ಸುಮಂತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜಾ

ಕನ್ನಡ ಚಲನಚಿತ್ರ ತಾರೆ ಶುಭಾ ಪೂಂಜಾ ಅವರು ಸುಮಂತ್ ಮಹಾಬಲ ಅವರನ್ನು ವಿವಾಹವಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದರು. ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ತಮ್ಮ ಮದುವೆ ಸುದ್ದಿಯನ್ನು ಹಂಚಿಕೊಂಡಿರುವ ಶುಭಾ ಪೂಂಜಾ ಇಂದು ಸುಮಂತ್ ಅವರನ್ನು ಸರಳವಾಗಿ ವಿವಾಹವಾಗಿರುವುದಾಗಿ ಬರೆದಿದ್ದಾರೆ. ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು … Continued

ರಾಜಸ್ಥಾನದಲ್ಲಿ ದೇಶದ ಮೊದಲ ಓಮಿಕ್ರಾನ್-ಸಂಬಂಧಿತ ಸಾವು: ರಾಯಿಟರ್ಸ್ ವರದಿ

ನವದೆಹಲಿ: ಭಾರತವು ಬುಧವಾರ ರಾಜಸ್ಥಾನದಲ್ಲಿ ತನ್ನ ಮೊದಲ ಓಮಿಕ್ರಾನ್-ಸಂಬಂಧಿತ ಸಾವನ್ನು ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ವರದಿ ಪ್ರಕಾರ, ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. ಏಜೆನ್ಸಿ ವರದಿಯ ಪ್ರಕಾರ, ಮಾಹಿತಿಯನ್ನು ನವದೆಹಲಿಯಲ್ಲಿ ವರದಿಗಾರರ ಸಣ್ಣ ಗುಂಪಿನೊಂದಿಗೆ ಹಂಚಿಕೊಳ್ಳಲಾಗಿದೆ. ಓಮಿಕ್ರಾನ್‌ನಿಂದಾಗಿ ಮೃತಪಟ್ಟ ವ್ಯಕ್ತಿಯ ಕುರಿತಾದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ … Continued

ಅಪ್ನೆ ಸಿಎಂ ಕೊ ಥ್ಯಾಂಕ್ಸ್‌ ಕೆಹನಾ ಕಿ ಮೈ ಬಟಿಂಡಾ ವಿಮಾನ ನಿಲ್ದಾಣ ತಕ್ ಜಿಂದಾ ಲೌಟ್ ಪಾಯಾ’: ಭದ್ರತಾ ಲೋಪದ ಬಗ್ಗೆ ಅಧಿಕಾರಿಗಳಿಗೆ ಪ್ರಧಾನಿ ಹೇಳಿದ ಮಾತು

ಭಟಿಂಡಾ: ಭಾರಿ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್‌ನ ಫಿರೋಜ್‌ಪುರ ಭೇಟಿಯನ್ನುಅರ್ಧದಲ್ಲೇ ರದ್ದುಗೊಳಿಸಬೇಕಾಯಿತು. ಕೆಲವು ಪ್ರತಿಭಟನಾಕಾರರು ರಸ್ತೆ ತಡೆ ಮಾಡಿದ್ದರಿಂದ ಪ್ರಧಾನಿಯವರು ಮೇಲ್ಸೇತುವೆಯ ಮೇಲೆ 15-20 ನಿಮಿಷಗಳ ಕಾಲ ಸಿಲುಕಿಕೊಂಡರು. ಈ ವಿದ್ಯಮಾನದಿಂದ ಕೋಪಗೊಂಡ ಪ್ರಧಾನಿ ದೆಹಲಿಗೆ ವಾಪಸ್‌ ಹೋಗಲು ಬಟಿಂಡಾ ವಿಮಾನ ನಿಲ್ದಾಣಕ್ಕೆ ಬಂದ ನಂತರ ಭದ್ರತಾ ವೈಫಲ್ಯಕ್ಕೆ ತಮ್ಮ … Continued

15-20 ನಿಮಿಷ ಫ್ಲೈಓವರ್ ಮೇಲೆ ಸಿಲುಕಿಕೊಂಡ ಪ್ರಧಾನಿ..!: ಪ್ರಮುಖ ಭದ್ರತಾ ವೈಫಲ್ಯ, ಅರ್ಧದಲ್ಲೇ ಪ್ರಧಾನಿ ಪಂಜಾಬ್ ಭೇಟಿ ರದ್ದು

