1200 ಕೋಟಿ ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ

ಬೆಂಗಳೂರು : ಹಾಲಿ ದ್ವಿಪಥದ ಶಿರಾಡಿ ಘಾಟ್ ರಸ್ತೆಯನ್ನು 1200 ಕೋಟಿ ರೂ.ಗಳ ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಎನ್.ಹೆಚ್.ಎ.ಐ ವತಿಯಿಂದ ಕಾಮಗಾರಿಯನ್ನು ಕೈಗೆತ್ತಿಕೊಂಡು ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಅಗತ್ಯವಿರುವ ಎಲ್ಲಾ … Continued

ಕವಿ ಚನ್ನವೀರ ಕಣವಿ ಆಸ್ಪತ್ರೆ ವೆಚ್ಚ ಭರಿಸಲು ಸರ್ಕಾರದ ನಿರ್ಧಾರ

ಹುಬ್ಬಳ್ಳಿ:  ಅನಾರೋಗ್ಯಕ್ಕೆ ಒಳಗಾಗಿ ಧಾರವಾಡದ ಸತ್ತೂರಿನ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಡಿನ ಹಿರಿಯ ಕವಿ ಚನ್ನವೀರ ಕಣವಿ ಅವರ ಆಸ್ಪತ್ರೆ ವೆಚ್ಚ ಭರಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜ್ವರದಿಂದ ಬಳಲುತ್ತಿರುವ ಚನ್ನವೀರ ಕಣವಿ ಜನವರಿ ೧೪ ರಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಸಂದರ್ಭದಲ್ಲಿ ಅವರಿಗೆ … Continued

ಹಾವೇರಿಯಲ್ಲಿ ಹಳೆಯ ಕಾಲದ್ದೆನ್ನಲಾದ ಹ್ಯಾಂಡ್ ಗ್ರೆನೇಡ್ ಪತ್ತೆ

ಹಾವೇರಿ: ಹಳೆಯ ಕಾಲದ್ದು ಎನ್ನಲಾದ ಹ್ಯಾಂಡ್ ಗ್ರೆನೇಡ್ (Hand Granide) ಹಾವೇರಿ ನಗರದ ನೇತಾಜಿ ನಗರದಲ್ಲಿ ಪತ್ತೆಯಾಗಿದೆ. ಮನೆಕಟ್ಟುವ ಸಲುವಾಗಿ ಖಾಲಿ ಜಾಗ ಸ್ವಚ್ಛ ಮಾಡುತ್ತಿದ್ದಾಗ ತುಕ್ಕು ಹಿಡಿದ ಸ್ಥಿತಿಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರವಿ ಮುಷ್ಠಿ ಎಂಬುವವರಿಗೆ ಸೇರಿದ ಜಾಗದಲ್ಲಿ ಹ್ಯಾಂಡ್ ಗ್ರನೇಡ್ … Continued

ಮಕ್ಕಳಲ್ಲಿ ಕೋವಿಡ್ ಹೇಗೆ ನಿರ್ವಹಿಸುವುದು? ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ನವದೆಹಲಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೋವಿಡ್ ನಿರ್ವಹಣೆಗಾಗಿ ಪರಿಷ್ಕೃತ ಮಾರ್ಗಸೂಚಿಗಳನ್ನು ಕೇಂದ್ರವು ಗುರುವಾರ ಬಿಡುಗಡೆ ಮಾಡಿದೆ. ಓಮಿಕ್ರಾನ್ ರೂಪಾಂತರಕ್ಕೆ ಮುಖ್ಯವಾಗಿ ಕಾರಣವಾದ ಪ್ರಸ್ತುತ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಮಾರ್ಗದರ್ಶಿ ಸೂತ್ರಗಳನ್ನು ತಜ್ಞರ ಗುಂಪು ಪರಿಶೀಲಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಸ್ಟೀರಾಯ್ಡ್‌ಗಳನ್ನು ಬಳಸಿದರೆ, ಕ್ಲಿನಿಕಲ್ ಸುಧಾರಣೆಗೆ ಒಳಪಟ್ಟು 10-14 ದಿನಗಳಲ್ಲಿ ಅವುಗಳನ್ನು ಮೊಟಕುಗೊಳಿಸಬೇಕು ಎಂದು … Continued

ಕಾರ್ಮಿಕ ಮಕ್ಕಳಿಗೆ ನೇರ ವಿದ್ಯಾರ್ಥಿ ವೇತನ ವರ್ಗಾವಣೆಗೆ ಸಿಎಂ ಬೊಮ್ಮಾಯಿ ಹರ್ಷ

ಬೆಂಗಳೂರು : ರಾಜ್ಯದಲ್ಲಿ ಉದ್ಯೋಗ ನೀತಿ ಯುವಕರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಲಾಭದಾಯಕವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆನ್‌ಲೈನ್ ಮೂಲಕ ವಿದ್ಯಾರ್ಥಿ ವೇತನ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಳಸ್ಥರದ ಜನರಿಗೆ ನೀಡಲಾಗುವ ಈ ಮೊತ್ತವು … Continued

ಧನುಷ್-ಐಶ್ವರ್ಯಾ ನಡುವೆ ವಿಚ್ಛೇದನವಾಗಿಲ್ಲ.. ಇದು ಕೇವಲ ಕುಟುಂಬ ಕಲಹ: ಧನುಷ್ ತಂದೆ ಕಸ್ತೂರಿರಾಜ

