ಮೂರನೇ ಕೋವಿಡ್ ಅಲೆ ಜನವರಿ ಅಂತ್ಯದ ವೇಳೆಗೆ ಉತ್ತುಂಗಕ್ಕೇರಬಹುದು, ದೈನಂದಿನ ಪ್ರಕರಣಗಳು 10 ಲಕ್ಷವನ್ನೂ ತಲುಪಬಹುದು: ಹೊಸ ಅಧ್ಯಯನದ ಊಹೆ

ನವದೆಹಲಿ: ಭಾರತದಲ್ಲಿ ಓಮಿಕ್ರಾನ್-ಪ್ರಚೋದಿತ ಕೋವಿಡ್ -19ರ ಮೂರನೇ ಅಲೆಯು ಜನವರಿ-ಅಂತ್ಯ ಮತ್ತು ಫೆಬ್ರವರಿಯಲ್ಲಿ ಗರಿಷ್ಠವಾಗಬಹುದು, ದೈನಂದಿನ ಪ್ರಕರಣಗಳು 10 ಲಕ್ಷ ಮುಟ್ಟಬಹುದು ಎಂದು ಐಐಎಸ್‌ಸಿ-ಐಎಸ್‌ಐ (IISc-ISI) ಹೊಸ ಮಾಡೆಲಿಂಗ್ ಅಧ್ಯಯನವು ಅಂದಾಜು ಮಾಡಿದೆ. ಓಮಿಕ್ರಾನ್ ಹರಡುವ ದರಗಳನ್ನು ಆಧರಿಸಿದ ಅಧ್ಯಯನವನ್ನು ಪ್ರೊಫೆಸರ್ ಶಿವ ಅತ್ರೇಯ, ಪ್ರೊಫೆಸರ್ ರಾಜೇಶ್ ಸುಂದರೇಶನ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ … Continued

ಇಂದಿನಿಂದ ವೀಕೆಂಡ್ ಕರ್ಫ್ಯೂ ಜಾರಿ; ಏನಿರುತ್ತದೆ..? ಏನಿರಲ್ಲ?

ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ ? ಏನಿರಲ್ಲ? ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಹಾಗೂ ಹೊಸ ರಫಾಂತರ ಓಮಿಕ್ರಾನ್‌ ಸೋಂಕು ಏರಿಕೆ ಕಾಣುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ನಿಯಂತ್ರಣದ ಕ್ರಮವಾಗಿ ನೈಟ್​ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೆ ತಂದಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ವಾರಾಂತ್ಯದ ಕರ್ಫ್ಯೂ ಆರಂಭವಾಗಲಿದ್ದು ಸೋಮವಾರ ಬೆಳಗ್ಗೆ 5 ಗಂಟೆವರೆಗೂ … Continued

ಮಂಡ್ಯ: ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ ಮುಖ್ಯ ಶಿಕ್ಷಕಿ…!

ಮಂಡ್ಯ: ಶಾಲೆಗೆ ಮೊಬೈಲ್ ತಂದಿದ್ದ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕಿ ಅಮಾನವೀಯವಾಗಿ ನಡೆದುಕೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕಿ ಅಸಭ್ಯವಾಗಿ ನಡೆದುಕೊಂಡಿದ್ದು, ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾರದ ಹಿಂದೆಯೇ ಈ … Continued

ಕಂದಾಯ ಸಚಿವ ಆರ್. ಅಶೋಕಗೆ ಕೋವಿಡ್ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಕಂದಾಯ ಸಚಿವ ಆರ್.ಅಶೋಕ್‌ಗೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕೊರೊನಾ ಹಾಗೂ ಒಮಿಕ್ರಾನ್ a ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಗುರುವಾರ 5,031 ಕೊರೊನಾ ಪ್ರಕರಣಗಳು ದೃಢಪಟ್ಟಿತ್ತು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಅಂದರೆ 4,324 ಪ್ರಕರಣ … Continued

ವಿಲಕ್ಷಣ ಘಟನೆ: ತಪಾಸಣೆ ಸಮಯದಲ್ಲಿ ಸಿಕ್ಕಿಬೀಳುವ ಭಯದಲ್ಲಿ ಮೊಬೈಲ್ ನುಂಗಿದ ಕೈದಿ..!

ನವದೆಹಲಿ: ತಾನು ಸಿಕ್ಕಿಬೀಳುವ ಭಯದಿಂದ ತಿಹಾರ್‌ ಜೈಲಿನಲ್ಲಿ ಕೈದಿಯೊಬ್ಬರು ಜೈಲು ಅಧಿಕಾರಿಗಳು ನಡೆಸಿದ ತಪಾಸಣೆಯ ವೇಳೆ ಮೊಬೈಲ್ ಫೋನ್ ನುಂಗಿದ ಘಟನೆ ಬುಧವಾರ ನಡೆದಿದೆ. ಈ ‘ಅಸಾಮಾನ್ಯ ಘಟನೆ’ ಜೈ ತಿಹಾರ್ ಸೆಂಟ್ರಲ್ ಕಾರಾಗೃಹದ 1 ಜೈಲಿನೊಳಗೆ ನಡೆದಿದೆ ಎಂದು ವರದಿಯಾಗಿದೆ. ಮೊಬೈಲ್ ಮತ್ತು ಇತರ ನಿಷೇಧಿತ ವಸ್ತುಗಳ ತಪಾಸಣೆ ನಡೆಯುತ್ತಿರುವಾಗ ಜೈಲು ಅಧಿಕಾರಿಗಳು ಈತನ … Continued

