ಕೋವಿಡ್‌-19 ಮೂರನೇ ಅಲೆ ಎದುರಿಸಲು ಮೇಕ್‌ಶಿಫ್ಟ್‌ ಆಸ್ಪತ್ರೆಗಳು, ನಿಯಂತ್ರಣ ಕೊಠಡಿ ಸ್ಥಾಪನೆಗೆ ಎಲ್ಲ ರಾಜ್ಯಗಳಿಗೆ ಸೂಚಿಸಿದ ಕೇಂದ್ರ

ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ, ಪ್ರಕರಣಗಳ ಸಂಭವನೀಯ ಉಲ್ಬಣವನ್ನು ಎದುರಿಸಲು ಕ್ರಮಗಳ ಕುರಿತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶನಿವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಮನೆಯಲ್ಲಿ ಪ್ರತ್ಯೇಕವಾಗಿ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ವಿಶೇಷ ತಂಡಗಳನ್ನು … Continued

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ 1007.18 ಕೋಟಿ ರೂ. ಬಿಡುಗಡೆ ರಾಜ್ಯ ಸರ್ಕಾರ

posted in: ರಾಜ್ಯ | 1

ಬೆಂಗಳೂರು: ಪಿಎಂ ಕಿಸಾನ್ ಕರ್ನಾಟಕ ಯೋಜನೆಯಡಿ ಪಿಎಂ-ಕಿಸಾನ್ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ವಾರ್ಷಿಕ 4 ಸಾವಿರ ರೂ. ನೆರವು ನೀಡುವ ಯೋಜನೆಯಡಿ ಈ ಆರ್ಥಿಕ ವರ್ಷದ ಎರಡನೇ ಕಂತಿನ ನೆರವಿಗಾಗಿ ರಾಜ್ಯ ಸರ್ಕಾರ 1007.18 ಕೋಟಿ ರೂ. ಬಿಡುಗಡೆ ಮಾಡಿದೆ. ಅದನ್ನು, ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು … Continued

ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

posted in: ರಾಜ್ಯ | 0

ಕೋಲಾರ: ದೇವಾಲಯದಲ್ಲಿ ವಿತರಿಸಿದ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀಗರಾಯನಹಳ್ಳಿಯಲ್ಲಿ ನಡೆದಿದೆ. ಹಳ್ಳಿಯ ಗಂಗಮ್ಮ ದೇವಾಲಯದಲ್ಲಿ ಶನಿವಾರ ಹೊಸ ವರ್ಷಾಚರಣೆಯ ಅಂಗವಾಗಿ ವಿಶೇಷ ಪೂಜೆ ನಡೆದಿತ್ತು. ನಂತರದಲ್ಲಿ ದೇವಾಲಯದ ಆಡಳಿತ ಮಂಡಳಿ ಮಾಡಿಸಿದ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಪ್ರಸಾದದ ರೂಪದಲ್ಲಿ ಚಿತ್ರಾನ್ನ ಹಾಗೂ ಕೇಸರಿಬಾತ್ ಸೇವಿಸಿದ ನಂತರ ಭಕ್ತರು ಅಸ್ವಸ್ಥಗೊಂಡಿದ್ದಾರೆ. … Continued

ರಾತ್ರಿ ಕರ್ಫ್ಯೂ ನಡುವೆಯೂ ಡಿಸೆಂಬರ್ 31 ರಂದು ಮದ್ಯ ಮಾರಾಟ ಕಳೆದ ವರ್ಷಕ್ಕಿಂತಲೂ ಹೆಚ್ಚು..!

posted in: ರಾಜ್ಯ | 0

ಬೆಂಗಳೂರು: ನೈಟ್ ಕರ್ಫ್ಯೂ ಜಾರಿ, ಪೊಲೀಸರ ವಿಶೇಷ ನಿಗಾದ ನಡುವೆಯೂ ಮದ್ಯ ಮಾರಾಟದಲ್ಲಿ ಗ್ರಾಹಕರು ಕಳೆದ ಹೊಸ ವರ್ಷದ ದಾಖಲೆ ಮುರಿದಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮದ್ಯ ಬಾಕ್ಸ್ ಮಾರಾಟ ಹಾಗೂ ಆದಾಯ ಸಂಗ್ರಹದಲ್ಲಿ ಸಾಕಷ್ಟು ವೃದ್ಧಿ ಕಂಡು ಬಂದಿದೆ. ಕಳೆದ ವರ್ಷ ಡಿಸೆಂಬರ್ 31 ರಂದು 2.25 ಲಕ್ಷ ಕಾರ್ಟನ್ ಬಾಕ್ಸ್‌ಗಳಲ್ಲಿ … Continued

ಕರ್ನಾಟಕದಲ್ಲೂ ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು, ಬೆಂಗಳೂರಿನದ್ದೇ ಸಿಂಹಪಾಲು..!.

