ಬ್ರಿಟನ್ ಪ್ರಧಾನಿ ಹುದ್ದೆಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಹೆಸರು ಚಾಲ್ತಿಗೆ..! ಆಗಲಿದ್ದಾರೆಯೇ ಬ್ರಿಟನ್‌ ಪ್ರಧಾನಿ?

ಬ್ರಿಟನ್ ಪ್ರಧಾನ ಮಂತ್ರಿ ಹುದ್ದೆಯನ್ನು ಭಾರತೀಯ ಮೂಲದ ವ್ಯಕ್ತಿ ಅಲಂಕರಿಸಲಿದ್ದಾರೆಯೇ? ಈಗ ಬಿಟನ್‌ನಲ್ಲಿ ಅಲ್ಲಿನ ಪ್ರಧಾನಿ ಹುದ್ದೆಗೆ ಭಾರತೀಯ ಮೂಲದ ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅಳಿಯ ರಿಷಿ ಸುನಕ್ ಹೆಸರು ಕೇಳಿಬರುತ್ತಿದೆ. ಬ್ರಿಟನ್ ನಲ್ಲಿ 2020 ಮೇನಲ್ಲಿ ಕೊರೊನಾ ಉಲ್ಬಣಗೊಂಡು ಲಾಕ್ ಡೌನ್ ಜಾರಿಯಲ್ಲಿದ್ದಾಗ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ನೀಡಿದ್ದ ಮದ್ಯದ … Continued

8 ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳಿಗೆ 6 ಏರ್‌ಬ್ಯಾಗ್‌ಗಳನ್ನ ಕಡ್ಡಾಯ ಮಾಡಲಿದೆ ಸರ್ಕಾರ: ಗಡ್ಕರಿ

ನವದೆಹಲಿ: 8 ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳಿಗೆ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಜಿಎಸ್‌ಆರ್ ಅಧಿಸೂಚನೆಯನ್ನು ಸರ್ಕಾರ ಅನುಮೋದಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 8 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುವ ಮೋಟಾರು ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ, ನಾನು ಈಗ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲು ಕರಡು … Continued

ಭಾರತದಲ್ಲಿ 2.68 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ಓಮಿಕ್ರಾನ್ ಸೋಂಕು 6,041ಕ್ಕೆ ಏರಿಕೆ

ನವದೆಹಲಿ: ಭಾರತವು ಶನಿವಾರ 2,68,833 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 1.8% ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಮಾಹಿತಿ ತಿಳಿಸಿದೆ. ಇದು ದೇಶದ ಒಟ್ಟು ಪ್ರಕರಣವನ್ನು 3,68,50,962 ಕ್ಕೆ ಒಯ್ದಿದೆ. ಇದರಲ್ಲಿ 6,041 ಪ್ರಕರಣಗಳು ಕೋವಿಡ್‌ ಓಮಿಕ್ರಾನ್ ರೂಪಾಂತರದ ಸೋಂಕಾಗಿದೆ. ಕಳೆದ 24 ಗಂಟೆಗಳಲ್ಲಿ 402 … Continued

ಇಂಧನ ಸಚಿವರಿಗೆ ಕೊರೊನಾ ಸೋಂಕು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂತ್ರಿಮಂಡಲದ ಮತ್ತೊಬ್ಬ ಸಚಿವರಿಗೆ ಕೊರೊನಾ ಸೋಂಕು ತಗುಲಿದೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿರುವ ಸಚಿವರು, ಸೌಮ್ಯ ಲಕ್ಷಣಗಳೊಂದಿಗೆ ಕೋವಿಡ್ ದೃಢಪಟ್ಟಿದೆ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ, … Continued

ಹಿಂದಿನ 2 ಅಲೆಯಲ್ಲಿ ಕೋವಿಡ್ -19 ಸಾವುಗಳನ್ನು ಕಡಿಮೆ ವರದಿ ಮಾಡಲಾಗಿದೆ ಎಂಬುದನ್ನು ಆಧಾರ ರಹಿತ ಎಂದು ತಳ್ಳಿಹಾಕಿದ ಕೇಂದ್ರ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾಂಕ್ರಾಮಿಕ ರೋಗದ ಮೊದಲ ಎರಡು ಅಲೆಗಳಲ್ಲಿ ನಿಜವಾದ ಕೋವಿಡ್ -19 ಸಾವಿನ ಸಂಖ್ಯೆಯ “ಗಮನಾರ್ಹವಾಗಿ ಕಡಿಮೆ ತೋರಿಸಲಾಗಿದೆ ಎಂದು ಆರೋಪಿಸಿದ ಕೆಲವು ಮಾಧ್ಯಮ ವರದಿಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ತಳ್ಳಿಹಾಕಿದೆ. ವರದಿಗಳು ಆಧಾರರಹಿತವಾಗಿವೆ, ತಪ್ಪುದಾರಿಗೆಳೆಯುವ ಮತ್ತು ಮಾಹಿತಿಯಿಲ್ಲದ ವರದಿಗಳು ಎಂದು ಹೇಳಿದೆ. ಅಂತಿಮ ಸಾವಿನ ಸಂಖ್ಯೆ … Continued

ಬೈಕ್‌ ಮೇಲೆ ಏಕಾಏಕಿ ಕಾಡಾನೆ ದಾಳಿ: ವಿದ್ಯಾರ್ಥಿ ಸಾವು

ಮಡಿಕೇರಿ: ಬೈಕಿನಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾಗ ಕಾಡಾನೆಯೊಂದು ಕಾಫಿ ತೋಟದಿಂದ ರಸ್ತೆಗೆ ಬಂದು ಹಠಾತ್‌ ಬೈಕ್ ಸವಾರರ ಮೇಲೆ ದಾಳಿ ಮಾಡಿ ವಿದ್ಯಾರ್ಥಿಯೋರ್ವಯೊಬ್ಬನನ್ನು ಸಾಯಿಸಿದ ಘಟನೆ ಕೊಡಗಿನ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ. ಕಾಡಾನೆ ದಾಳಿಗೆ ನೆಲ್ಯಹುದಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ನಲ್ವತೇಕ್ರೆ ಗ್ರಾಮದ ವಿದ್ಯಾರ್ಥಿ ಆಶಿಕ್ (19) ಮೃತ ದುರ್ದೈವಿ. ಕಾಡಾನೆ ದಾಳಿಗೆ ಆಶಿಕ್ ಎದೆಯ … Continued