ದ್ವಿತೀಯ ಪಿಯು ಉತ್ತರ ಪತ್ರಿಕೆ ಮೌಲ್ಯಮಾಪಕರಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಹಾಗೂ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹಾಜರಾಗುವ ಸಿಬ್ಬಂದಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಈ ಸಂಭಾವನೆಯು ಮುಂದಿನ ಮೂರು ವರ್ಷಗಳವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದೆ. ಆದರೆ ಸಂಭಾವನೆ ಪರಿಷ್ಕರಣೆಗೆ ಷರತ್ತುಗಳನ್ನು ಸಹ ವಿಧಿಸಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳನ್ವಯಯುಜಿಸಿ ವೇತನ … Continued

ಪಿಯು ಪ್ರವೇಶ ಮಿತಿ ಹೆಚ್ಚಳ, ಹೆಚ್ಚುವರಿ ವಿಭಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿ ಮಿತಿಯನ್ನು 80 ರಿಂದ 100ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ಹೊಸ ಭಾಷೆ, ಹೊಸ ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳ ಮಂಜೂರಾತಿಗೂ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ.ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ 2022-23ನೇ ಸಾಲಿನ ರಾಜ್ಯದ … Continued

ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ಶಾವಿಗೆ ಸಂಡಿಗೆ ಒಣಗಿಸ್ತಾರೆ…!

ಬೆಳಗಾವಿ : ಶಕ್ತಿ ಕೇಂದ್ರ ಎನಿಸಿಕೊಂಡಿರುವ ಸುವರ್ಣ ವಿಧಾನಸೌಧದ ಬಾಗಿಲಲ್ಲಿ ಈಗ ಶಾವಿಗೆ, ಸಂಡಿಗೆ ಒಣ ಹಾಕಿರುವುದು ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಈಗ ಸದ್ದು ಮಾಡುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಸೌಧದ ಭದ್ರತೆಗೆ ನಿಯೋಜಿಸಲಾಗಿದ್ದರೂ ಅವರ ಕಣ್ತಪ್ಪಿಸಿ ಶಾವಿಗೆ ಒಣಗಿಸಿರುವುದು ಆದರೂ ಹೇಗೆ ಎನ್ನುವ ಪ್ರಶ್ನೆಗೆ ಕಾರಣವಾಗಿದೆ. ಇಷ್ಟರಲ್ಲೇ ಮಳೆಗಾಲ … Continued

ಕುಟುಂಬದವರು ದೂರ ಮಾಡಿದ್ದ ಲೆಸ್ಬಿಯನ್ ಜೋಡಿ ನೂರಾ- ಆದಿಲಾಳನ್ನು ಒಂದಾಗಿಸಿದ ಕೇರಳ ಹೈಕೋರ್ಟ್

ತಿರುವನಂತಪುರಂ: ಕೇರಳ ಹೈಕೋರ್ಟ್ ಮಂಗಳವಾರ ಲೆಸ್ಬಿಯನ್ ದಂಪತಿ ಫಾತಿಮಾ ನೂರಾ ಮತ್ತು ಅಧಿಲಾ ನಜ್ರಿನ್ ಅವರ ಸಂಬಂಧದ ವಿರುದ್ಧ ಕೋಲಾಹಲದ ನಡುವೆ ಒಟ್ಟಿಗೆ ವಾಸಿಸಲು ಅವಕಾಶ ಮಾಡಿಕೊಟ್ಟಿತು. ಕುಟುಂಬಗಳು ಇವರಿಬ್ಬರನ್ನು ಬೇರ್ಪಡಿಸಿದ್ದರು.ಇದರ ವಿರುದ್ಧ ಕೇರಳ ಹೈಕೋರ್ಟ್‌ಗೆ ಅಧಿಲಾ ನಜ್ರಿನ್ ಅವರು ಹೇಬಿಯಸ್ ಕಾರ್ಪಸ್ ಸಲ್ಲಿಸಿದರು, ಅದರ ನಂತರ ಫಾತಿಮಾ ನೂರಾ ಅವರನ್ನು ಬಿನಾನಿಪುರಂ ಪೊಲೀಸರು ನ್ಯಾಯಾಲಯಕ್ಕೆ … Continued

ಕಾಂಗ್ರೆಸ್ ಸಹವಾಸವೇ ಸಾಕು ಎಂದು ಕೈ ಮುಗಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್…!

ಪಾಟ್ನಾ: ಕಾಂಗ್ರೆಸ್ ಸೇರ್ಪಡೆ ಅಥವಾ ಪಕ್ಷದಲ್ಲಿ ನಿರ್ಣಾಯಕ ಪಾತ್ರವಹಿಸುವ ಪ್ರಯತ್ನ ಮಾಡಿ ಕೊನೆಗೆ ಅದರಲ್ಲಿ ವಿಫಲವಾಗಿರುವ ಪ್ರಖ್ಯಾತ ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್, ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಮಾತುಕತೆ ಅಥವಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ವೈಶಾಲಿಯಲ್ಲಿ ನಡೆದ ಸಭೆಯಲ್ಲಿ … Continued

ಮುನ್ನೆಚ್ಚರಿಕೆ ಕ್ರಮವಾಗಿ ಮಂಗನ ಕಾಯಿಲೆ ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದ ಸರ್ಕಾರ

