ಕಾಶ್ಮೀರ: ಬುರ್ಖಾದಲ್ಲಿ ಬಂದ ಉಗ್ರರಿಂದ ಅಂಗಡಿಯ ಮೇಲೆ ಗ್ರೆನೇಡ್ ಎಸೆತ, ಒಬ್ಬ ಸಾವು, ಮೂವರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ವೈನ್ ಶಾಪ್‌ಗೆ ಶಂಕಿತ ಭಯೋತ್ಪಾದಕರು ಗ್ರೆನೇಡ್ ಎಸೆದ ಪರಿಣಾಮ ಓರ್ವ ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ರಜೌರಿ ನಿವಾಸಿ ರಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ. 35 ವರ್ಷದ ಇವರು ಗ್ಯಾರಿಸನ್ ಪೇಟೆಯಲ್ಲಿ ಹೊಸದಾಗಿ ತೆರೆಯಲಾದ ವೈನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗಾಯಗೊಂಡ ಮೂವರಲ್ಲಿ ಒಬ್ಬರ ಸ್ಥಿತಿ … Continued

ಗೋಧಿ ರಫ್ತು ಮೇಲಿನ ನಿರ್ಬಂಧ ಕೊಂಚ ಸಡಿಲಿಸಿದ ಕೇಂದ್ರ

ನವದೆಹಲಿ: ವಿದೇಶಗಳಿಗೆ ಗೋಧಿ ರಫ್ತನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಮಂಗಳವಾರ ಸ್ವಲ್ಪ ಸಡಿಲಿಕೆ ಮಾಡಿದೆ. ಮೇ 13ರಂದು ರಫ್ತು ನಿಷೇಧ ಆದೇಶ ಹೊರಡಿಸುವುದಕ್ಕೂ ಮೊದಲು ಆಮದು ಮಾಡುವುದಕ್ಕಾಗಿ ನೋಂದಣಿ ಮಾಡಿಕೊಂಡಿದ್ದ ಗೋಧಿಯನ್ನು ರಫ್ತು ಮಾಡಲು ಅನುಮತಿ ನೀಡಲಾಗಿದೆ. ರಫ್ತು ನಿಷೇಧ ಆದೇಶ ಹೊರಬೀಳುವ ವೇಳೆ ಈಜಿಪ್ಟ್ ಗೆ ಕಳುಹಿಸಲೆಂದು ಗುಜರಾತ್‌ನ ಕಾಂಡ್ಲಾದಲ್ಲಿ ಸರಕು ಹಡಗಿಗೆ ತುಂಬಲಾಗುತ್ತಿದ್ದ … Continued

ಪಠ್ಯ ಪುಸ್ತಕದಲ್ಲಿ ಟಿಪ್ಪು ಬಿರುದಿಗೆ ಕತ್ತರಿ…!

ಬೆಂಗಳೂರು: ಒಂದರಿಂದ 10ನೇ ತರಗತಿ ವರೆಗಿನ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಮೈಸೂರು ಹುಲಿ ಎಂದೇ ಬಿಂಬಿತವಾಗಿದ್ದ ಟಿಪ್ಪು ಸುಲ್ತಾನ್ ಬಿರುದುಗಳಿಗೆ ಕತ್ತರಿ ಪ್ರಯೋಗವಾಗಿದೆ. ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಪಠ್ಯಪುಸ್ತಕ ಸಮಿತಿ ಮಾಡಿರುವ ಪರಿಷ್ಕೃತ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಅವರ ವೈಭವೀಕರಣವನ್ನು ತೆಗೆದುಹಾಕಿದೆ. ಈತನಿಗೆ ಮೈಸೂರು ಹುಲಿ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್‍ಗೆ ಮೈಸೂರು ಹುಲಿ … Continued

ಜಿಪಂ,ತಾಪಂ ಚುನಾವಣೆ:ವಿಸ್ತೃತ ವಿಚಾರಣೆ ಆಗಬೇಕು ಎಂದ ಹೈಕೋರ್ಟ್, ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ ಜಿಪಂ ಮತ್ತು ತಾಪಂ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆಗೆ ತಿದ್ದುಪಡಿ ತಂದಿರುವುದಕ್ಕೆ ತಡೆ ನೀಡುವ ವಿಚಾರದಲ್ಲಿ ವಿಸ್ತೃತ ವಿಚಾರಣೆಯ ಅಗತ್ಯವಿದೆ ಎಂದು … Continued

ಮದುವೆಗೆ ಸಮಯಕ್ಕೆ ಬಾರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್​ ಮಾಡಿದ ವರ; ಬೇರೆಯವನ ಮದುವೆಯಾದ ವಧು..!

ಜೈಪುರ: ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಮದುಮಗ ತಡವಾಗಿ ಮಂಟಪಕ್ಕೆ ಬಂದಿದ್ದಕ್ಕೆ ವಧು ಬೇರೊಬ್ಬನನ್ನು ಮದುವೆಯಾದ ಘಟನೆ ನಡೆದಿತ್ತು. ಈಗ ಅಂತಹದ್ದೇ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಚುರು ಜಿಲ್ಲೆಯ ವಧು ತನ್ನ ವರನ ಕುಡಿತದ ನೃತ್ಯದಿಂದ ಬಾರಾತ್​ಗೆ (ಮದುವೆ ಮೆರವಣಿಗೆ) ತಡವಾಗಿ ಬಂದಿದ್ದರಿಂದ ಕುಡಿತದ ಚಟಕ್ಕೆ ಕೋಪಗೊಂಡು ಆತನನ್ನು ಮದುವೆಯಾಗಲು … Continued

ಅಫ್ಘಾನಿಸ್ತಾನದ ಮಾನವ ಹಕ್ಕುಗಳ ಆಯೋಗವನ್ನೇ ವಿಸರ್ಜಿಸಿದ ತಾಲಿಬಾನ್‌…!