ವಾರಾಂತ್ಯ ಕರ್ಫ್ಯೂ: ನಾಳೆ ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ರಜೆ

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಇಂದಿನಿಂದ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಶೀಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಈ ಕುರಿತು ಸುತ್ತೋಲೆ ಹೊರಡಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಓಮಿಕ್ರಾನ್, ಕೊರೋನಾ ನಿಯಂತ್ರಣದ ಸುರಕ್ಷತಾ ಕ್ರಮವಾಗಿ ಬೆಂಗಳೂರು ನಗರ ಜಿಲ್ಲೆಯ ಶಾಲೆಗಳಲ್ಲಿ … Continued

ರಾಜ್ಯದಲ್ಲಿ ಒಂದೇ ದಿನ 107 ಓಮಿಕ್ರಾನ್ ಸೋಂಕು ಪತ್ತೆ..!

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆ ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳೂ ಹೆಚ್ಚುತ್ತಿವೆ. ಜನೆವರಿ .6ರಂದು,ಗುರುವಾರ ಒಂದೇ ದಿನ ರಾಜ್ಯದಲ್ಲಿ 107 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಈ ಕುರುತು ಟ್ವೀಟ್‌ ಮಾಡಿರುವ ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ, ಈಗ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 333ಕ್ಕೆ ಹೆಚ್ಚಳವಾಗಿದೆ ಎಂದು ರಾಜ್ಯದ ತಿಳಿಸಿದ್ದಾರೆ. … Continued

ಹುಬ್ಬಳ್ಳಿ: ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಉದ್ಯಮಿಗೆ ಬರೋಬ್ಬರಿ 32 ಲಕ್ಷ ರೂ. ಪಂಗನಾಮ..!

ಹುಬ್ಬಳ್ಳಿ: ಹೆಚ್ಚಿನ ಲಾಭದ ಆಮಿಷವೊಡ್ಡಿ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಉದ್ಯಮಿ ಬರೋಬ್ಬರಿ 32 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ಹೆಗ್ಗೇರಿ ಕಾಲೋನಿಯ ಉದ್ಯಮಿ ಗುರುಮೂರ್ತಿ ನಾಣ್ಯದ ಎಂಬವರಿಗೆ ಅಪರಿಚಿತರೊಬ್ಬರು ಪ್ಲಿಪ್‍ಕಾರ್ಟ್ ಕಂಪನಿಯ ಪ್ರಾಜೆಕ್ಟ್‍ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ 32 ಲಕ್ಷ … Continued

ನೀಟ್‌ ಪಿಜಿ ಪ್ರವೇಶ: ಮಧ್ಯಂತರ ಆದೇಶದಲ್ಲಿ ಒಬಿಸಿಗೆ 27%, ಇಡಬ್ಲ್ಯುಎಸ್‌ ವಿದ್ಯಾರ್ಥಿಗಳಿಗೆ 10% ಕೋಟಾಕ್ಕೆ ಅನುಮತಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಶುಕ್ರವಾರ, ತನ್ನ ಮಧ್ಯಂತರ ಆದೇಶದಲ್ಲಿ ಸುಪ್ರೀಂ ಕೋರ್ಟ್, 2021-22ನೇ ಸಾಲಿಗೆ NEET-PG ಪ್ರವೇಶಕ್ಕಾಗಿ ವೈದ್ಯಕೀಯ ಕೌನ್ಸೆಲಿಂಗ್ ಅನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿತು ಮತ್ತು 27% ಹಿಂದುಳಿದ ವರ್ಗ(OBC) ಮತ್ತು 10% ಆರ್ಥಿಕ ದುರ್ಬಲರ ಕೋಟಾ (EWS) ಸಿಂಧುತ್ವವನ್ನು ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರ ಪೀಠವು ಮಧ್ಯಂತರ ಆದೇಶವು 2021-22 … Continued

ಚೀನಾದಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕೊರೊನಾ ವೈರಸ್ ಪತ್ತೆ…! ಸೂಪರ್‌ ರ್ಮಾರ್ಕೆಟುಗಳಿಗೆ ಬೀಗ ಜಡಿದ ಚೀನಾ

ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಕೊರೊನಾ ವೈರಸ್ ಕುರುಹುಗಳು ಕಂಡುಬಂದ ನಂತರ ಚೀನಾದ ಅಧಿಕಾರಿಗಳು ಹಲವಾರು ಸೂಪರ್ಮಾರ್ಕೆಟ್ಟುಗಳನ್ನು ಬಂದ್‌ ಮಾಡಿದ್ದಾರೆ. ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿ ಪ್ರಾಂತ್ಯಗಳಲ್ಲಿ ಕನಿಷ್ಠ ಒಂಬತ್ತು ನಗರಗಳು ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕೊರೊನಾ ವೈರಸ್ ಮಾದರಿಗಳನ್ನು ಕಂಡುಕೊಂಡಿವೆ ಎಂದು ವರದಿಗಳು ಹೇಳುತ್ತವೆ. ಅಧಿಕಾರಿಗಳು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳ ತುರ್ತು … Continued