ಅಗರ್ತಲದಲ್ಲಿ ನಡೆಯುವ ರಾಷ್ಟ್ರೀಯ ಯುವ ಪರಂಪರೆ ಉತ್ಸವಕ್ಕೆ ಧಾರವಾಡದ ಮೂವರು ವಿದ್ಯಾರ್ಥಿಗಳು ಆಯ್ಕೆ

ಧಾರವಾಡ: ತ್ರಿಪುರ ರಾಜ್ಯದ ಅಗರ್ತಲದಲ್ಲಿ ಜನವರಿ 15ರಿಂದ 21ರ ವರೆಗೆ ಆಯೋಜಿಸಿರುವ ನಡೆಯುವ ರಾಷ್ಟ್ರೀಯ ಯುವ ಪರಂಪರೆ ಉತ್ಸವಕ್ಕೆ ಧಾರವಾಡ ಯುವ ನೃತ್ಯ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದನ್ನು ತ್ರಿಪುರದ ಯುವ ವಿಕಾಸ ಕೇಂದ್ರವು ಆಯೋಜಿಸಿದೆ. ಧಾರವಾಡ ಜಿಲ್ಲೆಯ ಯುವ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಮೇಸ್ತ್ರಿ, ಪ್ರತೀಕ ದೇಶಮನಿ, ವಿನೂತಾ ಹೊಸಮನಿ ಕರ್ನಾಟಕ … Continued

ಪ್ರಧಾನಿ ಭದ್ರತೆ ಲೋಪವಾದ ಸ್ಥಳದ ಸಮೀಪದಲ್ಲಿ ಪಾಕ್ ದೋಣಿ ಪತ್ತೆ..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಲೋಪ ನಡೆದಿದ್ದ ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ ಗಡಿಭಾಗದ ಔಟ್‍ಪೋಸ್ಟ್ ಬಳಿ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಅದನ್ನು ಬಿಎಸ್‍ಎಫ್ ವಶಕ್ಕೆ ಪಡೆದುಕೊಂಡಿದೆ. ಗಡಿಯಲ್ಲಿರುವ ಟಿಡಿ ಮಾಲ್ ಔಟ್‍ಪೋಸ್ಟ್ ಬಳಿ ಬಿಎಸ್‍ಎಫ್‍ನ 136ನೆ ಬೆಟಾಲಿಯನ್‍ಗೆ ಸೇರಿದ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ … Continued

ನೈಸ್‌ ರಸ್ತೆಯಲ್ಲಿ ಅಪಘಾತ : ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು: ವ್ಯಾಗನರ್ ಕಾರಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಸರಣಿ ಅಪಘಾತದಲ್ಲಿ ,ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬನ್ನೇರುಘಟ್ಟ-ತುಮಕೂರು ನೈಸ್ ರಸ್ತೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೇರಳ ಮೂಲದ ನಾಲ್ವರು ಮೃತಪಟ್ಟವರು. ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರೆಲ್ಲರೂ … Continued

ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ಚುನಾವಣೆ ವೇಳಾಪಟ್ಟಿ ಪ್ರಕಟ :ಜನವರಿ 15ರ ವರೆಗೆ ಸಮಾವೇಶ, ರೋಡ್‌ಶೋಗಳಿಗೆ ನಿಷೇಧ

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು, ಶನಿವಾರ ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ, ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಫೆಬ್ರವರಿ 10ರಿಂದ ಮಾರ್ಚ್ 7 ರ ನಡುವೆ ಮತದಾನ ನಡೆಯಲಿದೆ. ಐದು ರಾಜ್ಯಗಳ ಚುನಾವಣೆಯು 7 ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಹೆಚ್ಚುತ್ತಿರುವ ಕೋವಿಡ್ … Continued

ಭಾರೀ ಹಿಮಪಾತದ ನಡುವೆಯೇ ದೇಶದ ಹಿಮಚ್ಛಾದಿತ ದೇಶದ ಗಡಿ ಕಾಯ್ತಾರೆ ನಮ್ಮ ಸೈನಿಕರು: ಹೇಗೆ ಬಂಡೆಯಂತೆ ನಿಲ್ತಾರೆ, ಗಸ್ತು ತಿರುಗ್ತಾರೆ…! ವೀಕ್ಷಿಸಿ

