ಫ್ರಾನ್ಸ್‌ನಲ್ಲಿ ಕೊರೊನಾ ಸುನಾಮಿ…ಸತತ ನಾಲ್ಕನೇ ದಿನ ಎರಡು ಲಕ್ಷಕ್ಕಿಂತ ಹೆಚ್ಚು ಕೊರೊನಾ ಸೋಂಕು ದಾಖಲು..!

ಪ್ಯಾರಿಸ್: ಕಳೆದ ೨೪ ಗಂಟೆಗಳ ಅವಧಿಯಲ್ಲಿ ಫ್ರಾನ್ಸ್‌ನಲ್ಲಿ ಹೊಸದಾಗಿ ೨,೧೯,೧೨೬ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸತತ ನಾಲ್ಕನೇ ದಿನವೂ ಎರಡು ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕುಗಳು ದೇಶದಲ್ಲಿ ಕಾಣಿಸಿಕೊಂಡಿದೆ. ಫ್ರಾನ್ಸ್ ನಲ್ಲಿ ಈಗ ಒಟ್ಟಾರೆ ಒಂದು ಕೋಟಿಗೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಈಗ ಫ್ರಾನ್ಸ್‌ ಒಂದು ಕೋಟಿಗೂ ಅಧಿಕ ಸೋಂಕು ದಾಖಲಾಗಿರುವ ವಿಶ್ವದ … Continued

ಜನರು ಕೊರೊನಾ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗಲಿದೆ: ಸಿಎಂ ಬೊಮ್ಮಾಯಿ

ಬೆಳಗಾವಿ: ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜನರು ಸಹಕಾರ ನೀಡಿದರೆ ಲಾಕ್‌ಡೌನ್‌ ಇರುವುದಿಲ್ಲ. ಒಂದು ವೇಳೆ ಜನರು ಕೊರೊನಾ ನಿಯಮಗಳನ್ನು ಅನುಸರಿಸದಿದ್ದರೆ ಲಾಕ್‌ಡೌನ್‌ ಅನಿವಾರ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಓಮಿಕ್ರಾನ್‌ ಪ್ರಕರಣಗಳು ಸಹ ಹೆಚ್ಚಳವಾಗುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ … Continued

ಖ್ಯಾತ ಫುಟ್ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿ, ಮೂವರು ಸಹ ಆಟಗಾರರಿಗೆ ಕೊರೊನಾ ಸೋಂಕು

ಖ್ಯಾತ ಫುಟ್ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ ಎಂದು ಪ್ಯಾರಿಸ್ ಸೇಂಟ್-ಜರ್ಮೈನ್ ತಿಳಿಸಿದೆ. 34 ವರ್ಷ ವಯಸ್ಸಿ ಮೆಸ್ಸಿ ತಮ್ಮ ಪತ್ನಿ ಆಂಟೊನೆಲಾ ಅವರೊಂದಿಗೆ ತಾಯ್ನಾಡಿನ ಸಂಗೀತ ಕಚೇರಿಯಲ್ಲಿ ಸ್ವತಃ ಆನಂದಿಸುತ್ತಿರುವ ಪ್ರಕಟವಾದ ಒಂದು ವಾರದಲ್ಲೇ ಈ ಸುದ್ದಿ ಬಂದಿದೆ. ಈಗ, ಮೆಸ್ಸಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಮತ್ತು ಸ್ವಯಂ-ಪ್ರತ್ಯೇಕವಾಗಿದ್ದಾರೆ … Continued