ಚಂಡೀಗಢ: ಪ್ರಮುಖ ಭದ್ರತಾಲೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್‌ನ ಫಿರೋಜ್‌ಪುರಕ್ಕೆ ನಿಗದಿಯಾಗಿದ್ದ ಭೇಟಿಯನ್ನು ಮಾರ್ಗಮಧ್ಯದಲ್ಲಿಯೇ ರದ್ದುಗೊಳಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಫಿರೋಜ್‌ಪುರದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ “ಕೆಲವು ಕಾರಣಗಳಿಂದಾಗಿ” ಸಮಾವೇಶ ಉದ್ದೇಶಿಸಿ ಮಾತನಾಡಲು ಪ್ರಧಾನಿಗೆ ಸಾಧ್ಯವಾಗುವುದಿಲ್ಲ ಎಂದು ಘೋಷಿಸಿದರು. ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಮತ್ತು ಈ ಸಂದರ್ಭದಲ್ಲಿ ಜನರನ್ನು … Continued

ವಾರಾಂತ್ಯ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ ಸಂಚಾರ ಅಗತ್ಯ ಸೇವೆ ನೌಕರರಿಗೆ ಮಾತ್ರ ಸೀಮಿತ.. ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ನಿಯಮಾವಳಿಗಳಿಗೆ ಅನುಗುಣವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ಕರ್ಫ್ಯೂ ವೇಳೆ ಬಸ್​ಗಳಲ್ಲಿ ಸಂಚರಿಸಲು ಬಿಎಂಟಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಾರಾಂತ್ಯ ಕರ್ಫ್ಯೂ ಇರುವ ದಿನಗಳಲ್ಲಿಯೂ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆ ವರೆಗೆ ಬಸ್​ಗಳ ಸಂಚಾರ ಇರುತ್ತದೆ. … Continued

ಮಾಲೀಕರ ಕಾಪಾಡಿದ ನಾಯಿ …ತನ್ನ ಮಾಲೀಕರ ಕಾರು ಅಪಘಾತದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದ ಜರ್ಮನ್ ಶೆಫರ್ಡ್‌ ನಾಯಿ..!

ಲೆಬನಾನ್, N.H : ಟಿನ್ಸ್ಲೆ ಎಂಬ ಜರ್ಮನ್ ಶೆಫರ್ಡ್‌ ನಾಯಿಯೊಂದು ತಡರಾತ್ರಿ ತನ್ನ ಕಾರು ಅಪಘಾತದ ಸ್ಥಳಕ್ಕೆ ನ್ಯೂ ಹ್ಯಾಂಪ್‌ಶೈರ್ ಪೊಲೀಸ್‌ ಅಧಿಕಾರಿಗಳನ್ನು ಕರೆದೊಯ್ದಿದೆ…! ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ, ಆದರೆ ಟಿನ್‌ಸ್ಲಿ ಅವರ ಪ್ರಯತ್ನಕ್ಕೆ ಧನ್ಯವಾದಗಳು. ಯಾಕೆಂದರೆ ಈ ನಾಯಿ ಪೊಲೀಸರನ್ನು ಅಪಘಾತದ ಸ್ಥಳಕ್ಕೆ ಕರೆತಂದ ನಂತರ ಪೊಲೀಸರು ಗಾಯಾಳುಗಳಿಗೆ ತ್ವರಿತವಾಗಿ ವೈದ್ಯಕೀಯ ನೆರವು … Continued

ಬಿಹಾರದ ಇಬ್ಬರು ಉಪಮುಖ್ಯಮಂತ್ರಿಗಳು, ಮೂವರು ಸಚಿವರಿಗೆ ಕೊರೊನಾ ಸೋಂಕು…

ಪಾಟ್ನಾ: ಬಿಹಾರದ ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ ಬಿಹಾರ ಸರ್ಕಾರದ ಐವರು ಸಚಿವರಿಗೆ ಕೊರೊನಾ ಸೋಂಕು ತಗುಲಿದೆ. ಬಿಹಾರದ ಉಪಮುಖ್ಯಮಂತ್ರಿಗಳಾದ ರೇಣುದೇವಿ ಮತ್ತು ತಾರ್ಕಿಶೋರ್ ಪ್ರಸಾದ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಅಬಕಾರಿ ಸಚಿವ ಸುನಿಲಕುಮಾರ, ಶಿಕ್ಷಣ ಮತ್ತು ಸಂಸದೀಯ ವ್ಯವಹಾರಗಳ ಸಚಿವ ವಿಜಯಕುಮಾರ ಚೌಧರಿ ಮತ್ತು ಶಿಕ್ಷಣ ಸಚಿವ ಅಶೋಕ್ ಚೌಧರಿ ಅವರಿಗೂ … Continued