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜನವರಿ 01) ಹೊಸದಾಗಿ 1033 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲಿಯೇ ಹೊಸದಾಗಿ 810 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30,08,370 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,60,615 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ … Continued

ರಾಜ್ಯ ಗಣರಾಜ್ಯೋತ್ಸವ ಪರೇಡ್‌ಗೆ ಪ್ರಜ್ವಲ್‌ ಆಯ್ಕೆ

posted in: ರಾಜ್ಯ | 0

ಧಾರವಾಡ: ಜನೇವರಿ ೨೬ರಂದುಈ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಮಾಣಿಕ್‌ ಶಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ರಾಜ್ಯ  ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ವತಿಯಿಂದ ಧಾರವಾಡದ ಕರ್ನಾಟಕ ಕಾಲೇಜಿನ ಬಿಎ ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ  ಪ್ರಜ್ವಲ್‌ ವಿ.ಟಿ. ಆಯ್ಕೆಯಾಗಿದ್ದಾರೆ. ಕರ್ನಾಟಕ ವಿಶ್ವ ವಿದ್ಯಾಲಯದ ವತಿಯಿಂದ ಮಂಜುನಾಥ ಬಿ. ತಿಪ್ಪನವರ ಹಾಗೂ … Continued

ಹುಬ್ಬಳ್ಳಿಯಲ್ಲಿ ಜನೇವರಿ ೩, ೪ರಂದು ಉತ್ತರ ಪ್ರಾಂತ ರೈತ ಸಮ್ಮೇಳನ

posted in: ರಾಜ್ಯ | 0

ಹುಬ್ಬಳ್ಳಿ: ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಘಟಕವು ಜನೇವರಿ ೩ ಮತ್ತು ೪ ರಂದು ಉತ್ತರ ಪ್ರಾಂತ ರೈತ ಸಮ್ಮೇಳನ-೨೦೨೨ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ನಡೆಯಲಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸಂಚಾಲಕ ರಮೇಶ ಕೊರವಿ ಮಾಹಿತಿ ನೀಡಿದರು. ಜನೇವರಿ ೩ ರಂದು ಬೆಳಿಗ್ಗೆ ೧೦:೩೦ಕ್ಕೆ ಗೋ ಪೂಜೆ ಮತ್ತು ಧ್ವಜಾರೋಹಣದ ನಂತರ ಕಾರ್ಯಕ್ರಮವನ್ನು … Continued

ಶಿಕ್ಷಣ ಸಚಿವ ಬಿ.ಸಿ. ನಾಗೇಶಗೆ ಕೊರೊನಾ ಸೋಂಕು ದೃಢ..!

posted in: ರಾಜ್ಯ | 0

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ​ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತಃ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಸಚಿವ ನಾಗೇಶ ಅವರು, ಕೋವಿಡ್-19 ಸೌಮ್ಯ ಲಕ್ಷಣಗಳು ಕಾಣಿಸಿದ ಕಾರಣ ನಾನು ಇಂದು ಪರೀಕ್ಷೆಗೆ ಒಳಪಟ್ಟಿದ್ದು, ಕೋವಿಡ್-19 ವರದಿ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಕ್ವಾರಂಟೈನ್‌ನಲ್ಲಿದ್ದು … Continued

ಧಾರವಾಡ: ಜೆಎಸ್ಎಸ್‌ನಲ್ಲಿ ಇಗ್ನೋ ಕೋರ್ಸುಗಳಿಗೆ ಪ್ರವೇಶ ಪ್ರಾರಂಭ

posted in: ರಾಜ್ಯ | 0

ಧಾರವಾಡ: ಇಂಧಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸಗಳಿಗೆ ಜನೇವರಿ ೨೦೨೨ ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ. ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದಾಗಿದೆ. ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಮ್.ಎ.(ಇಂಗ್ಲೀಷ್) ಎಮ್.ಎ.(ಇತಿಹಾಸ), ಎಮ್.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸುಗಳು ಬಿಎ, ಬಿ.ಕಾಂ, … Continued

ಬ್ಯಾಂಕ್‌ ಲಾಕರ್‌ನಿಂದ ಪುರಾತನ ಪಚ್ಚೆ ಶಿವಲಿಂಗ’ ವಶಕ್ಕೆ ಪಡೆದ ಪೊಲೀಸರು: ಇದರ ಮೌಲ್ಯ ಅಂದಾಜು ₹500 ಕೋಟಿ..!

ಚೆನ್ನೈ: ತಮಿಳುನಾಡು ವಿಗ್ರಹ ಘಟಕದ ಸಿಐಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ತಂಜಾವೂರಿನ ಬ್ಯಾಂಕ್​​ ಲಾಕರ್​​ನಲ್ಲಿ ಇಡಲಾಗಿದ್ದ ಸಾವಿರ ವರ್ಷಗಳಷ್ಟು ಹಳೆಯದಾದ ಸುಮಾರು 500 ಕೋಟಿ ರೂ.ಗಳ ಮೌಲ್ಯದ ಪಚ್ಚೆ ಶಿವಲಿಂಗವನ್ನು ವಶಕ್ಕೆ ಪಡೆದಿದ್ದಾರೆ. ತಂಜಾವೂರಿನ ಅರುಳಾನಂದ ಬಡಾವಣೆಯ ವ್ಯಕ್ತಿಯೋರ್ವ ಪುರಾತನ ಕಾಲದ ವಿಗ್ರಹವನ್ನು ಬ್ಯಾಂಕ್​​ನಲ್ಲಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರ ತಂಡ … Continued