ನವದೆಹಲಿ: ಇಡೀ ಉತ್ತರ ಭಾರತ ತೀವ್ರ ಚಳಿಯಿಂದ ತತ್ತರಿಸಿದೆ. ಎತ್ತರದ ಪ್ರದೇಶಗಳಲ್ಲಿನ ಪರಿಸ್ಥಿತಿಯಂತೂ ಇನ್ನಷ್ಟು ಕಠಿಣವಾಗಿದೆ, ತಾಪಮಾನವು  ಶೂನ್ಯ ಮಟ್ಟಕ್ಕೆ ಇಳಿಯುತ್ತದೆ. ಅಂತಹ ವಾತಾವರಣದಲ್ಲಿ ಹೊರಗೆ ಹೋಗುವುದನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟ; ಚಳಿಗೆ ಹೆಪ್ಪುಗಟ್ಟಿ ಸಾಯುವ ಭಯ ಸಹ ಎದುರಾಗುತ್ತದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಿಮಚ್ಛಧಿತ ಗಡಿಪ್ರದೇಶಗಳಲ್ಲಿ ಭಾರತೀಯ ಸೇನೆಯ ಸೈನಿಕರು ದೇಶವನ್ನು ಕಾಪಾಡುವಲ್ಲಿ ನಿರತರಾಗಿದ್ದಾರೆ, … Continued

ದೇವರಿಗೇ ಸಮನ್ಸ್ ಜಾರಿ ಮಾಡಿದ ತಮಿಳುನಾಡಿನ ಕೋರ್ಟ್ !

ಚೆನ್ನೈ: ದೇವರಿಗೆ ಸಮನ್ಸ್…! ತಮಿಳುನಾಡಿನ ಕುಂಭಕೋಣಂ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ದೇವರಿಗೇ ಸಮನ್ಸ್‌ ನೀಡಿತ್ತು.. ಈಗ ಇದನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ತಿರುಪುರ ಜಿಲ್ಲೆಯ ಸಿವಿರಿಪಾಲಯಂನ ಪರಶಿವನ್ ಸ್ವಾಮಿ ದೇವರಿಗೇ ಕುಂಭಕೋಣಂನ ನ್ಯಾಯಾಲಯವೊಂದು ಜನವರಿ 6ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಮೂಲ ವಿಗ್ರಹ ಕಳುವಿನ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಕುಂಭಕೋಣಂನ ನ್ಯಾಯಾಲಯವು ಇದು ಮೂಲ … Continued

ಮೇಕೆದಾಟು ಪಾದಯಾತ್ರೆ: ಡಿಕೆಶಿ ಮನೆಯಲ್ಲಿ ಕಾಂಗ್ರೆಸ್ ಶಾಸಕರ ಸಭೆ

ಬೆಂಗಳೂರು: ಕರ್ನಾಟಕದಲ್ಲಿ ಮಹಾಮಾರಿ ಕೊರೊನಾ ಹೆಚ್ಚುತ್ತಿದ್ದರೂ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ತನ್ನ ಮೇಕೆದಾಟು ಪಾದಯಾತ್ರೆಯನ್ನು ಮುಂದುವರಿಸಲು ನಿರ್ಧರಿಸಿದೆ. ಪಾದಯಾತ್ರೆಗೆ ವೇದಿಕೆ ಸಿದ್ಧಪಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕನಕಪುರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈಗಾಗಲೇ ಸರ್ಕಾರ ವಾರಾಂತ್ಯದ ಕರ್ಫ್ಯೂ ವಿಧಿಸಿದ್ದು, ಭಾನುವಾರದಿಂದಲೇ ಪಾದಯಾತ್ರೆ … Continued

ಉದ್ಯಮಿ ಕುಟುಂಬದ ಭೀಕರ ಆತ್ಮಹತ್ಯೆ ಪ್ರಕರಣ; ತೆಲಂಗಾಣ ಆಡಳಿತ ಪಕ್ಷ ಟಿಆರ್​ಎಸ್ ಶಾಸಕನ ಪುತ್ರ ವನಮಾ ರಾಘವೇಂದ್ರ ಬಂಧನ

