ಓಮಿಕ್ರಾನ್ ಆತಂಕ ಅಂತಾರಾಷ್ಟ್ರೀಯ ವಿಮಾನ ಹಾರಾಟ ಮುಂದೂಡಿದ ಡಿಜಿಸಿಎ

ನವದೆಹಲಿ: ರೂಪಾಂತರಿ ಓಮಿಕ್ರಾನ್’ ತಳಿ ಜಗತ್ತಿನಾದ್ಯಂತ ಸಾಕಷ್ಟು ಆತಂಕ ಸೃ‌‌ಷ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಡಿಸೆಂಬರ್ 15 ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಪುನಾರಂಭವನ್ನು ಮುಂದೂಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿರ್ಧರಿಸಿದೆ. ಹೊಸ ರೂಪಾಂತರಿ ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ಸನ್ನಿವೇಶದ ದೃಷ್ಟಿಯಿಂದ, ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ . ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ … Continued

ಮಳೆ, ಭೂ ಕುಸಿತ:ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗುವ ಘಾಟ್ ರಸ್ತೆ ಬಂದ್‌

ತಿರುಪತಿ: ಮೂರು ಸ್ಥಳಗಳಲ್ಲಿ ಭೂಕುಸಿತದಿಂದ ರಸ್ತೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ತಿರುಮಲ ಬೆಟ್ಟಗಳ ಮೇಲಿನ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗುವ ಘಾಟ್ ರಸ್ತೆ ಬುಧವಾರ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ಬೃಹತ್ ಬಂಡೆಗಳು ರಸ್ತೆಗೆ ಉರುಳಿದ್ದು, ಪ್ರಮುಖ ಸಂಪರ್ಕಕ್ಕೆ ಹಾನಿಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಭಾರೀ ಮಳೆ ಮತ್ತು ರಭಸದ ಗಾಳಿಯಿಂದಾಗಿ ಘಾಟ್ … Continued

ಕರ್ನಾಟಕ ಸರ್ಕಾರದ 2022ನೇ ಸಾಲಿನ ರಜಾ ದಿನಗಳ ಪಟ್ಟಿ ಬಿಡುಗಡೆ: ಇಲ್ಲಿ ನೋಡಿ

ಬೆಂಗಳೂರು: ಕರ್ನಾಟಕ ಸರ್ಕಾರವು ನವೆಂಬರ್ 30ನೇ ತಾರೀಕಿನಂದು 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಸರ್ಕಾರಿ ಸಿಬ್ಬಂದಿಗೆ ರಜಾ ಇರುತ್ತದೆ. ರಜಾದಿನಗಳ ಪಟ್ಟಿಯಲ್ಲಿ ಮೇ ದಿನ (ಮೇ 1, 2022), ಬಕ್ರೀದ್ (ಜುಲೈ 10, 2022), ಮಹಾಲಯ ಅಮವಾಸ್ಯೆ (ಸೆಪ್ಟೆಂಬರ್ 25, … Continued

ಮೂರು ಕೃಷಿ ಕಾಯ್ದೆಗಳ ರದ್ದು ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದು ಪ್ರಕ್ರಿಯೆ ಇಂದು ಬುಧವಾರ ಅಧಿಕೃತವಾಗಿದೆ. ಇದಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದನಂತರ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲನೇ ದಿನವೇ ಕಾಯ್ದೆಗಳನ್ನು ಹಿಂಪಡೆಯುವ ಮಸೂದೆ ರದ್ದು ಮಾಡುವ ಮಸೂದೆ ಮಂಡಿದಸಿದ ನಂತರ ಅದು ಅಂಗೀಕಾರವಾಯಿತು. … Continued

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಬಾಬು ವಿರುದ್ಧ ದೂರು ದಾಖಲು

ಬೆಂಗಳೂರು: ಇಂದು (ಡಿಸೆಂಬರ್ 1) ಬೆಂಗಳೂರು ನಗರ ಕ್ಷೇತ್ರd ವಿಧಾನ ಪರಿಷತ್‌ ‌ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಬಾಬು ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಮುಖಂಡರು ದೂರು ಸಲ್ಲಿಸಿದ್ದು,. ಪ್ರಚಾರ ಭಾಷಣದಲ್ಲಿ ಹಣ ನೀಡುವ ಆಮಿಷ ಒಡ್ಡಿದ ಆರೋಪದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿದೆ. ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ … Continued

ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು 2.5 ಗಂಟೆ ಹಾರಾಟ ಹಾರಾಟ ಮಾಡಿದರೂ ಬದುಕುಳಿದ ಯುವಕ..!