ಕಾಬೂಲ್: ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ದೇಶದ ಮಾನವ ಹಕ್ಕುಗಳ ಆಯೋಗ ಸೇರಿದಂತೆ ಹಿಂದಿನ ಅಮೆರಿಕ ಬೆಂಬಲಿತ ಸರ್ಕಾರದ ಐದು ಪ್ರಮುಖ ಇಲಾಖೆಗಳನ್ನು ವಿಸರ್ಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ಅಫ್ಘಾನಿಸ್ತಾನವು 44 ಶತಕೋಟಿ ಅಫ್ಘಾನಿ ($501 ಮಿಲಿಯನ್) ಬಜೆಟ್ ಕೊರತೆ ಎದುರಿಸುತ್ತಿದೆ ಎಂದು ತಾಲಿಬಾನ್ ಅಧಿಕಾರಿಗಳು ಶನಿವಾರ … Continued

ಕೃಷ್ಣ ಜನ್ಮಭೂಮಿ ವಿವಾದ: ಶಾಹಿ ಈದ್ಗಾದ ವೀಡಿಯೋಗ್ರಫಿ ಕೋರಿದ ಅರ್ಜಿ ವಿಚಾರಣೆಗೆ ಮಥುರಾ ಕೋರ್ಟ್ ಸಮ್ಮತಿ

ಮಥುರಾ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ಕುರಿತು ನಡೆಯುತ್ತಿರುವ ವಿವಾದದ ನಡುವೆ, ಉತ್ತರ ಪ್ರದೇಶದ ಮಥುರಾದ ಸ್ಥಳೀಯ ನ್ಯಾಯಾಲಯವು ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ ವೀಡಿಯೋಗ್ರಾಫಿಗೆ ಮಾಡಿವಂತೆ ಕೋರಿದ್ದ ಅರ್ಜಿಯ ವಿಚಾರಣೆಗೆ ಸಮ್ಮತಿಸಿದೆ. 13.37 ಎಕರೆ ಪ್ರದೇಶದಲ್ಲಿ ಹರಡಿರುವ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು … Continued

ಕೆಎಸ್‌ಆರ್‌ಟಿಸಿಯಲ್ಲಿ ‘ನಿವೃತ್ತ ಚಾಲಕ’ರಿಗೆ ತಾತ್ಕಾಲಿಕ ಆಧಾರದ ಮೇಲೆ ಕೆಲಸಕ್ಕೆ ಸೇರಲು ಅವಕಾಶ

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅಗತ್ಯಕ್ಕನಗುಣವಾಗಿ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ, ಕೆಎಸ್ಆರ್‌ಟಿಸಿಯಿಂದ ನಿವೃತ್ತ ಚಾಲಕರನ್ನು ಮತ್ತೆ ನಿಯೋಜಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವ 63 ವರ್ಷ ವಯೋಮಿತಿ ಮೀರದ ನಿವೃತ್ತ ಚಾಲಕರು ಸೂಕ್ತ ದಾಖಲೆಯೊಂದಿಗೆ ವಿಭಾಗಿಯ ನಿಯಂತ್ರಣಾಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳಲು ತಿಳಿಸಿದೆ.ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ರಕಟಣೆ … Continued

ಮಾಧ್ಯಮಗಳಿಗೆ ಸೋರಿಕೆ’: ಜ್ಞಾನವಾಪಿ ಸಮೀಕ್ಷಾ ಆಯುಕ್ತರನ್ನು ವಜಾಗೊಳಿಸಿದ ವಾರಾಣಸಿ ನ್ಯಾಯಾಲಯ

ವಾರಾಣಸಿ: ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಾರಾಣಸಿಯ ಸಿವಿಲ್ ಕೋರ್ಟ್, ತಾನು ನೇಮಿಸಿದ್ದ ಮೂವರು ಕಮಿಷನರ್‌ಗಳಲ್ಲಿ ಒಬ್ಬರಾದ ಅಜಯ್ ಮಿಶ್ರಾ ಅವರನ್ನು ತೆಗೆದುಹಾಕಿದೆ. ಮಿಶ್ರಾ ಅವರ ಸಹಾಯಕರು ಸಮೀಕ್ಷೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನಿಬ್ಬರು – ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್ – ಕ್ರಮವಾಗಿ ಕೋರ್ಟ್ ಕಮಿಷನರ್ ಮತ್ತು ಡೆಪ್ಯುಟಿ ಕೋರ್ಟ್ … Continued

ಸುಗ್ರೀವಾಜ್ಞೆಗೆ ಬಿತ್ತು ರಾಜ್ಯಪಾಲರ ಅಂಕಿತ: ಮತಾಂತರ ನಿಷೇಧ ಈಗ ಕರ್ನಾಟಕದಲ್ಲಿ ಕಾನೂನು

ಬೆಂಗಳೂರು : ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅಂತಿಮಮುದ್ರೆ ಒತ್ತಿದ್ದಾರೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನ ಪಾಸ್‌ ಮಾಡಿತ್ತು. ಈಗ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದರಿಂದ ಈಗ ಅದು ಕಾನೂನು ಆಗಿ ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಮೂಲಕ ಕರ್ನಾಟಕವು ಮತಾಂತರ ವಿರೋಧಿ … Continued