ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರದಿಂದ ಸಂಕ್ರಾಂತಿ ಗಿಫ್ಟ್‌..ವೇತನದಲ್ಲಿ ಭಾರೀ ಹೆಚ್ಚಳ

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಂಕ್ರಾಂತಿ ಸಿಹಿಯನ್ನು ನೀಡಿದೆ. ಅತಿಥಿ ಉಪನ್ಯಾಸಕರ ವೇತನವನ್ನು 11 ಸಾವಿರ ಇದ್ದವರಿಗೆ 28 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. 13 ಸಾವಿರ ಇರುವವರಿಗೆ 32 ಸಾವಿರ ರೂ.ಗಳಿಗೆ ಸಂಬಳ ನಿಗದಿ ಮಾಡಲಾಗಿದೆಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು … Continued

ಕೋವಿಡ್ ಎಸ್‌ಒಪಿ ಜಾರಿಯಲ್ಲಿರುವ ವರೆಗೆ ಸಮಾವೇಶ, ಧರಣಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜನವರಿ 4ರಂದು ಹೊರಡಿಸಿರುವ ಪ್ರಮಾಣಿತ ಕಾರ್ಯಸೂಚಿಯನ್ನು (ಎಸ್‌ಒಪಿ) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಸ್‌ಒಪಿ ಜಾರಿಯಲ್ಲಿರುವವರೆಗೆ ಯಾವುದೇ ಪ್ರತಿಭಟನೆ ಅಥವಾ ರಾಜಕೀಯ ಸಮಾವೇಶಗಳಿಗೆ ಅವಕಾಶ ಕೊಡಬಾರದು ಎಂದು ಶುಕ್ರವಾರ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಬೇಕು ಎಂದು … Continued

ಪಕ್ಷದ ಟಿಕೆಟ್ ಸಿಗದೆ ಪೊಲೀಸರೆದುರೇ ಗಳಗಳನೆ ಬಿಎಸ್‌ಪಿ ನಾಯಕ, ಆತ್ಮಾಹುತಿ ಬೆದರಿಕೆ | ವೀಕ್ಷಿಸಿ

ಮುಜಾಫರ್‌ನಗರ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಪಕ್ಷದ ಟಿಕೆಟ್‌ ವಿಚಾರದಲ್ಲಿ ಕಿತ್ತಾಟ ಜೋರಾತ್ತಿದೆ. ಮುಜಾಫರ್‌ನಗರದ ಚಾರ್ತಾವಾಲ್ ಕ್ಷೇತ್ರದಿಂದ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖಂಡರೊಬ್ಬರು ನಗರದ ಕೊತ್ವಾಲಿಯಲ್ಲಿ ಪೊಲೀಸರ ಮುಂದೆ ಗಳಗಳನೆ ಅತ್ತಿದ್ದಾರೆ..! ಎರಡು ವರ್ಷಗಳ ಹಿಂದೆ ಪಕ್ಷದ ಹಿರಿಯ ನಾಯಕರೊಬ್ಬರು ಟಿಕೆಟ್‌ಗಾಗಿ 67 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. … Continued

ಗಂಭೀರ ಕೋವಿಡ್‌-19 ಅಪಾಯ ದ್ವಿಗುಣಗೊಳಿಸುವ ಜೀನ್ ಪತ್ತೆ ಹಚ್ಚಿದ ಪೋಲಿಷ್ ವಿಜ್ಞಾನಿಗಳು..! ಭಾರತದಲ್ಲಿ 27%ರಷ್ಟು ಜನರಲ್ಲಿದೆ ಎಂದ ಸಂಶೋಧಕರು..!!