ಇದು ಬಿಜೆಪಿಯ ರಾಜಕೀಯ ಕರ್ಫ್ಯೂ, ಬಿಜೆಪಿ ರಾಜಕೀಯ ಲಾಕ್‌ಡೌನ್:ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ

ಬೆಂಗಳೂರು: ಇದು ಕೋವಿಡ್‌ ಕರ್ಫ್ಯೂ ಅಲ್ಲ, ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‌ಡೌನ್ ಎಂದು ರಾಜ್ಯ ಸರ್ಕಾರದ ವಿರದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಮೇಲಿನ ದ್ವೇಷಕ್ಕಾಗಿ ಬಿಜೆಪಿ ಸರ್ಕಾರ ರಾಜಕೀಯ ಕರ್ಫ್ಯೂ ಜಾರಿಗೊಳಿಸಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸುತ್ತಿದೆ ಎಂದು ಆರೋಪಿಸಿದರು. ವಾರಾಂತ್ಯ ಕರ್ಫ್ಯೂ ಹಾಗೂ ಸಭೆ … Continued

ಎಚ್ಚರಿಕೆ ಇರಲಿ, ಭಯ ಬೇಡ, ಯಾಕಂದ್ರೆ ಓಮಿಕ್ರಾನ್ ವೈರಸ್‌ ಗಂಟಲಲ್ಲಿ ಉಳಿಯುತ್ತದೆ.. ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆ ಕಡಿಮೆ

ಬೆಂಗಳೂರು: ಕೊರೊನಾದ ಮೂರನೇ ಅಲೆ ಅಷ್ಟೊಂದು ದೀರ್ಘವಾಗಿ ಇರುವುದಿಲ್ಲ. ವೇಗವಾಗಿ ಹರಡುತ್ತದೆ ಹಾಗೂ ವೇಗವಾಗಿಯೇ ಮುಕ್ತಾಯವಾಗುತ್ತದೆ. ಹೀಗಾಗಿ ಕನಿಷ್ಠ 4ರಿಂದ 6 ವಾರಗಳು ಜನ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ ಹೇಳಿದ್ದಾರೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಅಲೆ ಬೇಗ ಹರಡಿದ್ದರೂ ಅಷ್ಟೇ ವೇಗವಾಗಿ ಕಡಿಮೆ ಆಗುತ್ತದೆ ಎಂದು ಬೇರೆ ದೇಶಗಳಿಂದ ಬಂದ … Continued

ಚಿಕ್ಕಬಳ್ಳಾಪುರದಲ್ಲಿ ರಾತ್ರಿ ಮತ್ತೆ ಕಂಪಿಸಿದ ಭೂಮಿ: ಕೊರೆಯುವ ಚಳಿಯಲ್ಲೇ ಮನೆಯಿಂದ ಹೊರಗೆ ಕಾಲ ಕಳೆದ ಜನ..

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದು, ಬುಧವಾರ ಮುಂಜಾನೆ 3 ಗಂಟೆಗೆ ಭೂಮಿ ಕಂಪಿಸಿದ್ದು ಜನರು ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ. ರಿಕ್ಟರ್ ಮಾಪಕದಲ್ಲಿ​ 2.6 ತೀವ್ರತೆಯ ಭೂಕಂಪ ದಾಖಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ, ಬೋಗಪರ್ತಿ ಶೆಟ್ಟಿಗೇರೆ, ಅಡ್ಡಗಲ್, ಬೀರಗಾನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಗ್ರಾಮಸ್ಥರಿಗೆ ಭೂಮಿ ಕಂಪಿಸಿದ ಅನುಭವ ಉಂಟಾದ ಹಿನ್ನೆಲೆ … Continued