ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅಮಾನತು, ಶಿಸ್ತು ಕ್ರಮಕ್ಕೆ ಚಾಲನೆ

ಮುಂಬೈ: ಹಫ್ತಾ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರ್ಕಾರ ಗುರುವಾರ ಅಮಾನತುಗೊಳಿಸಿದೆ. ಅವರ ವಿರುದ್ಧ ಇರುವ ‘ಕೆಲವು ಅಕ್ರಮಗಳು ಹಾಗೂ ಲೋಪಗಳ’ ಆರೋಪದ ಮೇಲೆ ಅವರ ವಿರುದ್ಧ ಶಿಸ್ತು ಕ್ರಮ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೆಂಬರ್ 12 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ … Continued

ಕೇವಲ ಮಣ್ಣು 65 ಗಿಡಮೂಲಿಕೆ ಸಸ್ಯಗಳಿಂದ 200-ಚದರ ಅಡಿ ಮನೆ ನಿರ್ಮಿಸಿದ ಕೇರಳದ ಶಿಲ್ಪಿ…!

ತಿರುವನಂತಪುರಂ: ವೃತ್ತಿಯಲ್ಲಿ ಶಿಲ್ಪಿಯಾಗಿರುವ ಸಿಲಾ ಸಂತೋಷ್ ಈಗ 200 ಚದರ ಅಡಿ ವಿಸ್ತೀರ್ಣದ ಸಂಪೂರ್ಣ ಮಣ್ಣಿನಿಂದ ಕೂಡಿದ ಹಾಗೂ 65 ಗಿಡಮೂಲಿಕೆಗಳ ಸಸ್ಯಗಳನ್ನು ಬೆರೆಸಿದ ವಿಶಿಷ್ಟವಾದ ಮನೆ ನಿರ್ಮಿಸಿದ್ದಾರೆ…! ಕೇರಳದ ರಾಜಧಾನಿಯಿಂದ ಸುಮಾರು 100 ಕಿಮೀ ದೂರದಲ್ಲಿರುವ ಅಡೂರಿನಲ್ಲಿ ಅವರ ಆತ್ಮೀಯ ಸ್ನೇಹಿತ ಜಾಕೋಬ್ ತಂಕಚನ್ ಅವರ ಐದು ಎಕರೆ ಕೃಷಿ ಭೂಮಿಯಲ್ಲಿ ಮನೆ ಇದೆ. … Continued

ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕು ಪತ್ತೆ: ಇಂದು ಗೃಹಕಚೇರಿಯಲ್ಲಿ ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ

ಬೆಂಗಳೂರು : ಕರ್ನಾಟಕದಲ್ಲಿ ಇಬ್ಬರಿಗೆ ಓಮಿಕ್ರಾನ್‌ (Omicron) ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಸಭೆ ಕರೆದಿದ್ದು, ಶುಕ್ರವಾರ (ನ.3) ಮಧ್ಯಾಹ್ನ 1 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ನಡೆಯಲಿದೆ. ಆರೋಗ್ಯ ಸಚಿವರು, ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಬಿಬಿಎಂಪಿ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಪತ್ತು … Continued

‘ಓಮಿಕ್ರಾನ್’ ಶೀರ್ಷಿಕೆಯ 60 ವರ್ಷದ ಹಿಂದಿನ ಚಲನಚಿತ್ರದ ಪೋಸ್ಟರ್‌ ಹಂಚಿಕೊಂಡ ಆನಂದ್ ಮಹೀಂದ್ರಾ..!

