ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆಗೆ ಕೊರೊನಾ ಸೋಂಕು

ಬೆಂಗಳೂರು: ಕಾಂಗ್ರೆಸ್‌ ಶಾಸಕ ಹಾಗೂ ಪ್ರಿಯಾಂಕ್‌ ಖರ್ಗೆ ಅವರಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ. ಮೊನ್ನೆಯಷ್ಟೇ ಅವರ ತಂದೆ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಂಕು ದೃಢಪಟ್ಟಿತ್ತು. ಎರಡು ದಿನಗಳ ನಂತರ ಈಗ ಎರಡು ದಿನದ ಪ್ರಿಯಾಂಕ್‌ ಖರ್ಗೆಗೆ ಕೋವಿಡ್‌ ದೃಢಪಟ್ಟಿದೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮೊದಲ ಮತ್ತು ಎರಡನೇ … Continued

ಇದು ಪವಾಡ..?!: ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡ ನಂತ್ರ 4 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ನಡೆದಾಡಿದ..ಆತನಿಗೆ ನಿಂತುಹೋಗಿದ್ದ ಮಾತೂ ಬಂತು..!

ಒಂದು ವಿಲಕ್ಷಣ ಬೆಳವಣಿಗೆಯಲ್ಲಿ, ಜಾರ್ಖಂಡ್‌ನ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ನಂತರ ತನ್ನ ಪಾರ್ಶ್ವವಾಯು ಗುಣಮುಖವಾಗಿದೆ ಎಂದು ಹೇಳಿಕೊಂಡಿದ್ದಾರೆ. ಜನವರಿ 4 ರಂದು ಕೋವಿಡ್‌-19 ವಿರುದ್ಧ ಲಸಿಕೆ ತೆಗೆದುಕೊಂಡ 55 ವರ್ಷದ ಪಾರ್ಶ್ವವಾಯು ವ್ಯಕ್ತಿ ದುಲರ್‌ಚಂದ್ ಮುಂಡಾ ಮಂಗಳವಾರ, ಲಸಿಕೆ ತೆಗೆದುಕೊಂಡ ನಂತರ ಅವರಿಗೆ ನಡೆಯಲು ಮತ್ತು ಮಾತನಾಡಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ದುಲಾರ್‌ಚಂದ್ ಮುಂಡಾ … Continued

1980ರ ದಶಕದಲ್ಲಿ ಉತ್ತರಪ್ರದೇಶದಿಂದ ಕಾಣೆಯಾಗಿದ್ದ 10ನೇ ಶತಮಾನದ ‘ಯೋಗಿನಿ’ ಶಿಲ್ಪವನ್ನು ಭಾರತಕ್ಕೆ ಹಿಂದಿರುಗಿಸಿದ ಬ್ರಿಟನ್‌

ನವದೆಹಲಿ: ಭಾರತದಿಂದ ಕದ್ದೊಯ್ದಿದ್ದ ಮೇಕೆ ತಲೆಯ ಯೋಗಿನಿಯ ಶಿಲ್ಪವನ್ನು ಭಾರತಕ್ಕೆ ವಾಪಸ್ ಕಳುಹಿಸಲು ಲಂಡನ್‌ನಲ್ಲಿರುವ ಭಾರತದ ಹೈಕಮಿಷನರ್ ಗಾಯಿತ್ರಿ ಇಸ್ಸಾರಕುಮಾರ್ ಅವರಿಗೆ ಹಸ್ತಾಂತರಿಸಲಾಗಿದೆ. 10ನೇ ಶತಮಾನದ ಕಲ್ಲಿನ ಪ್ರತಿಮೆಯನ್ನು 1980 ರ ದಶಕದಲ್ಲಿ ಉತ್ತರ ಪ್ರದೇಶದ ಲೋಖಾರಿ ದೇವಸ್ಥಾನದಿಂದ ಕಳವು ಮಾಡಲಾಗಿತ್ತು. ಇದು 1988 ರಲ್ಲಿ ಲಂಡನ್‌ನ ಕಲಾ ಮಾರುಕಟ್ಟೆಯಲ್ಲಿ ಕೆಲಕಾಲ ಕಾಣಿಸಿಕೊಂಡಿತು. ಪತ್ರಿಕಾ ಪ್ರಕಟಣೆಯಲ್ಲಿ, … Continued

ಮೂರನೇ ಅಲೆಯಲ್ಲಿ ಕರ್ನಾಟಕದಲ್ಲಿ ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲು ಪ್ರಮಾಣ 6%

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ ಜನವರಿ 1ರಿಂದ 11ರ ವರೆಗೆ ಕರ್ನಾಟಕದಲ್ಲಿ ವರದಿಯಾದ 62,691 ಕೋವಿಡ್-19 ಪ್ರಕರಣಗಳಲ್ಲಿ 6% ರಷ್ಟು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. 93% ರಷ್ಟು ಕೋವಿಡ್‌-19 ರೋಗಿಗಳು ಮನೆ ಪ್ರತ್ಯೇಕತೆಯಲ್ಲಿದ್ದರೆ ಉಳಿದ 1% ಜನರು ರಾಜ್ಯದಲ್ಲಿ ಸ್ಥಾಪಿಸಲಾದ ಕೋವಿಡ್‌-ಕೇರ್ ಕೇಂದ್ರಗಳಲ್ಲಿದ್ದಾರೆ. ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಮೂರನೇ ಅಲೆಯಲ್ಲಿ ಕಂಡುಬರುವ … Continued