ಪೋಲಿಷ್ ವಿಜ್ಞಾನಿಗಳು ಕೋವಿಡ್ -19 ಸೋಂಕಿನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಹೇಳುವ ಜೀನ್ ಅನ್ನು ಕಂಡುಹಿಡಿದಿರುವುದಾಗಿ ತಿಳಿಸಿದ್ದಾರೆ. ಈ ಆವಿಷ್ಕಾರವು ರೋಗದಿಂದ ಹೆಚ್ಚು ಅಪಾಯದಲ್ಲಿರುವ ಜನರನ್ನು ಗುರುತಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಮಧ್ಯ ಮತ್ತು ಪೂರ್ವ ಯುರೋಪ್‌ನಲ್ಲಿ ಹೆಚ್ಚಿನ ಕೊರೊನಾ ವೈರಸ್ ಸಾವಿನ ಪ್ರಮಾಣಗಳ ಹಿಂದೆ ಲಸಿಕೆ … Continued

ಕೇಂದ್ರ ಬಜೆಟ್ ಮಂಡನೆಯ ದಿನಾಂಕ ಘೋಷಣೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಂದು ಪ್ರಾರಂಭವಾಗಲಿದ್ದು, ಕೇಂದ್ರ ಬಜೆಟ್ 2022-23 ಅನ್ನು ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಅಧಿವೇಶನವು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8 ರಂದು ಮುಕ್ತಾಯಗೊಳ್ಳಲಿದೆ. ಅಧಿವೇಶನದ ಮೊದಲ ಭಾಗವು ಫೆಬ್ರವರಿ 11ರಂದು ಮುಕ್ತಾಯಗೊಳ್ಳಲಿದೆ. ಒಂದು ತಿಂಗಳ … Continued

ಇದು ಪ್ರಚಾರ ಸ್ವಾಮಿ.. ವ್ಯಕ್ತಿ ಸ್ನಾನ ಮಾಡುತ್ತಿರುವಾಗಲೇ ಎಂಟ್ರಿ ಕೊಟ್ಟ ಬಿಜೆಪಿ ಶಾಸಕ..ನಿಮ್ಮ ಬಳಿ ರೇಷನ್ ಕಾರ್ಡ್ ಇದೆಯೇ ಎಂದು ಪ್ರಶ್ನೆ..! ವೀಕ್ಷಿಸಿ

ಕಾನ್ಪುರ: ಚುನಾವಣಾ ಆಯೋಗವು ಕೋವಿಡ್ ಕುರಿತು ಸಮಾವೇಶ, ಸಭೆ-ಸಮಾರಂಭಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಗಳು ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ. ಕಾನ್ಪುರದಿಂದ ವ್ಯಾಪಕವಾಗಿ ಹಂಚಿಕೊಂಡ ವಿಡಿಯೊವೊಂದರಲ್ಲಿ ಬಿಜೆಪಿ ಶಾಸಕರೊಬ್ಬರು ಮತದಾರ ಸ್ನಾನದ ಮಾಡುತ್ತಿರುವಾಗಲೇ ಭೇಟಿ ಮಾಡಿ ವಿಚಾರಿಸಿದ ವಿಡಿಯೊವೊಂದು ಈಗ ಸುದ್ದಿ ಮಾಡುತ್ತಿದೆ. ಕಾನ್ಪುರದ ಬಿಜೆಪಿ ಶಾಸಕ ಸುರೇಂದ್ರ ಮೈತಾನಿ ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ … Continued

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಲಕ್ಕಲ್ ಖುಲಾಸೆ

ತಿರುವನಂಪುರಂ: ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಕೇರಳ ನ್ಯಾಯಾಲಯ ಖುಲಾಸೆಗೊಳಿಸಿದೆ. 2014 ರಿಂದ 2016ರ ನಡುವೆ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದರು ಎಂದು ಸನ್ಯಾಸಿನಿಯೊಬ್ಬರು ಆರೋಪಿಸಿದ್ದರು. ಮಿಷನರೀಸ್ ಆಫ್ ಜೀಸಸ್ ಆರ್ಡರ್‌ನ ಮುಖ್ಯಸ್ಥರಾಗಿದ್ದಾಗ ಬಿಷಪ್ ಫ್ರಾಂಕೋ ಅವರು 2014 ಮತ್ತು 2016 ರ … Continued

