250 ವರ್ಷಗಳಷ್ಟು ಹಳೆಯ ದೇವಸ್ಥಾನ ಸ್ಥಳಾಂತರಿಸಲು ರೈಲ್ವೆ ನೋಟಿಸ್ ನೀಡಿದ ನಂತರ ಹಿಂದೂ ಕಾರ್ಯಕರ್ತರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ಲಕ್ನೋ: ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದ ಆವರಣದಿಂದ 250 ವರ್ಷಗಳಷ್ಟು ಹಳೆಯದಾದ ಚಾಮುಂಡಾ ದೇವಿ ದೇವಸ್ಥಾನವನ್ನು ಸ್ಥಳಾಂತರಿಸುವಂತೆ ರೈಲ್ವೆ ಇಲಾಖೆ ನೋಟಿಸ್ ನೀಡಿದ ನಂತರ ರೈಲ್ವೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿಂದೂ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಆನಂದ್ ಸ್ವರೂಪ್ ಅವರು ಏಪ್ರಿಲ್ … Continued

ಏಪ್ರಿಲ್ ತಿಂಗಳಲ್ಲಿ ವಾಯವ್ಯ, ಮಧ್ಯ ಭಾರತದಲ್ಲಿ 122 ವರ್ಷಗಳಲ್ಲೇ ಅತ್ಯಂತ ಬಿಸಿಯಾದ ತಾಪಮಾನ ದಾಖಲು…!

ನವದೆಹಲಿ: ವಾಯವ್ಯ ಮತ್ತು ಮಧ್ಯ ಭಾರತವು ಏಪ್ರಿಲ್‌ನಲ್ಲಿ ಕ್ರಮವಾಗಿ 35.9 ಮತ್ತು 37.78 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿ 122 ವರ್ಷಗಳಲ್ಲೇ ಅತ್ಯಂತ ಬಿಸಿಯಾದ ಸರಾಸರಿ ಗರಿಷ್ಠ ತಾಪಮಾನ ಎಂದು ಹವಾಮಾನ ಕಚೇರಿ ಶನಿವಾರ ತಿಳಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ, ದೇಶದ ವಾಯವ್ಯ ಮತ್ತು ಪಶ್ಚಿಮ ಮಧ್ಯ ಭಾಗಗಳಾದ ಗುಜರಾತ್, … Continued

ಭಾರತದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ದ್ವಿತೀಯ ರಂಗದಿಂದ ಮಾತ್ರವೇ ಬಿಜೆಪಿ ಸೋಲಿಸಲು ಸಾಧ್ಯ: ಪ್ರಶಾಂತ ಕಿಶೋರ್

ನವದೆಹಲಿ: ಯಾವುದೇ ತೃತೀಯ ಅಥವಾ ನಾಲ್ಕನೇ ರಂಗವು ದೇಶದಲ್ಲಿ ಚುನಾವಣೆ ಗೆಲ್ಲುತ್ತದೆ ಎಂದು ನಾನು ನಂಬುವುದಿಲ್ಲ ಮತ್ತು ಬಿಜೆಪಿಯನ್ನು ಸೋಲಿಸಲು ಪಕ್ಷಗಳು ಬಯಸಿದರೆ, ಅದು ದ್ವಿತೀಯ ರಂಗವಾಗಿ ಹೊರಹೊಮ್ಮಬೇಕು ಎಂದು ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷ ಟಿಎಂಸಿಗೆ ತೃತೀಯ ರಂಗವಾಗಿ ಹೊರಹೊಮ್ಮಲು … Continued

ಲೈಂಗಿಕ ಕಿರುಕುಳ ವಿರೋಧಿಸಿದಕ್ಕೆ ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ಹೊರಕ್ಕೆ ಎಸೆದ ವ್ಯಕ್ತಿ…!

ಛತ್ತರ್‌ಪುರ/ಜಬಲ್‌ಪುರ್: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಖಜುರಾಹೊ ಬಳಿ ಉತ್ತರ ಪ್ರದೇಶದ 25 ವರ್ಷದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ವಿರೋಧಿಸಿದ ನಂತರ ವ್ಯಕ್ತಿಯೊಬ್ಬ ಮಹಿಳೆಯನ್ನು ಓಡುತ್ತಿರುವ ರೈಲಿನಿಂದ ಹೊರಕ್ಕೆ ಎಸೆದಿದ್ದಾನೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಬುಧವಾರ ರಾತ್ರಿ ನಡೆದ ಘಟನೆಯ ನಂತರ ಮಹಿಳೆಯನ್ನು ಛತ್ತರ್‌ಪುರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು … Continued

ಅಕ್ಷಯ್ ಕುಮಾರ್ ನಂತರ ಪಾನ್‌ ಮಸಾಲಾ ಬ್ರಾಂಡ್‌ನ ಬಹುಕೋಟಿ ಒಪ್ಪಂದದ ಆಫರ್‌ ತಿರಸ್ಕರಿಸಿದ ಕೆಜಿಎಫ್ ಸ್ಟಾರ್ ಯಶ್

ಬೆಂಗಳೂರು: ಬ್ರಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿದ ಒಂದು ವಾರದ ನಂತರ, ಕನ್ನಡ ಚಿತ್ರ ರಂಗದ ಸೂಪರ್‌ಸ್ಟಾರ್ ಯಶ್ ಅವರು ಪಾನ್ ಮಸಾಲಾ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಎಕ್ಸೀಡ್ ಎಂಟರ್‌ಟೈನ್‌ಮೆಂಟ್ ಖಚಿತಪಡಿಸಿದೆ. ರಾಷ್ಟ್ರವ್ಯಾಪಿ ಅಭಿಮಾನಿಗಳನ್ನು ಹೊಂದಿರುವ ಕೆಜಿಎಫ್ ನಟ ಇತ್ತೀಚೆಗೆ ಪಾನ್ ಮಸಾಲಾ ಮತ್ತು ಇಲೈಚಿ ಬ್ರಾಂಡ್‌ಗಾಗಿ ಬಹುಕೋಟಿ … Continued

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ : ಮೊಬೈಲ್ ಒಡೆದು ಸಾಕ್ಷ್ಯನಾಶಕ್ಕೆ ದಿವ್ಯಾ ಹಾಗರಗಿ ಯತ್ನ..?

