ಮಹಾರಾಷ್ಟ್ರ: ಬಾಂದ್ರಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 68 ಸಿಬಿಐ ಸಿಬ್ಬಂದಿಗೆ ಕೋವಿಡ್-19 ಸೋಂಕು..!

ಮುಂಬೈ: ಮುಂಬೈನಲ್ಲಿರುವ ತನಿಖಾ ಸಂಸ್ಥೆಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಸಿಬಿಐ)ನ 68 ಉದ್ಯೋಗಿಗಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಗ್ರೇಟರ್ ಮುಂಬೈ ಮಹಾನಗರ ಪಾಲಿಕೆ (ಎಂಸಿಜಿಎಂ) ಶನಿವಾರ ತಿಳಿಸಿದೆ. . ಬಿಕೆಸಿ (BKC) ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು 235 ಉದ್ಯೋಗಿಗಳನ್ನು ಪರೀಕ್ಷಿಸಲು ಸಿಬಿಐ ಬೃಹನ್ಮುಂಬೈ … Continued

ಪಾಕಿಸ್ತಾನದ ಮರ್ರಿ ಹಿಲ್ ಸ್ಟೇಷನ್‌ನಲ್ಲಿ ಭಾರೀ ಹಿಮಪಾತದಿಂದ ವಾಹನಗಳಲ್ಲಿ ಹೆಪ್ಪುಗಟ್ಟಿ 10 ಮಕ್ಕಳು ಸೇರಿದಂತೆ 22 ಜನರು ಸಾವು

ಲಾಹೋರ: ಅಭೂತಪೂರ್ವ ಹಿಮಪಾತ ಮತ್ತು ಪಂಜಾಬ್ ಪ್ರಾಂತ್ಯದ ಸುಂದರವಾದ ಪಟ್ಟಣಕ್ಕೆ ಪ್ರವಾಸಿಗರ ನೂಕು ನುಗ್ಗುವಿಕೆಯಿಂದಾಗಿ ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ತಮ್ಮ ವಾಹನಗಳಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟ ಘಟನೆ ಪಾಕಿಸ್ತಾನದ ಜನಪ್ರಿಯ ಗಿರಿಧಾಮ ಮುರ್ರೆಯಲ್ಲಿ ಶನಿವಾರ ನಡೆದಿದೆ. ಈಗ ಈ ಪ್ರದೇಶವನ್ನು ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ರಾವಲ್ಪಿಂಡಿ ಜಿಲ್ಲೆಯ ಮುರ್ರೆಯಲ್ಲಿ ಸಾವಿರಾರು ವಾಹನಗಳು … Continued

ಪ್ರಧಾನಿ ಭದ್ರತಾ ಲೋಪದ ಆರೋಪದ ಬೆನ್ನಲ್ಲೇ ಪಂಜಾಬ್​ನಲ್ಲಿ ನೂತನ ಡಿಜಿಪಿ ನೇಮಕ

ಚಂಡೀಗಢ: ಪಂಜಾಬ್​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಹಾಗೇ, ಸುಪ್ರೀಂ ಕೋರ್ಟ್​ನಲ್ಲೂ ಈ ಬಗ್ಗೆ ವಿಚಾರಣೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ಶನಿವಾರ (ಶನಿವಾರ) ವಿ.ಕೆ. ಭಾವ್ರ ಅವರನ್ನು ಪಂಜಾಬಿನ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ (ಡಿಜಿಪಿ) ನೇಮಕ ಮಾಡಿದೆ. ಯೂನಿಯನ್ ಪಬ್ಲಿಕ್ … Continued