ಕಾಫಿ ತೋಟದಲ್ಲಿ ಬ್ರಿಟೀಷರ ಕಾಲದ 28 ಬೆಳ್ಳಿ ನಾಣ್ಯಗಳು ಪತ್ತೆ

ಸಕಲೇಶಪುರ: ಬ್ರಿಟೀಷರ ಕಾಲದ ಪುರಾತನ ಬೆಳ್ಳಿ ನಾಣ್ಯಗಳನ್ನು ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಹಾಲೇಬೇಲೂರು ಗ್ರಾಮದ ಶ್ಯಾಮ್ ಎಂಬುವರ ಕಾಫಿ ತೋಟದಲ್ಲಿ ವಾಟೆಗದ್ದೆ ಗ್ರಾಮದ ಹರೀಶ್ ಹಾಗೂ ಇತರರು ಕೆಲಸ ಮಾಡುವಾಗ ಬ್ರಿಟೀಷರ ಕಾಲದ ಕೆಲ ನಾಣ್ಯಗಳು ದೊರಕಿದ್ದು ಮಾಲಿಕರಿಗೆ ತಿಳಿಸದೆ ಮನೆಗೆ ತೆಗೆದುಕೊಂಡು ಹೋಗಿದ್ದ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗಕೆಲಸಗಾರರಿಗೆ … Continued

ಹೃದಯಸ್ಪರ್ಶಿ ಘಟನೆ…ವ್ಯಕ್ತಿ ಸತ್ತು 2 ತಿಂಗಳ ನಂತರವೂ ತನ್ನ ಮಾಲೀಕನ ಸಮಾಧಿ ಬಿಟ್ಟು ಬರದ ಬೆಕ್ಕು..!.

ಸಾಕುಪ್ರಾಣಿಗಳೊಂದಿಗಿನ ವ್ಯಕ್ತಿಯ ಬಾಂಧವ್ಯದ ಬಗ್ಗೆ ಹೆಚ್ಚಿನ ಹೃದಯಸ್ಪರ್ಶಿ ಕಥೆಗಳು ನಾಯಿಗಳನ್ನು ಒಳಗೊಂಡಿರುತ್ತವೆ, ಏಕೆಂದರೆ ನಾಯಿ ಅತ್ಯಂತ ನಿಷ್ಠಾವಂತ ಸಹಚರರಲ್ಲಿ ಒಂದು. ಆದರೆ ಇಲ್ಲಿ ಬೆಕ್ಕಿ ತನ್ನ ಒಡೆಯನ ಮೇಲೆ ತೋರಿದ ಪ್ರೀತಿ ಹಾಗೂ ನಿಷ್ಠೆ ಮೂಲಕ ಸುದ್ದಿಯಲ್ಲಿದೆ. ಸೆರ್ಬಿಯಾದ ಶೇಖ್ ಮುಅಮರ್ ಝುಕೋರ್ಲಿಯ ಮುದ್ದಿನ ಬೆಕ್ಕು ಈಗ ತನ್ನ ಒಡೆಯನಿಗೆ ತೋರಿದೆ ನಿಷ್ಠೆಯ ಮೂಲಕ ಸುದ್ದಿಯಲ್ಲಿದೆ. … Continued

ಫೆಬ್ರವರಿ ಮೊದಲ ವಾರದಲ್ಲಿ ಸೋಂಕು ಗರಿಷ್ಠ ಮಟ್ಟ ತಲುಪುತ್ತದೆ..ಆದ್ರೆ ಲಾಕ್ ಡೌನ್ ಮಾಡಲ್ಲ: ಸಚಿವ ಸುಧಾಕರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಿಲ್ಲ. ಫೆಬ್ರವರಿ ಮೊದಲ ವಾರ ಹೋಗುತ್ತದೆ. 3 ಅಥವಾ 4ನೇ ವಾರದಿಂದ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಗೆ ತರುವ ಚಿಂತನೆ ಇಲ್ಲ. ಲಾಕ್‌ಡೌನ್‌ನಿಂದ ಸೋಂಕು ನಿಯಂತ್ರಣ ಆಗುವುದಿಲ್ಲ. … Continued