ನವದೆಹಲಿ: ಕೊರೊನಾ ವೈರಸ್​ ಇಡೀ ಜಗತ್ತನ್ನು ಬಿಟ್ಟು ಬಿಡದೆ ಕಾಡುತ್ತಿದೆ. ದಿನಕಳೆದಂತೆ ಕೊವಿಡ್​ನ ಹೊಸಹೊಸ ರೂಪಾಂತರಿಗಳು ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚುತ್ತಿದೆ. ಹೊಸ ರೂಪಾಂತರಿಗಳಿಂದ ಈ ವೈರಸ್​ ಬಗೆಗಿನ ಅಧ್ಯಯನ ಕ್ಲಿಷ್ಟವಾಗುತ್ತ ಸಾಗಿದೆ. ಈಗ ಓಮಿಕ್ರಾನ್​ ರೂಪಾಂತರಿ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಕರ್ನಾಟಕಕ್ಕೂ ಕಾಲಿಟ್ಟಿದೆ. ವಿಶೇಷವೆಂದರೆ ಈ ಹೆಸರಿನಲ್ಲಿ ಸಿನಿಮಾ ಬಹಳ ಹಿಂದೆಯೇ ಬಂದಿತ್ತು..! 1963ರಲ್ಲಿ ಬಂದ … Continued

ಕಾಲೇಜಿನ ತರಗತಿಗೇ ನುಗ್ಗಿದ ಚಿರತೆ: ವಿಡಿಯೊದಲ್ಲಿ ಸೆರೆ

ನವದೆಹಲಿ: ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಚಿರತೆಯೊಂದು ಉತ್ತರ ಪ್ರದೇಶದ ಅಲಿಘರ್‌ನಲ್ಲಿರುವ ಕಾಲೇಜಿನ ತರಗತಿಯೊಂದಕ್ಕೆ ನುಗ್ಗಿದೆ. ಈ ಘಟನೆ ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಕಲಾನಿಧಿ ನೈತಾನಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ದೃಶ್ಯಾವಳಿಗಳು ಚಿರತೆ ತರಗತಿಯೊಳಗೆ ಅಲೆದಾಡುವುದನ್ನು ತೋರಿಸಿದೆ. ಘಟನೆಯಲ್ಲಿ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಆತನನ್ನು ಕೂಡಲೇ ಆಸ್ಪತ್ರೆಗೆ … Continued

ನೇಪಾಳದಲ್ಲಿ ಟೈರ್ ಒಡೆದ ನಂತರ ರನ್‌ ವೇಯಿಂದ ವಿಮಾನವನ್ನೇ ತಳ್ಳಿದ ಪ್ರಯಾಣಿಕರು- ನಿಲ್ದಾಣದ ಸಿಬ್ಬಂದಿ ..!: ವೀಕ್ಷಿಸಿ

ನೇಪಾಳದಲ್ಲಿ ನಡೆದ ಒಂದು ಅಸಾಮಾನ್ಯ ವಿದ್ಯಮಾನದಲ್ಲಿ ವಿಮಾನ ಪ್ರಯಾಣಿಕರು ಮತ್ತು ಭದ್ರತಾ ಅಧಿಕಾರಿಗಳು ಸೇರಿ ರನ್‌ ವೇಯಿಂದ ವಿಮಾನವನ್ನೇ ತಳ್ಳಿದ್ದಾರೆ..! ನೇಪಾಳದ ಸುದ್ದಿಗಳ ಪ್ರಕಾರ, ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ತಾರಾ ಏರ್ ವಿಮಾನವು ಟೈರ್ ಸ್ಫೋಟಗೊಂಡ ನಂತರ ಏರ್‌ಸ್ಟ್ರಿಪ್‌ನಲ್ಲಿ ಸಿಲುಕಿಕೊಂಡಿತ್ತು. ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯಲು ಮುಂದಾದಾಗ ಅದರ ಹಿಂದಿನ … Continued

ಶಿವಮೊಗ್ಗದಲ್ಲಿ ನರ್ಸಿಂಗ್ ಕಾಲೇಜಿನ 23 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು:ಕಾಲೇಜ್- ಆಸ್ಪತ್ರೆ ಸೀಲ್ ಡೌನ್