ಕರ್ನಾಟಕದ ಕೊವಿಡ್ ವಾರ್ ರೂಂ ಮುಖ್ಯಸ್ಥ ಐಎಎಸ್ ಅಧಿಕಾರಿ ಮೌದ್ಗಿಲ್​ಗೆ ರಾಷ್ಟ್ರ ಪ್ರಶಸ್ತಿ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ಕೂಡ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದು, ಕರ್ನಾಟಕ ಕೊವಿಡ್ ವಾರ್ ರೂಮ್ ಮುಖ್ಯಸ್ಥರಾದ ಮನೀಶ್ ಮೌದ್ಗಿಲ್ ಮತ್ತು ಅವರ ತಂಡವು ಕೋವಿಡ್ ನಿರ್ವಹಣೆಯಲ್ಲಿ ತಂತ್ರಜ್ಞಾನ, ಡಿಜಿಟಲೀಕರಣವನ್ನು ಬಳಸಿದ್ದಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. ಭಾರತ ಸರ್ಕಾರದ ಇ-ಆಡಳಿತ ಪ್ರಶಸ್ತಿ ಐಎಎಸ್​ ಅಧಿಕಾರಿ ಮನೀಶ್ ಮೌದ್ಗಿಲ್ ಪಾತ್ರರಾಗಿದ್ದಾರೆ. ಶುಕ್ರವಾರ ಹೈದರಾಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ … Continued

ಕರ್ನಾಟಕದಲ್ಲಿ ಹೊಸದಾಗಿ 8,906 ಜನರಿಗೆ ಸೋಂಕು, ಬೆಂಗಳೂರಿನಲ್ಲೇ ಬಹುತೇಕ ಪ್ರಕರಣ ದಾಖಲು

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಶನಿವಾರ ಹೊಸದಾಗಿ 8,906 ಕೊರೊನಾ ಸೋಂಕುಗಳು ದಾಖಲಾಗಿದ್ದು, 508 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ಸಮಯದಲ್ಲಿ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರಿಗೆ ಸಂಖ್ಯೆ 30,39,958ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 29,63,056 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.5.42ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ಶೇ.0.04 ಇದೆ. … Continued

ಹೆಬ್ಬಾವು ಅಡಿಕೆ ಮರವನ್ನು ಏರುವ ರೀತಿ ಹೇಗಿರುತ್ತದೆ..? ಇಲ್ಲಿದೆ ನೋಡಿ ವಿಡಿಯೊ

posted in: ರಾಜ್ಯ | 0

ವನ್ಯಜೀವಿಗಳಿಗೆ ಸಂಬಂಧಿಸಿದ ವಿಡಿಯೊಗಳು ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಈ ವಿಡಿಯೊಗಳಲ್ಲಿ ಕೆಲವು ತುಂಬಾ ಅಪರೂಪದ್ದಾಗಿರುತ್ತದೆ. ಸಾಮಾನ್ಯವಾಗಿ ಹೆಬ್ಬಾವುಗಳಿಗೆ ಸಂಬಂಧಿಸಿದ ವಿಡಿಯೊಗಳು ಸೆರೆ ಸಿಕ್ಕುವುದು ಕಷ್ಟ ಹಾಗೂ ಅಷ್ಟೇ ಅಪಾಯಕಾರಿಯೂ ಆಗಿರುತ್ತದೆ. ಹಾಗೂ ಹೆಚ್ಚು ಗಮನ ಸೆಳೆಯುತ್ತವೆ. ಇಂಥದ್ದೇ ಒಂದು ಅಪರೂಪದ ವಿಡಿಯೊದಲ್ಲಿ ಹೆಬ್ಬಾವು ಅಡಿಕೆ ಮರವನ್ನು (Python Climbs Tree) ಏರುತ್ತಿರುವ ದೃಶ್ಯ … Continued

ಪ್ರತಿನಿತ್ಯ 20-22 ಕಿಮೀ ಸೈಕಲ್ ಓಡಿಸುವ ಕೇವಲ 81 ವರ್ಷದ ಅಜ್ಜಿ ಶಾಂತಿ ಬಾಯಿ…!

ಜಬಲ್ಪುರ(ಮಧ್ಯಪ್ರದೇಶ): ನೀವು ಉನ್ನತ ಚೇತನವನ್ನು ಹೊಂದಿದ್ದರೆ, ಏನನ್ನಾದರೂ ಮಾಡುವ ಉತ್ಸಾಹವನ್ನು ಹೊಂದಿದ್ದರೆ, ವಯಸ್ಸಾದರೂ ನಿಮ್ಮ ದಾರಿಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬ ನಾಣ್ಣುಡಿಯನ್ನು ನಿಜವಾಗಿಸಿದವರು ಜಬಲ್ಪುರದ ವರ್ಷದ ಶಾಂತಿ ಬಾಯಿಯವರು. ಅವರು ತಮ್ಮ 81 ವರ್ಷದ ಇಳಿ ವಯಸ್ಸಿನಲ್ಲಿ ಪ್ರತಿದಿನ 20 ರಿಂದ 22 ಕಿಲೋಮೀಟರ್ ಸೈಕಲ್ ತುಳಿಯುತ್ತಾರೆ..! ಶಾಂತಿ ಬಾಯಿ ಅವರು ಒಬ್ಬಂಟಿಯಾಗಿ ವಾಸಿಸುತ್ತಾರೆ. ಅವರ … Continued

