ಮೇಕೆದಾಟು ಪಾದಯಾತ್ರೆಯಿಂದ ಸಿದ್ದರಾಮಯ್ಯ ಮತ್ತೆ ಅರ್ಧಕ್ಕೆ ವಾಪಸ್‌

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿನ ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎಂದು ಹೇಳಲಾಗಿದೆ. ಇಂದು 7 ಕಿ.ಮೀ ಪಾದಯಾತ್ರೆಯಿಂದ ಬಳಲಿರುವ ಸಿದ್ದರಾಮಯ್ಯಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ಸ್ವಲ್ಪಕಾಲ ವಿಶ್ರಾಂತಿಗೆ ಪಡೆದಿದ್ದರು. ನಂತರ ಬೆನ್ನುನೋವು … Continued

ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯಗೆ ಕೊರೊನಾ ಸೋಂಕು

ಹುಬ್ಬಳ್ಳಿ: ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ ಪ್ರತಿನಿಧಿಸುವ ಶಾಸಕ ಪ್ರಸಾದ ಅಬ್ಬಯ್ಯ ಅವರು ವೈದ್ಯರ ಸಲಹೆ ಮೇರೆಗೆ ಒಂದು ವಾರಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದಾರೆ. ತನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಕೋವಿಡ್ … Continued

ಉತ್ತರ ಪ್ರದೇಶ ಚುನಾವಣೆಗೆ ಕೆಲದಿನಗಳಿರುವಾಗ ಬಿಜೆಪಿಗೆ ಮತ್ತೊಂದು ಶಾಕ್‌: ಸಿಎಂ ಯೋಗಿ ಸಂಪುಟದ ಮತ್ತೊಬ್ಬ ಸಚಿವ ರಾಜೀನಾಮೆ

.ಲಕ್ನೋ: ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ್ತೊಂದು ದೊಡ್ಡ ಹಿನ್ನಡೆಯಾಗಿದ್ದು, ಉತ್ತರ ಪ್ರದೇಶದ ಪರಿಸರ ಖಾತೆ ಸಚಿವ ದಾರಾ ಸಿಂಗ್ ಚೌಹಾಣ್ ಬುಧವಾರ ಯೋಗಿ ಆದಿತ್ಯನಾಥ್ ನೇತೃತ್ವದ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಮುಂದಿನ ಕ್ರಮದ ಕುರಿತು, ಚೌಹಾಣ್ ಅವರು ತಮ್ಮ ಸಮುದಾಯದ ಸದಸ್ಯರೊಂದಿಗೆ ಮಾತನಾಡಿ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ದಲಿತರು, ಹಿಂದುಳಿದ ಸಮುದಾಯಗಳ … Continued

ದನಗಳ ಕಳ್ಳತನ ಮಾಡಲು ಹೊಸ ತಂತ್ರಗಾರಿಕೆ: ಕಾರಿಗೆ ಮದುವೆ ಅಲಂಕಾರ ಮಾಡಿ ಕಳ್ಳತನ..!

ಉಡುಪಿ: ಯಾರಿಗೂ ಅನುಮಾನ ಬರಬಾರದು ಎಂದು ಕಾರಿಗೆ ಮದುವೆ ವಾಹನದಂತೆ ಅಲಂಕಾರ ಮಾಡಿ, ಅದರಲ್ಲಿ ಕಳುವು ಮಾಡಿದ್ದ ದನಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಕಳ್ಳರನ್ನು ಬಂಧಿಸಲಾಗಿದೆ. ಮದುವೆ ವಾಹನವನ್ನು ಎಸ್ಕಾರ್ಟ್ ಮಾಡಿಕೊಂಡು ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕಾರ್ಯಾಚರಣೆ ನಡೆಸಿದ 16 ದನಗಳನ್ನುಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ದನಗಳನ್ನು ಸಾಗಾಟ ಮಾಡಲು ಈ ಖದೀಮರು … Continued

ಮೇಕೆದಾಟು ಪಾದಯಾತ್ರೆ: 64 ಮಂದಿ ವಿರುದ್ಧ ಮೂರನೇ ಎಫ್​ಐಆರ್ ದಾಖಲು

ಬೆಂಗಳೂರು: ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಕೋರಿ ಕಾಂಗ್ರೆಸ್ 11 ದಿನಗಳ ಪಾದಯಾತ್ರೆಯನ್ನು ಭಾನುವಾರ ಆರಂಭಿಸಿದ್ದು, ಕೋವಿಡ್-19 ಧಿಕ್ಕರಿಸಿದ ಆರೋಪದ ಮೇಲೆ ಈಗ ಪಾದಯಾತ್ರೆ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿಕುಮಾರ ಹಾಗೂ ಇತರ 63 ಜನರ ಮೇಲೆ ಮೂರನೇ ಎಫ್‌ ಐಆರ್‌ ದಾಖಲಾಗಿದೆ. 64 ಜನರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದ್ದು, ಇದರಲ್ಲಿ … Continued

ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ..? ಯಾಕೆ ಕ್ರಮ ಕೈಗೊಂಡಿಲ್ಲ: ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಅನುಮತಿ ಅನುಮತಿ ನೀಡಿಲ್ಲ ಎಂದಾದ ಮೇಲೆ ಪಾದಯಾತ್ರೆ ತಡೆಯಲು ಹಿಂಜರಿಕೆ‌ ಏಕೆ. ಯಾರಿಗಾಗಿ ಕಾಯುತ್ತಿದ್ದೀರಿ..? ಎಂದು ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನು ಏಕೆ ಮುಂದುವರಿಸಲು ಅನುಮತಿಸಲಾಗಿದೆ ಮತ್ತು ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದನ್ನು ಎರಡು ದಿನಗಳಲ್ಲಿ ತಿಳಿಸುವಂತೆ ಕರ್ನಾಟಕ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ … Continued

ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಾಣಕ್ಕೆ ಮಧ್ಯಪ್ರದೇಶ ಸರ್ಕಾರ ನಿರ್ಧಾರ

ಭೋಪಾಲ್: ಮಧ್ಯಪ್ರದೇಶ ಸರ್ಕಾರವು 2,000 ಕೋಟಿ ರೂ.ಗಳ ವೆಚ್ಚದಲ್ಲಿ ದಾರ್ಶನಿಕ ಮತ್ತು ಅಪ್ರತಿಮ ವೇದಾಂತ ತತ್ವಜ್ಞಾನಿ ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಯೋಜನೆ ಹಾಗೂ ವಿಶ್ವ ದರ್ಜೆಯ ವಸ್ತುಸಂಗ್ರಹಾಲಯ ಸ್ಥಾಪಸಿವ ಯೋಜನೆ ಬಗ್ಗೆ ಪ್ರಸ್ತಾಪಿಸಿದೆ. ಈ ಯೋಜನೆ ಮಧ್ಯಪ್ರದೇಶವನ್ನು ಜಾಗತಿಕವಾಗಿ ಪರಿಚಯಿಸುವಂತೆ ಮಾಡಲಿದೆ ಎಂದು ಅದು ಹೇಳಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ … Continued

ಪ್ರಧಾನಿ ಮೋದಿ ಭದ್ರತಾ ಲೋಪದ ತನಿಖೆಗೆ ಐವರು ಸದಸ್ಯರ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವ

ನವದೆಹಲಿ: ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಭದ್ರತೆಯಲ್ಲು ಉಂಟಾದ ಲೋಪದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಐವರು ಸದಸ್ಯರ ಸಮಿತಿಯನ್ನು ನೇಮಿಸಿದೆ. ಈ ವಿಷಯದ ಬಗ್ಗೆ ಎಲ್ಲ ತನಿಖೆಗಳನ್ನು ತಡೆಹಿಡಿದ ನಂತರ ಸುಪ್ರೀಂ ಕೋರ್ಟ್ ಐದು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಘೋಷಿಸಿತು. ಈಗ … Continued

ಸ್ವಾಮಿ ಪ್ರಸಾದ್ ಮೌರ್ಯ ಸಚಿವ ಸ್ಥಾನಕ್ಕೆ, ಬಿಜೆಪಿಗೆ ರಾಜೀನಾಮೆ ನೀಡಲು ಕಾರಣವೇನು..?

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಆಡಳಿತ ಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಆಘಾತವಾಗಿದೆ. ಉತ್ತರ ಪ್ರದೇಶ ಸರ್ಕಾರದಲ್ಲಿ, ಸಂಪುಟ ದರ್ಜೆ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಇದಾದ ನಂತರ ಕೆಲವೇ ಗಂಟೆಗಳಲ್ಲಿ, ಅವರ ನಿಕಟವರ್ತಿಗಳಾದ ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು … Continued

ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಶಿವಶಂಕರರೆಡ್ಡಿಗೆ ಕೊರೊನಾ ಸೋಂಕು

ಚಿಕ್ಕಬಳ್ಳಾಪುರ: ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ಸಿನ ಗೌರಿಬಿದನೂರು ಶಾಸಕ ಎನ್.ಎಚ್. ಶಿವಶಂಕರರೆಡ್ಡಿಗೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಿನ್ನೆ ಶಾಸಕ ಶಿವಶಂಕರರೆಡ್ಡಿ ಪಾದಯಾತ್ರೆಯಿಂದ ಗೌರಿಬಿದನೂರಿಗೆ ವಾಪಸ್ಸಾಗಿದ್ದರು. ಕೊರೊನಾ ಲಕ್ಷಣ ಇದ್ದ ಹಿನ್ನೆಲೆ ಕೊವಿಡ್ ಟೆಸ್ಟ್​ ಮಾಡಿಸಿದ್ದರು. ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಚಿ ಸಚಿವರಾದ ಎಚ್ ಎಮ್ … Continued