ಮಹತ್ವದ ಬೆಳವಣಿಗೆಯೊಂದರಲ್ಲಿ ನಟ ಧನುಷ್ ಅವರ ತಂದೆ ಕಸ್ತೂರಿರಾಜ ಸಂದರ್ಶನವೊಂದರಲ್ಲಿ ಧನುಷ್ ಮತ್ತು ಐಶ್ವರ್ಯಾ ನಡುವೆ ಯಾವುದೇ ವಿಚ್ಛೇದನದ ಮಾತುಕತೆ ಇಲ್ಲ ಎಂದು ತಿಳಿಸಿದ್ದಾರೆ. ಸ್ನೇಹಿತರಾಗಿ, ದಂಪತಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳ ಕಾಲ ನಾನು ಮತ್ತು ಪತ್ನಿ ಐಶ್ವರ್ಯ ಜೀವನ ಮಾಡಿದೆವು. ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. … Continued

ಗಮನಿಸಿ…ಎಸ್​ಎಸ್​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2021-22ನೇ ಸಾಲಿನ ಎಸ್​ಎಸ್​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದೆ. ಫೆಬ್ರವರಿ 21ರಿಂದ 26ರ ವರೆಗೆ ಎಸ್​ಎಸ್​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದ್ದು, ನಿಗದಿತ ದಿನದಂದು ಪರೀಕ್ಷೆ ಬೆಳಿಗ್ಗೆ 10:30ಕ್ಕೆ ಪರೀಕ್ಷೆ ಆರಂಭವಾಗಲಿದೆ. ಕೋವಿಡ್ ನಿಯಮಗಳ ಅನುಸಾರವಾಗಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಫೆಬ್ರವರಿ 2022ರ ಎಸ್ ಎಸ್ ಎಲ್ … Continued

ಆಹಾರಕ್ಕಾಗಿ ಒಡಿಶಾ ಗ್ರಾಮಕ್ಕೆ ನುಗ್ಗಿ ಬಂದ ಕಾಡು ಕರಡಿ -ಅದರ ಮರಿ…!- ದೃಶ್ಯ ವಿಡಿಯೊದಲ್ಲಿ ಸೆರೆ

ಭುನವೇಶ್ವರ: ಒಡಿಸ್ಸಾದಲ್ಲಿ ಎರಡು ಕಾಡು ಕರಡಿಗಳು ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ನಬ್ರಂಗ್‌ಪುರ ಜಿಲ್ಲೆಯ ಉಮರ್‌ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ. ತಾಯಿ ಕರಡಿ ಮತ್ತು ಅದರ ಮರಿ ಆಹಾರ ಹುಡುಕುತ್ತಾ ಹಳ್ಳಿಗೆ ನುಗ್ಗಿದೆ. ಗ್ರಾಮವು ಹತ್ತಿರದ ಅರಣ್ಯ ವ್ಯಾಪ್ತಿಯ ಪಕ್ಕದಲ್ಲಿ ಇರುವುದರಿಂದ, ಕರಡಿಗಳು … Continued

ಕರ್ನಾಟಕದಲ್ಲಿ ಗುರುವಾರ ಹೊಸದಾಗಿ 47,754 ಕೊರೊನಾ ಸೋಂಕು ದಾಖಲು..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಪ್ರಕರಣ 50 ಸಾವಿರದತ್ತ ಮುಖಮಾಡಿದೆ. ಇಂದು ಬರೋಬ್ಬರಿ 47,754 ಹೊಸ ಸೋಂಕು ದಾಖಲಾಗಿದೆ. ಇಂದು ಒಟ್ಟು 29 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ ಹಾಗೂ ಇದೇ ಸಮಯದಲ್ಲಿ ಆಸ್ಪತ್ರೆಯಿಂದ 22,143 ಮಂದಿ ಬಿಡುಗಡೆಯಾಗಿದ್ದಾರೆ. ನಿನ್ನೆ 40,499 ಕೇಸ್ ವರದಿಯಾಗಿತ್ತು. ಬೆಂಗಳೂರಿನಲ್ಲಿ ಭಾರೀ ಏರಿಕೆ ಕಂಡಿದೆ. ಇಂದು ಒಟ್ಟು 30,540 ಸೋಂಕು ವರದಿಯಾಗಿದೆ. ಬೆಂಗಳೂರಿನಲ್ಲಿ … Continued

ಉತ್ತರ ಪ್ರದೇಶ ಚುನಾವಣೆಯಲ್ಲಿ ಮೈನ್‌ಪುರಿಯ ಕರ್ಹಾಲ್ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧೆ: ವರದಿಗಳು

ಲಕ್ನೋ: ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಗಳು ಗುರುವಾರ ತಿಳಿಸಿವೆ. ಅಜಂಗಢ ಕ್ಷೇತ್ರದ ಸಂಸದರಾಗಿರುವ ಅಖಿಲೇಶ ಅವರು ತಮ್ಮ ಕ್ಷೇತ್ರದ ಜನರೊಂದಿಗೆ ಮಾತನಾಡಿದ ನಂತರ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧರಿಸುವುದಾಗಿ ಬುಧವಾರ ಹೇಳಿದ್ದಾರೆ. ಪಕ್ಷದ ಅಧ್ಯಕ್ಷರು ಮೈನ್‌ಪುರಿಯ … Continued