ಸರ್ಕಾರ ಏನೇ ಮಾಡಿದ್ರೂ ನಮ್ಮ ಪಾದಯಾತ್ರೆ ಮಾತ್ರ ನಿಲ್ಲುವುದಿಲ್ಲ : ಸಿದ್ದರಾಮಯ್ಯ

posted in: ರಾಜ್ಯ | 0

ಬೆಂಗಳೂರು: ರಾಮನಗರ ಜಿಲ್ಲೆಗೆ ಸೀಮಿತವಾಗಿ ಸರ್ಕಾರ 144 ಸೆಕ್ಷನ್ ಹೇರಿರುವುದು ಹೇಗಾದರೂ ಮಾಡಿ ನಮ್ಮ ಪಾದಯಾತ್ರೆ ನಿಲ್ಲಿಸಬೇಕು ಎಂಬ ದುರುದ್ದೇಶ ತೋರಿಸುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾವು ನಾಳೆ, ಭಾನುವಾರ ಪಾದಯಾತ್ರೆ ಮಾಡುವುದು ನಿಶ್ಚಿತ, ಈ ಸರ್ಕಾರ ನಮ್ಮ ಮೇಲೆ … Continued

15-18 ವಯಸ್ಸಿನ 2 ಕೋಟಿ ಮಕ್ಕಳಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ: ಸಚಿವ ಮಾಂಡವಿಯಾ

ನವದೆಹಲಿ: ಮಕ್ಕಳಿಗಾಗಿ ಆರಂಭಿಸಿದ ಕೊರೊನಾ ಲಸಿಕಾಕರಣ ಅಭಿಯಾನದಲ್ಲಿ ಒಂದು ವಾರದೊಳಗೆ 15-18 ವಯಸ್ಸಿನ 2 ಕೋಟಿ ಮಕ್ಕಳು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌‌ಸುಖ್‌ ಮಾಂಡವಿಯಾ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಇದು ಒಳ್ಳೆಯ ಬೆಳವಣಿಗೆ. 15-18 ವರ್ಷದೊಳಗಿನ 2 ಕೋಟಿಗೂ ಅಧಿಕ ಮಕ್ಕಳು ತಮ್ಮ ಮೊದಲ … Continued

ಮುಂಬೈನಲ್ಲಿ ಕೋವಿಡ್‌ ಲಸಿಕೆಯ ಒಂದೂ ಡೋಸ್‌ ಹಾಕಿಸಿಕೊಳ್ಳದ ಶೇ. 96ರಷ್ಟು ಕೊರೊನಾ ಸೋಂಕಿತರು ಐಸಿಯುಗೆ ದಾಖಲು…!

ನವದೆಹಲಿ:  ದೇಶದಲ್ಲಿ ಇನ್ನೂ ಅನೇಕರು ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಮುಂಬೈನಲ್ಲಿ  ಲಸಿಕೆ ಪಡೆಯದೆ ಈಗ ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಬಹುತೇಕರು ಐಸಿಯುಗೆ ದಾಖಲಾಗಿದ್ದಾರೆ. ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಐಸಿಯುಗೆ ದಾಖಲಾಗಿರುವವರ ಪೈಕಿ ಶೇ.96ರಷ್ಟು ಕೊರೊನಾ ರೋಗಿಗಳು ಒಂದು ಡೋಸ್ ಕೊರೊನಾ ಲಸಿಕೆಯನ್ನೂ ಪಡೆಯದವರು ಎಂದು ವರದಿಯಾಗಿದೆ.  ಇದು ಕೊರೊನಾ … Continued