ಸರ್ಫ್‌ಸೈಡ್ (ಅಮೆರಿಕ): ಯುವಕನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು 1,600 ಕಿಮೀಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿಯೂ ಬದುಕಿ ಉಳಿದಿದ್ದಾನೆ..! ಅಮೆರಿಕದ ಮಿಯಾಮಿಯಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಗ್ವಾಟೆಮಾಲಾದಿಂದ ಮಿಯಾಮಿಗೆ ಚಲಿಸುತ್ತಿದ್ದ ವಿಮಾನದ ಲ್ಯಾಂಡಿಂಗ್‌ ಗೇರ್‌ನಲ್ಲಿ 26 ವರ್ಷದ ಯುವಕ ಅಡಗಿಕೊಂಡು 1,600 ಕಿ.ಮೀ ದೂರ ಪ್ರಯಾಣಿಸಿದ್ದಾನೆ.ಆತ ಜೀವಂತವಾಗಿ ಹೊರಬಂದಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ವಾಟೆಮಾಲಾದಿಂದ … Continued

ಹುಬ್ಬಳ್ಳಿ ರೋಟರಿ ಶಾಲೆ ವಿದ್ಯಾರ್ಥಿಗೆ ಕೋವಿಡ್ ದೃಢ: ಸೋಮವಾರದ ವರೆಗೆ ಶಾಲೆಗೆ ರಜೆ

ಹುಬ್ಬಳ್ಳಿ: ಇಲ್ಲಿನ ಆದರ್ಶನಗರದ ರೋಟರಿ ಶಾಲೆಯ ವಿದ್ಯಾರ್ಥಿಯೋರ್ವನಿಗೆ ಕೊರೊನಾ ದೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸೋಮವಾರದ ವರೆಗೆ ಎಲ್ಲ ತರಗತಿಗಳಿಗೂ ರಜೆ ಘೋಷಿಸಲಾಗಿದೆ. ಎರಡು ಮೂರು ದಿನಗಳಿಂದ ರೋಟರಿ ಶಾಲೆಗೆ ಗೈರಾಗಿದ್ದ 9ನೇ ತರಗತಿಯ ವಿದ್ಯಾರ್ಥಿಗೆ ಇಂದು ಕೋವಿಡ್ ದೃಢ ಪಟ್ಟಿದ್ದು ಈ ಹಿನ್ನೆಲೆಯಲ್ಲಿ ಪಾಲಕರು ಶಾಲೆಗೆ ಈ ವಿಷಯ ತಿಳಿಸಿದ ತಕ್ಷಣ ಆಡಳಿತ ಮಂಡಳಿ … Continued

ಐಎಂಎ ವಂಚನೆ ಪ್ರಕರಣ: ಸಿಬಿಐ, ಇಡಿ ಜೊತೆ ಸಮನ್ವಯಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದ್ದು, ಈ ಸಂಬಂಧದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಐಎಂಎ ಹಗರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಹೂಡಿಕೆದಾರರ ಹಣ … Continued

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಸಾಧಕ -ಬಾಧಕಗಳ ಮೌಲ್ಯಮಾಪನಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು:  ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಸಂಬಂಧಿಸಿದಂತೆ ಯೋಜನೆಯ ಸಾಧಕ ಬಾಧಕದ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ಬುಧವಾರ ಮುಖ್ಯನ್ಯಾಯಮೂರ್ತಿ ರಿತುರಾಜ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ ಮಗ್ದುಂ ಅವರಿದ್ದ ವಿಭಾಗೀಯ ಪೀಠ ಈ ಯೋಜನೆ ಹಿನ್ನೆಲೆಯಲ್ಲಿ ದಾಖಲಾದ ಅರ್ಜಿಗಳ ವಿಚಾರಣೆ ನಡೆಸಿ ಈ ಮಹತ್ವದ ಆದೇಶ ನೀಡಿದೆ. … Continued

ಬಡಿಗೆ ಹಿಡಿದು1 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಚಿರತೆ ಬಾಯಿಂದ ಮಗನನ್ನು ಬಚಾವ್‌ ಮಾಡಿದ ತಾಯಿ..!

ಭೋಪಾಲ: ತಾಯಿ ತನ್ನ ಮಗುವನ್ನು ಎಷ್ಟು ಗಾಢವಾಗಿ ಪ್ರೀತಿಸುತ್ತಾಳೆ, ಅವಳ ಮಮಕಾರ ಎಂಥದ್ದು ಮತ್ತು ಅವಳು ತನ್ನ ಮಗುವನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂಬುದಕ್ಕೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದ ಘಟನೆಯೇ ಉತ್ತಮ ನಿದರ್ಶನ ಬೇರೆ ಸಿಗಲಿಕ್ಕಿಲ್ಲ.. ಬುಡಕಟ್ಟು ಮಹಿಳೆಯೊಬ್ಬರು ಅಗಾಧ ಧೈರ್ಯ ಪ್ರದರ್ಶಿಸಿ ಚಿರತೆಯೊಂದಿಗೆ ಹೋರಾಡಿ ಚಿರತೆ ಬಾಯಿಂದ ತನ್ನ ಮಗುವನ್ನು ರಕ್ಷಿಸಿಕೊಂಡಿದ್ದಾಳೆ..! ತನ್ನ ಮಗನನ್ನು ಚಿರತೆ … Continued