ಅನಿತಾ ಕುಮಾರಸ್ವಾಮಿಗೆ ಕೊರೊನಾ ಸೋಂಕು

ಬೆಂಗಳೂರು: ಶಾಸಕಿ ಅನಿತಾ ಕುಮಾರಸ್ವಾಮಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಂದು, ಶನಿವಾರ ಬೆಳಗ್ಗೆ ವರದಿ ಬಂದಿದ್ದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಅನಿತಾ ಕುಮಾರಸ್ವಾಮಿ ಅವರು ಬೆಂಗಳೂರಿನ ನಿವಾಸದಲ್ಲಿ ಮನೆ ಪ್ರತ್ಯೇಕತೆಯಲ್ಲಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ರಾಜಕೀಯ ನಾಯಕರಿಗೆ ಸೋಂಕು ತಗುಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ರಾಜ್ಯಸಭೆ … Continued

ಮುರ್ಡೇಶ್ವರ: ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು

ಭಟ್ಕಳ: ತಾಲೂಕಿನ ಪ್ರವಾಸಿ ತಾಣ ಮುರ್ಡೇಶ್ವರ ಸಮುದ್ರದಲ್ಲಿ ಮುಳುಗಿ ಪ್ರವಾಸಿಗರೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಮುತ್ತು ನಿಂಗಪ್ಪ (32) ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರುನಿಂದ ಒಂಬತ್ತು ಜನರ ತಂಡವು ಪ್ರವಾಸಕ್ಕಾಗಿ ಶುಕ್ರವಾರ ಮುರ್ಡೇಶ್ವರಕ್ಕೆ ಆಗಮಿಸಿತ್ತು, ದೇವರ ದರ್ಶನ ಪಡೆದ ನಂತರ ಮಧ್ಯಾಹ್ನ ಸುಮಾರು ಮೂರು ಗಂಟೆ ನಂತರ ಈಜಲು ಇವರು ಸಮುದ್ರಕ್ಕೆ ಇಳಿದಿದ್ದರು, … Continued

ನೇತಾಜಿ ಜನ್ಮದಿನ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಆರಂಭ: ಕೇಂದ್ರದ ನಿರ್ಧಾರ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಒಳಗೊಂಡಂತೆ ಗಣರಾಜ್ಯೋತ್ಸವವು ಪ್ರತಿ ವರ್ಷ ಜನವರಿ 24ರ ಬದಲಿಗೆ ಜನವರಿ 23ರಿಂದ ಪ್ರಾರಂಭವಾಗಲಿದೆ. ಕಳೆದ ವರ್ಷ, ನರೇಂದ್ರ ಮೋದಿ ಸರ್ಕಾರವು ಬೋಸ್ ಅವರ ಜನ್ಮದಿನದ ಸ್ಮರಣಾರ್ಥ ಜನವರಿ 23 ಅನ್ನು ‘ಪರಾಕ್ರಮ್ ದಿವಸ’ ಎಂದು ಆಚರಿಸಲು ನಿರ್ಧರಿಸಿತ್ತು. ಭಾರತದ ನೇತಾಜಿ ಎಂದೇ ಪ್ರಸಿದ್ಧಿ … Continued

ಉತ್ತರ ಪ್ರದೇಶ ಚುನಾವಣೆ: ಮೊದಲ-ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಗೋರಖಪುರದಿಂದ ಸಿಎಂ ಯೋಗಿ ಸ್ಪರ್ಧೆ

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ತಮ್ಮ ತವರು ಗೋರಖ್‌ಪುರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಪ್ರಕಟಿಸಿದ್ದಾರೆ. ಮೊದಲ ಹಂತದ ಚುನಾವಣೆಗೆ 58 ಅಭ್ಯರ್ಥಿಗಳ ಪೈಕಿ 57 ಮತ್ತು ಎರಡನೇ ಹಂತದ 55 ರಲ್ಲಿ 38 ಅಭ್ಯರ್ಥಿಗಳ … Continued

ವಸತಿ ಶಾಲೆಯಲ್ಲಿ ರಾತ್ರಿ ಊಟ ಸೇವಿಸಿದ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ದಾವಣಗೆರೆ: ಶುಕ್ರವಾರ ರಾತ್ರಿ ಊಟ ಸೇವಿಸಿದ ನಂತರ ಮಕ್ಕಳು ಬೆಳಿಗ್ಗೆ ಅಸ್ವಸ್ಥರಾದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಸುಮಾರು 50 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದ್ದು, ಅಸ್ವಸ್ಥ ವಿದ್ಯಾರ್ಥಿಗಳಿಗೆ ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ಅಸ್ವಸ್ಥರಾಗಿರುವ … Continued

ಸಂಕ್ರಾಂತಿ ಪುಣ್ಯಸ್ನಾನಕ್ಕೆಂದು ನದಿಗೆ ಹೋದ ಇಬ್ಬರು ಯುವಕರು ನೀರುಪಾಲು

ರಾಯಚೂರು: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸ್ನೇಹಿತರಿಬ್ಬರು ನೀರುಪಾಲಾದ ಘಟನೆ ರಾಯಚೂರು ತಾಲೂಕಿನ ಶಕ್ತಿನಗರದ ಬಳಿ ಕೃಷ್ಣಾ ನದಿಯಲ್ಲಿ ನಡೆದಿದೆ. ಗಣೇಶ(30) ಹಾಗೂ ಉದಯಕುಮಾರ(31) ನೀರುಪಾಲಾದ ಯುವಕರು ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ದೇವಸುಗೂರು ಬಳಿ ಇರುವ ಕೃಷ್ಣಾ ನದಿಗೆ ಪುಣ್ಯಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದ್ದರು. ಆದರೆ … Continued