ನವದೆಹಲಿ: ಸ್ಥಳೀಯವಲ್ಲದ ದೇಶಗಳಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಪೂರ್ವಭಾವಿ ಹೆಜ್ಜೆಯಾಗಿ ರೋಗದ ನಿರ್ವಹಣೆಯ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೇ 31ರ ಹೊತ್ತಿಗೆ, ಭಾರತದಲ್ಲಿ ಮಂಗನ ಕಾಯಿಲೆಯ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗದರ್ಶಿಗಳನ್ನು ಹೊರಡಿಸಲಾಗಿದೆ. ಮಾರ್ಗಸೂಚಿಗಳಲ್ಲಿ ರೋಗದ ಸೋಂಕುಶಾಸ್ತ್ರ, ಸಂಪರ್ಕ ಮತ್ತು ಪ್ರಕರಣದ ವ್ಯಾಖ್ಯಾನಗಳು, ಕ್ಲಿನಿಕಲ್ … Continued

ಹಾಸನ: ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು; ಆರೋಪಿಗಳ ಬೆರಳಚ್ಚು ಸಂಗ್ರಹಿಸಿದ ಪೊಲೀಸರು

ಹಾಸನ: ಸೋಮವಾರ, ಮೇ 30 ರಂದು ಅಪರಿಚಿತ ವ್ಯಕ್ತಿಗಳು ಕರ್ನಾಟಕದ ಹಾಸನದಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಮಲೆಕಲ್ಲು ತಿರುಪತಿ ದೇವಸ್ಥಾನದ ವಸ್ತುಸಂಗ್ರಹಾಲಯದ ವಸ್ತುಪ್ರದರ್ಶನ ಕೇಂದ್ರದಲ್ಲಿ ವಿಗ್ರಹಗಳನ್ನು ಇರಿಸಲಾಗಿತ್ತು. ಪೊಲೀಸರ ಪ್ರಕಾರ, 10 ಕ್ಕೂ ಹೆಚ್ಚು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಅರಸೀಕೆರೆ ತಾಲೂಕಿನಲ್ಲಿ ಪೊಲೀಸರು ಶ್ವಾನದಳವನ್ನು ನಿಯೋಜಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಪ್ರತಿಷ್ಠಾಪನೆಗೆ ಸಿದ್ಧವಾಗಿದ್ದ … Continued

ಇಂದು ಕರ್ನಾಟಕ ಪ್ರವೇಶಿಸಿದ ಮನ್ಸೂನ್

ನವದೆಹಲಿ: ಭಾರತೀಯ ಹವಾಮಾನ ಇಲಾಖೆ ಜೂನ್ 2ರಂದು ರಾಜ್ಯಕ್ಕೆ ಮಾನ್ಸೂನ್ ಪ್ರವೇಶಿಸಬಹುದು ಎಂದು ಹೇಳಿತ್ತು. ಆದರೆ, ಅದಕ್ಕೂ ಮುನ್ನವೇ ಇಂದು, ಮಂಗಳವಾರ ನೈಋತ್ಯ ಮಾನ್ಸೂನ್ ಮಳೆ ರಾಜ್ಯಕ್ಕೆ ಕಾಲಿಟ್ಟಿದ್ದು, ಸಿಹಿ ಸುದ್ದಿ ನೀಡಿದೆ. ಇತ್ತೀಚಿನ  ಮಾಹಿತಿ ಪ್ರಕಾರ, ಉತ್ತರ ಕನ್ನಡ ಮತ್ತು ರಾಜ್ಯದ ಕರಾವಳಿ ಪ್ರದೇಶಗಳು, ಬೆಂಗಳೂರು (ನಗರ ಮತ್ತು ಗ್ರಾಮಾಂತರ) ಮತ್ತು ಹಾಸನ, ಶಿವಮೊಗ್ಗ, … Continued

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ

ಬೆಂಗಳೂರು : ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಇಂದು, ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986ನೇ ಬ್ಯಾಂಕ್‌ ತಂಡದ … Continued

ಜೂನ್‌ನಿಂದ ಸೆಪ್ಟೆಂಬರ್ ವರೆಗೆ 103%ರಷ್ಟು ಮಳೆಯಾಗಲಿದೆ: ಹವಾಮಾನ ಇಲಾಖೆ

ನವದೆಹಲಿ: ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ಮಾನ್ಸೂನ್ ಮಳೆಯು ಏಪ್ರಿಲ್‌ನಲ್ಲಿ ಭಾರತ ಹವಾಮಾನ ಇಲಾಖೆ (IMD) ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿರುತ್ತದೆ, ಏಜೆನ್ಸಿಯು ಮಂಗಳವಾರ ತನ್ನ ಅಂದಾಜನ್ನು ದೀರ್ಘಾವಧಿಯ ಸರಾಸರಿ (LPA) 99% ರಿಂದ 103% ಕ್ಕೆ ಹೆಚ್ಚಿಸಿದೆ. ಮಧ್ಯ ಭಾರತ, ದಕ್ಷಿಣ ಪರ್ಯಾಯ ದ್ವೀಪ, ಈಶಾನ್ಯ ಭಾರತ ಮತ್ತು ವಾಯುವ್ಯ ಭಾರತ – ನಾಲ್ಕು ವಿಶಾಲ ಪ್ರದೇಶಗಳಲ್ಲಿ ಮಾನ್ಸೂನ್ … Continued