಯ ಅದ್ಭುತ ನಿದರ್ಶನಕ್ಕೆ ಸಾಕ್ಷಿ ಇಲ್ಲಿದೆ. ಜೊತೆಗೆ ಅದು ಪುಟ್ಟ ಮಗುವಿನ ಮೇಲೆ ತೋರುವ ಕಳಕಳಿಗೆ ನಿಮ್ಮ ಮನಮಿಡಿಯಲೇಬೇಕು, ಹಾಗಿದೆ ಈ ಪುಟ್ಟ ನಾಯಿಯ ವರ್ತನೆ. ಇಂಥ ಅದ್ಭುತ ದೃಶ್ಯದ ವಿಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಈ ವಿಡಿಯೊದಲ್ಲಿ ಶ್ವಾನವೊಂದು ಮುದ್ದು ಕಂದನಿಗೆ ಹೊರಳುತ್ತಾ ಮುಂದೆ … Continued

ಮಾವುತನಿಂದ ತನ್ನ ಬಾಬ್ ಕಟ್ ಕೂದಲು ಬಾಚಿಸಿಕೊಂಡ ಆನೆ …! ವಿಡಿಯೊ ವೀಕ್ಷಿಸಿ

ಭೂಮಿಯ ಮೇಲಿನ ಅತ್ಯಂತ ಮುದ್ದಾದ ಪ್ರಾಣಿಗಳ ಪಟ್ಟಿಯನ್ನು ಯಾರಾದರೂ ಮಾಡಿದರೆ, ಆನೆಗಳು ಖಂಡಿತವಾಗಿಯೂ ಅದರಲ್ಲಿ ಸೇರುತ್ತವೆ. ಅವುಗಳ ಸ್ವಭಾವ ಸೌಮ್ಯ ಮತ್ತು ಅತ್ಯಂತ ಬುದ್ಧಿವಂತ ಪ್ರಾಣಿ ಕೂಡ ಹೌದು. ಇಲ್ಲಿ ಆನೆಯೊಂದು ಬಾಬ್ ಕಟ್ ಮಾಡಿಕೊಂಡಿದ್ದು, ಇದು ಬಾಬ್‌ ಕಟ್‌ ಮಾಡಿಸಿಕೊಂಡಿರುವ ಕ್ಲಿಪ್ ವೈರಲ್ ಆಗಿದೆ ಮತ್ತು ಅದನ್ನು ಅದು ನೋಡಲು ತುಂಬಾ ಮುದ್ದಾಗಿದೆ. ವೈರಲ್ … Continued

ಭಾರತದಲ್ಲಿ 10,302 ಹೊಸ ಕೋವಿಡ್ -19 ಸೋಂಕುಗಳು ದಾಖಲು, ಇದು ನಿನ್ನೆಗಿಂತ 7.2% ಕಡಿಮೆ

ನವದೆಹಲಿ: ಭಾರತವು ಶನಿವಾರ 10,302 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ ಶೇಕಡಾ 7.2 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದ ಒಟ್ಟು ಪ್ರಕರಣ 3,44,99,925 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 267 ಜನರು ಕೋವಿಡ್-19 ಗೆ ಮೃತಪಟ್ಟಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆ 4,65,349 … Continued