ಶಿವಮೊಗ್ಗ: ಮೂರು-ನಾಲ್ಕು ತಿಂಗಳಿನಿಂದ ಕೊರೊನಾ ಸೋಂಕು ಈಗ ಮತ್ತೆ ಕಾಣಿಸಿಕೊಳ್ಳುತ್ತಿದೆ. ಈಗ ಶಿವಮೊಗ್ಗದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕಾಲೇಜ್ ಹಾಗೂ ಅದೇ ಆವರಣದಲ್ಲಿರುವ ಆಸ್ಪತ್ರೆ ಸೀಲ್‍ಡೌನ್ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ನರ್ಸಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಬೇರೆ ರಾಜ್ಯದವರೇ ಹೆಚ್ಚಿದ್ದಾರೆ. … Continued

ನಾವು ವೇಗವಾಗಿ ಓಮಿಕ್ರಾನ್ ಸೋಂಕು ಪತ್ತೆ ಹಚ್ಚಿದ್ದೇವೆ: ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಇಬ್ಬರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್‌ ಹಾಗೂ ಟ್ರೇಸ್ ಮಾಡುವಂತೆ ಸೂಚನೆ ನೀಡಲಾಗಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಓಮಿಕ್ರಾನ್ ಯಾವ ರೀತಿ ಹರಡಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಈಗ ಬಂದಿರುವ ಸೋಂಕು ತೀವ್ರವಾಗಿಲ್ಲ. ಇಲ್ಲ ಎಂದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ … Continued

ಓಮಿಕ್ರಾನ್ ಸೋಂಕಿತರಲ್ಲಿ ಒಬ್ಬರಿಗೆ ಪ್ರಯಾಣದ ಇತಿಹಾಸವೇ ಇಲ್ಲ..! ಇವರ ಸಂಪರ್ಕದಲ್ಲಿದ್ದ ಐವರಿಗೆ ಕೋವಿಡ್ ದೃಢ; ಹೆಚ್ಚಿನ ಪರೀಕ್ಷೆಗೆ ಸ್ಯಾಂಪಲ್‌ ರವಾನೆ

ಬೆಂಗಳೂರು: ಕರ್ನಾಟಕದಲ್ಲಿ ಇಬ್ಬರಿಗೆ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಸೋಂಕು ತಗುಲಿರುವುದು ಕಂಡುಬಂದ ನಂತರ, ಅವರ ಸಂಪರ್ಕಕ್ಕೆ ಬಂದ ಐವರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಅವರ ಸ್ಯಾಂಪಲ್‌ಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಮಿಕ್ರಾನ್ ರೂಪಾಂತರದ ಸೋಂಕು ಕಂಡುಬಂದ … Continued

ಓಮಿಕ್ರಾನ್ ಪತ್ತೆಯಾದ ದೇಶಗಳ ಸ್ಥಿತಿ ನೋಡಿಕೊಂಡು ಸರ್ಕಾರದಿಂದ ಮುಂದಿನ ಕ್ರಮ; ಸಚಿವ ಅಶ್ವಥ್ ನಾರಾಯಣ

ಬೆಂಗಳೂರು : ರಾಜ್ಯದಲ್ಲಿ ಎರಡು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರ ಜಿನೋಮಿಕ್​ ಸೀಕ್ವೆನ್ಸ್‌​ಗೆ ಕಳುಸಲಾಗಿತ್ತು.ಅದರಲ್ಲಿ ಇಬ್ಬರಿಗೆ ಪತ್ತೆಯಾಗಿದೆ. ಓಮಿಕ್ರಾನ್ ವೈರಸ್​ ಕುರಿತು ಅಧ್ಯಯನ ಮಾಡಲಾಗಿದೆ. 11 ದೇಶಗಳ ಸ್ಥಿತಿಗತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಓಮಿಕ್ರಾನ್​ ವೇಗವಾಗಿ ಹರಡುತ್ತದೆ. ಆದರೆ ಅದರಿಂದ … Continued