ತೆಲಂಗಾಣದ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕ ವನಮಾ ವೆಂಕಟೇಶ್ವರ ರಾವ್​ ಅವರ ಪುತ್ರ ವನಮಾ ರಾಘವೇಂದ್ರ ರಾವ್ ಅವರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಕೊತೆಗುಡಂ ಜಿಲ್ಲೆಯ ಖ್ಯಾತ ಉದ್ಯಮಿ ಮತ್ತು ಅವರ ಕುಟುಂಬದ ಮೂವರನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಡಿ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಶಾಸಕರು ಪರಾರಿಯಾಗಿದ್ದರು. ಶುಕ್ರವಾರ … Continued

ಲಂಡನ್ ಆಸ್ಪತ್ರೆಗಳಲ್ಲಿ ಸೇನಾಪಡೆ ನಿಯೋಜನೆ, ಫ್ರಾನ್ಸಿನಲ್ಲಿ ಸೋಂಕಿತ ಆರೋಗ್ಯ ಸಿಬ್ಬಂದಿಯಿಂದಲೇ ಚಿಕಿತ್ಸೆ: ಓಮಿಕ್ರಾನ್‌ ಉಲ್ಬಣಕ್ಕೆ ಬೆಚ್ಚಿದ ಯುರೋಪ್‌..!

ಲಂಡನ್ ಆಸ್ಪತ್ರೆಗಳಿಗೆ ಪಡೆಗಳನ್ನು ನಿಯೋಜಿಸಲಾಗಿದೆ. ಕೋವಿಡ್-19 ಸೋಂಕಿತ ಆರೋಗ್ಯ ಕಾರ್ಯಕರ್ತರೇ ಫ್ರಾನ್ಸ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಉದ್ಭವವಾಗಿದೆ. ನೆದರ್ಲ್ಯಾಂಡ್ಸ್ ಲಾಕ್‌ಡೌನ್ ಅಡಿಯಲ್ಲಿದೆ ಮತ್ತು ಸಿಸಿಲಿಯಲ್ಲಿ ಟೆಂಟ್ ಫೀಲ್ಡ್ ಆಸ್ಪತ್ರೆಗಳು ಹೆಚ್ಚಿವೆ. ಕೊರೊನಾ ವೈರಸ್‌ನ ಹೊಸ ಓಮಿಕ್ರಾನ್ ರೂಪಾಂತರದ ಹರಡುವಿಕೆಯಿಂದ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಆರೋಗ್ಯ ವ್ಯವಸ್ಥೆಗಳ ಅವ್ಯವಸ್ಥೆ ಸರಿಪಡಿಸಲು ಯುರೋಪಿನಾದ್ಯಂತ ರಾಷ್ಟ್ರಗಳು ಪರದಾಡುತ್ತಿವೆ, ಇದು … Continued

ಓಮಿಕ್ರಾನ್ ರೂಪಾಂತರದ ಲಕ್ಷಣಗಳು ಅಂದುಕೊಂಡಂತೆ ‘ಸೌಮ್ಯ’ವಾಗಿರುವುದಿಲ್ಲ:ತಜ್ಞರು

ನವದೆಹಲಿ: ಓಮಿಕ್ರಾನ್‌ನಿಂದ ಉಂಟಾಗುವ ಸೋಂಕು ಡೆಲ್ಟಾಕ್ಕಿಂತ ಸೌಮ್ಯವಾಗಿದೆ ಎಂದು ಸಾಮಾನ್ಯ ಒಮ್ಮತವಿದ್ದರೂ, ಕೆಲವು ತಜ್ಞರು ಕಾಳಜಿಯ ಹೊಸ ರೂಪಾಂತರದ ಲಕ್ಷಣಗಳ ಬಗ್ಗೆ ಹಗುರವಾಗಿ ತೆಗೆದುಕೊಳ್ಳುವುದು ಬೇಡ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ಸಣ್ಣ ಅನಾರೋಗ್ಯದಿಂದ ಬಳಲುತ್ತಿರುವವರು ಸಾಕಷ್ಟು ಕಿರಿಕಿರಿ” ಅನುಭವಿಸಬಹುದು ಮತ್ತು ಇದು ಭಯಂಕರವಾದ “ದೀರ್ಘ ಕೋವಿಡ್” ಅನ್ನು ಅಭಿವೃದ್ಧಿಪಡಿಸಬಹುದು ಎಂದು ಬೋಸ್ಟನ್‌ನ ಟಫ್ಟ್ಸ್ … Continued