ವಿಶ್ವ ಕೊಂಕಣಿ ಸರ್ದಾರ ಬಸ್ತಿ ವಾಮನ್ ಶೆಣೈ ನಿಧನ

ಮಂಗಳೂರು: ವಿಶ್ವ ಕೊಂಕಣಿ ಸರ್ದಾರ ಎಂದು ಜನಪ್ರಿಯರಾಗಿದ್ದ ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾಗಿದ್ದ ಬಸ್ತಿ ವಾಮನ ಮಾಧವ ಶೆಣೈ(87) ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ಕಳೆದೆರಡು ತಿಂಗಳಿಂದ ವಯೋಸಹಜವಾಗಿ ಅವರ ಆರೋಗ್ಯ ಹದಗೆಟ್ಟಿತ್ತು. ನಾಳೆ ಜನವರಿ 3 ರಂದು ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 9 ರಿಂದ 10ರ ವರೆಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು … Continued

ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಭೀತಿ: ಲಾಕ್​ಡೌನ್ ಸುಳಿವು ಕೊಟ್ಟ ಸಚಿವ ಅಶೋಕ್

ಬೆಂಗಳೂರು: ಜನ ನಿರ್ಲಕ್ಷ್ಯ ವಹಿಸಿದರೆ ಮುಂಬೈ, ದೆಹಲಿ, ಪಶ್ಚಿಮ ಬಂಗಾಳದ ರೀತಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಸಚಿವ ಆರ್. ಅಶೋಕ್ ಎಚ್ಚರಿಸಿದ್ದು, ಪರೋಕ್ಷವಾಗಿ ಲಾಕ್ ಡೌನ್ ಬಗ್ಗೆ ಸುಳಿವು ನೀಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಐಇ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆ ಬಗ್ಗೆ ಮುಖ್ಯಮಂತ್ರಿಗಳುಮತ್ತೊಮ್ಮೆ ಸಭೆ ಮಾಡುತ್ತಾರೆ ಎಂದು ತಿಳಿಸಿದರು. … Continued

ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಸಾವು

ಗುಂಡ್ಯ(ದಕ್ಷಿಣ ಕನ್ನಡ): ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಕೆಳಗಿಳಿದು ಪರಿಶೀಲಿಸುತ್ತಿದ್ದಾಗಲೇ ಮರಬಿದ್ದಿದ್ದರಿಂದ ಕಾರು ಚಾಲಕ ಸುರೇಶ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ … Continued

ಸರ್ಕಾರಿ ಶಾಲೆಗಳಿಗೆ ಇಲ್ಲದ ಕಟ್ಟಡ ಸುರಕ್ಷತೆ ನಿಯಮ ಖಾಸಗಿ ಶಾಲೆಗಳಿಗೇಕೆ?: ಜಿ.ಆರ್‌.ಭಟ್‌ ಪ್ರಶ್ನೆ

ಹುಬ್ಬಳ್ಳಿ: ೩೧ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಪ್ರಮಾಣಪತ್ರ ಪಡೆಯುವ ನಿಯಮ ಕೇವಲ ಖಾಸಗಿ ಶಾಲೆಗಳಿಗೆ ಅಳವಡಿಸಿ ಸರಕಾರಿ ಶಾಲೆಗಳಿಗೆ ವಿನಾಯಿತಿ ನೀಡಿದ್ದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಘಟಕದ ಪ್ರದಾನ ಕಾರ್ಯದರ್ಶಿ ಜಿ.ಆರ್.ಭಟ್ ಸರಕಾರದ ಕ್ರಮ ಖಂಡಿಸಿದ್ದಾರೆ. ಈ … Continued

ಸುಲ್ಲಿ ಡೀಲ್ಸ್ 2.0? | ಗಿಟ್‌ಹಬ್‌ ಆ್ಯಪ್ ‘ಬುಲ್ಲಿ ಬಾಯಿ’ಯಲ್ಲಿ 100+ ಮುಸ್ಲಿಂ ಮಹಿಳೆಯರ ‘ಹರಾಜು’; ಕೇಂದ್ರ, ಪೊಲೀಸ್ ಇಲಾಖೆಯಿಂದ ತನಿಖೆ

ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಗಿಟ್‌ಹಬ್‌ನಲ್ಲಿ 100 ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರನ್ನು ಸುಲ್ಲಿ ಡೀಲ್ಸ್’ ಹೆಸರಿನಲ್ಲಿ ‘ಹರಾಜು’ ಮಾಡಿದ ಆರು ತಿಂಗಳ ನಂತರ, ಅದೇ ವೇದಿಕೆಯಲ್ಲಿ ‘ಬುಲ್ಲಿ ಬಾಯಿ’ ಎಂಬ ಇದೇ ರೀತಿಯ ಎರಡನೇ ಅಪ್ಲಿಕೇಶನ್ ಕಾಣಿಸಿಕೊಂಡಿದೆ. ಶುಕ್ರವಾರ ಟ್ವಿಟರ್‌ ನಲ್ಲಿ, ಅನೇಕ ಮುಸ್ಲಿಂ ಮಹಿಳೆಯರು ಗಿಟ್‌ಹಬ್‌ನಲ್ಲಿ ತಮ್ಮ ಸಾಮಾಜಿಕ ಮಾಧ್ಯಮದ ಫೋಟೋಗಳನ್ನು ಹಂಚಿಕೊಂಡಿರುವ … Continued

ಹೊಸ ವರ್ಷದಂದು 9 ಮಹಿಳಾ ನಕ್ಸಲರೂ ಸೇರಿ 44 ನಕ್ಸಲರ ಶರಣಾಗತಿ

ಸುಕ್ಮಾ(ಛತ್ತೀಸ್​ಗಡ): ಹೊಸ ವರ್ಷದ ಮೊದಲ ದಿನವೇ ಸುಕ್ಮಾ ಪೊಲೀಸರ ಮುಂದೆ ಸುಮಾರು 44 ನಕ್ಸಲರು ಶರಣಾಗತರಾಗಿದ್ದಾರೆ. ಇದರಲ್ಲಿ 9 ಮಹಿಳಾ ನಕ್ಸಲರೂ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಕ್ಸಲ್ ನಿರ್ಮೂಲನಾ ಕಾರ್ಯಕ್ರಮವಾದ ಪೂನಾ ನಾರ್ಕೋಮ್ ಅಭಿಯಾನವನ್ನು ಸುಕ್ಮಾ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಈ ಅಭಿಯಾನದಡಿ ಸುಕ್ಮಾ ಪೊಲೀಸರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲರನ್ನು ಮುಖ್ಯ ವಾಹಿನಿಗೆ … Continued

ಹೊಸ ವರ್ಷಾಚರಣೆಗೆ ಮೇಕೆ ಕದ್ದುತಂದು ಬಾಡೂಟ ಮಾಡಿದ ಎಎಸ್‌ಐ ಸಸ್ಪೆಂಡ್‌..!

ಬಲಂಗೀರ್: ಪೊಲೀಸ್ ಠಾಣೆಯಲ್ಲಿ ಹೊಸ ವರ್ಷದ ಮುನ್ನಾದಿನದ ಹಬ್ಬದಂದು ಗ್ರಾಮಸ್ಥರ ಮೇಕೆ ಕದ್ದುತಂದು ಮಟನ್‌ ಪಾರ್ಟಿ ಮಾಡಿ ತಿಂದ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಶುಕ್ರವಾರ ಸಂಜೆ ಬಲಂಗೀರ್ ಜಿಲ್ಲೆಯ ಸಿಂಧೆಕೆಲಾ ಪೊಲೀಸ್ ಠಾಣೆಯ ಸಿಬ್ಬಂದಿ ಹೊಸ ವರ್ಷದ ಸಂಭ್ರಮಾಚರಣೆಗೆ ಔತಣಕೂಟವನ್ನು ಯೋಜಿಸುತ್ತಿದ್ದಾಗ, ಕಾಂಪೌಂಡ್‌ ಬಳಿ ದಾರಿ ತಪ್ಪಿ ಬಂದ ಮೇಕೆ ಸುಲಭವಾಗಿ … Continued