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ವಿಚಾರಣೆಯನ್ನು ಸಿಐಡಿ ತಂಡ ಇಂದೂ ಮುಂದುವರಿಸಿದೆ. ಆದರೆ ಸಿಐಡಿ ಕೈಗೆ ಯಾವುದೇ ದಾಖಲೆ ಸಿಗದಂತೆ ಮಾಡಲು ತನ್ನ ಮೊಬೈಲ್ ಅನ್ನು ಮಹಾರಾಷ್ಟ್ರದಲ್ಲಿಯೇ ಮೊಬೈಲ್‌ ಒಡೆದು ಹಾಕಿದ್ದಾರೆ ಎಂದು ಹೇಳಲಾಗಿದೆ. ಎರಡು ದಿನಗಳ ಹಿಂದೆ ಸಿಐಡಿ ಅಧಿಕಾರಿಗಳು ಪುಣೆಯಲ್ಲಿ ದಿವ್ಯಾಳನ್ನು … Continued

ರಾಜ್ಯ ಸರ್ಕಾರದ ೭೨ ಗಂಟೆಯಲ್ಲಿ ಮನೆಬಾಗಿಲಿಗೆ ಪಿಂಚಣಿ ಯೋಜನೆ ಸಹಾಯವಾಣಿಗೆ ಚಾಲನೆ

ಬೆಂಗಳೂರು: ನಾಗರಿಕರಿಗೆ ೭೨ ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ನೀಡುವ ಹಲೋ ಕಂದಾಯ ಸಚಿವರೇ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ನಾಗರಿಕರಿಗಾಗಿ ಜಾರಿ ಮಾಡಿರುವ ನೂತನ ಸುಧಾರಣಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರವು ನಾಗರಿಕರಿಗೆ ೯ ವಿವಿಧ … Continued

ಕೊಳದಮಠದ ಶ್ರೀ ಶಾಂತವೀರ ಸ್ವಾಮೀಜಿ ಲಿಂಗೈಕ್ಯ

ಬೆಂಗಳೂರು: ಕೊಳದಮಠದ ಶ್ರೀ ಶಾಂತವೀರ ಸ್ವಾಮೀಜಿ (80) ಇಂದು, ಶನಿವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ. ಆರೋಗ್ಯವಾಗಿದ್ದ ಶ್ರೀಗಳು ಶುಕ್ರವಾರ ಮಹಾಲಕ್ಷ್ಮಿಲೇಔಟ್‍ನಲ್ಲಿ ನಡೆದ ಕಾರ್ಯಕ್ರಮಕ್ಕೆ ಹೋಗಿಬಂದಿದ್ದರು. ಇಂದು ಎಂದಿನಂತೆ ತಮ್ಮ ನಿತ್ಯಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ.  ಶ್ರೀಗಳು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಠದ ಆವರಣದಲ್ಲಿ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮಠದ … Continued

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ 7.27 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇಡಿ

ನವದೆಹಲಿ: ಸುಕೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ. ಜಕ್ವೆಲಿನ್ ಫರ್ನಾಂಡಿಸ್ ಅವರ ಹೆಸರಿನಲ್ಲಿ 7.12 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳನ್ನು ಲಗತ್ತಿಸಲಾದ ಆಸ್ತಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಜಾಕ್ವೆಲಿನ್ ಫೆರ್ನಾಂಡಿಸ್ ಸುಲಿಗೆ ಮಾಡಿದ ಹಣದ … Continued

ಗುಡ್ಡದಿಂದ ಉರುಳಿದ ಬೃಹತ್‌ ಬಂಡೆಕಲ್ಲು ಅಪ್ಪಳಿಸಿ ಬೈಕ್ ಸವಾರ ಸಾವು…ದೃಶ್ಯ ಮೊಬೈಲ್‌ನಲ್ಲಿ ಸೆರೆ

ಕೇರಳದಲ್ಲಿ ಬೆಟ್ಟದಿಂದ ಉರುಳುತ್ತಿದ್ದ ಬಂಡೆಯೊಂದು ಇಬ್ಬರು ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ವಿಚಿತ್ರ ಹಾಗೂ ಅಪಘಾತದ ಆಘಾತಕಾರಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಏಪ್ರಿಲ್ 16 ರಂದು ತಾಮರಸ್ಸೆರಿಯಲ್ಲಿ ಈ ದುರ್ಘಟನೆ ನಡೆದಿದ್ದು, ತಾಮರಸ್ಸೆರಿ ಘಾಟ್ ರಸ್ತೆಯಲ್ಲಿ ಅಭಿನವ್ ಮತ್ತು ಅನೀಶ್ ಎಂಬ ಇಬ್ಬರು … Continued